Wednesday, February 13, 2013

ಶ್ರೀ ಅಷ್ಟ ಲಕ್ಷ್ಮಿ ಸ್ತೋತ್ರ

ಸುಮನಸವಂದಿತ ಮಾಧವಿ ಚಂದ್ರ ಸಹೋದರಿ ಹೇಮಮಯೀ

ಮುನಿಗಣ ಮಂಡಿತ ಮೋಕ್ಷ ಪ್ರದಾಯಿನಿ ಮಂಜುಳಾ ಭಾಷಿಣಿ ವೇದನುತೆ

ಪಂಕಜವಾಸಿನಿ ದೇವಸುಪೂಜಿತ ಸದ್ಗುಣ ವರ್ಷಿಣಿ ಸನ್ನಿಯುತೆ

ಜಯ ಜಯ ಹೇ ಮಧುಸೂದನ ಕಾಮಿನಿ ಆದಿಲಕ್ಷ್ಮಿ ಸದಾ ಪಾಲಯಮಾಂ...



ಆಯೋ ಕಲಿ ಕಲ್ಮಶ ನಾಶಿನಿ ಕಾಮಿನಿ ವೈದಿಕ ರೂಪಿಣಿ ವೇದಮಯೀ

ಕ್ಷೀರ ಸಮುದ್ಭವ ಮಂಗಳ ರೂಪಿಣಿ ಮಂತ್ರ ನಿವಾಸಿನಿ ಮಂತ್ರನುತೆ

ಮಂಗಳ ಧ್ಯಾಯಿನಿ ಅಂಬುಜ ವಾಸಿನಿ ದೇವ ಗಣಾರ್ಚಿತ ಪಾದಯುತೆ

ಜಯ ಜಯ ಹೇ ಮಧುಸೂದನ ಕಾಮಿನಿ ಧನಲಕ್ಷ್ಮೀ ಸದಾ ಪಾಲಯಮಾಂ...



ಜಯವರ ವರ್ಣನಿ ವೈಷ್ಣವಿ ಭಾರ್ಗವಿ ಮಂತ್ರ ಸ್ವರೂಪಿಣಿ ಮಂತ್ರಮಯೀ

ಸುರಗಣ ಪೂಜಿತ ಶೀಘ್ರ ಫಲಪ್ರದ ಜ್ಞಾನ ವಿಕಾಸಿನಿ ಶಸ್ತ್ರನುತೆ

ಭವಭಯ ಹಾರಿಣಿ ಪಾಪ ವಿಮೋಚಿನಿ ಸಾಧು ಜನಾರ್ಚಿತ ಪಾದಯುತೆ

ಜಯ ಜಯ ಹೇ ಮಧುಸೂದನ ಕಾಮಿನಿ ಧೈರ್ಯಲಕ್ಷ್ಮಿ ಸದಾ ಪಾಲಯಮಾಂ



ಜಯ ಜಯ ದುರ್ಗತಿ ನಾಶಿನಿ ಕಾಮಿನಿ ಸರ್ವ ಫಲಪ್ರದ ಶಾಸ್ತ್ರ ಮಯೀ

ರಥಗಜ ತುರಗ ಪದತಿ ಸಮಾವೃತ ಪರಿಜನ ಮಂಡಿತ ಲೋಕನುತೆ

ಹರಿಹರ ಬ್ರಹ್ಮ ಸುಪೂಜಿತ ಸೇವಿತ ತಾಪ ನಿವಾರಿಣಿ ಪಾದಯುತೆ

ಜಯ ಜಯ ಹೇ ಮಧುಸೂದನ ಕಾಮಿನಿ ಗಜಲಕ್ಷ್ಮೀ ಸದಾ ಪಾಲ್ಯಮಾಂ...



ಅಯಿ ಖಗವಾಹಿನಿ ಮೋಹಿನಿ ಚಕ್ರಿಣಿ ರಾಗ ವಿವರ್ಧಿನಿ ಜ್ಞಾನಮಯೀ

ಗುಣಗಣ ವರ್ಧಿನಿ ಲೋಕ ಹಿತೈಷಿಣಿ ಸ್ವರ ಸಪ್ತ ಭೂಷಿತ ಗಣನುತೆ

ಸಕಲ ಸುರಾಸುರ ದೇವ ಮುನೀಶ್ವರ ಮಾನವ ವಂದಿತ ಪಾದಯುತೆ

ಜಯ ಜಯ ಹೇ ಮಧುಸೂದನ ಕಾಮಿನಿ ಸಂತಾನಲಕ್ಷ್ಮಿ ಸದಾ ಪಾಲಯಮಾಂ



ಜಯ ಕಮಲಾಸಿನಿ ಸದ್ಗತಿ ದಾಯಿನಿ ಜ್ಞಾನ ವಿಕಾಸಿನಿ ಗಾನಮಯೀ

ಅನುದಿನ ಮರ್ಚಿತ ಕುಂಕುಮ ಧೂಸರ ಭೂಷಿತ ವಾಸಿತ ವಧ್ಯನುತೆ

ಕನಕಧರಾಸ್ತುತಿ ವೈಭವ ವಂದಿತ ಶಂಕರ ದೇಶಿಕ ಮನ್ಯಪತೆ

ಜಯ ಜಯ ಹೇ ಮಧುಸೂದನ ಕಾಮಿನಿ ವಿಜಯಲಕ್ಷ್ಮಿ ಸದಾ ಪಾಲಯಮಾಂ



ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ ಶೋಕ ವಿನಾಶಿನಿ ರತ್ನಮಯೀ

ಮಣಿಮಯ ಭೂಷಿತ ಕರ್ಮ ವಿಭೂಷಣ ಶಾಂತಿ ಸಮಾವೃತ ಹಸ್ಯಮುಖೆ

ನವನಿಧಿ ದಾಯಿನಿ ಕಲಿಮಲ ಹಾರಿಣಿ ಕಾಮಿತ ಫಲಪ್ರದ ಹಸ್ತಯುತೆ

ಜಯ ಜಯ ಹೇ ಮಧುಸೂದನ ಕಾಮಿನಿ ವಿದ್ಯಾಲಕ್ಷ್ಮಿ ಸದಾ ಪಾಲಯಮಾಂ



ಧಿಮಿಧಿಮಿ ಡಿ೦ಡಿಮಿ ಡಿ೦ಡಿಮಿ ಡಿ೦ಡಿಮಿ ದುಂದುಭಿ ನಾದ ಸುಪೂರ್ಣಮಯೀ

ಘುಮಘುಮ ಘುಮಘುಮ ಘುಮಘುಮ ಶಂಖ ನಿನಾದ ಸುವಧ್ಯನುತೆ

ವೇದ ಪುರಾಣೇತಿಹಾಸ ಸುಪೂಜಿತ ವೈದಿಕ ಮಾರ್ಗ ಪ್ರದರ್ಶಯುತೆ

ಜಯ ಜಯ ಹೇ ಮಧುಸೂದನ ಕಾಮಿನಿ ಧನಲಕ್ಷ್ಮಿ ಸದಾ ಪಾಲಯಮಾಂ

Tuesday, February 12, 2013

ಗಣೇಶ ದ್ವಾದಶನಾಮ ಸ್ತೋತ್ರಂ

ನಮಾಮಿ ಶಿರಸಾ ದೇವಂ ಗೌರೀಪುತ್ರಂ ವಿನಾಯಕಂ

ಭಕ್ತ್ಯಾ ಯಃ ಸಂಸ್ಮರೆನ್ನಿತ್ಯಂ ಆಯುಷ್ಕಾಮಾರ್ಥಸಿದ್ಧಯೇ//

ಪ್ರಥಮಂ ವಕ್ರತುಂಡಂ ತು ಹ್ಯೇಕದಂತಂ ದ್ವಿತೀಯಕಂ

ತೃತೀಯಂ ಕೃಷ್ಣಪಿಂಗಂ ಚ ಚತುರ್ಥಂ ಗಜಕರ್ಣಕಂ//

ಲಂಬೋದರಂ ಪಂಚಮಂ ಚ ಷಷ್ಟ೦ ವಿಕಟಮೇವ ಚ

ಸಪ್ತಮಂ ವಿಘ್ನರಾಜೇಂದ್ರ೦ ಧೂಮ್ರವರ್ಣಂ ತಥಾಷ್ಟಮಂ//

ನವಮಂ ಪಾಲಚಂದ್ರಂ ತು ದಶಮಂ ಚ ವಿನಾಯಕಂ

ಏಕಾದಶಂ ಗಣಪತಿಂ ದ್ವಾದಶಂ ಹಸ್ತಿರಾಣ್ಮುಖಂ//

ಏತದ್ವಾದಶನಾಮಾನಿ ತ್ರಿಸಂಧ್ಯಂ ಯಃ ಪಟೇನ್ನರ:

ವಿದ್ಯಾರ್ಥೀ ಲಭತೇ ವಿದ್ಯಾಂ ಧನಾರ್ಥೀ ಲಭತೇ ಧನಂ//

ಶ್ರೀ ಕೃಷ್ಣ ಅಷ್ಟಕಂ

ವಾಸುದೇವ ಸುತಂ ದೇವಂ ಕಂಸ ಚಾಣೂರ ಮರ್ದನಂ


ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ//



ಅಥಸೀ ಪುಷ್ಪ ಸಂಕಾಶಂ ಹಾರ ನೂಪುರ ಶೋಭಿತಂ


ರತ್ನ ಕಂಕಣ ಕೇಯುರಂ ಕೃಷ್ಣಂ ವಂದೇ ಜಗದ್ಗುರುಂ//



ಕುಟಿಲಾಲಕ ಸಂಯುಕ್ತಂ ಪೂರ್ಣ ಚಂದ್ರ ನಿಭಾನನಂ


ವಿಲಸತ್ ಕುಂಡಲ ಧರಂ ಕೃಷ್ಣಂ ವಂದೇ ಜಗದ್ಗುರುಂ//



ಮಂದಾರ ಗಂಧ ಸಂಯುಕ್ತಂ ಚಾರುಹಾಸಂ ಚತುರ್ಭುಜಂ


ಬಾರ್ಹಿ ಪಿಂಚವ ಚುಡಗಂ ಕೃಷ್ಣಂ ವಂದೇ ಜಗದ್ಗುರುಂ//



ಉತ್ಪುಲ್ಲ ಪದಂ ಪತ್ರಕ್ಷಂ ನೀಲ ಜೀಮೂತ ಸನ್ನಿಭಂ


ಯಾದವಾನಾಂ ಶಿರೋ ರತ್ನಂ ಕೃಷ್ಣಂ ವಂದೇ ಜಗದ್ಗುರುಂ//



ರುಕ್ಮಿಣಿ ಕೇಳಿ ಸಂಯುಕ್ತಂ ಪೀತಾಂಬರ ಸುಶೋಭಿತಂ


ಆವಾಪ್ತ ತುಳಸಿ ಗಂಧಂ , ಕೃಷ್ಣಂ ವಂದೇ ಜಗದ್ಗುರುಂ//



ಗೋಪಿಕಾನಾಂ ಕುಚತ್ವಂತ್ವ ಕುಂಕುಮಾಂಗಿತ ವಕ್ಷಸಂ


ಶ್ರೀನಿಕೇತಂ ಮಹೇಶ್ವಾಸಂ ಕೃಷ್ಣಂ ವಂದೇ ಜಗದ್ಗುರುಂ//



ಶ್ರೀವತ್ಸಾಂಕಂ ಮಹೋರಸ್ಕಂ ವನ ಮಾಲ ವಿರಯಿತಂ


ಶಂಖ ಚಕ್ರ ಧರಂ ದೇವಂ ಕೃಷ್ಣಂ ವಂದೇ ಜಗದ್ಗುರುಂ//



ಕೃಷ್ಣಾಷ್ಟಕಂ ಇದಂ ಪುಣ್ಯಂ ಪ್ರಾಥರುಥ್ಥಾಯ ಯಃ ಪಟೇತ್


ಕೋಟೀ ಜನ್ಮ ಕೃತಂ ಪಾಪಂ ಸ್ಮರನಾಥ್ ತಸ್ಯ ನಶ್ಯತಿ//



Thursday, February 7, 2013

ಶ್ರೀ ರಾಘವೇಂದ್ರ ಕವಚ

ಕವಚಂ ಶ್ರೀ ರಾಘವೇಂದ್ರಸ್ಯ ಯತೀಂದ್ರಸ್ಯ ಮಹಾತ್ಮನ

ವಕ್ಷ್ಯಾಮಿ ಗುರುವರಸ್ಯ ವಾಂಚಿತಾರ್ಥ ಪ್ರದಾಯಕಂ//



ಋಷಿರಸ್ಯ ಅಪ್ಪಣ್ಣಾಚಾರ್ಯ ಚಾಂದೂನುಷ್ಟುಪ್ ಪ್ರಕೀರ್ತಿತಮ್

ದೇವತಾ ಶ್ರೀ ರಾಘವೇಂದ್ರ ಗುರುರಿಷ್ಟಾರ್ಥ ಸಿದ್ಧಯೇ//



ಅಷ್ಟೋತ್ತರಶತಮ್ ಜಪ್ಯಂ ಭಕ್ತಿ ಯುಕ್ತೇನ ಚೇತಸ

ಉದ್ಯತ್ ಪ್ರದ್ಯೋತನಧ್ಯೋತ ಧರ್ಮ ಕೂರ್ಮಸನೆ ಸ್ತಿತಂ//



ಖದ್ಯೋ ಖದ್ಯೋತಧ್ಯೋತ ಧರ್ಮ ಕೂರ್ಮಸನೆ ಸ್ತಿತಂ

ಧೃತ ಕಾಷಾಯವಸನಂ ತುಳಸೀಧರ ವಕ್ಷಸಂ//



ದೂರ್ದಂಡ ವಿಲಾಸದ್ದಂಡ ಕಮಂಡಲ ವಿರಾಜಿತಂ/

ಅಭಯ ಜ್ಞಾನಮುದ್ರಾಕ್ಷ ಮಾಲಾ ಲೋಲಕ ಕರಾ೦ಭುಜಂ//



ಯೋಗೀಂದ್ರ ವಂದ್ಯ ಪಾದಾಬ್ಜಂ ರಾಘವೇಂದ್ರ ಗುರುಂ ಭಜೆ

ಶಿರೋ ರಕ್ಷತುಮೆ ನಿತ್ಯಂ ರಾಘವೇ೦ದ್ರೋ ಭಿಲೇಸ್ತದ//



ಪಾಪಾದ್ರಿಪಾತನೆ ವಜ್ರ ಕೇಶಾನ್ ರಕ್ಷತುಮೆ ಗುರು

ಕ್ಷಮಾಸುರ ಗಣಾಧೀಶೋ ಮುಖಂ ರಕ್ಷತುಮೆ ಗುರು//



ಹರಿಸೇವಾಲಬ್ಧ ಸರ್ವಸಂಪತ್ ಫಲಂ ಮಮಾವತು

ದೇವಸ್ವಭಾವೋ ವತುಮೆ ದೃಷೌ ತತ್ವ ಪ್ರದರ್ಶಕ//



ಇಷ್ಟಪ್ರದಾನೆ ಕಲ್ಪದರು ಶ್ರೋತ್ರೆ ಶ್ರುತ್ಯರ್ಧ ಬೋಧಕ

ಭವ್ಯ ಸ್ವರೂಪಮೆ ನಾಸಾಂ ಜೀವಮೆ ವತು ಭವ್ಯಕೃತ್//



ಆಶ್ಯಂ ರಕ್ಷತುಮೆ ದುಃಖತೂಲ ಸಂಘಾಗ್ನಿ ಚರ್ಯಕ

ಸುಖ ಧೈರ್ಯಾದಿ ಸುಗುಣೋ ದ್ರುವೌ ಮಮ ಸದಾವತು//



ಔಷ್ಥ ರಕ್ಷತುಮೆ ಸರ್ವಗ್ರಹ ನಿಗ್ರಹ ಶಕ್ತಿಮಾನ್

ಉಪಪ್ಲವ ವೋದಧೇಸೇತುರ್ದಂತಾನ್ ರಕ್ಷತುಮೆ ಸದಾ//



ನಿರಸ್ತ ದೋಷೋಮೆ ಪಾತುಮೆ ಕಪೋಲೌ ಕರ್ವಪಾಲಕ

ನಿರವದ್ಯ ಮಹಾವೇಶ ಕಾಂತಮೇವತು ಸರ್ವದಾ//



ಕರ್ಣಮೂಲೇತು ಪರ್ತ್ಯರ್ಧಿ ಮೂಕತ್ವಕರವಾಗಿಮ

ಪರವಾದಿಜಯೇ ಪಾಟು ಹಸ್ತ ಸತಾತ್ವ ವಾದಕೃತ್//



ಕರೌ ರಕ್ಷತುಮೆ ವಿದ್ಯತ್ ಪರಿಜ್ಞೆಯ ವಿಶೇಷವಾನ್

ವಾಗ್ವೈಖರಿ ಭವ್ಯ ಶೇಷಜಯೀ ವಕ್ಷಸ್ತಳಂ ಮಮ//



ಸತೀ ಸಂತಾನ ಸಂಪತ್ತಿ ಭಕ್ತಿ ಜ್ಞಾನಾದಿ ವೃದ್ಧಿಕಂ

ಸ್ತಾನೌ ರಕ್ಷತುಮೆ ನಿತ್ಯಂ ಶರೀರವದ್ಯ ಹಾನಿಕೃತ್//



ಪುಣ್ಯವರ್ಧನ ಪಾದಾಬ್ಜಾಭಿಷೇಕ ಜಲ ಸಂಚಯ

ನಾಭಿಂ ರಕ್ಷತುಮೆ ಪಾರೌಶ್ವ ದ್ಯುಣದೀತುಲ್ಯ ಸದ್ಗುಣ//



ಪ್ರವ್ರುಷ್ಟಂ ರಕ್ಷತುಮೆ ನಿತ್ಯಂ ತಾಪತ್ರಯ ವಿನಾಶಕೃತ್

ಕತ್ತಿಮೆ ರಕ್ಷತು ಸದಾ ವಂಧ್ಯಾ ಸತ್ಪುತ್ರದಾಯಕ//



ಜಗನಂ ಮೇವತು ಸದಾ ವ್ಯಂಗಸ್ವಂಗ ಸಮೃದ್ಧಿಕೃತ್

ಗುಹ್ಯಂ ರಕ್ಷತುಮೆ ಪಾಪ ಗ್ರಹಾರಿಷ್ಟ ವಿನಾಶಕೃತ್//



ಭಕಾಘ ವಿಧ್ವಂಸಕರ ನಿಜಮೂರ್ತಿ ಪ್ರದಾಯಕ

ಮೂರ್ತಿಮಾನ್ ಪಾತುಮೆ ರೋಮ ರಾಘವೇಂದ್ರ ಜಗದ್ಗುರು//



ಸರ್ವತಂತ್ರ ಸ್ವತಂತ್ರೋಸೌ ಜಾನುನೀಮೆ ಸದಾವತು

ಜಂಘೆ ರಕ್ಷತುಮೆ ನಿತ್ಯಂ ಶ್ರೀ ಮಧ್ವ ಮತವರ್ಧನ//



ವಿಜಯೀಂದ್ರ ಕರಾಬ್ಜೋತ್ತ ಸುಧೀಂದ್ರ ವರಪುತ್ರಕಃ

ಗುಲ್ಫೌ ಶ್ರೀ ರಾಘವೇ೦ದ್ರೋಮೆ ಯತಿರಾಟ್ ಸರ್ವದಾವತು//



ಪಾದೌ ರಕ್ಷತುಮೆ ಸರ್ವ ಭಯಹಾರಿ ಕೃಪಾನಿಧಿ

ಜ್ಞಾನಭಕ್ತಿ ಸುಪುತ್ರಾಯು: ಯಶಃ ಶ್ರೀ ಪುಣ್ಯವರ್ಧನಃ//



ಕರಪಾದಾಂಗುಲೀ ಸರ್ವ ಮಮಾವತು ಜಗದ್ಗುರು

ಪ್ರತಿವಾದಿ ಜಯಸ್ವಾಂತ ಭೇದ ಚಿಹ್ನಾದರೋ ಗುರು//



ನಖಾನವತುಮೆ ಸರ್ವಾನ್ ಸರ್ವ ಶಾಸ್ತ್ರ ವಿಶಾರದ

ಅಪರೋಕ್ಷಿಕೃತಶ್ರೀಶ ಪ್ರಾಚ್ಯಂ ದಿಶಿ ಸದಾವತು//



ಸದಕ್ಷಿಣೆ ಚಾವತುಮಾಂ ಸಮುಪೇಕ್ಷಿತ ಭಾವಜ

ಅಪೇಕ್ಷಿತ ಪ್ರದಾತಾಚ ಪ್ರಚೀತ್ಯಮವತು ಪ್ರಭು//



ದಯಾ ದಾಕ್ಷಿಣ್ಯ ವೈರಾಗ್ಯ ವಾಕ್ಪಾಟವ ಮುಖಾಂಕಿತ

ಸದೊದೀಚ್ಯಮಪತುಮಾಂ ಶಾಪಾನುಗ್ರಹ ಶಕ್ತಿಮಾನ್//



ನಿಖೆಂದ್ರಿಯ ದೋಷಗಣ ಮಹಾನುಗ್ರಹಕೃದ್ ಗುರು

ಅದಾಚ್ಯೋರ್ವಂ ಚಾವತು ಮಾಮುಷ್ಟಾಕ್ಷರ ಮನೂದಿತ//



ಆತ್ಮಾತ್ಮೀಯ ಘರಾಶಿಘ್ನ ಮಾಮ್ ರಕ್ಷತು ವಿಧಿಕ್ಷುಚ

ಚತುರ್ನಾಂಚ ಪುಮಾರ್ಧಾನಂ ದಾತಾ ಪ್ರಾತ ಸದಾವತು//



ಸಂಗಮೇವತು ಮಾಮ್ ನಿತ್ಯಂ ತತ್ವನಿತ್ಸರ್ವ ಸುಖಾಕೃತ್

ಮಾಧ್ಯಾಹ್ನೆ ಗಮ್ಯ ಮಹಿಮಾ ಮಾಮ್ ರಕ್ಷತು ಮಹಿಷಯ//



ಮೃತಪೋತ ಪ್ರಾಣದಾತ ಸಾಯಾಹ್ನೆ ಮಾಮ್ ಸದಾವತು

ವೇದಿಸ್ತ ಪುರುಷೋಜೀವಿ ನಿಷಿಧೆ ಪಾತು ಮಾಮ್ ಗುರು//



ವಹ್ನಿಸ್ಥ ಮಾಲಿಕೂಧಾರ್ಥ ವಹ್ನಿ ತಾಪಾತ್ಸದಾವತು

ಸಮಗ್ರ ಟೀಕಾ ವ್ಯಾಖ್ಯಾತ ಗುರುಮೆ ವಿಷಯೇವತು//



ಕಾಂತಾರೆವತು ಮಾಮ್ ನಿತ್ಯಂ ಭಟ್ಟ ಸಂಗ್ರಹಕೃದ್ ಗುರು

ಸುಧಾಪರಿಮಳೋಧಾರ್ತ ಸುಚಂದಸ್ತು ಸದಾವತು//



ರಾಜಚೋರ ವಿಷವ್ಯಾಧಿಯ ದೋವಸ್ಯಾಮ್ರುಗಾಧಿಭಿ

ಅಪಸ್ಮಾರಾಪಹರ್ತಾನ ಶಾಸ್ತ್ರ ವಿತ್ಸರ್ವದಾವತು//



ಗತೌ ಸರ್ವತ್ರ ಮಾಮ್ ಪಾತು ಉಪನಿಷದರ್ಧಕೃದ್ ಗುರು

ಚಾಗ್ವ ಶ್ಯನಕೃದಾಚಾರ್ಯ ಸ್ತಿತೌ ರಕ್ಷತು ಮಾಮ್ ಸದಾ//



ಮಂತ್ರಾಲಯ ನಿವಾಸೀ ಮಾಮ್ ಜಗತ್ಕಾಲೇ ಸದಾವತು

ನ್ಯಾಯ ಮುಕ್ತಾವಲೀಕರ್ತ ಸ್ವಪ್ನಂ ರಕ್ಷತು ಮಾಮ್ ಸದಾ//



ಮಾಮ್ ಪಾತು ಚಂದ್ರಿಕಾ ವ್ಯಾಖ್ಯಾಕರ್ತಾ ಸುಪ್ತೌಹಿ ತತ್ವಕೃತ್

ಸುತಂತ್ರ ದೀಪಿಕಕರ್ತ ಮುಕುಟೌ ರಕ್ಷತು ಮಾಮ್ ಸದಾ//



ಗೀತಾರ್ಥ ಸಂಗ್ರಹಕರ್ತಾ ಸದಾ ರಕ್ಷತು ಮಾಮ್ ಗುರು

ಶ್ರೀ ಮಧ್ವಮತ ದುಗ್ಧಾಬ್ಧಿ ಚಂದ್ರೋವತು ಸದಾನಘ//



ಫಲಸ್ತುತಿ

ಇತಿ ಶ್ರೀ ರಾಘವೇಂದ್ರಸ್ಯ ಕವಚಂ ಪಾಪ ನಾಶನಂ

ಸರ್ವ ವ್ಯಾಧಿ ಹರಮ್ ಸದ್ಯ ಪಾಪನಂ ಪುಣ್ಯವರ್ಧನಂ//



ಯ ಇದಂ ಪಠತೇ ನಿತ್ಯಂ ನಿಯಮೇನ ಸಮಾಹಿತ

ಅದೃಷ್ಟಿ ಪೂರ್ಣದೃಷ್ಟಿ ಸ್ಯಾದೇಡ ಮೂಕೋಪಿ ವಾಕ್ಪತಿ//



ಪೂರ್ಣಾಯು ಪೂರ್ಣ ಸಂಪತ್ತಿ ಭಕ್ತಿ ಜ್ಞಾನ ವೃದ್ಧಿಕೃತ್

ಪೀತ್ವಾ ವಾರಿ ನರೂ ಯೇನ ಕವಚೇನಾಭಿ ಮಂತ್ರಿತಂ//



ಜಹಾತಿ ಕುಕ್ಷಿಗಾನ್ ರೋಗಾನ್ ಗುರುವರ್ಯ ಪ್ರಸಾದತ

ಪ್ರದಕ್ಷಿಣ ನಮಸ್ಕಾರಾನ್ ಗುರೋ ವೃಂದಾವನಸ್ಯ//



ಕರೋತಿ ಪರಾಯ ಭಕ್ತಾ ತದೇತ್ ಕವಚಂ ಪಠನ್

ಪಂಗು ಕೂನಿಶ್ಚ ಪೌಂಗದ ಪೂರಾಂಗೋ ಜಾಯತೆ ದರ್ಶನಂ//



ಶೇಷಾಶ್ಚ ಕುಷ್ಟಪೂರ್ವಶ್ಚ ನಷ್ಯಾ೦ತ್ಯಾ ಮಯಿರಾಶಯಾ

ಅಷ್ಟಾಕ್ಷರೇನ ಮಂತ್ರೇನ ಸ್ತೋತ್ರೆಣ ಕವಚೇನ ಚ//



ವೃಂದಾವನೇ ಸನ್ನಿಹಿತ ಮಾಭಿಶಿಚ್ಯ ಯಥಾವಿಧಿ

ಯಂತ್ರೆ ಮಂತ್ರಾಕ್ಷರಾನ್ಯಸ್ಥ ವಿಲಿಖ್ಯಾರ್ತ ಪ್ರತಿಷ್ಟಿತಂ//



ಷೋಡಶೈ ರೂಪಚಾರ್ಯೈಶ್ಚ ಸಂಪೂಜ್ಯ ತ್ರಿಜಗದ್ಗುರುಂ

ಅಷ್ಟೋತ್ತರ ಶತಾಕ್ಯಾಭಿರರ್ಚಯೇತ್ಕು ಸುಮಾನಿಧಿಭಿ//



ಫಲೈಶ್ಚ ವಿವಿದೈರೇವ ಗುರೋರರ್ಚಾಂ ಪ್ರಕುರ್ವತ

ನಾಮ ಶ್ರವಣ ಮಾತ್ರೇನ ಗುರುವರ್ಯ ಪ್ರಸಾದತ//



ಭೂತ ಪ್ರೇತ ಪಿಶಾಚಾದ್ಯ ವಿದ್ರವಂತಿ ದಿಶೂ ದಶ

ಪಟೇದೆದತ್ರಿಕಂ ನಿತ್ಯಂ ಗುರೋ ವೃಂದಾವನಾ೦ತಿಕೆ//



ದೀಪಂ ಸಂಯೋಜ್ಯವಿದ್ಯಾವಾನ್ ಸುಖಾಸು ವಿಜಯೀ ಭವೇತ್

ರಾಜ ಚೋರ ಮಹಾವ್ಯಾಘ್ರ ಸರ್ಪನಕ್ರಾದಿ ಪೀಡನಾತ್//



ಕವಚಸ್ಯ ಪ್ರಭವೇನ ಭಯಂ ತಸ್ಯ ನಜಾಯತೆ

ಸೋಮಸೂರ್ಯೋ ಪರಾಗಾದಿ ಕಾಲೇ ವೃಂದಾವನಾ೦ತಿಕೆ//



ಕವಚಾದ್ರಿಕಂ ಪುಣ್ಯಮಪ್ಪಣ್ಣಾಚಾರ್ಯ ದರ್ಶಿತಂ

ಜಪೇದ ಸಾಧನಂ ಪುತ್ರಾನ್ ಭಾರ್ಯಾಂ ಚ ಸುಮನೋರಮಂ//



ಜ್ಞಾನಂ ಭಕ್ತಿಂ ಚ ವೈರಾಗ್ಯಂ ಭುಕ್ತಿಂ ಮುಕ್ತಿಂ ಚ ಶಾಶ್ವತಂ

ಸಂಪ್ರಾಪ್ಯೇ ಮೋದತೆ ನಿತ್ಯಂ ಗುರುವರ್ಯ ಪ್ರಸಾದತ//



ಇತಿ ಶ್ರೀಮದಪ್ಪ್ಪ್ಪಣ್ಣಾಚಾರ್ಯ ವಿರಚಿತಂ

ಶ್ರೀ ರಾಘವೇಂದ್ರ ಕವಚಂ ಸಂಪೂರ್ಣಂ//

ಶ್ರೀನಿವಾಸ ಭಜನೆ

ಬಿಡೆನೋ ನಿನ್ನಂಘ್ರಿ ಶ್ರೀನಿವಾಸ

ಎನ್ನ ದುಡಿಸಿಕೊಳ್ಳೆಲೋ ಶ್ರೀನಿವಾಸ

ನಿನ್ನ ನುಡಿಯ ಜೊತೆಲ್ಲೋ ಶ್ರೀನಿವಾಸ

ನನ್ನ ನಡೆ ತಪ್ಪು ಕಾಯೋ ಶ್ರೀನಿವಾಸ//



ಬಡಿಯೋ ಬೆನ್ನಲ್ಲಿ ಶ್ರೀನಿವಾಸ

ಎನ್ನ ಒಡಲ ಹೊಯ್ಯದಿರೋ ಶ್ರೀನಿವಾಸ

ನಾ ಬಡವ ಕಾಣೆಲೋ ಶ್ರೀನಿವಾಸ

ನಿನ ಒಡಲ ಹೊಕ್ಕೆನೋ ಶ್ರೀನಿವಾಸ//



ಪಂಜು ಹಿಡಿವೆನೋ ಶ್ರೀನಿವಾಸ

ನಿನ ಎಂಜಲ ಬಳಿದುಂಬೆ ಶ್ರೀನಿವಾಸ

ನಾ ಸಂಜೆ ಉದಯಕೆ ಶ್ರೀನಿವಾಸ

ಕಾಳಜಿಯ ಪಿಡಿವೆ ಶ್ರೀನಿವಾಸ//

ಸತಿಗೆ ಚಾಮರ ಶ್ರೀನಿವಾಸ

ನಾನೆತ್ತಿ ಕುಣಿವೆನೋ ಶ್ರೀನಿವಾಸ

ನಿನ್ನ ರತ್ನದಾವಿಗೆ ಶ್ರೀನಿವಾಸ

ನಾ ಹೊತ್ತು ನಲಿವೆನೋ ಶ್ರೀನಿವಾಸ//



ಅವರೊಳಿಗವ ಮಾಳ್ಪೆ ಶ್ರೀನಿವಾಸ

ನನ್ನ ಪಾಲಿಸೋ ಬಿಡದೆ ಶ್ರೀನಿವಾಸ

ಹೇಳಿದಂತಾಗಲಿ ಶ್ರೀನಿವಾಸ

ನಿನ್ನಗಳಾಗಿವೆ ಶ್ರೀನಿವಾಸ//



ನಿನ್ನ ನಾಮ ಹೋಳಿಗೆ ಶ್ರೀನಿವಾಸ

ಕಳ್ಳ ಕುನ್ನಿ ನಾನಾಗಿಹೆ ಶ್ರೀನಿವಾಸ

ಕಟ್ಟಿ ನಿನ್ನವರೊದ್ದರೆ ಶ್ರೀನಿವಾಸ

ನನಗಿನ್ನು ಲಜ್ಜೆತಕೆ ಶ್ರೀನಿವಾಸ//



ಬೀಸಿ ಕೊಲ್ಲಲವರೆ ಶ್ರೀನಿವಾಸ

ಮುದ್ರೆ ಕಾಸಿ ಚುಚ್ಚಲವರೆ ಶ್ರೀನಿವಾಸ

ಮಿಕ್ಕ ಘಾಸಿಗಂಜೆನಯ್ಯ ಶ್ರೀನಿವಾಸ

ಎಂಜಲ ಬಂಟ ನಾ ಶ್ರೀನಿವಾಸ//



ಹೇಸಿ ನಾನಾದರೆ ಶ್ರೀನಿವಾಸ

ಹರಿ ದಾಸರೊಳು ಪೊಕ್ಕೆ ಶ್ರೀನಿವಾಸ

ಅವರ ಭಾಷೆಯ ಕೇಳಿಹೆ ಶ್ರೀನಿವಾಸ

ಆ ವಾಸಿಯ ಸೈರಿಸೋ ಶ್ರೀನಿವಾಸ//



ತಿಂಗಳವನಲ್ಲ ಶ್ರೀನಿವಾಸ

ವತ್ಸ ರಂಗಳವನಲ್ಲ ಶ್ರೀನಿವಾಸ

ರಾಜಂಗಳ ಸವದಿಪೆ ಶ್ರೀನಿವಾಸ

ಭವನಗಳ ದಾಟುವೆ ಶ್ರೀನಿವಾಸ//



ನಿನ್ನವ ನಿನ್ನವ ಶ್ರೀನಿವಾಸ

ನಾನನ್ಯ ಅರಿಯೆನೋ ಶ್ರೀನಿವಾಸ

ಅಯ್ಯ ಮನ್ನಿಸೋ ತಾಯಿತಂದೆ ಶ್ರೀನಿವಾಸ

ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸ/

Tuesday, February 5, 2013

ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ

ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ ತಾರೇ ಬಿಂದಿಗೆಯ

ಬಿಂದಿಗೆ ಒಡೆದರೆ ಒಂದೇ ಕಾಸು ತಾರೇ ಬಿಂದಿಗೆಯ//



ರಾಮನಾಮವೆಂಬ ರಸವುಳ್ಳ ನೀರಿಗೆ ತಾರೇ ಬಿಂದಿಗೆಯ

ಕಾಮಿನಿಯರ ಕೂಡೆ ಏಕಾಂತವಾಡೆನು ತಾರೇ ಬಿಂದಿಗೆಯ//



ಗೋವಿಂದ ನೀರಿಗೆ ಗುಣವುಳ್ಳ ನೀರಿಗೆ ತಾರೇ ಬಿಂದಿಗೆಯ

ಆವಾವ ಪರಿಯಲ್ಲಿ ಅಮೃತದ ನೀರಿಗೆ ತಾರೇ ಬಿಂದಿಗೆಯ//



ಬಿಂದುಮಾಧವನ ಘಟ್ಟಕ್ಕೆ ಹೋಗುವ ತಾರೇ ಬಿಂದಿಗೆಯ

ಪುರಂದರ ವಿಠಲಗೆ ಅಭಿಷೇಕ ಮಾಡುವ ತಾರೇ ಬಿಂದಿಗೆಯ//

ತೂಗಿರೆ ರಾಯರ....

ತೂಗಿರೆ ರಾಯರ ತೂಗಿರೆ ಗುರುಗಳ ತೂಗಿರೆ ಯತಿಕುಲ ತಿಲಕರ


ತೂಗಿರೆ ಯೋಗಿಂದ್ರ ಕರಕಮಲ ಪೂಜ್ಯರ ತೂಗಿರೆ ಗುರು ರಾಘವೇಂದ್ರರ//



ಕುಂದಾಣಮಯವಾದ ಚಂದದ ತೊಟ್ಟಿಲದೊಳ್ ಅಂದಾದಿ ಮಲಗ್ಯಾರ ತೂಗಿರೆ

ನಂದಾನಕಂದ ಗೋವಿಂದ ಮುಕುಂದಾನಂದದಿ ಭಜಿಪರ ತೂಗಿರೆ//



ಯೋಗಾನಿದ್ರೆಯನ್ನು ಬೇಗನೆ ಮಾಡುವ ಯೋಗೀಶವಂದ್ಯರ ತೂಗಿರೆ

ಭೋಗೀಶಯನನ ಪಾದ ಯೋಗದಿ ಭಜಿಪರ ಭಾಗವತರನನ್ನ ತೂಗಿರೆ//



ನೇಮದಿ ತನ್ನನ್ನು ಕಾಮಿಪ ಜನರಿಗೆ ಕಾಮಿತ ಕೊಡುವವರ ತೂಗಿರೆ

ಪ್ರೇಮದಿ ನಿಜಜನರ ಆಮಾಯವನುಕೂಲ ಧೂಮಕೇತುವೆನಿಪರ ತೂಗಿರೆ//



ಅದ್ವೈತ ಮತವನ್ನು ವಿಧ್ವಂಸ ಮಾಡಿದ ಮಧ್ವ ಮತೋದ್ಧಾರನ ತೂಗಿರೆ

ಸಿದ್ಧ ಸಂಕಲ್ಪದಿ ಬದ್ಧ ನಿಜಭಕ್ತರ ಉದ್ಧಾರ ಮಾಳ್ಪರ ತೂಗಿರೆ//



ಭಜಕಜನರ ಭವ ತೃಜನಮಾಡಿಸಿ ಅವರ ನಿಜಗತಿಯಿಪ್ಪರ ತೂಗಿರೆ

ನಿಜಗುರುಜಗನ್ನಾಥ ವಿಠಲನ ಪದಕಂಜ ಭಜನೆಯ ಮಾಳ್ಪರ ತೂಗಿರೆ//