Thursday, October 31, 2013

ಸಾರಿ ಬಂದನೆ | ಪ್ರಾಣೇಶ ಬಂದನೆ

ರಾಗ : ಕಾಪಿ
ತಾಳ : ಆಟತಾಳ
ಪುರಂದರದಾಸರ ಕೃತಿ

ಸಾರಿ ಬಂದನೆ | ಪ್ರಾಣೇಶ ಬಂದನೆ || ಪ ||

ಸಾರಿ ಬಂದು ಲಂಕಾಪುರವ ಮೀರಿದ ರಾವಣನ |
ಕಂಡು ಧೀರ ವಯ್ಯಾರದಿಂದ || ಅ ಪ ||

ವಾಯುಪುತ್ರನೆ ಶ್ರೀರಾಮದೂತನೆ
ಪ್ರೀತಿಯಿಂದ ಸೀತಾಂಗನೆಗೆ ಮುದ್ರಿಕೆಯ ತಂದಿತ್ತವನೆ || ೧ ||

ಭೀಮಸೇನನೆ ಕುಂತೀ ತನಯನೆ
ವಿರಾಟನ ಮನೆಯಲಿ ನಿಂತು ಕೀಚಕನ ಸಂಹರಿಸಿದವನೆ || ೨ ||

ಮಧ್ವರಾಯನೆ ಸರ್ವಜ್ಞ ಶ್ರೇಷ್ಠನೆ
ಅದ್ವೈತವ ಗೆದ್ದು ಪುರಂದರವಿಠಲನ ಮುಂದೆ ನಿಂತನೆ || ೩ ||

No comments:

Post a Comment