ಅಖಿಲ ಬೊಮ್ಮಾ೦ಡನಾಯಕ ಸಕಲ
ಜೀವೋತ್ತಮ
ವಿಖನಸಾರ್ಚಿತಪಾದ
ನಿಖಿಳಲೋಕವ್ಯಾಪ್ತ
ಲಕುಮಿರಮಣನ ಪ್ರಾಣಸಂಭೂತ
ಸುಖಜ್ಞಾನಮಯ ಸ್ವರೂಪ
ಸುಮನಸೋತ್ತಂಸ
ಶಿಖಿಸಖೋದಿತರದಿ ಪ್ರಕರ ಸನ್ನಿಭಮುಖ
ಸುಖಪೂರ್ಣ ಶುದ್ಧ ಸತ್ತ್ವ ಶರೀರ
ಆಖಣಾಶ್ಮ ಸಮಚರಣ ಭಕ್ತಾಭರಣ
ಲೋಕೈಕವೈದ್ಯ ಭಾರತೀಕಾಂತಾ
ಲೌಕಿಕ ಸುಖದಾತಾ ಪ್ರಖ್ಯಾತಾ
ಕಾಕೊದರ ಶಾಯಿ ನಮ್ಮ ಗುರು
ಜಗನ್ನಾಥ ವಿಠಲ
ನಾ ಲೋಕವಿತ್ತು ಪೊರೆಯೋ
ಪ್ರಾಣರಾಯ॥
No comments:
Post a Comment