Wednesday, April 23, 2014

ಶ್ರೀ ರುದ್ರದ್ವಾದಶನಾಮ ಸ್ತೋತ್ರಂ

ಪ್ರಥಮಂ ತು ಮಹಾದೇವಂ ದ್ವಿತೀಯಂ ತು ಮಹೇಶ್ವರಂ
ತೃತೀಯಂ ಶಂಕರಂ ಪ್ರೋಕ್ತಂ ಚತುರ್ಥಂ ವೃಷಭಧ್ವಜಂ ।। ।।

ಪಂಚಮಂ ಕೃತ್ತಿವಾಸಂ ಷಷ್ಠ೦ ಕಾಮಾಂಗನಾಶನಂ
ಸಪ್ತಮಂ ದೇವದೇವೇಶಂ ಶ್ರೀಕಂಠ೦ ಚಾಷ್ಟಮಂ ತಥಾ ।। ।।

ನವಮಂ ತು ಹರಮ್ ದೇವಂ ದಶಮಂ ಪಾರ್ವತೀಪತಿಂ
ರುದ್ರಮೇಕಾದಶಂ ಪ್ರೋಕ್ತಂ ದ್ವಾದಶಂ ಶಿವಮುಚ್ಯತೇ ।। ।।

ಏತದ್ವಾದಶನಾಮಾನಿ ತ್ರಿಸಂಧ್ಯಂ ಯಃ ಪಠ್ಏನ್ನರಃ
ಗೋಘ್ನಶ್ಚೈವ ಕೃತಘ್ನಶ್ಚ ಭ್ರೂಣಹಾ ಗುರುತಲ್ಪಗಃ ।। ।।

ಸ್ತ್ರೀಬಾಲಘಾತಕಶ್ಚೈವ ಸುರಾಪೋ ವೃಷಲೀಪತಿ:
ಸರ್ವಂ ನಾಶಯತೇ ಪಾಪಂ ಶಿವಲೋಕಂ ಗಚ್ಚತಿ ।। ।।

ಶುದ್ಧಸ್ಪಟಿಕಸಂಕಾಶಂ ತ್ರಿನೇತ್ರ೦ ಚಂದ್ರಶೇಖರ೦
ಇಂದುಮಂಡಲಮಧ್ಯಸ್ಥಂ ವಂದೇ ದೇವಂ ಸದಾಶಿವಂ ।। ।।

।। ಇತಿ ಶ್ರೀ ರುದ್ರದ್ವಾದಶ ಸ್ತೋತ್ರಂ ಸಮಾಪ್ತಂ ।।

ಶ್ರೀ ಗಣೇಶ ದ್ವಾದಶ ಸ್ತೋತ್ರಂ

ನಮಾಮಿ ಶಿರಸಾ ದೇವಂ ಗೌರೀಪುತ್ರಂ ವಿನಾಯಕಂ
ಭಕ್ತ್ಯಾಯಃ ಸಂಸ್ಮರೇನ್ನಿತ್ಯಂ ಆಯುಷ್ಕಾಮಾರ್ಥಸಿದ್ಧಯೇ ।।೧।।

ಪ್ರಥಮಂ ವಕ್ರತುಂಡಂ ತು ಹ್ಯೇಕದಂತಂ ದ್ವಿತೀಯಕಂ
ತೃತೀಯಂ ಕೃಷ್ಣಪಿಂಗಂ ಚತುರ್ಥಂ ಗಜಕರ್ಣಕಂ ।।೨।।

ಲಂಬೋದರಂ ಪಂಚಮಂ ಷಷ್ಠ೦ ವಿಕಟಮೇವ
ಸಪ್ತಮಂ ವಿಘ್ನರಾಜೇಂದ್ರಂ ಧೂಮ್ರವರ್ಣಂ ತಥಾಷ್ಟಮಂ ।।೩।।

ನವಮಂ ಫಾಲಚಂದ್ರಂ ತು ದಶಮಂ ವಿನಾಯಕಂ
ಏಕಾದಶಂ ಗಣಪತಿಂ ದ್ವಾದಶಂ ಹಸ್ತಿರಾಣ್ಮುಖಂ ।।೪।।

ಏತದ್ವಾದಶನಾಮಾನಿ ತ್ರಿಸಂಧ್ಯಂ ಯಃ ಪಟೇನ್ನರಃ
ವಿದ್ಯಾರ್ಥೀ ಲಭತೇ ವಿದ್ಯಾಂ ಧನಾರ್ಥೀ ಲಭತೇ ಧನಂ ।।೫।।

।। ಇತಿ ಗಣೇಶದ್ವಾದಶ ಸ್ತೋತ್ರಂ ಸಮಾಪ್ತಂ ।।

Friday, April 11, 2014

ವಾರ್ಷಿಕೋತ್ಸವ ಆಮಂತ್ರಣ

ಆತ್ಮೀಯರೇ,

ಪ್ರತಿ ವರ್ಷದಂತೆ ಈ ಬಾರಿಯೂ ಮಾರಂಡಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವೈಶಾಖ ಶುದ್ಧ ದಶಮಿ (ಮೇ ತಿಂಗಳ ೧೩,೧೪ ಮತ್ತು ೧೫) ಸೀತಾರಾಮ ಕಲ್ಯಾಣೋತ್ಸವ, ವಾರ್ಷಿಕೋತ್ಸವ ಮತ್ತು ವಸಂತೋತ್ಸವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ,

ಭಕ್ತಾದಿಗಳು ಎಂದಿನಂತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಗವಂತನ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ.

ಇಂತಿ
ಶ್ರೀ ಅಂಜನೇಯ ಸ್ವಾಮಿ ಸೇವಾ ಸಮಿತಿ 



Thursday, April 10, 2014

ಧರ್ಮಕ್ಕೆ ಕೈ ಬಾರದೀ ಕಾಲ

ಧರ್ಮಕ್ಕೆ ಕೈ ಬಾರದೀ ಕಾಲ
ಪಾಪಕರ್ಮಕ್ಕೆ ಮನಸೋಲೋದಿ ಕಲಿ ಕಾಲ
ದಂಡ ದ್ರೋಹಕೆ ಉಂಡು ಪುಂಡು ಪೋಕರಿಗುಂಟು
ಹೆಂಡತಿ ಮಕ್ಕಳಿಗಿಲ್ಲವೀ ಕಾಲ ।।೧।।

ದಿಂಡೇರಿಗುಂಟು ಜಗಭಂಡರಿಗುಂಟು
ಅಂಡಲೆವರಿಗಿಲ್ಲವೀ ಕಾಲ
ಮತ್ತೆ ಸುಳ್ಳರಿಗುಂಟು ನಿತ್ಯ ಹಾದರಕ್ಕುಂಟು
ಉತ್ತಮರಿಗಿಲ್ಲವೀ ಕಾಲ ।।೨।।

ತೋತ್ತೇರಿಗುಂಟು ತಾಟಕಿಗುಂಟು
ಹೆತ್ತತಾಯಿಗಿಲ್ಲವೀ ಕಾಲ
ಹುಸಿ ದಿಟವಾಯಿತು ರಸ ಕಸವಾಯಿತು
ಸೊಸೆ ಅತ್ತೆಯ ದಂಡಿಸೋದೀ ಕಾಲ
ಬಿಸಜಾಕ್ಷ ಪುರಂದರವಿಠಲನ ಮನದಲ್ಲಿ
ಸ್ತುತಿಸುವವರಿಗಿಲ್ಲವೀ ಕಾಲ ।।೩।।