Tuesday, February 16, 2016

ಶ್ರೀ ಮಧ್ವನವಮಿ ಆಮಂತ್ರಣ

ಆತ್ಮೀಯರೇ,

ಇದೇ  ತಿಂಗಳು ಅಂದರೆ ಫೆಬ್ರವರಿ ೧೭ನೇ ತಾರೀಖಿನಂದು ಶ್ರೀ ಕ್ಷೇತ್ರ ಮಾರಂಡಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ವತಿಯಿಂದ ಮಧ್ವನವಮಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡಬೇಕಾಗಿ ವಿನಂತಿ.



Sunday, February 7, 2016

ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ

  ಇಂದು ದಾಸಶ್ರೇಷ್ಠ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ 
 
ಕಂಡೆ ನಾ ಗೋವಿಂದನ
ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ ।।
ಕೇಶವ ನಾರಾಯಣ ಶ್ರೀಕೃಷ್ಣನ
ವಾಸುದೇವ ಅಚ್ಚುತಾನಂತನ  ।।೧।।
ಸಾಸಿರ ನಾಮದ ಶ್ರೀ ಹೃಷೀಕೇಶನ
ಶೇಷಶಯನ ನಮ್ಮ ವಸುದೇವ ಸುತನ
ಮಾಧವ ಮಧುಸೂದನ ತ್ರಿವಿಕ್ರಮನ ಯಾದವಕುಲವಂದ್ಯನ 
ವೇದಾಂತ ವೇದ್ಯನ ಇಂದಿರಾರಮಣನ ।।೨।।
ಆದಿಮೂರುತಿ ಪ್ರಹ್ಲಾದವರದನ
ಪುರುಷೋತ್ತಮ ನರಹರಿ ಶ್ರೀ ಕೃಷ್ಣನ
ಶರಣಾಗತ ರಕ್ಷಕನ ಕರುಣಾಕರ ನಮ್ಮ ಪುರಂದರವಿಠಲನ
ನೆರೆನಂಬಿದನು ಬೇಲೂರ ಚೆನ್ನಿಗನ ।।೩।।