Tuesday, March 11, 2014

ಇದು ಏನಂಗಮೋಹನಾಂಗ

ರಾಗ : ದರ್ಬಾರು
ತಾಳ : ಅಟ್ಟತಾಳ
ಇದು ಏನಂಗಮೋಹನಾಂಗ ।ಪ।
ಮದನಜನಕ ತೊರವೆಯ ನರಸಿಂಗ ।।ಅ ಪ ।।

ಸುರರು ನುತಿಸಿದರೆ ತುಟಿಯ ಮಿಸಕದವ
ಮರೆದೇತಕೆ ಬಾಯ ತೆರೆದೆ ಪೇಳೊಮ್ಮೆ ।।೧।।

ವರ ನೀಲ ಮುತ್ತು ಮಾಣಿಕ ಹಾರಗಳಿರೆ
ಕೊರಳಲಿ ಕರುಳಮಾಲೆಯನ್ನಿಟ್ಟು ಮೆರೆವುದು ।।೨।।

ತೊರವೆಯ ನರಹರಿ ಪುರಂದರ ವಿಠಲ
ಸಿರಿಯಿಪ್ಪ ತೊಡೆಯೊಳು ಅರಿಯನಟ್ಟಿರುವುದು ।।೩।।

No comments:

Post a Comment