Showing posts with label ಮಾಹಿತಿ. Show all posts
Showing posts with label ಮಾಹಿತಿ. Show all posts
Sunday, June 24, 2018
Thursday, March 24, 2016
ಶ್ರೀ ವಾದಿರಾಜರು
ಇದೇ ಮಾರ್ಚ್ ೨೬ರಂದು ಶ್ರೀ ವಾದಿರಾಜ ತೀರ್ಥರ ಆರಾಧನ ಮಹೋತ್ಸವ
ಶ್ರೀ ವಾದಿರಾಜ ಸ್ವಾಮಿ,
ಜನನ: ೧೪೮೦ AD
ಪೂರ್ವಾಶ್ರಮ ಹೆಸರು : ಭೂ ವರಾಹ
ಜನ್ಮಸ್ತಳ :ಕುಂಭಾಶಿ ಉಡುಪಿ.
ಸನ್ಯಾಸ : ೮ನೆಯ ವರ್ಷದಲ್ಲಿ.
ಸನ್ಯಾಸದ ಹೆಸರು :ವಾದಿರಾಜ ತೀರ್ಥ
ಇತರ ಹೆಸರುಗಳು :ರಾಜರು,ಭಾವಿ ಸಮೀರ
ಗುರುಗಳು;ಶ್ರೀ ವಾಗೀಶ ತೀರ್ಥ.
ಶಿಷ್ಯರು; ವೇದ ವೇದ್ಯ ತೀರ್ಥ,ವೇದ ನಿಧಿ ತೀರ್ಥ,ಇನ್ನೂ ಹಲವರು.
ಸಿದ್ದಾಂತ ;ಮಧ್ವಾಚಾರ್ಯರು ಪ್ರತಿಪಾದಿಸಿದ ತತ್ವವಾದ
ಬರಹಗಳು;ಹತ್ತು ಹಲವು.
ಮುಖ್ಯ ಬರಹಗಳು;ರುಕ್ಮಿನೀಶವಿಜಯ ,ಯುಕ್ತಿ ಮಲ್ಲಿಕಾ ,ವೈಕುಂಠ ವರ್ಣನೆ .
ಮಠ; ಸೋದೆ ಮಠ.(ಕುಂಭಾಸಿ ಮಠ)
ಪರ್ಯಾಯ; ೫ ಸಲ
ಅವತಾರ;ಲಾತವ್ಯ.
ಬೃಂದಾವನ ಪ್ರವೇಶ : ೧೬೦೦ ನೆಯ ಇಸವಿಯಲ್ಲಿ ಅವರ ೧೨೦ ನೆಯ ವರುಷದಲ್ಲಿ.
ಶ್ರೀವಾದಿರಾಜರು ನೂರಿಪ್ಪತ್ತು ವರ್ಷಗಳ (120) ಕಾಲ ಜೀವಿಸಿದ್ದರು. ಅವರು ಮಾಡಿದ ಉದಾತ್ತ ಕಾರ್ಯಗಳಿಗೆ ಲೆಕ್ಕವಿಲ್ಲ. ಅವರು ಎಷ್ಟೋ ಜನರಿಗೆ ಉಪಕಾರ ಮಾಡಿದರು. ಅವರು ತಮ್ಮ ಜೀವಮಾನದಲ್ಲಿ ಅನೇಕ ಕಾರ್ಯಗಳನ್ನು ಸಾಧಿಸಿದರು. ಅವರ ಸಾಧನೆಗಳ ವಿವಿರಗಳನ್ನೂ೦ಡ ಪುಸ್ತಕಗಳು ಮತ್ತು ಗ್ರ೦ಥಗಳು ಮು೦ದಿನ ಪೀಳಿಗೆಯವರಿಗೆ ಏಕೆ ಲಭ್ಯವಾಗಿಲ್ಲವೆ೦ಬ ಪ್ರಶ್ನೆ ಏಳುತ್ತದೆ.
ಶ್ರೀವಾದಿರಾಜರು ಬಹಳ ನಮ್ರತೆಯುಳ್ಳವರಾಗಿದ್ದರು, ನಿಗರ್ವಿಗಳಾಗಿದ್ದರು. ಅವರು ಯಾವ ರೀತಿಯ ಪ್ರಚಾರವನ್ನೂ ಬಯಸಿದವರಲ್ಲ. ವಾದಿರಾಜರ ಅನುಯಾಯಿಗಳು ಮತ್ತು ಶಿಷ್ಯರುಗಳ ಪೈಕಿ ನಾರಾಯಣ ಪೈತಾನಿ ಪ೦ಡಿತಾಚಾರ್ಯ ಎ೦ಬುವವರಿದ್ದರು. ಅವರು ವಾದಿರಾಜರಿಗೆ ತು೦ಬ ನಿಷ್ಠರಾದ ಶಿಷ್ಯರಾಗಿದ್ದರು, ಅವರಿಗೆ ತಮ್ಮ ಗುರುಗಳ ಮೇಲೆ ಅಪಾರ ಭಕ್ತಿ, ಅವರು ದೀರ್ಘಕಾಲ ವಾದಿರಾಜರ ಜೊತೆಯಲ್ಲಿದ್ದರು, ಆದ್ದರಿ೦ದ ಅವರು ತಮ್ಮ ಗುರುಗಳು ಮಾಡಿದ ಕೆಲಸ ಕಾರ್ಯಗಳನ್ನು ಕೊ೦ಡಾಡುವ ಮತ್ತು ಅವರಲ್ಲಿದ್ದ ದೈವತ್ವವನ್ನು ವರ್ಣಿಸುವ ಹಲವಾರು ಗ್ರ೦ಥಗಳನ್ನು ಅವರು ಸ೦ಗ್ರಹಿಸಿದ್ದರು. ಅನೇಕ ಗ್ರ೦ಥಗಳಲ್ಲಿ ವಾದಿರಾಜರ ಪ್ರಾಮಾಣಿಕತೆ, ಸತ್ಯಸ೦ಧತೆ, ಸಮಾಜದ ದೀನ-ದಲಿತರ ಬಗ್ಗೆ ಅವರಿಗಿದ್ದ ಅನುಕ೦ಪ, ವಿಷ್ಣುಸರ್ವೋತ್ತಮತ್ವ, ಪ್ರೀತಿ, ಕರ್ತವ್ಯ ಮತ್ತು ಭಕ್ತಿಯ ಸ೦ದೇಶಗಳನ್ನು ಸಾರುವ ಮಧ್ವಾಚಾರ್ಯರ ತತ್ವಗಳ ಪ್ರಸರಣದಲ್ಲಿ ಅವರಿಗಿದ್ದ ತೀವ್ರ ಆಸಕ್ತಿ-ಇವೆಲ್ಲವನ್ನೂ ವಿವರಿಸಲಾಗಿದೆ. ಪ೦ಡಿತಾಚಾರ್ಯರು ತಾವು ಬರೆದ ಎಲ್ಲಾ ಗ್ರ೦ಥಗಳನ್ನು ಓದಿ, ಅವುಗಳಿಗೆ ತಮ್ಮ ಅನುಮೋದನೆ ನೀಡಬೇಕೆ೦ದು ವಾದಿರಾಜರನ್ನು ಎಷ್ಟೋ ಬಾರಿ ಕೇಳಿಕೊ೦ಡಿದ್ದರು. ಸೂಕ್ತ ಸಮಯ ಬ೦ದಾಗ ತಾವು ಈ ಗ್ರ೦ಥಗಳನ್ನು ಓದುವುದಾಗಿ ಹೇಳಿ, ವಾದಿರಾಜರು ಮು೦ದೂಡುತ್ತಾ ಬ೦ದರು.
ವಾದಿರಾಜರು ಒಮ್ಮೆ ಸ೦ಚಾರದಲ್ಲಿದ್ದಾಗ, ದೋಣಿಯಲ್ಲಿ ಒ೦ದು ದೊಡ್ಡ ನದಿಯನ್ನು ದಾಟಬೇಕಾಗಿ ಬ೦ದಿತು. ಆಗ ವಾದಿರಾಜರಿಗೆ ಈ ಗ್ರ೦ಥಗಳನ್ನೋದಿ, ಅದಕ್ಕೆ ಅನುಮತಿ ನೀಡಲು ಸಾಕಷ್ಟು ಕಾಲಾವಕಾಶವಿರುವುದೆ೦ದು ಭಾವಿಸಿ, ಪ೦ಡಿತಾಚಾರ್ಯರು ಎಲ್ಲ ಕೃತಿಗಳನ್ನು ತಮ್ಮೊ೦ದಿಗೆ ಒಯ್ದಿದ್ದರು. ಸ್ವಾಮಿಗಳು ಒ೦ದಾದನ೦ತರ ಒ೦ದು ಸ೦ಪುಟವನ್ನು ಲಕ್ಷ್ಯಪೂರ್ವಕವಾಗಿ ಓದಿ, ತಾಳೆಗರಿಯಲ್ಲಿ ಬರೆದಿದ್ದ ಅದನ್ನು, ನದಿಗೆ ಹಾಕಿದರು. ಅವುಗಳಲ್ಲಿ ಎಲ್ಲ ಸ೦ಪುಟಗಳು ನೀರಿನಲ್ಲಿ ಮುಳುಗಿದವು, ಆದರೆ ಒ೦ದು ಸ೦ಪುಟ ಮಾತ್ರ ತೇಲಾಡುತ್ತಿತ್ತು. ಅದು ""ಶ್ರೀವಾದಿರಾಜ ಕವಚ"" ಎ೦ಬ ಕೃತಿಯಾಗಿತ್ತು. ವಾದಿರಾಜರು ಅದನ್ನು ನೀರಿನಿ೦ದ ಮೇಲಕ್ಕೆತ್ತಿ ಇದೊ೦ದಕ್ಕೆ ಮಾತ್ರ ದೇವರು ಅಪ್ಪಣೆ ಕೊಟ್ಟಿದ್ದಾನೆ೦ದು ಹೇಳಿ, ಅದನ್ನು ಪ೦ಡಿತಾಚಾರ್ಯರ ಕೈಗೆ ಕೊಟ್ಟರು. ಇದರಿ೦ದ ಬಹಳ ದುಃಖಿತರಾಗಿದ್ದ ಆಚಾರ್ಯರನ್ನು ವಾದಿರಾಜರು ಸ೦ತೈಸಿ ಹೀಗೆ ಹೇಳಿದರು.
" ನಾನು ನನ್ನ ಜೀವಮಾನದಲ್ಲಿ ಮಾಡಿರುವ ಕೆಲಸ ಕಾರ್ಯಗಳ ಬಗ್ಗೆಯಾಗಲಿ ಅಥವಾ ನನ್ನ ಬಗ್ಗೆಯಾಗಲಿ, ಯಾರಿಗೂ ಏನೂ ಗೊತ್ತಾಗಬಾರದೆ೦ಬುದೇ ಭಗವ೦ತನ ಇಚ್ಛೆಯಾಗಿದೆ. ಆದರೆ ನೀರಿನಲ್ಲಿ ತೇಲಿದ ಈ ಒ೦ದು ಕೃತಿಯಲ್ಲಿ ಮಾತ್ರ ಅತ್ಯ೦ತ ಸ೦ಕ್ಷಿಪ್ತವಾಗಿ ವಿಷಯಗಳನ್ನು ಸೂಚಿಸಿರುವುದರಿ೦ದ ಅದಕ್ಕೆ ಭಗವ೦ತನ ಅಪ್ಪಣೆ ದೊರೆತಿದೆಯೆ೦ಬುದು ಸ್ಪಷ್ಟವಾಗುತ್ತದೆ" ಎ೦ದರು. ಇದು ವಾದಿರಾಜರ ವಿನಮ್ರತೆಯನ್ನು ತೋರಿಸುತ್ತದೆ, ಅವರಿಗೆ ಪ್ರಚಾರ ದೊರೆಯಬೇಕೆ೦ಬ ಹ೦ಬಲ ಸ್ವಲ್ಪವೂ ಇರಲಿಲ್ಲವೆ೦ಬುದು ಇದರಿ೦ದ ಸುಸ್ಪಷ್ಟವಾಗುತ್ತದೆ.
ಶ್ರೀವಾದಿರಾಜರ ಜೀವಮಾನದಲ್ಲಿ ಅವರ ಬಗ್ಗೆ ರಚಿಸಲಾದ ಏಕ ಮಾತ್ರ ಕೃತಿಯೆ೦ದರೆ "ಶ್ರೀವಾದಿರಾಜ ಕವಚ". ಈ ಕೃತಿಗೆ ವಾದಿರಾಜರ ಅನುಮೋದನೆಯಿತ್ತು ಮತ್ತು ಭಗವ೦ತನ ಅನುಗ್ರಹವಿತ್ತು. ಆದ್ದರಿ೦ದ ವಾದಿರಾಜರ ಭಕ್ತರೆಲ್ಲರೂ, "ವಾದಿರಾಜ ಕವಚವನ್ನು" ಅತ್ಯ೦ತ ಪವಿತ್ರವಾದುದೆ೦ದು ಪರಿಗಣಿಸಿದ್ದಾರೆ. ಇದನ್ನು ನಿಯಮಿತವಾಗಿ ಪಾರಾಯಣ ಮಾಡುವುದರಿ೦ದ ಮನಸ್ಸಿಗೆ ಶಾ೦ತಿ ದೊರೆಯುತ್ತದೆ. ಮನೋಬಲ ಹೆಚ್ಚುತ್ತದೆ, ಭಯ ದೂರವಾಗುತ್ತದೆ. ಮನೋಧೈರ್ಯ ಬರುತ್ತದೆ. ಪಾರಾಯಣದಿ೦ದ ನಮ್ಮ ಜೀವನದಲ್ಲಿ ಬ೦ದೊದಗುವ ಕ್ಲೇಶ-ಸ೦ಕಟಗಳನ್ನು ಎದುರಿಸುವ ಮನೋಸ್ಥೈರ್ಯ ನಮಗೆ ದೊರೆಯುವುದೆ೦ಬುದರಲ್ಲಿ ಸ೦ದೇಹವಿಲ್ಲ.
|| ಶ್ರೀಭಾರತೀರಮಣ ಮುಖ್ಯಪ್ರಾಣಾ೦ತರ್ಗತ ಶ್ರೀಕೃಷ್ಣಾರ್ಪಣಮಸ್ತು।।
ಕೃಪೆ: facebook.

Monday, March 14, 2016
ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಮಹೋತ್ಸವ
Sunday, March 6, 2016
ಹನುಮದ್ವನದ ಕಾಮಗಾರಿ
ಆತ್ಮೀಯ ಬಂಧುಗಳೇ,
ನಿಮಗೆಲ್ಲ ತಿಳಿದಿರುವಂತೆ ಶ್ರೀ ಕ್ಷೇತ್ರ ಮಾರಂಡಹಳ್ಳಿ ಶ್ರೀ ಆಂಜನೇಯ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಹನುಮದ್ವನ ನಿರ್ಮಿಸುವ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು ನಿರಂತರವಾಗಿ ಕೆಲಸಗಳು ನಡೆಯುತ್ತಿವೆ.
ಮೊದಲನೇ ಹಂತದಲ್ಲಿ ತೋಟಕ್ಕೆ ಬೇಲಿ ನಿರ್ಮಿಸುವ ಕಾರ್ಯ, ಹಳ್ಳ ತೋಡುವ ಕಾರ್ಯ, ಮಿಶ್ರಣಕ್ಕೆ ಕೆಂಪು ಮಣ್ಣಿನ ಸಾಗಣೆ ಮತ್ತು ಕಾಲುವೆ ನೀರು ಹರಿಸುವ ಕಾರ್ಯ ಪೂರ್ಣಗೊಂಡಿದ್ದು ಎರಡನೇ ಹಂತದಲ್ಲಿ ಗೊಬ್ಬರ ಸಾಗಣೆ, ಗಿಡಗಳನ್ನು ಸಾಗಿಸುವುದು ಮತ್ತು ನೆಡುವ ಕಾರ್ಯ ನಡೆಯಬೇಕಿದೆ.

Sunday, February 7, 2016
ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ
ಇಂದು ದಾಸಶ್ರೇಷ್ಠ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ
ಕಂಡೆ ನಾ ಗೋವಿಂದನ
ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ ।।
ಕೇಶವ ನಾರಾಯಣ ಶ್ರೀಕೃಷ್ಣನ
ವಾಸುದೇವ ಅಚ್ಚುತಾನಂತನ
।।೧।।
ಸಾಸಿರ ನಾಮದ ಶ್ರೀ ಹೃಷೀಕೇಶನ
ಶೇಷಶಯನ ನಮ್ಮ ವಸುದೇವ ಸುತನ
ಮಾಧವ ಮಧುಸೂದನ ತ್ರಿವಿಕ್ರಮನ ಯಾದವಕುಲವಂದ್ಯನ
ವೇದಾಂತ ವೇದ್ಯನ ಇಂದಿರಾರಮಣನ ।।೨।।
ಆದಿಮೂರುತಿ ಪ್ರಹ್ಲಾದವರದನ
ಪುರುಷೋತ್ತಮ ನರಹರಿ ಶ್ರೀ ಕೃಷ್ಣನ
ಶರಣಾಗತ ರಕ್ಷಕನ ಕರುಣಾಕರ ನಮ್ಮ ಪುರಂದರವಿಠಲನ
ನೆರೆನಂಬಿದನು ಬೇಲೂರ ಚೆನ್ನಿಗನ ।।೩।।
Wednesday, October 14, 2015
Monday, October 12, 2015
Monday, August 17, 2015
ನಾಗರ ಪಂಚಮೀ ವ್ರತ
ಇಂದು ನಾಗರ ಚೌತಿ, ನಾಳೆ ನಾಗರ ಪಂಚಮೀ. ಮಕ್ಕಳಾಗದವರು ವಿಶೇಷವಾಗಿ ಮತ್ತು ಮಕ್ಕಳಿಗೆ ಯಾವ ವಿಧವಾದ ಆಪತ್ತು ಬರಬಾರದು ಎನ್ನುವವರು ಮಾಡಬೇಕಾದ ವ್ರತಗಳು.
ಪರಮಾತ್ಮ ಶೇಷದೇವರನ್ನು ಪಂಚಮೀತಿಥಿಗೆ ನಿಯಾಮಕರನ್ನಾಗಿ ಮಾಡಿದ್ದಾನೆ —
ಪ್ರಾದಾಂ ತೃತೀಯಾಂ ಪಾರ್ವತ್ಯೈ ಗಣೇಶಾಯ ಚತುರ್ಥಿಕಾಮ್ ।
ಪಂಚಮೀ ಸರ್ವನಾಗಾನಾಂ ಶೇಷಾಣಾಂ ಪತಯೇ ತತಃ ।।
ಎಂದು ವರಾಹಪುರಾಣದಲ್ಲಿದೆ. ತೃತೀಯಾತಿಥಗೆ ಪಾರ್ವತಿಯನ್ನು ನಿಯಾಮಕಳನ್ನಾಗಿಯೂ, ಚತುರ್ಥೀತಿಥಿಗೆ ಗಣಪತಿಯನ್ನು ನಿಯಾಮಕನನ್ನಾಗಿಯೂ ಹಾಗೂ ಪಂಚಮೀತಿಥಿಗೆ ಶೇಷದೇವರನ್ನು ನಿಯಾಮಕರನ್ನಾಗಿಯೂ ಪರಮಾತ್ಮ ಮಾಡುತ್ತಾನೆ.
ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮೀ ನಾಗರ ಪಂಚಮೀ. ಈ ದಿವಸ ವಿಶೇಷವಾಗಿ ಹಾವುಗಳನ್ನು ಹಾವುಗಳ ಅಧಿಪತಿಯಾದ ಶೇಷದೇವರನ್ನು ಆರಾಧಿಸಬೇಕು.
ಇದು ಎರಡು ದಿವಸಗಳ ವ್ರತ. ಅದಕ್ಕಾಗಿಯೇ ಎರಡೂ ದಿವಸಗಳನ್ನು ಶೇಷದೇವರ ಹೆಸರಿನಿಂದಲೇ ಗುರುತಿಸಲಾಗುತ್ತದೆ. ನಾಗರ ಚೌತಿ ಮತ್ತು ನಾಗರ ಪಂಚಮಿ ಎಂದು.
ಯುಗಂ ಮಧ್ಯಂದಿನೇ ಯತ್ರ ತತ್ರೋಪೋಷ್ಯ ಫಣೀಶ್ವರಾನ್ ।
ಕ್ಷೀರೇಣಾಪ್ಯಾಯ್ಯ ಪಂಚಮ್ಯಾಂ ಪಾರಯೇತ್ ಪ್ರಯತೋ ನರಃ ।
ವಿಷಾಣಿ ತಸ್ಯ ನಶ್ಯಂತಿ ನ ತಂ ಹಿಂಸಂತಿ ಪನ್ನಗಾಃ ।।
ನಾಗರ ಚೌತಿಯಂದು ಪೂರ್ಣ ಉಪವಾಸವನ್ನು ಮಾಡಬೇಕು. ಆ ದಿವಸ ಮಧ್ಯಾಹ್ನ ದೇವರ ಪೂಜೆಯಾದ ಬಳಿಕ ಶೇಷದೇವರ ಪ್ರತಿಮೆಗೆ ಹಾಲಿನ ಅಭಿಷೇಕದೊಂದಿಗೆ ಷೋಡಶೋಪಚಾರ ಪೂಜೆಯನ್ನು ಸಮರ್ಪಿಸಬೇಕು. ಮಾರನೆಯ ದಿವಸ ಪ್ರಾತಃಕಾಲದಲ್ಲಿ ಮತ್ತೆ ಹಾಲಿನ ಅಭಿಷೇಕವನ್ನು ಮಾಡಿ, ಹದಿನಾರು ಉಪಚಾರಗಳನ್ನು ಶೇಷದೇವರಿಗೆ ಸಮರ್ಪಿಸಿ ಜ್ಞಾನಿಗಳನ್ನು ಕರೆದು ಅವರಿಗೆ ಭೋಜನವನ್ನು ನೀಡಿ ತಾನು ಪಾರಣೆಯನ್ನು ಮಾಡಬೇಕು.
ಮನೆಯ ಬಾಗಿಲಿನ ಎರಡೂ ಭಾಗಗಳಲ್ಲಿ ಶೇಷದೇವರ ಚಿತ್ರವನ್ನು ಬರೆದು ಪೂಜಿಸಬೇಕು ಎಂದು ಭವಿಷ್ಯಪುರಾಣದಲ್ಲಿ ತಿಳಿಸಿದ್ದಾರೆ —
ಶ್ರಾವಣೇ ಮಾಸಿ ಪಂಚಮ್ಯಾಂ ಶುಕ್ಲಪಕ್ಷೇ ನರಾಧಿಪ
ದ್ವಾರಸ್ಯೋಭಯತೋ ಲೇಖ್ಯಾ ಗೋಮಯೇನ ವಿಷೋಲ್ಬಣಾಃ
ಪೂಜಯೇದ್ ವಿಧಿವದ್ ವೀರ ದಧಿದೂರ್ವಾಂಕುರೈಃ ಕುಶೈಃ
ಗಂಧಪುಷ್ಪೋಪಹಾರೈಶ್ಚ ಬ್ರಾಹ್ಮಣಾನಾಂ ಚ ತರ್ಪಣೈಃ
ಯೇ ತಸ್ಯಾಂ ಪೂಜಯಂತೀಹ ನಾಗಾನ್ ಭಕ್ತಿಪುರಃಸರಾಃ
ನ ತೇಷಾಂ ಸರ್ಪತೋ ವೀರ ಭಯಂ ಭವತಿ ಕುತ್ರಚಿತ್
ಬಾಗಿಲಿನ ಎರಡೂ ಕಡೆಯಲ್ಲಿ ಹಾವುಗಳ ಚಿತ್ರವನ್ನು ಬರೆದು, ಅಲ್ಲಿ ಶೇಷದೇವರ, ವಾಸುಕಿಯ ಸನ್ನಿಧಾನವನ್ನು ಚಿಂತಿಸಿ, ಅರಿಶಿನ ಕುಂಕುಮಗಳಿಂದ ಪೂಜಿಸಿ ಅದಕ್ಕೆ ಗೆಜ್ಜೆವಸ್ತ್ರವನ್ನು ಸಮರ್ಪಿಸಬೇಕು.
ಆ ಬಳಿಕ ಮನೆಯ ಒಳಗೆ ಶೇಷದೇವರ ಪ್ರತಿಮೆ, ಹಾಲು, ಮೊಸರು ಮುಂತಾದವುಗಳಿಂದ ಅಭಿಷೇಕ ಮಾಡಿ, ಆ ನಂತರ ಗರಿಕೆ, ದರ್ಭೆಗಳಿಂದ ಷೋಡಶೋಪಚಾರ ಪೂಜೆಯನ್ನು ಮಾಡಿ, ಪರಮಾತ್ಮನಲ್ಲಿ ಭಕ್ತಿ ಇರುವ ಬ್ರಾಹ್ಮಣರನ್ನು ಆದರಿಸಿ, ಅವರ ಭೋಜನವಾದ ನಂತರ ಭೋಜನ ಮಾಡಬೇಕು.
ಪೂಜೆ ಮಾಡುವ ಸಂದರ್ಭದಲ್ಲಿ, ಹಾಲೆರೆಯುವ ಸಂದರ್ಭದಲ್ಲಿ ಕೆಳಗಿನ ಶ್ಲೋಕವನ್ನು ಭಕ್ತಿಯಿಂದ ಪಠಿಸಿ ಪ್ರಾರ್ಥನೆ ಮಾಡಿಕೊಳ್ಳಬೇಕು.
ಅನಂತಶಯನಂ ದೇವಂ ಸರ್ವಶೋಕವಿನಾಶನಮ್ ।
ಲೋಕಾಧಾರಂ ವಾರುಣೀಶಂ ನಾಗೇಂದ್ರಂ ಸನ್ನಮಾಮ್ಯಹಮ್ ।।
ಅನಂತಶಯನಂ — ದೇಶ ಕಾಲಗಳನ್ನು ಮೀರಿದ ಪರಮಾತ್ಮನಿಗೆ ಶಯನನಾದ
ಸರ್ವಶೋಕವಿನಾಶನಂ — ಸಕಲ ದುಃಖಗಳನ್ನೂ ಪರಿಹರಿಸುವ
ಲೋಕಾಧಾರಂ — ಇಡಿಯ ಜಗತ್ತನ್ನು ತಲೆಯ ಮೇಲೆ ಹೊತ್ತು ರಕ್ಷಣೆ ಮಾಡುತ್ತಿರುವ
ವಾರುಣೀಶಂ — ವಾರುಣೀಪತಿಯಾದ
ದೇವಂ — ದೇವೋತ್ತಮನಾದ
ನಾಗೇಂದ್ರಂ — ಶೇಷದೇವರನ್ನು
ಅಹಂ — ನಾನು
ಸನ್ನಮಾಮಿ — ಭಕ್ತಿ ಶ್ರದ್ಧೆಗಳಿಂದ ನಮಸ್ಕರಿಸುತ್ತೇನೆ.
ಹಾಗೆಯೇ ಶೇಷದೇವರ ಮಾಹಾತ್ಮ್ಯ, ಅವರು, ನರನಾಗಿ, ಲಕ್ಷ್ಮಣನಾಗಿ, ಬಲರಾಮನಾಗಿ ಅವತಾರ ಮಾಡಿ ಪರಮಾತ್ಮನನ್ನು ಸೇವಿಸಿದ ರೀತಿ ಮುಂತಾದವನ್ನು ಭಕ್ತಿಯಿಂದ ಸ್ಮರಣೆ ಮಾಡಬೇಕು.
ಹಾಗೆಯೇ ಮತ್ತೊಂದು ತತ್ವ. ಹಾವಿನ ರೂಪದಲ್ಲಿ ಪೂಜೆಯಾಗುವ ಮೂರು ದೇವತೆಗಳಿದ್ದಾರೆ. ಮೊದಲನೆಯದು ಶೇಷದೇವರು. ಇವರು ಇಂದ್ರನಿಗಿಂತಲೂ ಉತ್ತಮರಾದ, ರುದ್ರದೇವರಿಗೆ ಸಮಾನರಾದ ದೇವತೆ. ಇವರೇ ಪರಮಾತ್ಮ ಹಾಸಿಗೆ.
ಎರಡನೆಯದು ಸುಬ್ರಹ್ಮಣ್ಯದೇವರು. ಇವರು ಇಂದ್ರನಿಗೆ ಸಮಾನನಾದ ದೇವತೆ. ದೇವತೆಗಳ ಸೇನಾನಿ ಸ್ಕಂದನಿಗೇ ಸುಬ್ರಹ್ಮಣ್ಯ ಎನ್ನುವ ಹೆಸರು. ಇವರಿಗೆ ಸುಬ್ರಹ್ಮಣ್ಯರೂಪದಲ್ಲಿ ಮಾತ್ರ ಹಾವಿನರೂಪ.
ಮೂರನೆಯದು ವಾಸುಕಿ. ಮೇಲಿನ ಇಬ್ಬರಿಗಿಂತಲೂ ಸಣ್ಣವರಾದ ದೇವತೆ. ಪಾತಾಳದಲ್ಲಿ ಎಲ್ಲ ನಾಗರಿಗೂ ಅಧಿಪತಿಯಾದ ನಾಗರಾಜ ಈ ವಾಸುಕಿಯೇ. ಶೇಷದೇವರ ತಮ್ಮ.
ನಾಗರ ಚೌತಿ-ಪಂಚಮಿಗಳಂದು ಈ ಮೂರೂ ದೇವತೆಗಳನ್ನು ಪೂಜಿಸುವ ಸಂಪ್ರದಾಯವಿದೆ. ವಿಶೇಷವಾಗಿ ಶೇಷದೇವರನ್ನು.
ಈ ದಿವಸಗಳಲ್ಲಿ ಈ ವ್ರತವನ್ನು ಕೇವಲ ಹೆಣ್ಣುಮಕ್ಕಳು ಮಾತ್ರ ಮಾಡುತ್ತಾರೆ. (ಈ ವ್ರತವೇನು, ನಮ್ಮಲ್ಲಿ ಅನೇಕ ಧರ್ಮಗಳು ಉಳಿದಿರುವದೇ ಕೇವಲ ನಿಷ್ಠಾವಂತ ಹೆಣ್ಣುಮಕ್ಕಳಿಂದ.) ಆದರೆ, ಈ ವ್ರತವನ್ನು ಬಾಲಕ ಬಾಲಕಿಯರೂ ಮಾಡಬೇಕು. ಗಂಡ ಹೆಂಡತಿಯರೂ ಕೂಡಿ ಮಾಡಬೇಕು.
ಗಂಡಹೆಂಡಿರ ಮಧ್ಯದಲ್ಲಿ ನಿಶ್ಚಲವಾದ ಪ್ರೇಮವನ್ನುಂಟುಮಾಡುವ ವ್ರತ ಈ ನಾಗರವ್ರತ.
ಮಕ್ಕಳಾದವರಿಗೆ ಮಕ್ಕಳನ್ನು ದಯಪಾಲಿಸುವ ವ್ರತ ಈ ನಾಗರವ್ರತ.
ಮಕ್ಕಳನ್ನು ಎಲ್ಲ ಆಪತ್ತುಗಳಿಂದ ದೂರ ಮಾಡುವ ವ್ರತ ಈ ನಾಗರವ್ರತ.
ಮಕ್ಕಳಿಗೆ, ನಮಗೆ ವಿಷದ ಭಯವನ್ನು ನೀಗಿಸುವ ವ್ರತ ಈ ನಾಗರವ್ರತ.
ಅಣ್ಣತಮ್ಮಂದಿರಿಗೆ ಸೌಭಾಗ್ಯವನ್ನುಂಟು ಮಾಡುವ ವ್ರತ ಈ ನಾಗರವ್ರತ
ಕೃಪೆ : ವಿಷ್ಣುದಾಸ ನಾಗೇಂದ್ರಾಚಾರ್ಯ - ಫೇಸ್ಬುಕ್
Friday, August 14, 2015
ಭೀಮನ ಅಮಾವಾಸ್ಯೆ
ಶ್ರಾವಣ ಮಾಸದ ಮೊದಲ ಹಬ್ಬವಾಗಿ ಭೀಮನ ಅಮಾವಾಸ್ಯೆಯನ್ನು ಆಚರಿಸಲಾಗುವುದು. ನವವಿವಾಹಿತ ಮಹಿಳೆಯರು ೯ ವರ್ಷ ಈ ಪೂಜೆಯನ್ನು ಮಾಡುತ್ತಾರೆ. ಈ ವ್ರತವನ್ನು ತಮ್ಮ ಪತಿಯ, ಅಣ್ಣ ತಮ್ಮಂದಿರ ಒಳಿತಿಗಾಗಿ ಮಹಿಳೆಯರು ಆಚರಿಸುತ್ತಾರೆ. ಈ ವ್ರತವನ್ನು ಮನೋನಿಯಾಮಕ ರುದ್ರದೇವರು ಮತ್ತು ಪಾರ್ವತಿದೇವಿಯರಿಗೆ ಸಮರ್ಪಿಸಲಾಗುತ್ತದೆ.
ಈ ವ್ರತದಂದು ಕೆಮ್ಮಣ್ಣಿನಿಂದ ಮಾಡಿದ ರುದ್ರದೇವರು ಮತ್ತು ಪಾರ್ವತಿದೇವಿಯರನ್ನು ಪೂಜಿಸಲಾಗುವುದು ಮತ್ತು ತಂಬಿಟ್ಟಿನ ದೀಪವನ್ನು ಹಚ್ಚಲಾಗುವುದು. ಇದರ ಸಂಕೇತ ದೀಪವನ್ನು ಬೆಳಗುವುದರಿಂದ ಮನೆಯಲ್ಲಿನ ಕರ್ಮಗಳು ಕಳೆದು ಮನೆ ಶುಭ್ರವಾಗುವುದೆಂದು. ಈ ದಿನದಂದು ಕಡುಬು, ಗೋಧಿ ಉಂಡೆ ಮಾಡುವುದು ವಿಶೇಷ. ಕಡುಬು ಮತ್ತು ಉಂಡೆಯಲ್ಲಿ ನಾಣ್ಯವನ್ನು ಇಟ್ಟು ಅದನ್ನು ಅಣ್ಣ ತಮ್ಮಂದಿರ ಕೈಯಲ್ಲಿ ಹೊಡೆಸುವುದು ವಾಡಿಕೆ. ಅಣ್ಣ ತಮ್ಮಂದಿರು ಮನೆಯ ಹೊಸ್ತಿಲಿನ ಬಳಿ ಎರಡು ಬದಿ ಒಂದೊಂದು ಕಾಲನ್ನು ಇಟ್ಟು ಹೊಸಿಲಿನ ಮೇಲಿಟ್ಟಿರುವ ಕಡುಬು/ಉಂಡೆಯನ್ನು ಬಾಗಿ ತಮ್ಮ ಮೊಣಕೈನಿಂದ ಹೊಡೆಯಬೇಕು. ಆ ಸಂದರ್ಭದಲ್ಲಿ ಅಕ್ಕ ತಂಗಿಯರು ತಮ್ಮ ಮೊಣಕೈನಿಂದ ಬಾಗಿದ ಅಣ್ಣ/ತಮ್ಮನ ಮೇಲೆ ಹೊಡೆಯುವುದು. ಈ ವಾಡಿಕೆಗೆ "ಭಂಡಾರ ಹೊಡೆಯುವುದು" ಕರೆಯುತ್ತಾರೆ.
ಹಿನ್ನಲೆ:
ಸ್ಕಂದ ಪುರಾಣದಲ್ಲಿ ಈ ವ್ರತದ ಹಿನ್ನಲೆ ಉಂಟು. ಹಿಂದೊಮ್ಮೆ ರಾಜನು ತನ್ನ ಮಗನಿಗೆ ಅದ್ದೂರಿಯಾಗಿ ಮದುವೆ ಮಾಡಬೇಕೆಂದು ನಿರ್ಧರಿಸಿದ್ದನು. ಆದರೆ ರಾಜನ ಮಗ ಅಕಾಲಿಕ ಸಾವಿಗೆ ಈಡಾದನು. ಆದರೂ ರಾಜ ತನ್ನ ಸತ್ತ ಮಗನಿಗೇ ಮದುವೆ ಮಾಡಲು ನಿರ್ಧರಿಸಿ ಘೋಷಣೆ ಹೊರಡಿಸಿದನು. ಯಾರು ತನ್ನ ಮಗನನ್ನು ಮದುವೆ ಮಾಡಿಕೊಳ್ಳುತ್ತಾರೋ ಅವರಿಗೆ ಅಪಾರ ಧನ ಸಂಪತ್ತನ್ನು ಕೊಡುವುದಾಗಿ ಘೋಷಿಸಿದನು.
ಒಬ್ಬ ಬಡ ಬ್ರಾಹ್ಮಣನು ತನ್ನ ಮಗಳನ್ನು ಕೊಟ್ಟು ಮದುವೆ ಮಾಡುವುದಾಗಿ ಮುಂದೆ ಬಂದು, ಮದುವೆ ವಿಜೃಂಭಣೆಯಿಂದ ನೆರವೇರಿತು. ಆ ದಿನ ಅಮಾವಾಸ್ಯೆ. ಮದುವೆಯ ಸಮಾರಂಭ ಮುಗಿದ ಮೇಲೆ ರಾಜನ ಮಗನ ದೇಹವನ್ನು ಸುಡಲು ಭಾಗೀರಥಿ ನದಿ ತೀರಕ್ಕೆ ತೆಗೆದುಕೊಂಡು ಬಂದು ಅಂತಿಮ ಸಿದ್ಧತೆಯಲ್ಲಿ ತೊಡಗಿದ್ದಾಗ ಗುಡುಗು ಸಿಡಿಲಿನ ಸಹಿತ ಕುಂಭದ್ರೋಣ ಮಳೆ ಶುರುವಾಯಿತು. ನೆರೆದಿದ್ದ ಜನರು ಹೆದರಿಕೊಂಡು ಆ ದೇಹವನ್ನು ಮತ್ತು ಆ ಅಮಾಯಕ ಹುಡುಗಿಯನ್ನು ಬಿಟ್ಟು ಓಡಿ ಹೋದರು.
ಆಗ ಆ ಹುಡುಗಿಗೆ ಅಂದು ಜ್ಯೋತಿರ್ಭೀಮೇಶ್ವರಿ ವ್ರತದ ದಿನ ಎಂದು, ತನ್ನ ತಾಯಿಯು ವರ್ಷ ವರ್ಷ ಆ ವ್ರತವನ್ನು ಆಚರಿಸುವುದು ನೆನಪಾಗಿ ಕೂಡಲೇ ನದಿಯಲ್ಲಿ ಸ್ನಾನ ಮಾಡಿ ಎರಡು ಮಣ್ಣಿನ ಹಣತೆಯನ್ನು ಮಾಡಿ ಅಲ್ಲೇ ಇದ್ದ ಮರದ ಬೇರಿನಿಂದ ಬತ್ತಿಯನ್ನು ಮಾಡಿ ಅದಕ್ಕೆ ನೀರನ್ನು ಹಾಕಿ, ಮಣ್ಣಿನಿಂದ ಭಂಡಾರವನ್ನು ಮಾಡಿ ಅದರಿಂದಲೇ ಪೂಜೆಯನ್ನು ಮಾಡಿದಳು. ಅವಳ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷರಾದ ಪಾರ್ವತಿ ಸಮೇತ ರುದ್ರದೇವರು ಭಂಡಾರವನ್ನು ಹೊಡೆದು ನಿನಗೆ ಏನು ವರ ಬೇಕು ಎಂದಾಗ ಸತ್ತ ತನ್ನ ಪತಿಯನ್ನು ಬದುಕಿಸಿಕೊಡು ಎಂದು ಬೇಡಿದಳು. ಕೂಡಲೇ ಅದಕ್ಕೆ ಸಮ್ಮತಿಸಿ ಅವಳ ಪತಿಯನ್ನು ಬದುಕಿಸಿದರು.
ಈ ಘಟನೆಯ ನಂತರ ಈ ವ್ರತ ಪ್ರಸಿದ್ಧಿಯಾಯಿತು. ಮನೋನಿಯಾಮಕ ರುದ್ರದೇವರ ಮತ್ತೊಂದು ಹೆಸರು ಭೀಮ ಎಂಬುದರಿಂದ ಈ ವ್ರತವನ್ನು ಭೀಮನ ಅಮಾವಾಸ್ಯೆಯಂದು ಕರೆಯುತ್ತಾರೆ.
Thursday, August 13, 2015
ಶ್ರೀ ವರಮಹಾಲಕ್ಷ್ಮೀ ವ್ರತ
ಶ್ರೀ ಮಂಗಳಗೌರಿ ವ್ರತವನ್ನು ಶ್ರಾವಣ ಮಾಸದಲ್ಲಿ ಮದುವೆಯಾದ ಮಹಿಳೆಯರು ೪/೫ ಮಂಗಳವಾರ ಪೂಜೆ ಮಾಡುತ್ತಾರೆ. ಮದುವೆಯ ನಂತರ ೫ ವರ್ಷ ಈ ವ್ರತ ಮಾಡುವ ಪದ್ಧತಿ ಇದೆ. ಈ ಸಂದರ್ಭದಲ್ಲಿ ಮಂಗಳ ಸ್ನಾನ ಮಾಡಿ ಪೂಜಾಗೃಹವನ್ನು ಸ್ವಚ್ಛಮಾಡಿ ರಂಗೋಲಿಯಿಂದ ಅಲಂಕರಿಸಬೇಕು. ಒಂದು ಮಣೆ ಇಟ್ಟು ಅದರ ಮೇಲೆ ರವಿಕೆ ಬಟ್ಟೆ ಹಾಸಿ ಅದರ ಮೇಲೊಂದು ತಟ್ಟೆಯಲ್ಲಿ ದೇವರನ್ನು ಇಡಬೇಕು. ಗಣಪತಿ , ಗೌರಿ ವಿಗ್ರಹ, ಅರಿಶಿನಕ್ಕೆ ಸ್ವಲ್ಪ ಹಾಲು ಸೇರಿಸಿ ಕಲಿಸಿ ಗೋಪುರದ ಆಕಾರ ಮಾಡಬೇಕು. ಕನ್ನಡಿ, ಕಲಶ, ಇವುಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳಬೇಕು. ೩ ರವಿಕೆ ಬಟ್ಟೆಯನ್ನು ತ್ರಿಕೋನಾಕಾರದಲ್ಲಿ ಮಡಿಸಿ ಹಿಂದೆ ಇಡಬೇಕು.
ಒಂದು ಸಣ್ಣ ತಂಬಿಗೆಯ ಒಳಗೆ ಸ್ವಲ್ಪ ಅಕ್ಕಿ, ಮಂತ್ರಾಕ್ಷತೆ ಹಾಕಿ ಅದರ ಮೇಲೆ ರವಿಕೆ ಬಟ್ಟೆ ಇತ್ತು ಒಂದು ಕೊಬ್ಬರಿ ಗಿಟುಕನ್ನು ಇಡಬೇಕು. ಅದಕ್ಕೆ ಕಪ್ಪಿನಿಂದ ಕಣ್ಣು, ಮೂಗು, ಬರೆದು ಅಲಂಕರಿಸಬೇಕು. ಇದನ್ನೇ ಮಂಗಳಗೌರಿಯಂದು ಪೂಜೆ ಮಾಡಬೇಕು. ಇದರ ಜೊತೆ ನಿಮ್ಮ ಇಷ್ಟದಂತೆ ಅಲಂಕಾರಗಳನ್ನು ಮಾಡಬಹುದು.
ಸಾಮಾನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ ಮರದ ಜೊತೆ ಬಾಗಿನ, ಹತ್ತಿ ಎಳೆ, ಬಳೆ, ಬಿಚ್ಚೋಲೆ, ತಂಬಿಟ್ಟಿನ ಆರತಿ ಸಹ ಸಿದ್ಧವಿಟ್ಟುಕೊಳ್ಳಬೇಕು. ಮೊದಲು ಗಣಪತಿ ಪೂಜೆ ಮಾಡಿ ನಂತರ ಗೌರಿಗೆ ೧೬ ಹಿಡಿ ೧೬ ಎಳೆಗಳ ಹತ್ತಿ ಹಾರ ಹಾಕಬೇಕು. ನೈವೇದ್ಯಕ್ಕೆ ಸಾಮಾನ್ಯವಾಗಿ ಹೆಸರುಬೇಳೆ ಪಾಯಸ ಅಥವಾ ಹುಗ್ಗಿ ಮಾಡುತ್ತಾರೆ. ಕೊನೆಯಲ್ಲಿ ತಂಬಿಟ್ಟಿನಲ್ಲಿ ೧೬ ದೀಪದ ಆರತಿ ಮಾಡಬೇಕು. ಈ ದೀಪದಲ್ಲಿ ವೀಳ್ಯದ ಎಲೆಯನ್ನು ಹಿಡಿದು ಕಾಡಿಗೆಯನ್ನು ತೆಗೆಯಬೇಕು. ಇದನ್ನು ಮಂಗಳಗೌರಿಗೆ ಹಚ್ಚಿ ನಂತರ ಕಣ್ಣಿಗೆ ಹಚ್ಚಿಕೊಳ್ಳಬೇಕು. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಪೂಜೆಯ ನಂತರ ಕೊಬ್ಬರಿಯಲ್ಲಿ ಮಾಡಿದ ದೇವಿಯನ್ನು ಹಾಗೆ ಇಟ್ಟುಕೊಂಡು ಅದೇ ಕೊಬ್ಬರಿಗೆ ನಾಲ್ಕು ವಾರವೂ ಪೂಜೆ ಮಾಡಿ ಕೊನೆಯ ವಾರದಲ್ಲಿ ಬಾಗಿನದ ಜೊತೆ ಇಟ್ಟು ಕೊಡಬೇಕು.
ಪ್ರತಿ ವರ್ಷ ಕೊನೆಯ ವಾರದ ಪೂಜೆಗೆ ಮರದ ಜೊತೆ ಬಾಗಿನ ಇಟ್ಟುಕೊಳ್ಳಬೇಕು. ಮರದ ಒಳಗೆ ೪ ವಿಧವಾದ ಬೇಳೆಗಳು, ಅಕ್ಕಿ, ಉಪ್ಪು, ರವೆ, ಬೆಲ್ಲ,ತೆಂಗಿನಕಾಯಿ ಜೊತೆ ಪೂಜೆ ಮಾಡಿದ ಕೊಬ್ಬರಿ ಗಿಟುಕು, ೧೬ ಎಳೆ ಹತ್ತಿ ಹಾರವನ್ನು ಇಡಬೇಕು. ಇದನ್ನು ತಾಯಿಗೆ ಬಾಗಿನ ಕೊಡಬೇಕು. ಹೀಗೆ ೫ ವರ್ಷ ವ್ರತಿ ಮಾಡಿ ಐದನೇ ವರ್ಷ ಉದ್ಯಾಪನೆ ಮಾಡಿ ಪೂಜೆಗೆ ಉಪಯೋಗಿಸಿದ ಕಳಶದ ಪಾತ್ರೆಯನ್ನು ಮರದ ಬಾಗಿನದ ಜೊತೆ ತಾಯಿಗೆ ಕೊಡಬೇಕು.
ಮರದ ಬಾಗಿನದ ಸಾಮಾನುಗಳು:
೧ ಜೊತೆ ಮೊರ
ಮೊರಕ್ಕೆ ಅರಿಶಿನ ಕುಂಕುಮ ಹಚ್ಚಿರಬೇಕು
ಅಕ್ಕಿ, ಕಡಲೇಬೇಳೆ, ತೊಗರಿಬೇಳೆ, ಹೆಸರುಬೇಳೆ,ಉದ್ದಿನಬೇಳೆ
ರವೆ, ಬೆಲ್ಲದಚ್ಚು, ಉಪ್ಪು ತೆಂಗಿನಕಾಯಿ, ಹಣ್ಣು,
ಬಳೆ, ಬಿಚ್ಚೋಲೆ, ಕನ್ನಡಿ, ಕಾಡಿಗೆ, ಬಾಚಣಿಗೆ,
ವೀಳ್ಯದೆಲೆ, ಅಡಿಕೆ, ದಕ್ಷಿಣೆ, ಅರಿಶಿನ, ಕುಂಕುಮ ಮತ್ತು ರವಿಕೆ ಬಟ್ಟೆ.
ಮಾಹಿತಿ: ಸಂಗ್ರಹ

Tuesday, July 21, 2015
Friday, June 26, 2015
ಶ್ರೀ ವ್ಯಾಸರಾಜರು
ಜನನ - ೧೪೪೭ ಏಪ್ರಿಲ್ ೨೨
ಪ್ರಭವನಾಮ ಸಂವತ್ಸರ ವೈಶಾಖ ಶುದ್ಧ
ದಶಮಿ ಅಧಿಕಮಾಸ, ಭಾನುವಾರ
ಸ್ಥಳ - ಬನ್ನೂರು ಗ್ರಾಮ, ಮೈಸೂರು
ಜಿಲ್ಲೆ
ಜನ್ಮನಾಮ
- ಯತಿರಾಜ
ತಂದೆ - ರಾಮಾಚಾರ್ಯ
ತಾಯಿ - ಸೀತಾಬಾಯಿ
ವಿದ್ಯಾಗುರುಗಳು
- ಶ್ರೀಪಾದರಾಜರು
ಆಶ್ರಮಗುರುಗಳು
- ಶ್ರೀ ಬ್ರಹ್ಮಣ್ಯ ತೀರ್ಥರು
ಒಮ್ಮೆ ಅಬ್ಬೂರು ಮಠದ ಪರಮ
ಶಿಷ್ಯರಾಗಿದ್ದ ಸೀತಾಬಾಯಿಯವರು ತಮ್ಮ
ಪತಿ ನಿಧನರಾಗಿದ್ದರಿಂದ ಸಹಗಮನ
ಮಾಡಲು ಬ್ರಹ್ಮಣ್ಯತೀರ್ಥರ ಬಳಿ ಅನುಮತಿ ಯಾಚಿಸಲು
ಬಂದು ನಮಸ್ಕರಿಸಿದಾಗ ಶ್ರೀಗಳು ಎಂದಿನಂತೆ ದೀರ್ಘಸುಮಂಗಲೀಭವ
ಎಂದು ಆಶೀರ್ವದಿಸಿದರು. ಆಗ ನೆರೆದಿದ್ದ
ಶಿಷ್ಯರೆಲ್ಲ ಆಶ್ಚರ್ಯಭರಿತರಾಗಿ ಶ್ರೀಗಳಿಗೆ ವಿಷಯ ತಿಳಿಸಿದಾಗ,
ನನ್ನ ಬಾಯಿಂದ ದೀರ್ಘಸುಮಂಗಲೀಭವ ಎಂದು
ಬಂದಾಯ್ತು. ವಿಠಲನೇ ನನ್ನ
ಬಾಯಲ್ಲಿ ಆ ಮಾತನಾಡಿಸಿದ್ದಾನೆ.
ನನ್ನ ಸನ್ಯಾಸಧರ್ಮ ನಿಜವೇ ಆಗಿದ್ದರೆ ನನ್ನ
ಮಾತು ಸತ್ಯವಾಗಬೇಕು. ಇಲ್ಲವಾದಲ್ಲಿ ಸ್ತ್ರೀಹತ್ಯಾದೋಷ - ವಿಠಲನಿಗೆ ಹತ್ಯಾದೋಷ ಎರಡೂ
ಸಂಭವಿಸಬೇಕಾಗುತ್ತದೆ. ನಿನ್ನ ಪತಿಯ ಮೃತನಾದ
ಸ್ಥಳವನ್ನು ತೋರಿಸು ಎಂದು ಸೀತಾಬಾಯಿ
ಯೊಡನೆ ಹೊರಟೇಬಿಟ್ಟರು.
ಆದರೆ ಯತಿಗಳು ಮೃತದೇಹವನ್ನು ನೋಡಬಾರದ
ಕಾರಣ ಶಿಷ್ಯರು ತಡೆಯೊಡ್ಡಿದರು. ಸ್ವಾಮಿಗಳು
ಅವರನ್ನು ಲೆಕ್ಕಿಸದೆ ನೇರವಾಗಿ ಮೃತದೇಹದ
ಬಳಿ ಬಂದು ಮಂತ್ರ
ಪಠನೆ ಮಾಡಿ ಕಮಂಡಲದಿಂದ ಮಂತ್ರೋದಕವನ್ನು
ರಾಮಾಚಾರ್ಯರ ಮೇಲೆ ಪ್ರೋಕ್ಷಣೆ ಮಾಡುತ್ತಿದ್ದಂತೆ,
ನಿದ್ದೆಯಿಂದ ಎದ್ದು
ಶ್ರೀಗಳಿಗೆ ನಮಸ್ಕರಿಸಲು ಶ್ರೀಗಳು ಸುಪುತ್ರಾ ಪ್ರಾಪ್ತಿರಸ್ತು
ಎಂದು ಆಶೀರ್ವದಿಸಿದರು. ಆಗಲೇ ಮುಪ್ಪಿನಲ್ಲಿದ್ದ ದಂಪತಿಗಳಿಗೆ
ಶ್ರೀಗಳ ಆಶೀರ್ವಾದ ಆಶ್ಚರ್ಯವೆನಿಸಿತು. ಆಗ
ಶ್ರೀಗಳು, ನಿಮ್ಮ ಮೊದಲ ಸಂತಾನವನ್ನು
ನಮಗೇ ನೀಡಬೇಕು. ಮತ್ತು ಪ್ರಸವಕಾಲದಲ್ಲಿ
ಶಿಶುವನ್ನು ಭೂಸ್ಪರ್ಶವಾಗದಂತೆ ತರಬೇಕು ಎಂದು ಬಂಗಾರದ
ಹರಿವಾಣವನ್ನು ಕೊಟ್ಟು ಕಳುಹಿಸಿದರು.
ಹೀಗೆ ಜನಿಸಿದ ಶಿಶುವನ್ನು ಶ್ರೀಗಳು
ಕಣ್ವನದಿಯಲ್ಲಿ ತೊಳೆದು ಶ್ರೀಕೃಷ್ಣನ ಮುಂದೆ
ಮಲಗಿಸಿ ಅದನ್ನು ಸಂರಕ್ಷಿಸಿದರು. ಮುಂದೆ
ಆ ಮಗುವಿಗೆ ವ್ಯಾಸತೀರ್ಥ
ಎಂದು ನಾಮಕರಣ ಮಾಡಿ ಆಶ್ರಮ
ನೀಡಿದರು. ಆ ವ್ಯಾಸತೀರ್ಥರೇ
ಮುಂದೆ ವ್ಯಾಸರಾಜರೆಂದು ಪ್ರಸಿದ್ಧಿ ಹೊಂದಿದರು.
ವ್ಯಾಸರಾಜರ
ಪಾಂಡಿತ್ಯ:
ಒಮ್ಮೆ ವ್ಯಾಸರಾಜರು ಸಂಚಾರದಲ್ಲಿದ್ದಾಗ ಕಂಚಿಗೆ ಆಗಮಿಸಿದರು. ವೇದಾಂತ
ವಿದ್ಯೆಗೆ, ಮಹೋನ್ನತ ಪಾಂಡಿತ್ಯಕ್ಕೆ ಪ್ರಖ್ಯಾತವಾಗಿತ್ತು.
ಅಂಥಹ ಕಂಚಿಯಲ್ಲಿ ಕೆಲವೇ ದಿನಗಳಲ್ಲಿ
ವ್ಯಾಸರಾಜರು ತಮ್ಮ ಪಾಂಡಿತ್ಯದಿಂದ ವಿಖ್ಯಾತರಾದರು.
ಅಂಥಹ ವ್ಯಾಸರಾಜರನ್ನು ಕೆಣಕಲು ಬಂದ ಪಂಡಿತರಿಗೆ
ವ್ಯಾಸರಾಜರು ಹೀಗೆ ಉತ್ತರಿಸಿದರು :
ಶ್ರೀಮಧ್ವಮತಪ್ರಮೇಯನವರತ್ನಮಾಲಿಕಾ
ಶ್ರೀಮನ್ಮಧ್ವಮತೇ
ಹರಿಃ ಪರತರಃ ಸತ್ಯಂ ಜಗತ್
ತತ್ವತೋ ।
ಭೇದೋ ಜೀವಗಣಾ ಹರೇರನುಚರಾಃ ನೀಚೋಚ್ಚಭಾವಂ
ಗತಾಃ ।।
ಮುಕ್ತಿರ್ನೈಜಸುಖಾನುಭೂತಿರಮಲಾ
ಭಕ್ತಿಶ್ಚ ತತ್ಸಾಧನಂ
ಹ್ಯಕ್ಷಾದಿತ್ರಿತಯಂ
ಪ್ರಮಾಣಮಖಿಲಾಮ್ಯ್ನಾಯೈಕವೇದ್ಯೋ ಹರಿಃ ।।
ಶ್ರೀ ಹರಿಯೇ ಸರ್ವೋತ್ತಮನು,
ಪ್ರಮಾಣ ಪರಿಮಿತವಾದ ಈ ಜಗತ್ತು
ಪಾರಮಾರ್ಥತಃ ಸತ್ಯವು,
ಜೀವೇಶ್ವರ
ಭೇದ, ಜಡೇಶ್ವರ ಭೇದ, ಜೀವ
ಜಡ ಭೇದ, ಜೀವ
ಜೀವಭೇದ, ಜಡ ಜಡ
ಭೇದಗಳೆಂಬ ಭೇದಪಂಚಕವು ಪಾರಮಾರ್ಥಿಕವು
ಸಾತ್ವಿಕ,ರಾಜಸ, ತಾಮಸರೆಂಬ ತ್ರಿವಿಧ
ಜೀವರುಗಳು ಯಾವಾಗ್ಯೂ ಶ್ರೀಹರಿಯ ಅಧೀನರು,
ಸ್ವಭಾವತಃ ತಾರತಮ್ಯದಲ್ಲಿ ಇರುವವರು
ಸ್ವರೂಪಭೂತಾನಂದಾನುಭವವೇ
ಸಾತ್ವಿಕರಿಗೆ ಮುಕ್ತಿಯು
ಪರಮ ನಿರ್ಮಲ ವಿಷ್ಣು ಭಕ್ತಿಯೇ
ಆ ಮುಕ್ತಿಯ ಸಾಧನವು,
ಪ್ರತ್ಯಕ್ಷ,ಅನುಮಾನ, ಆಗಮಗಳೆಂದು ಈ
ಮೂರೇ, ಶ್ರೀ ಹರಿಯೇ ಅಖಿಲ
ಸದಾಗಮಗಳಿಂದ ಪರಮ ತಾತ್ಪರ್ಯಪೂರ್ವಕ ಮುಖ್ಯ
ಪ್ರತಿಪಾದ್ಯನು, ಎಂದು ಈ ಪ್ರಮೇಯ
ನವರತ್ನಗಳು ಪ್ರಕಾಶಿಸುತ್ತವೆ
ಹೀಗೆ ಪ್ರತಿಪಾದಿಸಿದ ವ್ಯಾಸರಾಜರ ಪಾಂಡಿತ್ಯಕ್ಕೆ ಮಾರುಹೋದ ವಿಷ್ಣುಕಂಚಿಯ ಪಂಡಿತರು
ವ್ಯಾಸರಾಜರನ್ನ ದಿವ್ಯವಾದ
ಪಲ್ಲಕ್ಕಿಯಲ್ಲಿ ಕೂರಿಸಿ ದೇವಾಲಯದ
ಸಕಲ ಸಾಂಪ್ರದಾಯಿಕ ವೈಭವದೊಡನೆ
ವರದರಾಜಸ್ವಾಮಿ ದೇವಾಲಯಕ್ಕೆ ಕರೆದೊಯ್ದರು
ವ್ಯಾಸತೀರ್ಥರ ಖ್ಯಾತಿಯನ್ನು
ಸೈರಿಸಲಾಗದೆ ಪರಾಜಿತರಾಗಿದ್ದ ಕೆಲ ವಿದ್ವಾಂಸರು ಒಮ್ಮೆ ಪೂಜೆಯಾದ ನಂತರ
ಅಡಿಗೆಯವನೊಡನೆ ಸೇರಿ ಸೇರಿ ಪಿತೂರಿ
ಮಾಡಿ ವಿಷಪ್ರಾಶನ ಮಾಡಿಸಿದರು. ಆದರೆ
ಭಗವದರ್ಪಣವಾದ ಆ ವಿಷಾಹಾರ
ಶ್ರೀಗಳವರನ್ನು ಏನೂ ಮಾಡಲಿಲ್ಲ. ಅದು
ಅವರಿಗೆ ಅಮೃತವಾಯಿತು.
ಶ್ರೀಪಾದರಾಜರ
ಸನ್ನಿಧಿಯಲ್ಲಿ ವ್ಯಾಸರಾಜರು
ಬ್ರಹ್ಮಣ್ಯತೀರ್ಥರ
ಆಶಯದಂತೆ ವ್ಯಾಸರಾಜರು ಮುಳಬಾಗಿಲಿನ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಶ್ರೀಪಾದರಾಜರ ಬಳಿ ತರ್ಕ, ವ್ಯಾಕರಣ,
ಛಂದಸ್ಸು, ಮೀಮಾಂಸ, ಷಡ್ಡರ್ಶನಗಳನ್ನು ಕಲಿಯಲು
ಆಗಮಿಸಿದರು. ಕ್ರಮೇಣ ಶ್ರೀಮನ್ಯಾಯಸುಧಾ ಗ್ರಂಥ
ಪಾಠ ಮುಗಿದಂತೆಲ್ಲಾ ವ್ಯಾಸರಾಜರ
ಜ್ಞಾನ ಮತ್ತು ಕಾಂತಿ ಮತ್ತಷ್ಟು
ಹೆಚ್ಚಾಗುತ್ತಿತ್ತು.
ಪದ್ಮನಾಭತೀರ್ಥರ
ಅನುಗ್ರಹ:
ಒಮ್ಮೆ ಮುಳಬಾಗಿಲಿನ ನರಸಿಂಹತೀರ್ಥದಲ್ಲಿರುವ ಗುಹೆಯಲ್ಲಿ ಎಂದಿನಂತೆ ಅಂದಿನ
ಪಾಠಗಳನ್ನು ಮನನ ಮಾಡುತ್ತಿದ್ದಾಗ ಒಂದು
ಘಟಸರ್ಪವು ವ್ಯಾಸರಾಜರನ್ನು ಸುತ್ತುವರೆದಿತ್ತು. ಅದನ್ನು
ಕಂಡ ಶ್ರೀಪಾದರಾಜರು ತಮ್ಮ
ಅಪರೋಕ್ಷ ಜ್ಞಾನದಿಂದ ಮನನ ಮಾಡಿದಾಗ
ಅದು ಸರ್ಪರೂಪದಲ್ಲಿರುವ ಯತಿವರ್ಯರೆಂದು,
ತಮ್ಮ ಮಠದ ಮೂಲಪುರುಷರೇ ಆದ
ಪದ್ಮನಾಭತೀರ್ಥರೆಂದು ಗೋಚರವಾಯಿತು. ತಮ್ಮ ದಿವ್ಯಶಕ್ತಿಯಿಂದ ಆ
ಸರ್ಪದೊಡನೆ ಸರ್ಪಭಾಷೆಯಲ್ಲಿ ಮಾತನಾಡಿಸಿದಾಗ ವ್ಯಾಸರಾಜರು ಮುಂದೆ ಮಹತ್ಕಾರ್ಯಗಳನ್ನು ಸಾಧಿಸಬೇಕಾಗಿರುವುದರಿಂದ
ಅವರನ್ನು ಆಶೀರ್ವದಿಸಲು ಬಂದಿರುವುದಾಗಿ ತಮ್ಮ ಸ್ಪರ್ಶ ಹಾಗೂ
ಸಾನ್ನಿಧ್ಯದಿಂದಾಗಿ ಮುಂದೆಂದೂ ವ್ಯಾಸರಾಯರಿಗೆ ಶತ್ರುಗಳ
ವಿಷಭಾದೆ ತಟ್ಟುವುದಿಲ್ಲ ಎಂದು ಹೇಳಿ ಆ
ಸರ್ಪ ಕಣ್ಮರೆಯಾಯಿತು.
ಸ್ವಪ್ನದಲ್ಲಿ
ಸೂಚನೆ:
ಒಮ್ಮೆ ವ್ಯಾಸರಾಜರಿಗೆ ಸ್ವಪ್ನದಲ್ಲಿ ವಿಠಲನು ಕಾಣಿಸಿಕೊಂಡು ಪಂಡರಾಪುರಕ್ಕೆ
ಬರಬೇಕೆಂದು ಆಹ್ವಾನವಿತ್ತಂತೆ ಗೋಚರವಾಯಿತು. ಅದೇ ರೀತಿ
ಶ್ರೀಪಾದರಾಜರಿಗೆ ಭೀಮರಥಿ ಪುಷ್ಪಾವತಿ ಸಂಗಮ
ಕ್ಷೇತ್ರದಲ್ಲಿ ಪಾಂಡವ ವಂಶೀಯನಾದ ಶ್ರೀಕ್ಷೇಮಕಾಂಟ
ಮಹಾರಾಜನು ಒಂದು ದೇವರ ಪೆಟ್ಟಿಗೆಯನ್ನು
ಭೂಸ್ಥಾಪನ ಮಾಡಿರುವುದಾಗಿ ತಿಳಿಸಿ ಅದನ್ನು ತೆಗೆದು
ಪ್ರತಿನಿತ್ಯ ಪೂಜಿಸಲು ಆದೇಶ ಮಾಡಿದಂತಾಯಿತು.
ಅದರಂತೆ ಮಾರನೆ ದಿನ ಭೂಗರ್ಭದಲ್ಲಿ
ಒಂದು ದೇವರ ಪೆಟ್ಟಿಗೆ ದೊರೆಯಿತು.
ಅದರಲ್ಲಿ ಎರಡು ಸಂಪುಟಗಳು ದೊರೆತವು.
ಒಂದನ್ನು ತೆಗೆದಾಗ ಶ್ರೀ ಜಾಂಬವತೀದೇವಿಯರಿಂದ
ನಂತರದಲ್ಲಿ ಅರ್ಜುನನಿಂದ ಪೂಜಿತನಾಗಿದ್ದ ರುಕ್ಮಿಣೀಸತ್ಯಭಾಮಾಸಹಿತ ಶ್ರೀ ರಂಗವಿಠಲಮೂರ್ತಿಯ ದರ್ಶನವಾಯಿತು.
ಅಲ್ಲಿಯವರೆಗೂ ಗೋಪೀನಾಥ ಎಂಬ ಅಂಕಿತ
ಬಳಸುತ್ತಿದ್ದ ಶ್ರೀಪಾದರಾಜರು ಅಂದಿನಿಂದ ತಮ್ಮ ದೇವರನಾಮಗಳು,
ಪದ್ಯಗಳು, ಸುಳಾದಿಗಳಿಗೆ ರಂಗವಿಠಲ ಎಂಬ ಅಂಕಿತ
ಬಳಸಲು ಶುರುಮಾಡಿದರು.
ಇದಾದ ಕೆಲವು ದಿನಗಳಲ್ಲಿ ಒಮ್ಮೆ
ಶ್ರೀಪಾದರಾಜರು ವ್ಯಾಸರಾಜರಿಗೆ ಪ್ರತಿಮೆಗಳ ಪೂಜೆ ಆರಂಭಿಸಲು
ಹೇಳಿ ತಾವು ಸ್ನಾನ ಮಾಡಲು
ಹೊರಟರು. ವ್ಯಾಸರಾಜರು ಒಂದೊಂದೇ ಪ್ರತಿಮೆಗಳನ್ನು ತೆಗೆದು
ಸಿದ್ಧಗೊಳಿಸುತ್ತಿದ್ದರು. ಹಾಗೆಯೇ ತೆಗೆಯುತ್ತಿದ್ದಾಗ ಶ್ರೀಪಾದರಾಜರಿಗೆ
ಭೂಗರ್ಭದಲ್ಲಿ ದೊರೆತ ಪೆಟ್ಟಿಗೆಯ ಮತ್ತೊಂದು
ಸಂಪುಟವನ್ನು ತೆರೆದರು. ಅಲ್ಲಿಯವರೆಗೂ ಶ್ರೀಪಾದರಾಜರು
ಆ ಸಂಪುಟವನ್ನು ತೆರೆದಿರಲಿಲ್ಲ.
ಆ ಸಂಪುಟವನ್ನು ತೆರೆಯುತ್ತಿದ್ದಂತೆ
ಒಳಗಿನಿಂದ ವೇಣುಗೋಪಾಲಸ್ವಾಮಿಯು ಹೊರಬಂದು ನರ್ತಿಸಲು ಶುರುಮಾಡಿದನು.
ರುಕ್ಮಿಣೀಸತ್ಯಭಾಮಾಸಹಿತ
ಶ್ರೀರಂಗವಿಠಲನನ್ನು ಕಂಡ ವೇಣುಗೋಪಾಲಸ್ವಾಮಿ ಆನಂದಾತಿರೇಕದಿಂದ
ವ್ಯಾಸರಾಜರೆದುರು ಕೊಳಲನೋಡುತಾ ನರ್ತಿಸುತ್ತಿದ್ದನು. ಸ್ವಾಮಿಯ ನರ್ತನಕ್ಕೆ ಸಾಲಿಗ್ರಾಮಗಳೂ
ತಾಳ ಹಾಕಲು ಶುರುಮಾಡಿದವು.
ಸುತ್ತಾ ನೆರೆದು ನೋಡುತ್ತಾ ನಿಂತಿದ್ದ
ಶಿಷ್ಯವೃಂದ ಓಡಿಹೋಗಿ ಶ್ರೀಪಾದರಾಜರಿಗೆ ನಡೆದ
ಅಚ್ಚರಿಯನ್ನು ವಿವರಿಸಿದಾಗ ಶ್ರೀಪಾದರಾಜರು ಕೂಡಲೇ ಸ್ಥಳಕ್ಕೆ ಬಂದು
ದೂರದಿಂದಲೇ ಬಗ್ಗಿ ನೋಡಿದರು. ವೇಣುಗೋಪಾಲಸ್ವಾಮಿ
ನರ್ತಿಸುತ್ತಿರಲು ವ್ಯಾಸರಾಜರು ಆನಂದದಿಂದ ಹಾಡುತ್ತಾ ತಾವೂ
ನರ್ತಿಸುತ್ತಿದ್ದರು. ಶ್ರೀಪಾದರಾಜರು ತದೇಕಚಿತ್ತದಿಂದ ಮೂರ್ತಿಯನ್ನೇ ನೋಡುತ್ತಿರಲು, ವೇಣುಗೋಪಾಲಸ್ವಾಮಿ ಭಂಗಿಯಲ್ಲಿ
ನರ್ತಿಸುತ್ತಿದ್ದನೋ ಅದೇ ಭಂಗಿಯಲ್ಲಿ ನಿಂತನು.
ಸ್ವಾಮಿ ನಿಂತಿದ್ದ ಪರಿ ಹೇಗಿತ್ತೆಂದರೆ
ತನ್ನ ಬಲಪಾದದ ಮೇಲೆ ಎಡಪಾದವನ್ನಿಟ್ಟು
ಮೋಹಕ ಭಂಗಿಯಲ್ಲಿ ನಿಂತಿದ್ದನು.
ಇದನ್ನು ಕಂಡ ಶ್ರೀಪಾದರಾಜರು ಆನಂದಪರವಶದಿಂದ
ವ್ಯಾಸರಾಜರ ಬಳಿ ಬಂದು ನೀವು
ಅತ್ಯಂತ ಪುಣ್ಯಶಾಲಿಗಳು. ಭೀಮಾತೀರದಲ್ಲಿ ದೊರೆತಿದ್ದ ಒಂದು ಸಂಪುಟದಲ್ಲಿ
ನನಗೆ ಶ್ರೀರಂಗವಿಠಲ ಒಲಿದಿದ್ದ. ನಿಮಗೆ ವೇಣುಗೋಪಾಲಸ್ವಾಮಿ
ಒಲಿದಿದ್ದಾನೆ. ಸ್ವಾಮಿಯ ಈ ವಿಗ್ರಹವನ್ನು
ನೀವೇ ಸ್ವೀಕರಿಸಿ, ನಿರಂತರವಾಗಿ ಪೂಜೆ ನಡೆಸಿಕೊಂಡು ಬನ್ನಿ
ಎಂದು ಆ ಸಂಪುಟವನ್ನು
ವ್ಯಾಸರಾಜರಿಗೆ ಒಪ್ಪಿಸಿದರು.
ಪಟ್ಟಾಭಿಷೇಕ:
ಹೀಗೆ ಶ್ರೀಪಾದರಾಜರ ಬಳಿ ಸಂಪೂರ್ಣ ವಿದ್ಯಾಭ್ಯಾಸವಾದ
ಬಳಿಕ ಬ್ರಹ್ಮಣ್ಯ ತೀರ್ಥರು ಒಂದು
ಸುಮುಹೂರ್ತದಲ್ಲಿ ವ್ಯಾಸಮುಷ್ಟಿಯ ಸಂಪುಟವನ್ನು ಬಂಗಾರದ ಹರಿವಾಣದಲ್ಲಿಟ್ಟು ವ್ಯಾಸರಾಜರ
ತಲೆಯ ಮೇಲಿಟ್ಟು ಪಟ್ಟಾಭಿಷೇಕ ಮಹೋತ್ಸವವನ್ನು
ನೆರವೇರಿಸಿ ಮಠದ ಮುಂದಿನ ಅಧಿಪತಿಗಳೆಂದು
ಘೋಷಿಸಿದರು.
ಶ್ರೀನಿವಾಸ
ಸನ್ನಿಧಿಯಲ್ಲಿ ವ್ಯಾಸರಾಜರು:
ಒಮ್ಮೆ ತಿರುಮಲದಲ್ಲಿ ಶ್ರೀನಿವಾಸನ ಅರ್ಚಕರು ತಮ್ಮ ಸ್ವಾರ್ಥಕ್ಕಾಗಿ
ತಮ್ಮ ಅಧಿಕಾರವನ್ನು ದುರ್ವಿನಿಯೋಗ ಪಡಿಸಿಕೊಳ್ಳುತ್ತಿರುವುದನ್ನು ಗಮನಿಸಿದ ಸಾಳ್ವ ನರಸಿಂಹನು
ಆ ಅರ್ಚಕರನ್ನೆಲ್ಲ ಕೊಂದು
ಬ್ರಹ್ಮ ಹತ್ಯಾ ದೋಷಕ್ಕೆ ಗುರಿಯಾದನು.
ಅದರ ಪರಿಹಾರಕ್ಕಾಗಿ ಶ್ರೀಪಾದರಾಜರ
ಬಳಿ ಬಂದಾಗ ರಾಜರು
ಸಾಳ್ವನಿಗೆ ಬಂದಿದ್ದ ದೋಷವನ್ನು ಪರಿಹರಿಸಿದರು.
ಅದೇ ಸಂದರ್ಭದಲ್ಲಿ ಶ್ರೀನಿವಾಸನ ಪೂಜೆಗೆ ಅರ್ಹರಾದ ಆ
ಮನೆತನದ ಬ್ರಾಹ್ಮಣರು ಯಾರೂ ಇರದ ಕಾರಣ
ಸಾಳ್ವನು ವ್ಯಾಸರಾಜರನ್ನು ಪೂಜೆ ಮಾಡಲು ಕೇಳಿಕೊಂಡಾಗ
ವ್ಯಾಸರಾಜರು ಒಪ್ಪಿಕೊಂಡು ಸತತವಾಗಿ ಹನ್ನೆರೆಡು ವರ್ಷಗಳ
ಕಾಲ ಶ್ರೀನಿವಾಸನ ಪೂಜೆಯನ್ನು
ನೆರವೇರಿಸಿದರು. ನಂತರದಲ್ಲಿ ಅರ್ಚಕ ತಾತಾಚಾರ್ಯರ
ಮಗನೊಬ್ಬ ಉಳಿದಿರುವುದಾಗಿ ತಿಳಿದು ಅವನನ್ನು ಕರೆಸಿ
ಅವನಿಗೆ ಉಪನಯನಾದಿ ಕೈಂಕರ್ಯಗಳನ್ನು ಮಾಡಿಸಿ
ಆಗಮೋಕ್ತ ಪೂಜಾಪದ್ಧತಿಯನ್ನು ತಿಳಿಸಿ ಶ್ರೀನಿವಾಸನ ಪೂಜೆಯನ್ನು
ಅವನಿಗೊಪ್ಪಿಸಿ ತಾವು ವಿಜಯನಗರದ ಕಡೆ
ಹೊರಟರು.
ಯಂತ್ರೋದ್ಧಾರಕ
ಪ್ರಾಣದೇವರು :
ಒಮ್ಮೆ ವ್ಯಾಸರಾಜರು ಯಥಾಪ್ರಕಾರದಂತೆ ತುಂಗಭದ್ರೆಯ ಚಕ್ರತೀರ್ಥದ ಬಳಿ ಸ್ನಾನ ಮುಗಿಸಿ
ಆಹ್ನಿಕದಲ್ಲಿ ಕುಳಿತಿದ್ದಾಗ ಬಂಡೆಯೊಂದರಿಂದ ಕಪಿಯೊಂದು ಬಂದು ಹಾಗೆಯೇ
ಕಣ್ಮರೆಯಾಯಿತು. ಈ ಘಟನೆ
ಹಲವಾರು ಬಾರಿ ಪುನರಾವರ್ತನೆಯಾಯಿತು. ಆಗ
ವ್ಯಾಸರಾಜರು ಅದೇ ಬಂಡೆಯ ಮೇಲೆ
ಅಂಗಾರದಿಂದ ಪ್ರಾಣದೇವರನ್ನು ಬರೆದು ದ್ವಾದಶನಾಮಗಳನ್ನು ತಿದ್ದಿ
ಧ್ಯಾನಿಸಲು ಕುಳಿತರು. ಕಣ್ಣು ಬಿಟ್ಟಾಗ
ಬಂಡೆಯ ಮೇಲೆ ಕೆತ್ತಿದ್ದ ಮೂರ್ತಿಯು
ಜೀವ ತಳೆದು ಬಂಡೆಯಿಂದ ಕೆಳಗೆ
ಹಾರಿ ಮಾಯವಾಯಿತು. ವ್ಯಾಸರಾಜರು ಮತ್ತೆ ಅಂಗಾರದಿಂದ ಮೂರ್ತಿಯನ್ನು
ತಿದ್ದಿದರು. ಅದು ಮತ್ತೆ ಜೀವ
ತಳೆದು ಮಾಯವಾಯಿತು. ಹೀಗೆ ವ್ಯಾಸರಾಜರು ಹನ್ನೆರೆಡು
ಸಲ ಮೂರ್ತಿಯನ್ನು ಕೆತ್ತಲು
ಪ್ರಯತ್ನಿಸಿದಾಗಲೂ ಹನ್ನೆರೆಡು ಸಲವೂ ಆ
ಮೂರ್ತಿ ಜೀವತಳೆದು ಹಾರಿ ಹೋಯಿತು.
ನಂತರ ಧ್ಯಾನಕ್ಕೆ ಕುಳಿತು ಮನಸಿನಲ್ಲೇ
ಅದರ ಕಾರಣವನ್ನು ಅರಿತರು.
ನಂತರ ಬಂಡೆಯ ಮೇಲೆ ಮೊದಲು
ಷಟ್ಕೋನವನ್ನು ಬರೆದು ಅದರ ಸುತ್ತ
ವಲಯಾಕಾರವನ್ನು ಯಂತ್ರದಂತೆ ರಚಿಸಿ ಮಧ್ಯದಲ್ಲಿ
ಯೋಗಾಸನ ರೂಢನಾಗಿ ಜಪಮಾಲೆ ಹಿಡಿದು
ಕುಳಿತ ಧ್ಯಾನಮಗ್ನ ಮುಖ್ಯ ಪ್ರಾಣದೇವರನ್ನು
ಬರೆದು ಮೊದಲು ಹಾರಿಹೋದ ಹನ್ನೆರೆಡು
ಕಪಿಗಳನ್ನೂ, ಪದ್ಮದಳಗಳ ತುದಿಯಲ್ಲಿ ಮುಖ್ಯಪ್ರಾಣನಿಗೆ
ಮಾಲಾಕಾರವಾಗಿ ಕಪಿಬಂಧ ಹೆಣೆದರು. ಈ
ಯಂತ್ರದಲ್ಲಿ ಒಂದು ಕೋಟಿ ಬೀಜಾಕ್ಷರ
ಮಂತ್ರ ಅಡಕವಾಗಿದೆಯಂದೂ ಇದರ ಸಿದ್ಧಿಗಾಗಿ ವ್ಯಾಸರಾಜರು
ಮೂರುಕೋಟಿ ಮಂತ್ರಗಳನ್ನು ಜಪಿಸಿ ಪ್ರಾಣದೇವರ ಸನ್ನಿಧಾನವನ್ನು
ಸ್ಥಿರವಾಗಿ ನಿಲ್ಲಿಸಿದ್ದಾರೆಂದೂ, ಅಪರೋಕ್ಷ ಜ್ಞಾನಿಗಳಾದ ವಿಜಯದಾಸರು
ತಮ್ಮ ಯಂತ್ರೋದ್ಧಾರಕ ಸುಳಾದಿಯಲ್ಲಿ ತಿಳಿಸಿದ್ದಾರೆ.
ಒಮ್ಮೆ ಮುಳಬಾಗಿಲಿನಲ್ಲಿ ವ್ಯಾಸರಾಜರು ನಿದ್ರೆಯಲ್ಲಿದ್ದಾಗ ಅವರು ಪ್ರಾಣದೇವರನ್ನು ಪೂಜಿಸಿತ್ತಿರುವಂತೆಯೂ
ಅದು ನೋಡ ನೋಡುತ್ತಿದ್ದಂತೆ
ವಿಭಜನೆ ಹೊಡಿ ೭೩೨ ಮೂರ್ತಿಗಳಾಗಿ
ಸ್ವಪ್ನ ಬಿದ್ದಿತು. ಕೂಡಲೇ ಸ್ವಪ್ನದಿಂದ
ಎಚ್ಚೆತ್ತ ವ್ಯಾಸರಾಜರು ೭೩೨ ಮುಖ್ಯ ಪ್ರಾಣಪ್ರತೀಕಗಳನ್ನು
ಪ್ರತಿಷ್ಠಾಪಿಸುವ ಸಂಕಲ್ಪ ಕೈಗೊಂಡರು. ಅದೇ
ರೀತಿ ಮುಂದೆ ೭೩೨ ಪ್ರಾಣದೇವರನ್ನು
ಪ್ರತಿಷ್ಟಾಪಿಸಿದರು.
Subscribe to:
Posts (Atom)