Monday, February 10, 2014

ನರಸಿಂಹನ ಪಾದ

ನರಸಿಂಹನ ಪಾದ ಭಜನೆಯ ಮಾಡೋ ।ಪ।

ನರಸಿಂಹನ ಪಾದ ಭಜನೆಯ ಮಾಡಲು ।
ದುರಿತ ಪರ್ವತವ ಖಂಡಿಸುವ ಕುಲಿಶದಂತೆ ।।ಅ ಪ ।।

ತರಳನ ಮೊರೆಕೇಳಿ ತ್ವರಿತದಿಂದಲಿ ಬಂದು ।
ದುರುಳನ ಕರುಳ ತನ್ನ ಕೊರಳಲಿ ಧರಿಸಿದ ।।೧।।

ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ।
ವರಕಂಬದಿಂದ ಬಂದ ವೈಕುಂಠಪತಿ ನಮ್ಮ ।।೨।।

ಹರಿವಿರಿ೦ಚಾದ್ಯರು ಕರವೆತ್ತಿ ಮುಗಿಯಲು ।
ಪರಮಶಾಂತನಾದ ಪುರಂದರವಿಠಲ ।।೩।।

No comments:

Post a Comment