Thursday, April 10, 2014

ಧರ್ಮಕ್ಕೆ ಕೈ ಬಾರದೀ ಕಾಲ

ಧರ್ಮಕ್ಕೆ ಕೈ ಬಾರದೀ ಕಾಲ
ಪಾಪಕರ್ಮಕ್ಕೆ ಮನಸೋಲೋದಿ ಕಲಿ ಕಾಲ
ದಂಡ ದ್ರೋಹಕೆ ಉಂಡು ಪುಂಡು ಪೋಕರಿಗುಂಟು
ಹೆಂಡತಿ ಮಕ್ಕಳಿಗಿಲ್ಲವೀ ಕಾಲ ।।೧।।

ದಿಂಡೇರಿಗುಂಟು ಜಗಭಂಡರಿಗುಂಟು
ಅಂಡಲೆವರಿಗಿಲ್ಲವೀ ಕಾಲ
ಮತ್ತೆ ಸುಳ್ಳರಿಗುಂಟು ನಿತ್ಯ ಹಾದರಕ್ಕುಂಟು
ಉತ್ತಮರಿಗಿಲ್ಲವೀ ಕಾಲ ।।೨।।

ತೋತ್ತೇರಿಗುಂಟು ತಾಟಕಿಗುಂಟು
ಹೆತ್ತತಾಯಿಗಿಲ್ಲವೀ ಕಾಲ
ಹುಸಿ ದಿಟವಾಯಿತು ರಸ ಕಸವಾಯಿತು
ಸೊಸೆ ಅತ್ತೆಯ ದಂಡಿಸೋದೀ ಕಾಲ
ಬಿಸಜಾಕ್ಷ ಪುರಂದರವಿಠಲನ ಮನದಲ್ಲಿ
ಸ್ತುತಿಸುವವರಿಗಿಲ್ಲವೀ ಕಾಲ ।।೩।।

ಬಿಡೆ ನಿನ್ನ ಪಾದ ಬಿಂಕವದೇಕೋ

ಬಿಡೆ ನಿನ್ನ ಪಾದ ಬಿಂಕವದೇಕೋ ।।ಪ।।
ಕೊಡು ಮನದಿಷ್ಟವ ಕೋಪವಿದೇಕೋ ।।ಅಪ॥

ನೇರ ಹೊಕ್ಕರು ಬಿಡೆ ಬೆನ್ನಿನೊಳಗೆ ಬಹು
ಭಾರ ಪೊತ್ತೆನೆಂದು ಬಿದ್ದರು ಬಿಡೆನು
ಕೋರೆಯ ಮಸೆಯುತ ಕೆಸರು ಕೊಂಡರು
ಬಿಡೆನು ಘೋರ ರೂಪವ ತಾಳಿ ಘುರಿ ಘುರಿಸಲು ನಾನು ।।೧।।

ತಿರುಕನೆಂದು ಬಿಡೆ ತಿಳಿಯ ತಾಯಕೊರಳ
ತರಿವನೆಂದರು ನಿನ್ನ ನಾ ಬಿಡೆನೋ
ಪೊರೆಯೆ ಪಿತನ ವಾಕ್ಯ ಕಾಡ ಸೇರಲು ಬಿಡೆ
ದುರುಳ ಮಡುವಿನಲ್ಲಿ ಧುಮುಕಿದರೆಯು ನಾನು ।।೨।।

ಕಡು ಬತ್ತಲಾಗಿ ಎನ್ನ ಕೈಲಿ ಕಾಸಿಲ್ಲೆಂದರು
ಒಡನೆ ಹಯವೇರಿ ಓಡಿದರು ಬಿಡೆನು
ಪೊಡವಿಯೊಳಗೆ ನಮ್ಮ ಪುರಂದರವಿಠಲನ
ಕಡೆ ಹಾಯಿಸುವ ಭಾರ ನಿನ್ನದಕೆ ನಾನು ।।೩।।

Monday, April 7, 2014

ಸರ್ವರಿಗೂ ಶ್ರೀ ರಾಮನವಮಿಯ ಶುಭಾಶಯಗಳು





 ಜಯತು ಕೋದಂಡರಾಮ ಜಯತು ದಶರಥರಾಮ
ಜಯತು ಸೀತಾರಾಮ ಜಯತು ರಘುರಾಮ ಜಯತು ಜಯತು|ಪ|

ತಮದೈತ್ಯನನು ಮಡುಹಿ ಮಂದರಾಚಲ ನೆಗಹಿ
ಪ್ರೀತಿಯಿಂದಲಿ ತಂದು ಸಕಲ ಭೂತಳವ
ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ
ಭೀತಿಯನು ಬಿಡಿಸಿ ನೆರೆಕಾಯ್ದ ರಘುರಾಮ ||

ಬಲಿಯೊಳ್ ದಾನವ ಮಾಡಿ ನೆಲನ ಈರಡಿ ಮಾಡಿ
ಛಲದಿಂದ ಕ್ಷತ್ರಿಯರ ಕುಲವ ಹೋಗಾಡಿ
ಲಲನೆಗೋಸುಗ ಬಂದ ನೆವದಿಂದ ರಾವಣನ
ತಲೆಗಳನು ಚೆಂಡಾದಿ ಮೆರೆದ ರಘುರಾಮ||

ವಸುದೇವಸುತನೆನಿಸಿ ವನಿತೆಯರ ವ್ರತಗೆಡಿಸಿ
ಎಸೆವ ತುರಗವನೇರಿ ಮಲ್ಲರನು ಸವರಿ
ವಸುಧೆಯೊಳು ಪುರಂದರವಿಠಲ ನೀ ಪಾಲಿಸೈ
ಬಿಸಜಾಕ್ಷಯೋಧ್ಯಪುರವಾಸ ರಘುರಾಮ ||

Wednesday, April 2, 2014

ಶ್ರೀ ಭೂತರಾಜ ಸ್ತೋತ್ರಂ

ಶ್ರೀ ಹಯಗ್ರೀವಾಯ ನಮಃ ।। ಶ್ರೀ ವಾದಿರಾಜಾಯ ನಮಃ ।।

ಪ್ರಸಾದಾರ್ಥಂ ಸದಾ ನಾರಾಯಣಭೂತಾಖ್ಯಮಾದರಾತ್
ವಾದಿರಾಜಗುರೋರ್ದೂತಂ ಭೂತರಾಜಂ ನತೋಸ್ಮ್ಯಹಂ ।।।।

ಸ್ಮರತಾಂ ನಿಯಮೇನೈವ ಭೂತಭೀತ್ಯಾದಿಭಂಜನಂ
ವಾದಿರಾಜಗುರೋರ್ದೂತಂ ಭೂತರಾಜಂ ನತೋಸ್ಮ್ಯಹಂ ।।।।

ಗುರೋರ್ದಕ್ಷಿಣಭಾಗಸ್ಥಂ ಭಜತಾಂ ಭದ್ರದಂ ದ್ರುತಂ
ವಾದಿರಾಜಗುರೋರ್ದೂತಂ ಭೂತರಾಜಂ ನತೋಸ್ಮ್ಯಹಂ ।।।।

ಭೃತ್ಯೈ: ಕರ್ಣವಿಕರ್ಣಾಖ್ಯೈರ್ಯುಕ್ತಂ ಭೂತಗಣೈಸ್ಸದಾ
ವಾದಿರಾಜಗುರೋರ್ದೂತಂ ಭೂತರಾಜಂ ನತೋಸ್ಮ್ಯಹಂ ।।।।

ಕ್ರೂರಂ ವೀರಂ ತಥಾ ಶೂರಂ ಧನುಷ್ಖಡ್ಗಾದಿಧಾರಣಂ
ವಾದಿರಾಜಗುರೋರ್ದೂತಂ ಭೂತರಾಜಂ ನತೋಸ್ಮ್ಯಹಂ ।।।।

ಪ್ರತಾಪವಂತಂ ವೀರಾಗ್ರ್ಯಂ ವೀರಭದ್ರೋಪಮಂ ಹೃದ
ವಾದಿರಾಜಗುರೋರ್ದೂತಂ ಭೂತರಾಜಂ ನತೋಸ್ಮ್ಯಹಂ ।।।।

ರಾಜಸೇವಾರತಂ ಲೋಕೇ ರಾಜಮಾನ್ಯಂ ರವಿಪ್ರಭಂ
ವಾದಿರಾಜಗುರೋರ್ದೂತಂ ಭೂತರಾಜಂ ನತೋಸ್ಮ್ಯಹಂ ।।।।

ರಕ್ತಾಂಬರಧರ೦ ರಮ್ಯಪುಷ್ಪಮಾಲಾಸುಶೋಭಿತಂ
ವಾದಿರಾಜಗುರೋರ್ದೂತಂ ಭೂತರಾಜಂ ನತೋಸ್ಮ್ಯಹಂ ।।।।

ರತ್ನೌಘವಲಯೋಪೇತಂ ಮುಕ್ತಾಹಾರವಿಭೂಷಿತಂ
ವಾದಿರಾಜಗುರೋರ್ದೂತಂ ಭೂತರಾಜಂ ನತೋಸ್ಮ್ಯಹಂ ।।।।

ಅರ್ಕಾಭಾಂಗದಸಂಯುಕ್ತಂ ರತ್ನಕುಂಡಲಮಂಡಿತಂ
ವಾದಿರಾಜಗುರೋರ್ದೂತಂ ಭೂತರಾಜಂ ನತೋಸ್ಮ್ಯಹಂ ।।೧೦।।

ಉತ್ತುಂಗತುರಗಾರೂಢಂ ಛತ್ರಚಾಮರಸೇವಿತಂ
ವಾದಿರಾಜಗುರೋರ್ದೂತಂ ಭೂತರಾಜಂ ನತೋಸ್ಮ್ಯಹಂ ।।೧೧।।