Tuesday, October 8, 2013

ಅಂಜಿಕಿನ್ಯಾತಕಯ್ಯ ಸಜ್ಜನರಿಗೆ

ರಾಗ : ಕಲ್ಯಾಣಿ
ತಾಳ : ಆಟತಾಳ
ಪುರಂದರದಾಸರ ಕೃತಿ

ಅಂಜಿಕಿನ್ಯಾತಕಯ್ಯ ಸಜ್ಜನರಿಗೆ
ಭಯವು ಇನ್ಯಾತಕಯ್ಯ | |

ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ | ಅ ಪ |

ಕನಸಿಲಿ ಮನಸಿಲಿ ಕಳವಳವಾದರೆ
ಹನುಮನ ನೆನೆದರೆ ಹಾರಿಹೋಗದೆ ಭೀತಿ | |

ರೋಮ ರೋಮಕೆ ಕೋಟಿ ಲಿಂಗವುದರಿಸಿದ
ಭೀಮನ ನೆನೆದರೆ ಬಿಟ್ಟು ಹೋಗದೆ ಪಾಪ | |

ಪುರಂದರ ವಿಠಲನ ಪೂಜೆಯ ಮಾಡುವ
ಗುರುಮಧ್ವರಾಯರ ಸ್ಮರಣೆ ಮಾಡಿದ ಮೇಲೆ | |

Sunday, October 6, 2013

ಬೊಮ್ಮಗಟ್ಟಿರಾಯ ಪಾಲಿಸೊ ನಮ್ಮ ನೀ ಮಾರಾಯ

ರಾಗ : ಪಂತುವರಾಳಿ
ತಾಳ : ಆದಿತಾಳ

ಬೊಮ್ಮಗಟ್ಟಿರಾಯ ಪಾಲಿಸೊ ನಮ್ಮ ನೀ ಮಾರಾಯ
ಧರ್ಮ ಕಾಮ್ಯಾರ್ಥ ಕೊಡುವೋ ಕರುಣಾಂಬುಧಿ | |

ಸುಗ್ರೀವಗೆ ನೀ ಒಲಿದ್ವಾಲಿಯನು
ನಿಗ್ರಹ ಮಾಡುತ ಪರಮಾಗ್ರಹದಲಿ
ಶೀಘ್ರದಿಂದಲಿ ದಶಗ್ರೀವನ ಲಂಕ
ದುರ್ಗದಲ್ಲಾಡಿದ್ಯಗ್ನಿಯ ಒಡಗೂಡಿ | |

ರಾಮಪಾದಾಂಬುಜ ಸೇವಕ ಸೇತುವೆ
ಪ್ರೇಮದಿ ಕಟ್ಟಿ ನಿಂತನು ರಣದಿ
ನೇಮದಿಂದಲಿ ಸಂಜೀವನ ತಂದಾತ
ವಾಹನನಾದ ತ್ರಿಧಾಮದೊಡೆಯಗೆ | |

ವಾತಾತ್ಮಜ ರಘುನಾಥಗೆ ನೀ ನಿಜ
ದೂತನೆನಿಸಿ ಬಹು ಪ್ರೀತಿಯಲಿ
ಭೂತಳದೊಳು ಪ್ರಖ್ಯಾತಿಯ ಪಡೆದೆ
ನಿರ್ಭೀತನಾದ ಭೀಮೇಶಕೃಷ್ಣನ ಪ್ರಿಯ | |

Friday, October 4, 2013

ಪ್ರಾಣ ಬಾರೋ ಜಗತ್ರಾಣ ಬಾರೋ

ರಾಗ : ಮೋಹನ
ತಾಳ : ಆದಿತಾಳ
ಗುರು ಗೋವಿಂದದಾಸರ ಕೃತಿ

ಪ್ರಾಣ ಬಾರೋ ಜಗತ್ರಾಣ ಬಾರೋ
ಪ್ರಾಣಿ ಸಕಲ ಕರ್ಮ ಮಾಳ್ಪ ಜಾಣ ಬಾರೋ | |

ಪಂಚ ರೂಪದಿ ಪ್ರಾಪಂಚ ವ್ಯಾಪ್ತ ಬಾರೋ
ಹಂಚಿಕೇಲಿ ದೈತ್ಯೆಯರ ವಂಚಕನೆ ಬಾರೋ | |

ಪಾಯುಪಸ್ತಕರ್ಮ ಗೈವಾಪಾನ ಬಾರೋ
ವಾಯುವ ನೀ ನಿರೋಧಿಸೆ ಕಾಯ್ವರಾರೋ | |

ಗೋಣುಮುರಿವ ಭಾರಹೊರೆವ ವ್ಯಾನ ಬಾರೋ
ಪ್ರಾಣಪಂಚ ವ್ಯೂಹ ಮುಖ್ಯವ್ಯಾನ ಬಾರೋ | |

ಉದಕ ಅನ್ನಕ್ಕವಕಾಶುದಾನ ಬಾರೋ
ಮುದದಿ ಶ್ವಾಸಮಂತ್ರ ಜಪ ಜಾಣ ಬಾರೋ | |

ವೈದಿಕ ಲೌಕಿಕ ಶಬ್ದ ನುಡಿಸೇ ಬಾರೋ
ಊರ್ಧ್ವಗತಿ ದಾತನೆ ಉದಾನ ಬಾರೋ | |

ಪಾನ ಅನ್ನಗಳ್ಹಂಚೆ ಸಮಾನ ಬಾರೋ
ಧ್ಯಾನವಿಂತು ಈವ ಮುಖ್ಯಪ್ರಾಣ ಬಾರೋ | |

ಕರುಣಾಸಾಗರ ದೇಹ ವೀಣೆ ಚರಿಸೆ ಬಾರೋ
ಗುರುಗೋವಿಂದವಿಠಲಾಧೀಷ್ಠಿತ ಗುರುವೇ ಬಾರೋ | |

Wednesday, October 2, 2013

ಸ್ವಾಮಿ ಮುಖ್ಯಪ್ರಾಣ ನಿನ್ನ ಮರೆವರ ಗಂಟಲ ಗಾನಾ

ರಾಗ : ಕಲ್ಯಾಣಿ
ತಾಳ : ಆದಿತಾಳ

ಸ್ವಾಮಿ ಮುಖ್ಯಪ್ರಾಣ ನಿನ್ನ ಮರೆವರ ಗಂಟಲ ಗಾನಾ
ಹಿಡಿದ್ಯೋ ರಾಮನ ಚರಣ ನೀ ಹೌದೌದೋ ಮುಖ್ಯಪ್ರಾಣ || ||

ಸಂಜೀವನ ಪರ್ವತವ ನೀ ಅಂಜದೆ ತಂದ್ಯೋ ದೇವ
ಅಂಜನೆ ಸುತ ಸದಾಕಾವ ಹೃತ್ ಕಂಜವಾಸ ಸರ್ವಜೀವ || ||

ಏಕಾದಶರ ರುದ್ರ ನೀ ವೈದ್ಯೋರಾಮರ ಮುದ್ರ
ಸಕಲ ವಿದ್ಯಾಸಮುದ್ರ ನೀ ಹೌದೌದು ಬಲಭದ್ರ || ||

ವೈಕುಂಠದಿಂದ ಬಂದು ನೀ ಪಂಪಾಕ್ಷೇತ್ರದಿ ನಿಂದು
ಯಂತ್ರೋದ್ಧಾರಕನೆಂದು ಪುರಂದರ ವಿಠಲ ಸಲಹೆಂದು || ||