ರಾಗ : ಶಂಕರಾಭರಣ 
ತಾಳ : ಅಟತಾಳ 
ನೋಡಿದ್ಯಾ ಸೀತಮ್ಮ ನೀ ನೋಡಿದ್ಯಾ || ಪ || 
ನೋಡಿದ್ಯಾ ಹನುಮನಾರ್ಭಟವ, ಹಾಳು ಮಾಡಿದ ಕ್ಷಣದಲಿ ವನವಾ 
ಆಹಾ | ಝಾಡಿಸಿ ಕಿತ್ತು ಈಡ್ಯಾಡಿ ವೃಕ್ಷಗಳ 
ಕೊಂಡಾಡುವ ನಿನ್ನಯ ಕೋಡಗನ್ಹರುಷವ || ಅ ಪ || 
ಮಾತೆ ನಿನ್ನಾಜ್ಞೆಯ ಕೊಂಡು 
ಆರ ಭೀತಿ ಇಲ್ಲದೆ ಫಲವ ಉಂಡು 
ದೈತ್ಯದೂತ ಬರಲು ಭಾರಿ ಹಿಂಡು || ಆಹಾ || 
ವಾತಜಾತ ಬಂದ ಪಾತಕಿಗಳನ್ನೆಲ್ಲ 
ತಾ ತವಕದಿ ಕೊಂದು ಭೂತಳಕ್ಹಾಕಿದ || ೧ || 
ಸೊಕ್ಕಿರಾವಣನೆಂಬ ಗಂಡ 
ಮಹಲಕುಮಿಯನ ಕರಕೊಂಡ, ರಾಮ 
ರಕ್ಕಸಾಂತಕ ಆಕೆ ಗಂಡ, ಕಪಿ 
ಗಿಕ್ಕಿರೆಂದು ಕಮದಂಡ || ಆಹಾ || 
ಮಿಕ್ಕ ಖಳರು ಕೂಡಿ ಲೆಕ್ಕಿಸಿ ಮಾತಾಡಿ 
ಸಿಕ್ಕರೆ ಬಿಡೆನೆಂದು ದಿಕ್ಕುಪಾಲಾದ || ೨ || 
ಎಷ್ಟೇಳವನ ಪ್ರತಾಪ, ನೋಡು 
ಸುಟ್ಟೆನೆಂಬ ಲಂಕಾದ್ವೀಪ, ಎಂಥಾ 
ಘಟ್ಟಿಗ ನೋಡೆ ನಮ್ಮಪ್ಪ || ಆಹಾ || 
ಸೃಷ್ಟೀಶ ಕೇಶವ ವಿಠಲರಾಯನ 
ಮುಟ್ಟಿ ಭಜಿಸಲಜ ಪಟ್ಟಾಳೇನೆಂದ್ಹೋದಾ || ೩ || 
 
 
 
No comments:
Post a Comment