Monday, May 20, 2013

ಲಾಲಿ ಪಾವನ ಚರಣ ಲಾಲಿ ಅಘ ಹರಣ


ಲಾಲಿ ಪಾವನ ಚರಣ ಲಾಲಿ ಅಘ ಹರಣ
ಲಾಲಿ ವೆಂಕಟರಮಣ ಲಲಿತ ಕಲ್ಯಾಣ |ಪ|

ವನಜಾಕ್ಷ ಮಾಧವ ವಸುದೇವ ತನಯ
ಸನಕಾದಿ ಮುನಿವಂದ್ಯ ಸಾಧು ಜನಪ್ರಿಯ
ಇನ ಕೋಟಿ ಶತ ತೇಜ ಮುನಿ ಕಲ್ಪ ಭೂಜ
ಕನಕಾದ್ರಿ ನಿಲಯ ವೆಂಕಟರಾಯ|೧|

ಜಗದೇಕ ನಾಯಕ ಜಲಜದಳ ನೇತ್ರ
ಖಗರಾಜ ವಾಹನ ಕಲ್ಯಾಣ ಚರಿತ
ಸಗರ ತನಯಾರ್ಚಿತ ಸನಕಾದಿ ವಿನುತ
ರಘುವಂಶ ಕುಲ ತಿಲಕ ರಮಣೀಯ ಗಾತ್ರ|೨|

ನಂದಗೋಪ ಕುಮಾರ ನವನೀತ ಚೋರ
ಮಂದಾಕಿನಿ ಜನಕ ಮೋಹನಾಕಾರ
ಇಂದುಧರ ಸತಿ ವಿನುತ ವಿಶ್ವ ಸಂಚಾರ
ನಂದ ಗೋವಿಂದ ಮುಚುಕುಂದ ನುತ ಸಾರ|೩

ನರ ಮೃಗಾಕಾರಿ ಹಿರಣ್ಯಕ ವೈರಿ
ಕರಿರಾಜ ರಕ್ಷಕ ಕಾರುಣ್ಯ ಮೂರ್ತಿ
ಹರಿ ಆದಿಕೇಶವ ಗುರು ಅಪ್ರಮೇಯ
ಶ್ರೀಧರ ಶೇಷಗಿರಿ ವರ ತಿಮ್ಮರಾಯ |೪|

No comments:

Post a Comment