Friday, January 24, 2014

ನಿಂದಾಸ್ತುತಿಗಳ ತಾಳಲು ಬೇಕು

ನಿಂದಾಸ್ತುತಿಗಳ ತಾಳಲು ಬೇಕು
ತಂದೆ ಪುರಂದರವಿಠಲನ ನೆನೆಯಬೇಕು ।।

ಆರಿಗಾರಾರುವರೋ ಆಪತ್ತು ಕಾಲಕ್ಕೆ
ಆರಿಗಾರೊದಗುವರೊ ಸಂಪತ್ತು ಕಾಲಕ್ಕೆ ।।

ಆರಿಂದ ಬಪ್ಪುವುದು ಆರಿಂದ ತಪ್ಪುವುದು
ಆರಿಸಿನೋಡುವುದು ಇದರ ಕಾರಣವ ।।

ಇದಕಾರು ವಾರಣ್ದಲಿ ನೋಡಿ
ಆರೋಪಿಸಲು ಎಲ್ಲ ಭಾರ ಅವಗೆ ।।

ಕಾರುಣ್ಯಮೂರುತಿ ಗೋಪಾಲವಿಠಲ
ರೀತಿ ಅರಿದವಗೆ ಇಲ್ಲೇ ಪೊರೆವ ।।

ರುದ್ರಾಂತರ್ಗತ ನಾರಸಿಂಹ ಪಾಹಿ

ರಾಗ : ಮಧ್ಯಮಾವತಿ
ತಾಳ : ಆಟತಾಳ

ರುದ್ರಾಂತರ್ಗತ ನಾರಸಿಂಹ ಪಾಹಿ

ರುದ್ರಾಂತರ್ಗತ ನಾರಸಿಂಹ ಪಾಹಿ
ಭದ್ರಮೂರುತಿ ನಿರ್ಗತಾಂಹ್ವ

ಹೃದ್ರೋಗಕಳೆದು ಜ್ಞಾನಾರ್ದ್ರಸ್ವಾಂತನ ಮಾಡು
ಪದ್ರಸಾಮಗಘ ಸಮುದ್ರ ದಾಟಿಸಿ ಬೇಗ

ಏಸೇಸು ಕಲ್ಪಗಳಲ್ಲಿ ನಿನ್ನ ದಾಸನಾನೆಂಬುದ ಬಲ್ಲಿ
ಈಶ ನೀನೆಂಬುದು ಲೇಶವರಿಯೆ
ಕ್ಲೇಶನಾಶನ ಪ್ರಭುವೆ ವಾರಾರಿಜೆವಲ್ಲಭ
ವಾಸವಾನುಜ ವನಧಿಶಯನ ಮಹೇಶವಂದಿತವರದ
ಹೇ ಕರುಣಾ ಸಮುದ್ರ ಕರಾಳವದನನೆ
ನೀ ಸಲಹದಿರೆ ಕಾಣೆ ಕಾವರ ।। ।।

ಹೇಮಕಶ್ಯಪು ತನ್ನ ಸುತನ ನೋಯಿಸೆ
ಶ್ರೀಮನೋಹರನೆ ಆನತನ್ನ ವ್ಯೋಮ ಪರ್ವತ
ಅಂಬುಧಿಧಾಮದೊಳುಳುಹಿ ಭೂಮಮುನಿಗಣ
ಸ್ತೋಮವಂದಿತಪಾದ ಸಾಮಜೇಂದ್ರನ ಸರಸಿಯೊಳು
ಸುತ್ರಾಮನಂದನನಾ ರಣದಿ ಕುರು ಭೂಮಿಪತಿ
ಸಭೆಯೊಳಗೆ ದ್ರೌಪದಿಯ ಮಹಾತ್ಮರ ಕಾಯ್ದ ಕರುಣಿ ।। ।।

ವೇದಗಮ್ಯ ವೇದವ್ಯಾಸ ಕಪಿಲ ಯಾದವೇಶ ಮಹಿದಾಸ
ಶ್ರೀದ ಶ್ರೀಷ ಅನ್ನಾದಿ ವಿಶ್ವಧನ್ವಂತ್ರಿ
ಮೇಧಾವಿಪತಿ ವಾಮನಾದಿರೂಪಕ ವಿಷ್ಣು
ಕಾದುಕೊ ನೀನವರ ಮನದ ವಿಷಾದ
ರೋಗಂಗಳನು ಅಳಿದು ಮಹದಾದಿದೇವ
ಜಗನ್ನಾಥವಿಠಲ ಆದರದಿ ಪ್ರಹ್ಲಾದ ವರದ ।। ।।

Tuesday, January 21, 2014

ದಾಸನ ಮಾಡಿಕೋ ಎನ್ನ

ದಾಸನ ಮಾಡಿಕೋ ಎನ್ನ ಸ್ವಾಮಿ
ಸಾಸಿರ ನಾಮದ ವೆಂಕಟ ರಮಣಾ ।।

ದುರ್ಬುದ್ಧಿಗಳನ್ನೆಲ್ಲ ಬಿಡಿಸೋ
ನಿನ್ನ ಕರುಣ ಕವಚವೆನ್ನ ಹರಣಕ್ಕೆ ತೊಡಿಸೋ
ಚರಣ ಸೇವೆ ಎನಗೆ ಕೊಡಿಸೋ
ಅಭಯಕರ ಪುಷ್ಪವೆನ್ನಯ ಶಿರದಲಿ ಮೂಡಿಸೋ ।।೧।।

ದೃಢ ಭಕ್ತಿ ನಿನ್ನಲ್ಲಿ ಬೇಡಿ ನಾ
ನಡಿಗೆರಗುವೆನಯ್ಯಾ ಅನುದಿನ ಪಾಡಿ
ಕಡೆಗಣ್ಣಲೇಕೆನ್ನ ನೋಡಿಬಿಡುವೆ
ಕೊಡು ನಿನ್ನ ಧ್ಯಾನವ ಮನ ಶುಚಿಮಾಡಿ ।।೨।।

ಮೊರೆಹೊಕ್ಕವರ ಕಾವ ಬಿರುದು
ಎನ್ನ ಮರೆಯದೆ ರಕ್ಷಣೆಮಾಡಯ್ಯ ಪೊರೆದು
ದುರಿತಗಳೆಲ್ಲವ ತರಿದು
ಸಿರಿ ಪುರಂದರವಿಠಲ ಎನ್ನನು ಪೊರೆದು ।।೩।।