Thursday, August 29, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೧೫


ನೀನೆ ಹರಿ ಹರೆಮಗನು ನಿನ್ನ ಮಗ ಖಗ ಶೇಷ
ನಿನ್ನ ಮೊಮ್ಮಗ ಇಂದ್ರ ನಿನ್ನ ಮರಿಮಗ ಪ್ರಾಣ
ನಿನ್ನ ಗಿರಿ ಮಕ್ಕಳು ಗುರು ಭೃಗು ಮೊದಲಾದ
ನೀನೆ ಸುರರಿಗೆ ಒಡೆಯ ನೀನೆ ಸುರಧೇನು
ನೀನೆ ಕಲ್ಪದ್ರುಮ ನೀನೆ ಚಿಂತಾಮಣಿ
ನಿನ್ನ ಧ್ಯಾನಿಸುವವರಿಗೆ ನೀನೆ ಗುರು ತಂದೆ ಗೋಪಾಲವಿಠಲ
ಧ್ಯಾನವನ್ನು ಕೊಟ್ಟು ಸಲಹೊ ಪ್ರಾಣ॥

Tuesday, August 27, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೧೪




ಏಸುಕಾಲದಿ ಹರಿಗೆ ದಾಸನು ನೀನಹುದು
ಆಸು ಕಾಲದಲ್ಲಿ ನಾ ನಿನ್ನ ದಾಸ
ದೇಶ ಕಾಲಾ ವೇದದಲ್ಲಿ ಲಿಂಗಾವರಣ ಪ್ರಕೃತಿ
ಈ ಸಮಸ್ತ ಜೀವರಲ್ಲೀ ವ್ಯಾಪ್ತ
ಏಸೇನು ಜನ್ಮದಲ್ಲಿ ಮಾಡಿದಂಥಾ ಕರ್ಮ
ದೋಷರಾಷಿಗಳ ನಾಶನವಗೈಸೀ
ಈ ಸಮಯದಲ್ಲಿ ನಿನ್ನ ದಾಸನೆಂದೆನಿಸೆನ್ನ
ಪೋಷಿಸಲಿಬೇಕು ಶ್ರೀಶ ಗುರು ತಂದೆ ಗೋಪಾಲವಿಠಲ
ದಾಸದಾಸದಾಸರ ದಾಸ ದಾಸನೆಂದೆನಿಸೋ॥

Thursday, August 22, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೧೩


ಅಖಿಲ ಬೊಮ್ಮಾ೦ಡನಾಯಕ ಸಕಲ ಜೀವೋತ್ತಮ
ವಿಖನಸಾರ್ಚಿತಪಾದ ನಿಖಿಳಲೋಕವ್ಯಾಪ್ತ
ಲಕುಮಿರಮಣನ ಪ್ರಾಣಸಂಭೂತ
ಸುಖಜ್ಞಾನಮಯ ಸ್ವರೂಪ ಸುಮನಸೋತ್ತಂಸ
ಶಿಖಿಸಖೋದಿತರದಿ ಪ್ರಕರ ಸನ್ನಿಭಮುಖ
ಸುಖಪೂರ್ಣ ಶುದ್ಧ ಸತ್ತ್ವ ಶರೀರ
ಆಖಣಾಶ್ಮ ಸಮಚರಣ ಭಕ್ತಾಭರಣ
ಲೋಕೈಕವೈದ್ಯ ಭಾರತೀಕಾಂತಾ
ಲೌಕಿಕ ಸುಖದಾತಾ ಪ್ರಖ್ಯಾತಾ
ಕಾಕೊದರ ಶಾಯಿ ನಮ್ಮ ಗುರು ಜಗನ್ನಾಥ ವಿಠಲ
ನಾ ಲೋಕವಿತ್ತು ಪೊರೆಯೋ ಪ್ರಾಣರಾಯ॥

Wednesday, August 21, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೧೨




ಎನ್ನೊಡನೆ ಹನುಮ
ಹನುಮನೇ ಎನ್ನೊಡೆಯ ಘನ್ನಕದರುಮಂಡಲಗಿ
ಹನುಮಯ್ಯ ಎನ್ನೊಡೆಯ
ಎನ್ನಯ್ಯ ಶ್ರೀ ತಂದೆ ಮುದ್ದುಮೋಹನ ವಿಠಲ ಭಕ್ತ
ಘನ್ನ ಹನುಮಯ್ಯನೇ ಎನ್ನೊಡೆಯ॥