ರಾಗ : ಬೇಹಾಗ್ 
ತಾಳ : ಆದಿತಾಳ 
ಹನುಮನ ಮತವೇ ಹರಿಯ ಮತವೋ | ಪ | 
ಹರಿಯ ಮತವೋ ಹನುಮನ ಮತವೋ | ಅ ಪ | 
ಹನುಮನ ನಂಬಿದ ಸುಗ್ರೀವ ಗೆದ್ದ 
ಹನುಮನ ನಂಬದ ವಾಲಿಯು ಬಿದ್ದ | ೧ | 
ಹನುಮನ ನಂಬಿದ ವಿಭೀಷಣ ಗೆದ್ದ 
ಹನುಮನ ನಂಬದ ರಾವಣ ಬಿದ್ದ | ೨ | 
ಹನುಮ ಪುರಂದರವಿಠಲನ ದಾಸ 
ಪುರಂದರವಿಠಲನು ಹನುಮನೋಳ್ವಾಸ | ೩ | 
 
 
