ರಾಗ : ಧನ್ಯಾಸಿ
ತಾಳ : ಆದಿತಾಳ
ದಾನವ ಕೊಂದದ್ದಲ್ಲಿ ಕಾಣಿರೋ ।ಪ।
ಗಾನ ವಿನೋದಿ ನಮ್ಮ ತೊರವೆಯ ನರಸಿಂಹ ।।ಅ ಪ ।।
ಅಚ್ಚಪುರುಷನೆಂಬ ಸ್ವಚ್ಛರತ್ನ ಒಡಲೊಳು
ಬಿಚ್ಚಿ ಬೆದಕಿ ನೋಡಿದರೆ ಇನ್ನೆಷ್ಟು ಇದ್ದಾವೋ ಎಂದು ।।೧।।
ನೆಂಟತನವು ಬೆಳೆಯಬೇಕೆಂದು ಕರುಳ ಕೊರಳೊಳು
ಹಾಕಿಕೊಂಡನೆಷ್ಟೋ ದೇಹ ಸಂಬಂಧದಿಂದ ।।೨।।
ತೊರವೆಯ ನಾರಸಿಂಹ ಪ್ರಹ್ಲಾದ ಪಾಲಕ
ಉರಿಮೊರೆ ದೈವ ನಮ್ಮ ಪುರಂದರವಿಠಲ ।।೩।।
No comments:
Post a Comment