ಸಾಮಾನ್ಯವಲ್ಲ
ಶ್ರೀ ಹರಿಯ ಸೇವೆ
ಪಾಮರ
ಜನರಿಗೆ ಸಾಮಾನ್ಯವಲ್ಲ
ಸಾಮಜ
ವರದನ ಪ್ರೇಮದಿ ನೆನೆವುದು
ತಾಮಸ
ಬುದ್ಧಿಯ ತಾ ತಗ್ಗಿಸದೆ||
ಅಂತರ
ಮಲಿನವು ಅಳಿಯಬೇಕು
ಶ್ರೀಕಾಂತನ
ಚರಿತ ಕೇಳಲು ಬೇಕು
ಸಂತತವಿರಬೇಕು
ಸಂತ ಜನರ ಗುಣ
ನಿರಂತರದಲಿ
ತಾ ಚಿಂತಿಸ ಬೇಕು ||
ಸರ್ವಾಂತರ್ಯಾಮಿ
ಶ್ರೀ ಹರಿಯೆಂದು
ಸರ್ವೇಶ್ವರನೆಂದು
ಸ್ವರಮಣನೆಂದು
ಸರ್ವಾನುಗ್ರಹನೆಂದು
ಪುರಂದರ ವಿಠಲನ
ಸರ್ವದಾ
ಧ್ಯಾನಿಸಿ ಗರ್ವವಳಿಯಬೇಕು ||
No comments:
Post a Comment