Monday, March 14, 2016

ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಮಹೋತ್ಸವ

ಇಂದು ಕಲಿಯುಗದ ಕಲ್ಪತರು ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಮಹೋತ್ಸವ

Sunday, March 6, 2016

ಮಹಾ ಶಿವರಾತ್ರಿ

 ಆತ್ಮೀಯರೇ,

ಇದೇ ಮಾರ್ಚ್ ತಿಂಗಳ ೮ನೇ ತಾರೀಖಿನಂದು ಶ್ರೀ ಕ್ಷೇತ್ರ ಮಾರಂಡಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಮಹಾ ಶಿವರಾತ್ರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೋರಿಕೊಳ್ಳುತ್ತೇವೆ.


ಹನುಮದ್ವನದ ಕಾಮಗಾರಿ

 ಆತ್ಮೀಯ ಬಂಧುಗಳೇ,

ನಿಮಗೆಲ್ಲ ತಿಳಿದಿರುವಂತೆ ಶ್ರೀ ಕ್ಷೇತ್ರ ಮಾರಂಡಹಳ್ಳಿ ಶ್ರೀ ಆಂಜನೇಯ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಹನುಮದ್ವನ ನಿರ್ಮಿಸುವ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು ನಿರಂತರವಾಗಿ ಕೆಲಸಗಳು ನಡೆಯುತ್ತಿವೆ.

ಮೊದಲನೇ ಹಂತದಲ್ಲಿ ತೋಟಕ್ಕೆ ಬೇಲಿ ನಿರ್ಮಿಸುವ ಕಾರ್ಯ, ಹಳ್ಳ ತೋಡುವ ಕಾರ್ಯ, ಮಿಶ್ರಣಕ್ಕೆ ಕೆಂಪು ಮಣ್ಣಿನ ಸಾಗಣೆ ಮತ್ತು ಕಾಲುವೆ ನೀರು ಹರಿಸುವ ಕಾರ್ಯ ಪೂರ್ಣಗೊಂಡಿದ್ದು ಎರಡನೇ ಹಂತದಲ್ಲಿ ಗೊಬ್ಬರ ಸಾಗಣೆ, ಗಿಡಗಳನ್ನು ಸಾಗಿಸುವುದು ಮತ್ತು ನೆಡುವ ಕಾರ್ಯ ನಡೆಯಬೇಕಿದೆ.







Tuesday, February 16, 2016

ಶ್ರೀ ಮಧ್ವನವಮಿ ಆಮಂತ್ರಣ

ಆತ್ಮೀಯರೇ,

ಇದೇ  ತಿಂಗಳು ಅಂದರೆ ಫೆಬ್ರವರಿ ೧೭ನೇ ತಾರೀಖಿನಂದು ಶ್ರೀ ಕ್ಷೇತ್ರ ಮಾರಂಡಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ವತಿಯಿಂದ ಮಧ್ವನವಮಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡಬೇಕಾಗಿ ವಿನಂತಿ.



Sunday, February 7, 2016

ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ

  ಇಂದು ದಾಸಶ್ರೇಷ್ಠ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ 
 
ಕಂಡೆ ನಾ ಗೋವಿಂದನ
ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ ।।
ಕೇಶವ ನಾರಾಯಣ ಶ್ರೀಕೃಷ್ಣನ
ವಾಸುದೇವ ಅಚ್ಚುತಾನಂತನ  ।।೧।।
ಸಾಸಿರ ನಾಮದ ಶ್ರೀ ಹೃಷೀಕೇಶನ
ಶೇಷಶಯನ ನಮ್ಮ ವಸುದೇವ ಸುತನ
ಮಾಧವ ಮಧುಸೂದನ ತ್ರಿವಿಕ್ರಮನ ಯಾದವಕುಲವಂದ್ಯನ 
ವೇದಾಂತ ವೇದ್ಯನ ಇಂದಿರಾರಮಣನ ।।೨।।
ಆದಿಮೂರುತಿ ಪ್ರಹ್ಲಾದವರದನ
ಪುರುಷೋತ್ತಮ ನರಹರಿ ಶ್ರೀ ಕೃಷ್ಣನ
ಶರಣಾಗತ ರಕ್ಷಕನ ಕರುಣಾಕರ ನಮ್ಮ ಪುರಂದರವಿಠಲನ
ನೆರೆನಂಬಿದನು ಬೇಲೂರ ಚೆನ್ನಿಗನ ।।೩।।