Thursday, August 29, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೧೫


ನೀನೆ ಹರಿ ಹರೆಮಗನು ನಿನ್ನ ಮಗ ಖಗ ಶೇಷ
ನಿನ್ನ ಮೊಮ್ಮಗ ಇಂದ್ರ ನಿನ್ನ ಮರಿಮಗ ಪ್ರಾಣ
ನಿನ್ನ ಗಿರಿ ಮಕ್ಕಳು ಗುರು ಭೃಗು ಮೊದಲಾದ
ನೀನೆ ಸುರರಿಗೆ ಒಡೆಯ ನೀನೆ ಸುರಧೇನು
ನೀನೆ ಕಲ್ಪದ್ರುಮ ನೀನೆ ಚಿಂತಾಮಣಿ
ನಿನ್ನ ಧ್ಯಾನಿಸುವವರಿಗೆ ನೀನೆ ಗುರು ತಂದೆ ಗೋಪಾಲವಿಠಲ
ಧ್ಯಾನವನ್ನು ಕೊಟ್ಟು ಸಲಹೊ ಪ್ರಾಣ॥

No comments:

Post a Comment