Wednesday, November 3, 2010

ಕೃಷ್ಣನ ನೆನೆಯಿರೋ ಶ್ರೀ ಕೃಷ್ಣನ ನೆನೆಯಿರೋ

ಕೃಷ್ಣನ ನೆನೆಯಿರೋ ಶ್ರೀ ಕೃಷ್ಣನ ನೆನೆಯಿರೋ
ಗೋಕುಲನಂದನ ಶ್ರೀ ಕೃಷ್ಣನ ನೆನೆಯಿರೋ..

ದೇವಕಿಸುತನು ಶ್ರೀ ಕೃಷ್ಣನು..ಕಂಸನ ಕೊಂದವ ಶ್ರೀ ಕೃಷ್ಣನು..
ಬೆಣ್ಣೆಯ ಕದ್ದವ ಬಾಲಕೃಷ್ಣನು...ತಾಟಕಿಯ ಕೊಂದವ ಶ್ರೀ ಕೃಷ್ಣನು..
ಮಣ್ಣನು ನುಂಗಿ ಬ್ರಮ್ಹಾಂಡವ ತೋರಿದ ಬಾಲಕನಿವನು
ಕಲ್ಲು ಗುಂಡನು ಎಳೆದು ಮರಕ್ಕೆ ಶಾಪವಿಮೋಚನ ಮಾಡಿದ ಪುಟ್ಟ ಕಂದನಿವನು..
ಕಾಳಿಂಗ ಸರ್ಪವ ಮೆಟ್ಟಿನಿಂತ ಮುದ್ದು ಕಂದನಿವನು..
ಗೋವರ್ಧನ ಗಿರಿಧಾರಿ ಶ್ರೀ ಕೃಷ್ಣನು ಇವನು...

ಕೃಷ್ಣನ ನೆನೆಯಿರೋ ಶ್ರೀ ಕೃಷ್ಣನ ನೆನೆಯಿರೋ
ಲೋಕೋದ್ಧಾರಕ ಶ್ರೀ ಕೃಷ್ಣನ ನೆನೆಯಿರೋ..

ಗೋವುಗಳ ಕಾಯ್ದ ಗೋಪಾಲಕನಿವನು..
ಗೋಪಿಕಾ ಸ್ತ್ರೀಯರ ಸೀರೆಯ ಕದ್ದವನಿವನು..
ದ್ರೌಪದಿಗೆ ಸಭೆಯಲ್ಲಿ ಸೀರೆಯ ಕೊಟ್ಟವನಿವನು...
ರುಕ್ಮಿಣಿ, ಸತ್ಯಭಾಮ, ಹದಿನಾರು ಸಾವಿರ ಗೋಪಿಕಾ ಸ್ತ್ರೀಯರ ಸಖನಿವನು..
ಪಿಳ್ಳಂಗೋವಿಯ ಹಿಡಿದು ಬೃಂದಾವನದಿ ನಲಿದಾಡಿದನಿವನು..

ಕೃಷ್ಣನ ನೆನೆಯಿರೋ ಶ್ರೀ ಕೃಷ್ಣನ ನೆನೆಯಿರೋ
ಜಗದೋದ್ಧಾರಕ ಶ್ರೀ ಕೃಷ್ಣನ ನೆನೆಯಿರೋ...

ಕುಚೇಲನ ಪ್ರಿಯ ಮಿತ್ರನು ಇವನು...ಶಿಶುಪಾಲಕನ ಸಂಹಾರಿಸಿದವನಿವನು..
ಅರ್ಜುನನ ರಥಸಾರಥಿಯಾಗಿ ಪಾರ್ಥಸಾರಥಿಯಾದವನಿವನು..
ವಿಶ್ವರೂಪ ತೋರಿ ಭಗವದ್ಗೀತೆಯ ಭೋಧಿಸಿದ ಶ್ರೀ ಕೃಷ್ಣನು
ಶಂಖ ಚಕ್ರ ಗಧಾಧಾರಿಯಾದ ಶ್ರೀಮನ್ನಾರಾಯಣನು..

ಕೃಷ್ಣನ ನೆನೆಯಿರೋ ಶ್ರೀ ಕೃಷ್ಣನ ನೆನೆಯಿರೋ

No comments:

Post a Comment