Monday, August 5, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೮





ರಾವಣನು ರಥವನೇರಿ ರಣಕೆ ಬಂದಿರಲಾಗಿ
ನೀವು ಪಾದಚಾರಿಯಾಗಿ ಭೂಮಿಯಲ್ಲಿರಲು
ನಮ್ಮ ಹನುಮಂತನು ನಿಮ್ಮನು ಕಂಡು
ಚಾಲ್ವರಿದು ಬೊಬ್ಬಿರಿದು ಕುಣಿಕುಣಿದಾಡಿ
ಸುಖವ ಸೂರೆಯ ಮಾಡಿ ಎತ್ತಿರಲು
ನಮ್ಮ ಹಿರಿಯ ನಿಮ್ಮ ವೇಳೆಗೊದಗಿರಲಾಗಿ
                                                      ನಮ್ಮ ನೀ ಮರೆಯಲಾಗದು ಪುರಂದರ ವಿಠಲ॥

No comments:

Post a Comment