Monday, August 19, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೧೧




ಮಧ್ವರಾಯರ ಭಾಗ್ಯ ಎಂಥದೋ ವರ್ಣಿಸಲು
ಶುದ್ಧಸತ್ತ್ವಾತ್ಮಕವಾದ ಶರೀರವು
ಅದ್ವೈತಮತವೆಂಬೋ ಅರಣ್ಯವ ಪೊಕ್ಕು
ವಿಧ್ವಂಸ ಮಾಡಿ ವಾದಿಗಳನೆ ಗೆದ್ದು
ಪದ್ಧತಿ ತಪ್ಪದಂತೆ ಮತವನುದ್ಧರಿಸಿ
ವೃದ್ಧಿಗೈಸಿದರು ಸರ್ವಸಜ್ಜನರನ್ನು
ಸಿದ್ಧರಾವೆಂದು ಗೀರ್ವಾಣರೆಲ್ಲರು
ಎದ್ದೆದ್ದು ಕುಣಿದರು ಕರವ ಹೊಡೆದು
ವಿದ್ವಾಂಸನಾನೆಂದು ಅಹಂಕರಿಸಿದೆ ಇವರ
ಪಾದಪದ್ಮದಲ್ಲಿ ಅತಿದೃಢಭಕುತಿ ಮಾಡಿ
ಮಧ್ವರಾಯರೆ ನಮಗೆ ಉದ್ಧಾರಕರೆಂದು
ಪದೇಪದೆಗೆ ತಿಳಿದು ಕೊಂಡಾಡಿದರೆ
ಸಿದ್ಧಿದಾಯಕ ಸಿರಿ ಮೋಹನ ವಿಠಲ
ಹೃದ್ದೃಷ್ಟಿಯಲಿ ನಿಂತು ಸಲಹುವನು ಬೇಗ॥

No comments:

Post a Comment