Wednesday, July 17, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೧


ಹನುಮಾವತಾರಕೆ ಕಾಲಯಮ ಎನಿಸಿದಾ
ಮಣಿಮಾನ ಸುರನಾದಾ ಭೀಮಾವತಾರಕ್ಕೆ
ಮುನಿ ಮಧ್ವರಾಯನಾಗೆ ಬಣುಗು ಸಂಕರನಾದಾ
ಜನಿಸಿದನು ವೈರವನು ಜನುಮ ಮೂರರಲ್ಲಿ ಬಿಡದೆ
ಅನಿಲದೇವನ ಕೂಡ ಶೆಣೆಸಿ ಸಂಕಟ ಬಟ್ಟು
ಅನುವ ಕಾಣದಲೆ ತಮಸೀನಲ್ಲೀಗ ಬಳಲುತಿಪ್ಪಾ
ಫಣನಾಮ ವಿಜಯವಿಠಲ ಹನುಮಂತ ಮತದಂತೆ
ಮನುಜೋತ್ತಮ ಕಡೆ ಮೊದಲು ಮನದಂತೆ ಫಲವೀವಾ॥

No comments:

Post a Comment