Friday, July 19, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೩




ವೈದಿಕ ಮತದಲಿ ನಡೆದೆವೆಂದು ತಾವು
ವೈಷ್ಣವವಂಬಿಟ್ಟು ಕೊಟ್ಟರು ಕೆಲವರು
ವೈಷ್ಣವ ಮತದಲಿ ನಡೆವೆವೆಂದು
ವೈದಿಕವಂ ಬಿಟ್ಟುಕೊಟ್ಟರು ಕೆಲವರು
ವೈದಿಕ ವೈಷ್ಣವ ಒಂದೇ ಎಂದು ಮಧ್ವಮುನಿ
ಪ್ರತಿಪಾದಿಸಿದ ಪುರಂದರ ವಿಠಲ ಮೆಚ್ಚ॥

Thursday, July 18, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೨




ಒಬ್ಬ ಆಚಾರ್ಯನು ದೈವವೇ ಇಲ್ಲವೆಂಬ
ಒಬ್ಬ ಆಚಾರ್ಯನು ದೈವಕೆ ಎಂಟು ಗುಣವೆಂಬ
ಒಬ್ಬ ಆಚಾರ್ಯನು ನಿರ್ಗುಣ ನಿರಾಕಾರ ನಿರೂಹನೆಂದು - ತಾನೆ ದೈವವೆಂಬ
ಇವರಿಬ್ಬರೂ ವೇದಾರ್ಥವರಿತೂ ಅರಿಯರು
ಇವರಿಬ್ಬರೂ ಶಾಸ್ತ್ರಾರ್ಥವರಿತೂ ಅರಿಯರು
ಒಬ್ಬ ಮಧ್ವಾಚಾರ್ಯರೆ ಪುರಂದರ ವಿಠಲನೊಬ್ಬನೇ
ಎಂದು ತೋರಿ ಕೊಟ್ಟವರಾಗಿ॥

Wednesday, July 17, 2013

ಮುಖ್ಯಪ್ರಾಣದೇವರ ಉಗಾಭೋಗಗಳು ಮತ್ತು ಸುಳಾದಿಗಳು - ೧


ಹನುಮಾವತಾರಕೆ ಕಾಲಯಮ ಎನಿಸಿದಾ
ಮಣಿಮಾನ ಸುರನಾದಾ ಭೀಮಾವತಾರಕ್ಕೆ
ಮುನಿ ಮಧ್ವರಾಯನಾಗೆ ಬಣುಗು ಸಂಕರನಾದಾ
ಜನಿಸಿದನು ವೈರವನು ಜನುಮ ಮೂರರಲ್ಲಿ ಬಿಡದೆ
ಅನಿಲದೇವನ ಕೂಡ ಶೆಣೆಸಿ ಸಂಕಟ ಬಟ್ಟು
ಅನುವ ಕಾಣದಲೆ ತಮಸೀನಲ್ಲೀಗ ಬಳಲುತಿಪ್ಪಾ
ಫಣನಾಮ ವಿಜಯವಿಠಲ ಹನುಮಂತ ಮತದಂತೆ
ಮನುಜೋತ್ತಮ ಕಡೆ ಮೊದಲು ಮನದಂತೆ ಫಲವೀವಾ॥

Tuesday, June 25, 2013

ಶ್ರೀಪಾದರಾಜರ ಆರಾಧನೆ - ೨೦೧೩





























ಕೃಪೆ: sripadarajamutt.org
http://www.sripadarajamutt.org/gallery/index.php/Sri-Sripadarajaraja-Aradhane-2013