ರಾಗ : ಕಾಪಿ 
ತಾಳ : ಆಟತಾಳ 
ಪುರಂದರದಾಸರ ಕೃತಿ 
ಸಾರಿ ಬಂದನೆ | ಪ್ರಾಣೇಶ ಬಂದನೆ || ಪ || 
ಸಾರಿ ಬಂದು ಲಂಕಾಪುರವ ಮೀರಿದ ರಾವಣನ |
ಕಂಡು ಧೀರ ವಯ್ಯಾರದಿಂದ || ಅ ಪ || 
ವಾಯುಪುತ್ರನೆ ಶ್ರೀರಾಮದೂತನೆ 
ಪ್ರೀತಿಯಿಂದ ಸೀತಾಂಗನೆಗೆ ಮುದ್ರಿಕೆಯ
ತಂದಿತ್ತವನೆ || ೧ || 
ಭೀಮಸೇನನೆ ಕುಂತೀ ತನಯನೆ 
ವಿರಾಟನ ಮನೆಯಲಿ ನಿಂತು ಕೀಚಕನ ಸಂಹರಿಸಿದವನೆ || ೨ || 
ಮಧ್ವರಾಯನೆ ಸರ್ವಜ್ಞ ಶ್ರೇಷ್ಠನೆ 
ಅದ್ವೈತವ ಗೆದ್ದು ಪುರಂದರವಿಠಲನ ಮುಂದೆ ನಿಂತನೆ
|| ೩ || 
 
 
