Wednesday, July 31, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೭


ಗದೆಯಿಂದ ಅರಿಗಳ ಸದೆಬಡಿದ
ಮುದದಿಂದಲಿ ಅದ್ರಿವೊದಗಿ ತಂದ ಹಸ್ತ
ಕದನದೊಳಗೆ ಮಾಗಧನ ಸೀಳಿದ ಹಸ್ತ
ಮದನೃಪನನುಜನ ಉರವ ಬಗೆದ ಹಸ್ತ
ಸುದತಿಯ ತುರುಬು ಕಟ್ಟಿದ ಕರುಣ ಹಸ್ತ
ಪದೋಪದಿಗೆ ನಮ್ಮ ವಿಜಯವಿಠಲನ್ನ
ಸದಮಲ ಭಕ್ತಾ ಎನಗೆ ಪೊಳೆವ ಹಸ್ತ॥

Monday, July 29, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೬




ಈತನೇ ಹನುಮನು ಈತನೇ ನಮ್ಮ ಗುರು
ಲಂಕೆಯ ಸಖಗೆ ನಿಶ್ಯಂಕೆಯಲುಣಿಸಿದಾ
ಕೌರವ ಬಲದ ಕುಠಾರಿಯೆಂದೆನಿಸಿದಾ
ಮೂರೇಳು ದುರ್ಭಾಷ್ಯ ಹಾರಿಸಿದಾ ಮುನಿ
ಹರಿಮತ ಸ್ಥಾಪನ ಬಿರುದಾಂಕ ದೇವನು
ಗುರು ಮಹಿಪತಿ ಜನರನುದ್ಧರಿಸಿದ ದೇವನು||

Thursday, July 25, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೫




ಕಲಿಯುಗದಲಿ ತುರಿಯಾಶ್ರಮವನೆ ಧರಿಸಿ
ಕಲುಷರಾದ ಮಾಯಿಗಳ ಸೋಲಿಸಿ
ಖಿಲವಾದ ಮಧ್ವಮತವನ್ನು ಬಲಿದೆಂದೆನಿಸಿ
ಕಾಗಿನೆಲೆಯಾದಿ ಕೇಶವನೆ ಪರದೈವವೆನಿಸಿ
ಪರಮ ಪದವೀವ ಗುರುಮುಖ್ಯಪ್ರಾಣ||

Monday, July 22, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೪




ಏಕವಿಂಶತಿ ಕುಭಾಷ್ಯ ದೂಷಕನೆಂಬ
ಬಿರುದು ನಮ್ಮಯ ಗುರುರಾಯಗಲ್ಲದುಂಟೆ
ಪುರಂದರ ವಿಠಲ ಸ್ರೋತ್ತಮನೆಂಬ
ಸಿದ್ಧಾಂತವು ನಮ್ಮ ಗುರು ರಾಯರಿಗಲ್ಲದುಂಟೆ||

Friday, July 19, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೩




ವೈದಿಕ ಮತದಲಿ ನಡೆದೆವೆಂದು ತಾವು
ವೈಷ್ಣವವಂಬಿಟ್ಟು ಕೊಟ್ಟರು ಕೆಲವರು
ವೈಷ್ಣವ ಮತದಲಿ ನಡೆವೆವೆಂದು
ವೈದಿಕವಂ ಬಿಟ್ಟುಕೊಟ್ಟರು ಕೆಲವರು
ವೈದಿಕ ವೈಷ್ಣವ ಒಂದೇ ಎಂದು ಮಧ್ವಮುನಿ
ಪ್ರತಿಪಾದಿಸಿದ ಪುರಂದರ ವಿಠಲ ಮೆಚ್ಚ॥