Tuesday, August 27, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೧೪




ಏಸುಕಾಲದಿ ಹರಿಗೆ ದಾಸನು ನೀನಹುದು
ಆಸು ಕಾಲದಲ್ಲಿ ನಾ ನಿನ್ನ ದಾಸ
ದೇಶ ಕಾಲಾ ವೇದದಲ್ಲಿ ಲಿಂಗಾವರಣ ಪ್ರಕೃತಿ
ಈ ಸಮಸ್ತ ಜೀವರಲ್ಲೀ ವ್ಯಾಪ್ತ
ಏಸೇನು ಜನ್ಮದಲ್ಲಿ ಮಾಡಿದಂಥಾ ಕರ್ಮ
ದೋಷರಾಷಿಗಳ ನಾಶನವಗೈಸೀ
ಈ ಸಮಯದಲ್ಲಿ ನಿನ್ನ ದಾಸನೆಂದೆನಿಸೆನ್ನ
ಪೋಷಿಸಲಿಬೇಕು ಶ್ರೀಶ ಗುರು ತಂದೆ ಗೋಪಾಲವಿಠಲ
ದಾಸದಾಸದಾಸರ ದಾಸ ದಾಸನೆಂದೆನಿಸೋ॥

No comments:

Post a Comment