ಓಡಿ ಬಾರಯ್ಯ ವೈಕುಂಠಪತಿ ನಿನ್ನ ನೋಡುವೆ ಮನದಣಿಯ//ಪ//
ನೋಡಿ ಮುದ್ದಾಡಿ ಮಾತಾಡಿ ಸಂತೋಷದಿ ಕೂಡಿ
ಪಾಡಿ ಪೊಗಳುವೆನು ಪರಮ ಪುರುಷ ಹರಿಯೆ//ಅ.ಪ.//
ಕೆಂದಾವರೆ ಪೋಲ್ವ ಪಾದಗಳಿಂದ ರಂಗ
ಧಿಂ ಧಿಂ ಧಿಮಿಕೆಂದು ಕುಣಿಯುತಲಿ
ಅಂದುಗೆ ಕಿರುಗೆಜ್ಜೆ ಗಲುಗಲುರೆನ್ನಲು
ಕುಂದಣ ಉಡಿದಾರ ಝಣ ಝಣ ಎನ್ನಲು//
ಮಂಗಳಾತ್ಮಕ ಮೋಹನಕಾಯ ರಂಗ
ಸಂಗೀತಲೋಲ ಸದ್ಗುಣ ಶೀಲ
ಅಂಗನೆಯರಿಗೆಲ್ಲ ಅತಿಪ್ರಿಯನಾದ
ಶುಭಾಂಗ ಶ್ರೀಪುರಂದರ ವಿಠಲರಾಯ//
No comments:
Post a Comment