ನರಸಿಂಹನ
ಪಾದ ಭಜನೆಯ ಮಾಡೋ ||ಪ
||
ದುರಿತ
ಪರ್ವತವ ಖಂಡಿಸುವ ಕುಲಿಶದಂತೆ ||ಅ||
ಸುರರೆಲ್ಲ
ನಡುಗಲು ಸಿರಿದೇವಿ ಮೊರೆಯಿಡೆ
ವರ ಕಂಭದಿಂ ಬಂದ ಸಿರಿ
ನರಹರಿ ನಮ್ಮ ||
ತರಳನ
ಮೊರೆ ಕೇಳಿ ತ್ವರಿತದಲಿ ಬಂದು
ದುರುಳನ
ಕರುಳ ತನ್ನ ಕೊರಳಲ್ಲಿ ಧರಿಸಿದ
||
ಹರಿ
ವಿರಿಂಚಾರಾದ್ಯರು ಕರವೆತ್ತಿ ಮುಗಿಯಲು
ಪರಮ
ಶಾಂತನಾದ ಪುರಂದರವಿಠಲ ||
No comments:
Post a Comment