Wednesday, April 18, 2012

ಪೃಥೆ

ಶೂರಸೇನ ರಾಜ ತನಗೆ ಮಗಳಾಗಿ ಹುಟ್ಟಿದ ಪೃಥೆಯನ್ನು ಕುಂತಿಭೋಜರಾಜನಿಗೆ ಮಕ್ಕಳಿಲ್ಲದ ಕಾರಣ ಅವನಿಗೆ ಕೊಟ್ಟಿದ್ದ. ಕುಂತಿಭೋಜರಾಜ ಪೃಥೆಯನ್ನು ಯಾವುದೇ ಲೋಪವಿಲ್ಲದೆ ಚೆನ್ನಾಗಿ ಸಾಕುತ್ತಿದ್ದನು. ಪೃಥೆ ಬಹಳ ರೂಪವಂತೆ, ಗುಣವಂತೆ, ಶೀಲವಂತೆ ಆಗಿದ್ದಳು. ಬಾಲ್ಯದಿಂದ ಕುಂತಿಭೋಜರಾಜನ ಮನೆಯಲ್ಲಿ ಬೆಳೆದಿದ್ದರಿಂದ ಪೃಥೆಗೆ ಕುಂತಿ ಎಂಬ ಹೆಸರು ಬಂದಿತು.

ಒಮ್ಮೆ ಕುಂತಿಭೋಜರಾಜನ ಮನೆಗೆ ದೂರ್ವಾಸ ಮುನಿಗಳು ಆಗಮಿಸಿ ಸ್ವಲ್ಪ ದಿವಸ ರಾಜಾಶ್ರಯದಲ್ಲಿ ಇರುತ್ತೇವೆಂದು ತಿಳಿಸಿದರು. ಆಗ ಕುಂತಿಭೋಜರಾಜ ನನ್ನದೊಂದು ನಿರ್ಬಂಧ ಇದೆ ಅದಕ್ಕೆ ಒಪ್ಪುವುದಾದರೆ ನೀವು ಖಂಡಿತ ಇರಬಹುದು. ಅದೇನೆಂದರೆ ನೀವು ಇರುವಷ್ಟು ದಿವಸ ನಿಮ್ಮ ಸೇವೆಗೆ ನನ್ನ ಸಾಕು ಮಗಳಾದ ಕುಂತಿಯನ್ನು ಬಿಡುತ್ತೇನೆ. ಅವಳು ಇನ್ನು ಚಿಕ್ಕು ಹುಡುಗಿ. ನೀವು ಮೊದಲೇ ಕೋಪಿಷ್ಟರು. ತಿಳಿದೋ ತಿಳಿಯದೆಯೋ ಆಕೆಯಿಂದ ಏನಾದರೂ ತಪ್ಪಾದರೆ ನೀವು ಆಕೆಗೆ ಶಪಿಸಬಾರದು. ಈ ನಿರ್ಬಂಧಕ್ಕೆ ಒಪ್ಪಿಗೆ ಇದ್ದರೆ ನೀವು ಇಲ್ಲಿ ತಂಗಬಹುದು. ಅದಕ್ಕೆ ದೂರ್ವಾಸರು ಸಮ್ಮತಿ ಸೂಸಿ ಕುಂತಿಭೋಜರಾಜನ ಮನೆಯಲ್ಲಿ ವಾಸಿಸುತ್ತಿದ್ದರು.

ಹದಿಮೂರು ವರ್ಷಗಳ ಕಾಲ ಕುಂತಿಭೋಜರಾಜನ ಮನೆಯಲ್ಲಿ ತಂಗಿದ್ದ ದೂರ್ವಾಸರಿಗೆ ಕುಂತಿದೇವಿ ಕಾಯಾ ವಾಚಾ ಮನಸಾ ತನ್ನ ಸೇವೆಯನ್ನು ಸಲ್ಲಿಸಿದಳು. ಕುಂತಿದೆವಿಯ ಸೇವೆಯಿಂದ ಪ್ರೀತರಾದ ದೂರ್ವಾಸ ಮುನಿಗಳು ಅಲ್ಲಿಂದ ಹೊರಡುವಾಗ ಕುಂತಿ ನಿನಗೊಂದು ಅಪೂರ್ವವಾದ ಮಂತ್ರವನ್ನು ಉಪದೇಶಿಸುತ್ತೇನೆ. ನಿನಗೇನಾದರೂ ಸಹಾಯ ಬೇಕಿದ್ದಲ್ಲಿ ಈ ಮಂತ್ರವನ್ನು ಪಠಿಸಿ ಯಾವ ದೇವತೆಯನ್ನು ಕರೆದರೂ ಅವರು ಕೂಡಲೇ ಪ್ರತ್ಯಕ್ಷರಾಗುತ್ತಾರೆ. ನಿನಗೇನೂ ವರ ಬೇಕೋ ಬೇಡಿಕೊಳ್ಳಬಹುದು ಎಂದು ಅಲ್ಲಿಂದ ಹೊರಟರು.

ಒಮ್ಮೆ ಕುಂತಿದೇವಿ ಋತುಮತಿಯಾಗಿದ್ದಳು. ಆಗ ಋತು ಸ್ನಾನ ಮಾಡಿ ಆಚೆ ಬಂದಾಗ ಅಂತರಿಕ್ಷದಲ್ಲಿ ಸೂರ್ಯನನ್ನು ಕಂಡು ಕುಂತಿದೇವಿಗೆ ಒಂದು ದುರ್ಬುದ್ಧಿ ಬಂದಿತು. ಹೇಗಿದ್ದರೂ ದೂರ್ವಾಸರು ಮಂತ್ರ ಉಪದೇಶ ಮಾಡಿದ್ದರೆ. ಯಾಕೆ ಒಮ್ಮೆ ಆ ಮಂತ್ರವನ್ನು ಪರೀಕ್ಷಿಸಬಾರದು ಎಂಬ ದುರ್ಬುದ್ಧಿ ಬಂದಿದ್ದೆ ತಡ ಮಂತ್ರವನ್ನು ಪಠಿಸಿ ಸೂರ್ಯದೇವನನ್ನು ಆಹ್ವಾನಿಸಿ ಬಿಟ್ಟಳು. ತಟ್ಟನೆ ಸೂರ್ಯದೇವ ಪ್ರತ್ಯಕ್ಷ ಆಗಿಬಿಟ್ಟ. ಕುಂತಿದೇವಿಗೆ ಇದರಿಂದ ಆಘಾತವಾಗಿ ನಾನು ಸುಮ್ಮನೆ ಪರೀಕ್ಷಿಸಲು ಕರೆದಿದ್ದು ದಯವಿಟ್ಟು ಹೊರಟು ಹೋಗು ಎಂದು ಕಳಕಳಿಯಿಂದ ಬೇಡಿಕೊಂಡಳು. ಎಷ್ಟು ಬೇಡಿದರೂ ಸೂರ್ಯದೇವ ಸುಮ್ಮನೆ ಹಿಂದಿರುಗಲು ಸಮ್ಮತಿಸದೆ ಕುಂತಿದೇವಿಯೊಂದಿಗೆ ಸೇರಿ ಗರ್ಭಧಾರಣೆ ಮಾಡಿ ಹೋಗಿಬಿಟ್ಟ. ಹೋಗುವ ಮುನ್ನ ಸೂರ್ಯದೇವ ಕುಂತಿಯನ್ನು ಕುರಿತು ಹೇಳುತ್ತಾನೆ. ಕುಂತಿ ನೀನು ನನ್ನನ್ನು ಆಹ್ವಾನ ಮಾಡಿದ್ದರಿಂದಲೇ ನಾನು ಬಂದಿದ್ದು. ನಿನ್ನ ಸ್ಥಿತಿ ನನಗೆ ಅರ್ಥವಾಗುತ್ತದೆ. ನಿನಗೊಂದು ವರ ಕೊಡುತ್ತೇನೆ. ಮುಂದೆ ಮತ್ತೆ ನಿನಗೆ ಕನ್ಯತ್ವ ಬರುತ್ತದೆ. ಆಗ ನೀನು ಯಾರನ್ನು ಬೇಕಾದರೂ ಮದುವೆ ಆಗಬಹುದು ಎಂದು ಹೇಳಿ ಹೋಗುತ್ತಾನೆ.

ಈ ಅನಿರೀಕ್ಷಿತ ಸಂಘಟನೆಯಿಂದ ಕುಂತಿದೇವಿ ಕಂಗಾಲಾಗಿ ಬಿಟ್ಟಳು. ಇನ್ನೂ ಮದುವೆ ಆಗಿಲ್ಲ ಆಗಲೇ ಗರ್ಭಧಾರಣೆ ಆಗಿ ಹೋಗಿದೆ ಎಂದು ಚಿಂತಿಸುತ್ತಾ ಕನ್ಯಾಂತಃಪುರದಲ್ಲೇ ಇದ್ದುಬಿಟ್ಟಳು. ಯಾರಿಗೂ ವಿಷಯ ತಿಳಿಯದೆ ಗುಟ್ಟಾಗಿ ಇಟ್ಟಿದ್ದಳು. ಕೊನೆಗೆ ಮಗು ಜನಿಸಿತು. ಹುಟ್ಟಿದ ಮಗು ಹೇಗಿತ್ತೆಂದರೆ ದಿವ್ಯ ವರ್ಚಸ್ಸು, ಕವಚ ಕುಂಡಲಗಳೊಂದಿಗೆ ಹುಟ್ಟಿದೆ. ಹುಟ್ಟಿದ ಮಗುವಿನ ಕಿವಿ ಬಹಳ ಸುಂದರವಾಗಿ ಕುಂಡಲದಿಂದ ಕಂಗೊಳಿಸುತ್ತಿದ್ದನ್ನ್ನು ನೋಡಿ ಮಗುವಿಗೆ ಕರ್ಣ ಎಂದು ಹೆಸರಿಟ್ಟಳು. ಕನ್ಯಾವಸ್ಥೆಯಲ್ಲಿ ಮಗು ಹುಟ್ಟಿದೆ, ಮುಂದೆ ಸಮಾಜದಲ್ಲಿ ತನ್ನ ಪರಿಸ್ಥಿತಿ ಏನೆಂದು ಚಿಂತಿಸಿ ಆ ಮಗುವನ್ನು ಒಂದು ಪೆಟ್ಟಿಗೆಯಲ್ಲಿ ಮಲಗಿಸಿ, ಜೊತೆಯಲ್ಲಿ ಆ ಪೆಟ್ಟಿಗೆ ತುಂಬುವಷ್ಟು ರತ್ನ, ವಜ್ರ, ವೈಡೂರ್ಯಗಳನ್ನೂ ಇಟ್ಟು ಅಶ್ವ ನದಿಯಲ್ಲಿ ತೇಲಿಬಿಟ್ಟಳು. ಆ ಪೆಟ್ಟಿಗೆ ನದಿಯಲ್ಲಿ ತೇಲಿಕೊಂಡು ತೇಲಿಕೊಂಡು ಶರ್ಮಣ್ವತಿ ನದಿಗೆ ಬಂದು ಸೇರಿತು. ಅಲ್ಲಿಂದ ಯಮುನಾ ನದಿಗೆ ಬಂದು ಅಲ್ಲಿಂದ ಗಂಗಾ ನದಿಗೆ ಬಂದು ಸೇರಿತು. ಗಂಗಾ ನದಿಯಲ್ಲಿ ತೇಲಿಕೊಂಡು ಬರುತ್ತಿದ್ದಾಗ ಅಧಿರಥ ಎಂಬ ಸೂತಪುತ್ರ ಆ ಪೆಟ್ಟಿಗೆಯನ್ನು ತೆಗೆದು ನೋಡಿದಾಗ ಅದರಲ್ಲಿದ್ದ ಮಗು ಹಾಗೂ ಜೊತೆಯಲ್ಲಿದ್ದ ಐಶ್ವರ್ಯ ವನ್ನು ಕಂಡು ಆಶ್ಚರ್ಯ ಚಕಿತನಾಗಿ ಮನೆಗೆ ತೆಗೆದುಕೊಂಡು ಹೋಗಿ ತನ್ನ ಪತ್ನಿಯಾದ ರಾಧೆಗೆ ಅದನ್ನು ಕೊಟ್ಟು ಮಗುವಿಗೆ ವಸುಶೇಣ ಎಂದು ನಾಮಕರಣ ಮಾಡಿ ಸಾಕುತ್ತಿದ್ದರು.

ನಂತರದಲ್ಲಿ ಕುಂತಿದೇವಿ ಪಾಂಡುರಾಜನನ್ನು ವಿವಾಹವಾಗಿ ಚಿರಕಾಲ ರಮಿಸುತ್ತಿದ್ದರು. ಕೆಲಕಾಲದ ನಂತರ ಪಾಂಡುರಾಜ ಮಾದ್ರಿ ಎಂಬ ಇನ್ನೊಬ್ಬಳನ್ನು ವಿವಾಹ ಮಾಡಿಕೊಂಡನು. ಒಮ್ಮೆ ಪಾಂಡು ರಾಜ ತನ್ನ ಇಬ್ಬರು ಪತ್ನಿಯರೊಡನೆ ಹಿಮಾಲಯದಲ್ಲಿರುವ ಬದರಿಕಾಶ್ರಮಕ್ಕೆ ಬಂದು ವಾಸ ಮಾಡುತ್ತಿದ್ದನು.

ಹೀಗೆ ಸಾಗಿರಲು ಒಮ್ಮೆ ಪಾಂಡುರಾಜ ಬೇಟೆ ಆಡಲು ಹೋಗಿದ್ದಾಗ ಒಂದು ಗಂಡು ಜಿಂಕೆ ಮತ್ತೊಂದು ಹೆಣ್ಣು ಜಿಂಕೆಯ ಜೊತೆ ಸರಸದಲ್ಲಿದ್ದಾಗ ಆ ಗಂಡು ಜಿಂಕೆಗೆ ಬಾಣ ಬಿಟ್ಟ. ಆದರೆ ಅದು ಬರೀ ಜಿಂಕೆ ಆಗಿರದೆ ಕಿಂದಮ ಎಂಬ ಋಷಿಗಳು ಆಗಿದ್ದರು. ಕ್ರೋಧಗೊಂಡ ಋಷಿಗಳು ನೀನು ಸಹ ನಿನ್ನ ಹೆಂಡತಿಯ ಜೊತೆ ಸಂಪರ್ಕ ಮಾಡಿದರೆ ಕೂಡಲೇ ನಿನಗೆ ಸಾವಾಗಲಿ ಎಂದು ಶಾಪ ಕೊಟ್ಟು ಬಿಟ್ಟರು. ಇದರಿಂದ ನೊಂದ ಪಾಂಡು ರಾಜ ಮಡದಿಯರೊಡನೆ ನಾನು ಇನ್ನು ಮುಂದೆ ಸನ್ಯಾಸಿ ಆಗಿಬಿಡುತ್ತೇನೆ ಎಂದಾಗ ಮಡದಿಯರು ಒಪ್ಪದೇ ನೀವು ಹೀಗೆ ಇಲ್ಲೇ ನಮ್ಮೊಡನೆ ಇರಬೇಕು ಎಂದು ಕೇಳಿಕೊಂಡಾಗ ಒಪ್ಪಿ ಅಲ್ಲೇ ಬದರಿಕಾಶ್ರಮದ ಸಮೀಪ ಇರುವ ಪಾಂಡು ಕೇಶ್ವರಕ್ಕೆ ಬಂದು ನೆಲೆಸಿದ್ದಾನೆ.

ಕಾಲ ಕಳೆದಂತೆ ಪಾಂಡು ರಾಜನಿಗೆ ಮಕ್ಕಳು ಬೇಕು ಅನಿಸಿತು. ಪಾಂಡು ರಾಜನೇ ಕುಂತಿಯನ್ನು ಕುರಿತು ನೀನು ನಿಯೋಗ ಪದ್ಧತಿಯಿಂದ ಸಂತಾನ ಪಡಿ ಎಂದು ಸಲಹೆ ಕೊಟ್ಟು ನನಗಿಂತ ಉತ್ತಮರಾದವರಿಂದ ನಿಯೋಗ ಪದ್ಧತಿಯಿಂದ ಸಂತಾನ ಪಡಿ ಎಂದನು. ಅದಕ್ಕೆ ಕುಂತಿ ದೇವಿ ನನಗೆ ಸಂತಾನ ಇಲ್ಲದಿದ್ದರೂ ಪರವಾಗಿಲ್ಲ. ಆದರೆ ಈ ರೀತಿಯಲ್ಲಿ ಮಾತ್ರ ನನಗೆ ಸಂತಾನ ಬೇಡ ಎಂದಳು. ಆದರೂ ಪಟ್ಟು ಬಿಡದ ಪಾಂಡು ರಾಜ ಇಲ್ಲ ಇದರಿಂದ ನನಗೇನೂ ಮನ ನೋಯುವುದಿಲ್ಲ ಎಂದಾಗ ಕುಂತಿ ತನ್ನ ವೃತ್ತಾಂತವನ್ನು ತಿಳಿಸುತ್ತಾಳೆ. ಹಿಂದೆ ದೂರ್ವಾಸ ಮುನಿಗಳು ತನಗೆ ಕೊಟ್ಟ ವರದ ಬಗ್ಗೆ ತಿಳಿಸಿದಾಗ ಪಾಂಡು ರಾಜ ಬಹಳ ಸಂತೋಷದಿಂದ ಹಾಗಿದ್ದರೆ ಈಗಲೇ ದೇವತೆಯನ್ನು ಕರೆ ಎಂದು ಹೇಳಿದ.

ಪತಿಯ ಮಾತನ್ನು ಮೀರಬಾರದೆಂದು ಕುಂತಿ ದೇವಿ ಯಾವ ದೇವರನ್ನು ಕರೆಯಲಿ ಎಂದು ಅವನನ್ನೇ ಕೇಳಿದಳು.ನಮ್ಮ ರಾಜ್ಯದ ರಕ್ಷಣೆ ಮಾಡಬೇಕು. ರಾಜ ಆಗಬೇಕೆಂದರೆ ಅವನು ಬಹಳ ಧರ್ಮಿಷ್ಠನಾಗಿರಬೇಕು. ಆದ್ದರಿಂದ ಯಮಧರ್ಮನನ್ನು ಆಹ್ವಾನ ಮಾಡು ಅವನಿಂದ ಒಳ್ಳೆ ಧರ್ಮಿಷ್ಠನಾದ ಮಗ ಹುಟ್ಟಲಿ ಎಂದ. ಕೂಡಲೇ ಕುಂತಿ ಮಂತ್ರವನ್ನು ಪಠಿಸಿ ಯಮದೇವನನ್ನು ಆಹ್ವಾನಿಸಿದಾಗ ಯಮಧರ್ಮರಾಯ ಬಂದು ತಾನೇ ಒಂದು ಅಂಶದಲ್ಲಿ ಇದ್ದ ಮಗುವನ್ನು ಕರುಣಿಸಿದನು. ಆ ಮಗುವಿಗೆ ಯುಧಿಷ್ಠಿರ ಎಂದು ನಾಮಕರಣ ಮಾಡಿದಳು.

ಕೆಲದಿನಗಳ ನಂತರ ಪಾಂಡುರಾಜನಿಗೆ ಇನ್ನೊಂದು ಮಗು ಬೇಕು ಎನಿಸಿ ಕುಂತಿಯ ಬಳಿ ತನ್ನ ಮನದಿಂಗಿತವನ್ನು ತಿಳಿಸಿದನು. ಈ ಬಾರಿ ಬಲಿಷ್ಟನಾದ ಮಗ ಒಬ್ಬ ಬೇಕು. ಬರೀ ಧರ್ಮದಿಂದ ರಾಷ್ಟ್ರ ರಕ್ಷಣೆ ಆಗುವುದಿಲ್ಲ. ಆದ್ದರಿಂದ ಜ್ಞಾನ ಬಲ ಹಾಗೂ ಬಾಹು ಬಲ ಎರಡೂ ಆದ ಒಬ್ಬ ಮಗ ಬೇಕು. ಆದ್ದರಿಂದ ವಾಯುದೇವರನ್ನು ಕರೆಯಿರಿ ಎಂದು ಹೇಳಿದ. ಕುಂತಿ ಅವನ ಆಜ್ಞೆಯಂತೆ ವಾಯುದೇವರನ್ನು ಆಹ್ವಾನ ಮಾಡಿದಳು. ಕೂಡಲೇ ವಾಯುದೇವರು ಪ್ರತ್ಯಕ್ಷವಾಗಿ ತಮ್ಮ ಅಂಶದಿಂದ ಕೂಡಿದ ಮಗುವನ್ನು ಕರುಣಿಸಿದರು. ಹಾಗೆ ಹುಟ್ಟಿದ ಮಗುವಿಗೆ ಭೀಮಸೇನ ಎಂದು ನಾಮಕರಣ ಮಾಡಿದರು. ಭೀಮಸೇನ ದೇವರು ಹುಟ್ಟಿದ ಕೂಡಲೇ ಅಸುರರೆಲ್ಲ ರಕ್ತವಾಂತಿ ಮಾಡಿಕೊಂಡು ಅಸುನೀಗಿದರು. ಹತ್ತು ದಿನದ ನಂತರ ಕುಂತಿದೇವಿ ಭೀಮಸೇನನನ್ನು ಎತ್ತಿಕೊಂಡು ಒಂದು ಪರ್ವತಕ್ಕೆ ಹೋಗಿದ್ದಾಗ ಹುಲಿಯೊಂದು ಘರ್ಜನೆ ಮಾಡಿತು. ಅದರಿಂದ ಭಯಭೀತಳಾದ ಕುಂತಿ ಕೈಯಿಂದ ಭೀಮನನ್ನು ಬಿಟ್ಟು ಬಿಟ್ಟಳು. ಭೀಮ ಬಿದ್ದ ರಭಸಕ್ಕೆ ಆ ಪರ್ವತವೆ ಪುಡಿ ಪುಡಿಯಾಗಿ ಹೋಯಿತು. ಆ ಪರ್ವತ ಶತಶ್ರುಂಗ (ನೂರು ಪರ್ವತಗಳ ಸಮೂಹ) ಪರ್ವತದ ಒಂದು ಪರ್ವತ.

ಮತ್ತೊಮ್ಮೆ ಪಾಂಡು ರಾಜ ಕುಂತಿಯ ಬಳಿ ಬಂದು ನನಗೆ ಇನ್ನೊಬ್ಬ ಮಗ ಬೇಕು ಆದ್ದರಿಂದ ಮತ್ತೊಬ್ಬ ದೇವತೆಯನ್ನು ಕರಿ ಎಂದ. ಧರ್ಮಿಷ್ಠ ಒಬ್ಬ ಪರಾಕ್ರಮಿ ಒಬ್ಬ ಹುಟ್ಟಿದ್ದಾನಲ್ಲ ಮತ್ತೆ ಯಾಕೆ ಎಂದು ಕೇಳಿದಾಗ ಒಬ್ಬ ಪರಾಕ್ರಮಿ ಆಚೆ ಶತ್ರುಗಳ ಜೊತೆ ಹೋರಾಡಲು ಹೋದಾಗ ಇಲ್ಲಿ ರಕ್ಷಣೆ ಮಾಡಲು ಇನ್ನೊಬ್ಬ ಇರಬೇಕು ಆದ್ದರಿಂದ ಇನ್ನೊಬ್ಬ ಪರಾಕ್ರಮಿಯನ್ನು ಪಡೆಯಬೇಕು ಎಂದು ಹೇಳಿದ್ದಕ್ಕೆ ಕುಂತಿ ಈ ಬಾರಿ ಇಂದ್ರ ದೇವರನ್ನು ಆಹ್ವಾನ ಮಾಡಿದಳು. ಇಂದ್ರನ ಅಂಶದಿಂದ ಹುಟ್ಟಿದ ಮಗನೆ ಅರ್ಜುನ.

ಇಷ್ಟಾದರೂ ಪಾಂಡು ರಾಜ ಸುಮ್ಮನಿರದೆ ಮತ್ತೊಮ್ಮೆ ಕುಂತಿಯನ್ನು ಕುರಿತು ಹೇಳುತ್ತಿದ್ದಾನೆ. ಕುಂತಿ ಒಬ್ಬ ಧರ್ಮಿಷ್ಠ ಹಾಗೂ ಇಬ್ಬರೂ ಪರಾಕ್ರಮಿಗಳು ಹುಟ್ಟಿದರು. ಈಗ ಒಬ್ಬ ಸ್ಫುರದ್ರೂಪಿ ಮಗ ಹುಟ್ಟಬೇಕು. ಮತ್ತೊಮ್ಮೆ ಇನ್ನೊಬ್ಬ ದೇವರನ್ನು ಕರೆ ಎಂದನು. ಆಗ ಕುಂತಿ ದೇವಿ ನಿರಾಕರಿಸಿದಳು. ರಾಜ್ಯ ರಕ್ಷಣೆಗೆ ಧರ್ಮಿಷ್ಠ, ಪರಾಕ್ರಮಿಗಳು ಹುಟ್ಟಿದ್ದಾರೆ. ಅಷ್ಟು ಸಾಕು ಆದರೆ ರಾಜ್ಯ ರಕ್ಷಣೆಗೆ ಸ್ಫುರದ್ರೂಪಿ ಯಾಕೆ ಬೇಕು. ಆದ್ದರಿಂದ ಈ ಬಾರಿ ನಾನು ಒಪ್ಪುವುದಿಲ್ಲ. ಮೂರು ಬಾರಿ ನಿಯೋಗ ಪದ್ಧತಿಯಲ್ಲಿ ಮಕ್ಕಳನ್ನು ಪಡೆದಿದ್ದೇನೆ. ಮತ್ತೆ ನಾನು ಆ ರೀತಿ ಮಾಡಿದರೆ ಅದು ಧರ್ಮ ಆಗುವುದಿಲ್ಲ ವ್ಯಭಿಚಾರ ಆಗುತ್ತದೆ. ಆದ್ದರಿಂದ ಇನ್ನು ಸಾಕು ಎಂದು ಹೇಳಿದಳು. ಕುಂತಿದೇವಿ ಹೇಳಿದ್ದು ಸರಿ ಎನಿಸಿ ಪಾಂಡು ರಾಜ ಸುಮ್ಮನಾದ.

ಇತ್ತ ಮಾದ್ರಿಗೂ ಮಕ್ಕಳು ಬೇಕು ಎನಿಸಿ ಪಾಂಡು ರಾಜನಲ್ಲಿ ತನ್ನ ಕೋರಿಕೆಯನ್ನು ತಿಳಿಸಿದಳು. ಕುಂತಿಗೆ ಮೂರು ಮಕ್ಕಳಾಗಿದ್ದಾರೆ ನನಗೆ ಒಬ್ಬರೂ ಬೇಡವೇ ಆದ್ದರಿಂದ ನೀವು ಕುಂತಿದೇವಿಯಲ್ಲಿ ಕೇಳಿ ಆ ಮಂತ್ರವನ್ನು ತನಗೆ ಉಪದೇಶ ಮಾಡಲು ಹೇಳಿ ನಾನು ನಿಯೋಗ ಪದ್ಧತಿಯಿಂದ ಮಕ್ಕಳನ್ನು ಪಡೆಯುತ್ತೇನೆ ಎಂದಳು. ಅದೇ ರೀತಿ ಪಾಂಡು ರಾಜ ಕುಂತಿದೇವಿಯಲ್ಲಿ ಬಂದು ವಿಷಯ ತಿಳಿಸಿದಾಗ ಕುಂತಿದೇವಿ ಅದಕ್ಕೆ ಸಮ್ಮತಿಸಿ ಮಾದ್ರಿಗೆ ಮಂತ್ರವನ್ನು ಉಪದೆಶಿಸುತ್ತೇನೆ. ಆದರೆ ಒಮ್ಮೆ ಮಾತ್ರ ಆ ಮಂತ್ರದಿಂದ ಫಲ ಪಡೆಯಬಹುದು ಅಷ್ಟೇ ಎಂದು ಹೇಳಿ ಮಾದ್ರಿಗೆ ಮಂತ್ರವನ್ನು ಉಪದೇಶಿಸುತ್ತಾಳೆ.

ಮಾದ್ರಿ ಯೋಚಿಸಲು ಶುರುಮಾಡಿದಳು, ಒಮ್ಮೆ ಮಾತ್ರ ಮಂತ್ರ ಪಠಿಸಲು ಸೂಚಿಸಿದ್ದಾಳೆ ಕುಂತಿ. ಮತ್ತೊಮ್ಮೆ ಮಂತ್ರದಿಂದ ಫಲವಾಗುವುದಿಲ್ಲ. ಆದರೆ ನನಗೆ ಎರಡು ಮಕ್ಕಳು ಬೇಕು ಎಂದು ದುರಾಲೋಚನೆ ಮಾಡಿ ಅಶ್ವಿನಿ ದೇವತೆಗಳಲ್ಲಿ ಅವಳಿ ದೇವತೆಗಳಿದ್ದಾರೆ. ಅವರಲ್ಲಿ ಯಾರೊಬ್ಬರನ್ನು ಕರೆದರೂ ಇಬ್ಬಿಬ್ಬರು ಬರುತ್ತಾರೆ ಆದ್ದರಿಂದ ಅವರನ್ನು ಕರೆಯೋಣ ಎಂದು ಅಶ್ವಿನಿ ದೇವತೆಗಳಲ್ಲಿ ಅವಳಿ ದೇವತೆಗಳಾದ ನಾಸತ್ಯ ಮತ್ತು ದಸ್ರ ಇಬ್ಬರಲ್ಲಿ ಒಬ್ಬರನ್ನು ಕರೆದಳು. ಕೂಡಲೇ ನಾಸತ್ಯ ಮತ್ತು ದಸ್ರ ಇಬ್ಬರೂ ಬಂದು ಫಲ ಕೊಟ್ಟರು. ಆಗ ಹುಟ್ಟಿದ ಅವಳಿ ಮಕ್ಕಳೇ ನಕುಲ ಸಹದೇವ

Thursday, April 12, 2012

ಮತ್ಸ್ಯ ಯಂತ್ರ



ಏಕಚಕ್ರಪುರದಿಂದ ಬ್ರಾಹ್ಮಣ ವೇಷದಲ್ಲಿ ಪಾಂಡವರು ದ್ರುಪದ ರಾಜನ ರಾಜ್ಯಕ್ಕೆ ದ್ರೌಪದಿಯ ಸ್ವಯಂವರ ದ ಸಲುವಾಗಿ ಹೊರಟಿದ್ದಾರೆ. ಜೊತೆಯಲ್ಲಿ ಇತರ ಬ್ರಾಹ್ಮಣರು ಹೊರಟಿದ್ದಾರೆ. ಅವರೆಲ್ಲರೂ ಪಾಂಡವರನ್ನು ಕುರಿತು ಸ್ವಯಂವರದಲ್ಲಿ ಒಳ್ಳೆಯ ಊಟದ ಸೌಕರ್ಯ ಇರುತ್ತದೆ. ಚೆನ್ನಾಗಿ ಊಟ ಮಾಡಿ ಎಂದು ಹೇಳುತ್ತಿದ್ದಾರೆ. ಪಾಂಡವರು ಒಳಗೊಳಗೇ ನಕ್ಕು ಸುಮ್ಮನೆ ತಲೆಯಾಡಿಸುತ್ತಾ ಸುಮ್ಮನೆ ನಡೆಯುತ್ತಿದ್ದಾರೆ. ಕೆಲ ಬ್ರಾಹ್ಮಣರು ಭೀಮನ ಪರಾಕ್ರಮ ಅರಿತಿದ್ದರಿಂದ ಅವರುಗಳು ದ್ರೌಪದಿಯು ಭೀಮನನ್ನು ಬಿಟ್ಟು ಇನ್ಯಾರಿಗೂ ಸಿಗುವುದಿಲ ಎಂದು ಮಾತನಾಡಿಕೊಳ್ಳುತ್ತಿದ್ದರು.

ಸ್ವಯಂವರದ ದಿನ ಬಹಳ ಹತ್ತಿರ ಇದ್ದದ್ದರಿಂದ ಹಗಲು ರಾತ್ರಿ ಎನ್ನದೆ ಪ್ರಯಾಣ ಮಾಡುತ್ತಿದ್ದಾರೆ. ನಡೆಯುತ್ತಾ ನಡೆಯುತ್ತಾ ಗಂಗಾ ನದಿ ದಂಡೆಗೆ ಬಂದಿದ್ದಾರೆ. ಗಂಗಾ ನದಿ ದಾಟಿ ಹೋದರೆ ದ್ರುಪದನ ರಾಜ್ಯ ಸಿಗುತ್ತಿತ್ತು. ರಾತ್ರಿಯಾದ್ದರಿಂದ ಎಲ್ಲರೂ ಅಲ್ಲೇ ಗಂಗೆ ದಂಡೆಯಲ್ಲಿ ಮಲಗಿದ್ದಾರೆ. ಪಾಂಡವರು ಮಾತ್ರ ನಾವು ಹೊರಡುತ್ತೇವೆ ಎಂದು ಹೊರಟಿದ್ದಾರೆ. ಮುಂದೆ ಅರ್ಜುನ ಕೊನೆಯಲ್ಲಿ ಭೀಮಸೇನ ಮಧ್ಯದಲ್ಲಿ ಕುಂತಿದೇವಿ ಹಾಗೂ ಉಳಿದ ಪಾಂಡವರು ನದಿಯನ್ನು ದಾಟುತ್ತಿದ್ದಾರೆ. ಅಂದು ಶುಕ್ಲ ಪಕ್ಷ ಅಷ್ಟಮಿ ದಿವಸ. ಚಂದ್ರ ಅಸ್ತಂಗತನಾಗಿ ಕತ್ತಲಾವರಿಸಿದೆ.ಅರ್ಧರಾತ್ರಿ ಆಗಿತ್ತು.

ಅದೇ ಸಮಯಕ್ಕೆ ಚಿತ್ರರತ ಎಂಬ ಗಂಧರ್ವ ತನ್ನ ಸಖಿಯರೊಡನೆ ಗಂಗಾ ನದಿಯಲ್ಲಿ ಜಲಕ್ರೀಡೆ ಆಡುತ್ತಿದ್ದಾನೆ.ಅರ್ಜುನ ಕೈಯಲ್ಲಿ ಕೊಳ್ಳಿಯ ದೀಪವನ್ನು ಹಿಡಿದು ಮುನ್ನಡೆಯುತ್ತಿದ್ದಾನೆ. ಪಾಂಡವರ ಆಗಮನದಿಂದ ಚಿತ್ರರತನಿಗೆ ವಿಘ್ನವಾದಂತಾಗಿ ಅವರ ಮೇಲೆ ಆಕ್ರಮಣ ಮಾಡಲು ಬರುತ್ತಿದ್ದಾನೆ. ಪಾಂಡವರು ಬ್ರಾಹ್ಮಣ ವೇಷದಲ್ಲಿದ್ದರೂ ಅವರು ಕ್ಷತ್ರಿಯರೆಂದು ಚಿತ್ರರತನಿಗೆ ಗೊತ್ತಾಯಿತು. ಅದೂ ಅಲ್ಲದೆ ಮಾನವರಿಗೆ ನಿಷಿದ್ಧವಾದ ಮಹಾ ನಿಷಿದ್ಧ ಕಾಲದಲ್ಲಿ ಬರುತ್ತಿದ್ದಾರೆ.(ಮಹಾ ನಿಷಿದ್ಧ ಕಾಲ ಎಂದರೆ ರಾತ್ರಿ ೧೧.೪೫ - ೧೨.೧೫) ಈ ಕಾಲದಲ್ಲಿ ಭೂತ ಪ್ರೇತಗಳು, ಗಂಧರ್ವರು ಸಂಚರಿಸುವ ಸಮಯ. ಈ ಸಮಯದಲ್ಲಿ ನೀವು ಬಂದು ನನಗೆ ವಿಘ್ನ ಉಂಟು ಮಾಡಿದ್ದೀರಾ ನಿಮ್ಮನ್ನು ಸಂಹರಿಸುತ್ತೇನೆ ಎಂದು ಆಕ್ರಮಣ ಮಾಡಲು ಬರುತ್ತಿದ್ದಾನೆ.

ಅರ್ಜುನನು ನಾವೆಲ್ಲರೂ ಅಸ್ತ್ರ ಜ್ಞಾನಿಗಳು ನಿನ್ನಿಂದ ನಮಗೇನು ಮಾಡಲು ಸಾಧ್ಯವಿಲ್ಲ. ನಿನ್ನ ಪ್ರಯತ್ನಗಳೆಲ್ಲ ವಿಫಲವಾಗುತ್ತದೆ ಎಂದು ಹೇಳಿದರೂ ಕೇಳದೆ ಬಾಣ ಪ್ರಯೋಗ ಮಾಡಲು ಮುಂದಾದ ಚಿತ್ರರತ. ಮುಂದಿದ್ದ ಅರ್ಜುನ ತನ್ನ ಕೈಯಲ್ಲಿದ್ದ ಕೊಳ್ಳಿಗೆ ಆಜ್ನೆಯಾಸ್ತ್ರವನ್ನು ಅಭಿಮಂತ್ರಿಸಿ ಅವನ ಮೇಲೆ ಬಿಸಾಡಿದಾಗ ಚಿತ್ರರತನ ರಥ ಸುಟ್ಟು ಅವನ ಮೈ ಸುಡಲು ಶುರುವಾಯಿತು. ಆಗ ಚಿತ್ರರತ ಅರ್ಜುನನಲ್ಲಿ ಕ್ಷಮೆ ಯಾಚಿಸಿದಾಗ ಅರ್ಜುನ ಅವನಿಗೆ ಕ್ಷಮೆ ನೀಡಿ ಕಳುಹಿಸುತ್ತಾರೆ. ಆಗ ಚಿತ್ರರತ ಹೇಳುತ್ತಾನೆ, ನಾನು ನಿಮ್ಮನ್ನು ಆಕ್ರಮಣ ಮಾಡಲು ಕಾರಣ ಏನೆಂದರೆ ನೀವೆಲ್ಲರೂ ಕ್ಷತ್ರಿಯರು. ಕ್ಷತ್ರಿಯರು ಯಾವಾಗಲೂ ಒಬ್ಬ ಬ್ರಾಹ್ಮಣನ ಜೊತೆ ಇಲ್ಲದೆ ಹೋಗಬಾರದು. ಹಾಗಾಗಿ ಮುಂದೆ ಪಾಂಚಾಲ ರಾಜ್ಯದಲ್ಲಿ ದೌಮ್ಯಾಚಾರ್ಯರು ಎಂಬ ಒಬ್ಬ ಬ್ರಾಹ್ಮಣರು ಇದ್ದಾರೆ ಅವರನ್ನು ಕರೆದುಕೊಂಡು ಹೋಗಿ ಎಂದು ಬೀಳ್ಕೊಟ್ಟನು.

ಗಂಗಾ ನದಿಯನ್ನು ದಾಟಿ ಪಾಂಡವರು ಚಿತ್ರರತನ ಸಲಹೆಯಂತೆ ದೌಮ್ಯಾಚಾರ್ಯರನ್ನು ಜೊತೆಗೂಡಿಕೊಂಡು ಸ್ವಯಂವರ ನಡೆಯುತ್ತಿದ್ದ ಜಾಗಕ್ಕೆ ಆಗಮಿಸಿದ್ದಾರೆ. ಪಾಂಚಾಲ ರಾಜ್ಯ ಎಲ್ಲೆಲ್ಲೂ ತಳಿರು ತೋರಣಗಳಿಂದ ಸಿಂಗರಿಸಿಕೊಂಡು ನವವಧುವಿನಂತೆ ಸಿದ್ಧವಾಗಿತ್ತು. ಅರಮನೆಯ ಮುಂಭಾಗದಲ್ಲಿ ಸ್ವಯಂವರಕ್ಕೆಂದು ಬೃಹದಾಕಾರದ ವೇದಿಕೆ ಸಿದ್ಧಗೊಂಡಿತ್ತು. ಸುತ್ತಲೂ ಬೇರೆ ಬೇರೆ ರಾಜ್ಯದ ರಾಜ ಮಹಾರಾಜರು ಕುಳಿತಿದ್ದಾರೆ. ಮತ್ತೊಂದೆಡೆ ಅಸಾಮಾನ್ಯ ಕ್ಷತ್ರಿಯರು ಕುಳಿತಿದ್ದಾರೆ. ಮತ್ತೊಂದೆಡೆ ದುರ್ಯೋಧನ, ಕರ್ಣ, ಶಲ್ಯ,ಶಿಶುಪಾಲ ಮುಂತಾದ ಪರಾಕ್ರಮಿಗಳು ಕುಳಿತಿದ್ದಾರೆ. ಇನ್ನೊಂದು ಬದಿಯಲ್ಲಿ ಸ್ವಯಂವರವನ್ನು ನೋಡಲೆಂದು ಬಂದಿದ್ದ ಬ್ರಾಹ್ಮಣರೂ ಕುಳಿತಿದ್ದಾರೆ. ಅರಗಿನ ಮನೆಯಲ್ಲಿ ಪಾಂಡವರೆಲ್ಲರೂ ಸತ್ತು ಹೋಗಿದ್ದಾರೆಂಬ ಭಾವನೆಯಲ್ಲೇ ದುರ್ಯೋಧನಾದಿಗಳು ಕುಳಿತಿದ್ದಾರೆ. ಶ್ರೀ ಕೃಷ್ಣನೂ ಆಗಮಿಸಿದ್ದಾನೆ.

ಅಲ್ಲಿಗೆ ಆಗಮಿಸಿದ ಬ್ರಾಹ್ಮಣ ವೇಷಧಾರಿಗಳಾದ ಪಾಂಡವರು ಹೋಗಿ ಬ್ರಾಹ್ಮಣರು ಕುಳಿತಿದ್ದ ಜಾಗದಲ್ಲಿ ಕುಳಿತುಕೊಂಡಿದ್ದಾರೆ. ದೃಷ್ಟದ್ಯುಮ್ನ ದ್ರೌಪದಿಯ ಕೈ ಹಿಡಿದುಕೊಂಡು ಬಂದು ವೇದಿಕೆಗೆ ಕರೆ ತಂದಿದ್ದಾನೆ. ದ್ರೌಪದಿಯ ಕೈಯಲ್ಲಿ ದ್ರುಪದ ರಾಜನು ಮಾಲೆಯನ್ನು ಕೊಟ್ಟಿದ್ದಾನೆ. ಆ ಮಾಲೆ ಯಾವುದೆಂದರೆ ಅಂಬೆಯು ಭೀಷ್ಮಾಚಾರ್ಯರನ್ನು ಮದುವೆ ಆಗಲೆಂದು ಕೇಳಿದಾಗ ಭೀಷ್ಮಾಚಾರ್ಯರು ನಾನು ಬ್ರಹ್ಮಚಾರಿ ಆದ್ದರಿಂದ ಮದುವೆ ಆಗಲಾರೆ ಎಂದು ಹೇಳಿ ಕಳುಹಿಸಿದ್ದರು. ಅದರಿಂದ ಸಿಟ್ಟಾದ ಅಂಬೆ ರುದ್ರ ದೇವರನ್ನು ಕುರಿತು ತಪಸ್ಸು ಮಾಡಿ ನಾನು ಭೀಷ್ಮರನ್ನು ಕೊಲ್ಲಬೇಕೆಂದು ವರ ಕೇಳಿದಾಗ ರುದ್ರ ದೇವರು ಪ್ರಸನ್ನರಾಗಿ ನಾನು ನಿನಗೆ ಒಂದು ಮಾಲೆಯನ್ನು ಕೊಡುತ್ತೇನೆ. ಯಾರು ಆ ಮಾಲೆಯನ್ನು ಧರಿಸುತ್ತಾರೋ ಅವರು ಭೀಷ್ಮರನ್ನು ಕೊಲ್ಲುತ್ತಾರೆ ಎಂದು ಹೇಳಿ ಮಾಲೆಯನ್ನು ಕೊಟ್ಟಿರುತ್ತಾರೆ. ಆ ಮಾಲೆಯನ್ನು ಧರಿಸಿದವರು ಭೀಷ್ಮರನ್ನು ಕೊಲ್ಲುವವರು ಆಗುತ್ತಾರೆ ಎಂದು ತಿಳಿದು ಯಾರೂ ಆ ಮಾಲೆಯನ್ನು ಧರಿಸಲು ಮುಂದೆ ಬರಲಿಲ್ಲ. ಕೊನೆಗೆ ಅಂಬೆ ಆ ಮಾಲೆಯನ್ನು ತೆಗೆದುಕೊಂಡು ಹೋಗಿ ದ್ರುಪದ ರಾಜನ ಮನೆಯ ಮುಂದೆ ಇಟ್ಟು ಹೋಗಿಬಿಡುತ್ತಾಳೆ. ದ್ರುಪದ ರಾಜ ಆ ಮಾಲೆಯನ್ನು ಹಾಗೆಯೇ ರಕ್ಷಣೆ ಮಾಡಿ ಇಟ್ಟಿರುತ್ತಾನೆ.

ದೃಷ್ಟದ್ಯುಮ್ನ ವೇದಿಕೆಯ ಮೇಲೆ ನಿಂತು ಘೋಷಣೆ ಮಾಡುತ್ತಿದ್ದಾನೆ. ವೇದಿಕೆಯ ಪಕ್ಕದಲ್ಲಿದ್ದ ಮರವೊಂದರ ಕೊಂಬೆಗೆ ಮತ್ಸ್ಯ ಯಂತ್ರವನ್ನು ತೂಗಿ ಹಾಕಿದ್ದಾರೆ. ಅದರ ಕೆಳಗೆ ಒಂದು ತೂತು ಇರುವ ಹಲಗೆಯನ್ನು ನೇತು ಹಾಕಿದ್ದರೆ. ಕೆಳಗೆ ಒಂದು ಪಾತ್ರೆಯಲ್ಲಿ ನೀರನ್ನು ಇಟ್ಟಿದ್ದಾರೆ. ಪಕ್ಕದಲ್ಲಿ ಐದು ಬಾಣಗಳು ಹಾಗೆ "ಕಿಂಧುರ" ಎಂಬ ಧನಸ್ಸು. ಆ ಧನಸ್ಸು ಯಾವುದೆಂದರೆ ರುದ್ರದೇವರು ಅದನ್ನು ದ್ರುಪದ ರಾಜನಿಗೆ ನೀಡಿದ್ದ ಧನಸ್ಸು. ಆ ಧನಸ್ಸನ್ನು ಸಾಮಾನ್ಯರು ಅಲುಗಾಡಿಸಲೂ ಸಾಧ್ಯವಾಗದು.

ಆ ಕೆಳಗಿರುವ ನೀರಿನ ಪಾತ್ರೆಯಲ್ಲಿ ನೋಡಿಕೊಂಡು ಮೇಲಿರುವ ಹಲಗೆಯಲ್ಲಿರುವ ರಂಧ್ರದ ಮೂಲಕ ಮತ್ಸ್ಯ ಯಂತ್ರದಲ್ಲಿರುವ ಮೀನಿನ ಪ್ರತಿಕೃತಿಗೆ ಬಾಣವನ್ನು ಹೂಡಿ ಯಾರು ಯಂತ್ರವನ್ನು ಭೇಧಿಸುತ್ತಾರೋ ಅವರಿಗೆ ದ್ರೌಪದಿಯನ್ನು ಕೊಟ್ಟು ವಿವಾಹ ಮಾಡುವುದಾಗಿ ಘೋಷಿಸಿದ್ದಾನೆ ದೃಷ್ಟದ್ಯುಮ್ನ. ಆ ಕಿಂಧುರ ಧನಸ್ಸಿನ ಹಗ್ಗವನ್ನು ಬಿಚ್ಚಿಟ್ಟಿದ್ದಾರೆ. ಆ ಹಗ್ಗವನ್ನು ಎಳೆದು ಕಟ್ಟಿ ಬಾಣ ಹೂಡಬೇಕು.

ಘೋಷಣೆ ಮುಗಿಯುತ್ತಿದ್ದಂತೆ ಹಲವಾರು ಜನ ಹುಮ್ಮಸ್ಸಿನಿಂದ ಮತ್ಸ್ಯ ಯಂತ್ರವನ್ನು ಭೇಧಿಸಲು ಮುಂದಾದರು. ಕೆಲವರು ಯಾವ ಹುಮ್ಮಸ್ಸಿನಿಂದ ಎದ್ದರೋ ಧನಸ್ಸಿನ ಬಳಿ ಬಂದು ಇದು ತಮ್ಮ ಯೋಗ್ಯತೆಗೆ ಅಸಾಧ್ಯವಾದುದೆಂದು ತಿಳಿದು ಹಾಗೆ ಹಿಂದಿರುಗಿದರು. ಮತ್ತೆ ಕೆಲವರು ಮುಟ್ಟಿ ಹಿಂದಿರುಗಿದರೆ ಮತ್ತೆ ಕೆಲವರು ಅಲ್ಲಾಡಿಸಿ ಹಿಂದಿರುಗಿದರು.

ನಂತರದಲ್ಲಿ ಬಂದಿದ್ದು ಶಿಶುಪಾಲ. ಶಿಶುಪಾಲ ಮಹಾ ಪರಾಕ್ರಮಿ ಧನಸ್ಸಿನ ಬಳಿ ಬಂದು ಧನಸ್ಸನ್ನು ಎತ್ತಿ ನಿಲ್ಲಿಸಿದ್ದಾನೆ. ಹಗ್ಗದಂತಿದ್ದ ಆ ಕಬ್ಬಿಣದ ತಂತಿಯನ್ನು ಎಳೆದು ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸಿ ಬಿಲ್ಲನ್ನು ಬಗ್ಗಿಸಿದ್ದಾನೆ. ಇನ್ನೇನು ಆ ಕೊಕ್ಕೆಗೆ ಒಂದು ಉದ್ದಿನ ಕಾಳಿನಷ್ಟು ಮಾತ್ರ ಜಾಗ ಇತ್ತು ಅಷ್ಟರಲ್ಲಿ ಶಿಶುಪಾಲನ ಮೈಯಲ್ಲಿದ್ದ ಶಕ್ತಿಯೆಲ್ಲಾ ಖಾಲಿ ಆಗಿ ಮೈಯೆಲ್ಲಾ ಬೆವರು ಕಿತ್ತುಕೊಂಡು ಬಿಲ್ಲನ್ನು ಬಿಟ್ಟುಬಿಟ್ಟ. ಮುಖಭಂಗ ಅನುಭವಿಸಿ ಹಿಂದಿರುಗಿದ ನಂತರ ಬಂದ ಶಲ್ಯ ರಾಜ ಬಿಲ್ಲನ್ನು ಎತ್ತಿ ನಿಲ್ಲಿಸಿ ತಂತಿಯನ್ನು ಎಳೆದು ಶಿಶುಪಾಲನಿಗಿಂತ ಕಮ್ಮಿ ಅಂತರಕ್ಕೆ ಬಗ್ಗಿಸಿ ನಂತರ ಸಾಧ್ಯವಾಗದೆ ಅವನೂ ಹಿಂತಿರುಗಿದ್ದಾನೆ. ಶಲ್ಯ ರಾಜ ಹಿಂತಿರುಗಿದಾಗ ನೆರೆದಿದ್ದವರಲ್ಲಿ ಶಲ್ಯ ರಾಜನಿಗೆ ಆಗದು ತಮಗೂ ಆಗುವುದಿಲ್ಲ ಎಂದು ಅಲ್ಲಿಂದಲೇ ಹಿಂತಿರುಗಿದರು.

ನಂತರದಲ್ಲಿ ಬಂದ ದುರಹಂಕಾರಿ ಜರಾಸಂಧ ಬಿಲ್ಲನ್ನು ಎತ್ತಿ ನಿಲ್ಲಿಸಿ ತಂತಿಯನ್ನು ಒಂದೇ ಒಂದು ಸಾಸಿವೆ ಕಾಳಿನಷ್ಟು ಜಾಗ ಇರುವಷ್ಟು ಎಳೆದಿದ್ದಾನೆ. ಆದರೆ ಸಾಧ್ಯವಾಗದೆ ಬಿಲ್ಲನ್ನು ಬಿಟ್ಟುಬಿಟ್ಟ. ಬಿಟ್ಟ ರಭಸಕ್ಕೆ ಬಿಲ್ಲು ಅವನಿಗೆ ಬಡಿದು ನೆಲದ ಬಿದ್ದು ಬಿಟ್ಟ. ಆದ ಅವಮಾನದಿಂದ ಯಾರ ಮುಖವನ್ನು ನೋಡದೆ ಅಲ್ಲಿಂದ ಹಿಂತಿರುಗಿ ನೋಡದೆ ಮಗಧ ರಾಜ್ಯದವರೆಗೂ ಹೋಗಿಬಿಟ್ಟಿದ್ದಾನೆ. ಜರಾಸಂಧನ ನಂತರ ಬಂದ ಕರ್ಣ ಆ ಬಿಲ್ಲನ್ನು ಎತ್ತಿ ಕಟ್ಟಿ ಮತ್ಸ್ಯ ಯಂತ್ರವನ್ನು ಭೇಧಿಸಿ ದ್ರೌಪದಿಯನ್ನು ಗೆದ್ದು ಅವಳನ್ನು ದುರ್ಯೋಧನನಿಗೆ ಕೊಟ್ಟು ಮದುವೆ ಮಾಡಿಸಬೇಕೆಂಬ ದುರುದ್ದೇಶದಿಂದ ಧನಸ್ಸಿನ ಬಳಿ ಬಂದು ಧನಸ್ಸನ್ನು ಎತ್ತಿ ತನ್ನೆಲ್ಲ ಬಲವನ್ನು ಹಾಕಿ ತಂತಿಯನ್ನು ಎಳೆದಿದ್ದಾನೆ. ಕೇವಲ ಒಂದೇ ಒಂದು ಕೂದಲೆಳೆಯಷ್ಟು ಅಂತರದವರೆಗೂ ಎಳೆದಿದ್ದಾನೆ. ಆದರೆ ಶಕ್ತಿ ಸಾಲದೇ ಬಿಟ್ಟು ಬಿಟ್ಟ. ಕರ್ಣನ ಸೋಲಿನ ನಂತರ ಬಹಳಷ್ಟು ಮಂದಿ ಅಲ್ಲಿಂದ ನಿರ್ಗಮಿಸಿಬಿಟ್ಟರು.

ಈಗ ಭೀಮ ಮತ್ತು ಅರ್ಜುನರು ಇಬ್ಬರೂ ಎದ್ದರು. ಬ್ರಾಹ್ಮಣರ ಗುಂಪಿನಲ್ಲಿ ಕುಳಿತಿದ್ದ ಭೀಮಾರ್ಜುನರು ಎದ್ದಿದ್ದು ನೋಡಿ ಪಕ್ಕದಲ್ಲಿದ್ದ ಬ್ರಾಹ್ಮಣರು ಅವರ ಶಲ್ಯವನ್ನು ಎಳೆದು ನಾವು ಬಂದಿದ್ದು ಸ್ವಯಂವರ ನೋಡಲು ಬಂದಿದ್ದಷ್ಟೇ ನೀವ್ಯಾಕೆ ಹೋಗುತ್ತಿದ್ದೀರಾ. ನೀವು ವಿಫಲರಾದರೆ ಇಡೀ ಬ್ರಾಹ್ಮಣ ಸಮಾಜದ ಮರ್ಯಾದೆಯೇ ಹಾಳಾಗಿ ಹೋಗುತ್ತದೆ. ಎಂಥೆಂಥ ರಾಜ ಮಹಾರಾಜರೇ ವಿಫಲರಾಗಿದ್ದಾರೆ ನೀವು ಯಾಕೆ ಹೋಗುತ್ತಿದ್ದೀರಾ ಸುಮ್ಮನೆ ಕೂಡಿ ಎಂದಾಗ ಭೀಮಾರ್ಜುನರು ಹೇಳುತ್ತಿದ್ದಾರೆ ನೀವೇನೂ ಚಿಂತಿಸಬೇಡಿ ಬ್ರಾಹ್ಮಣ ಸಮಾಜಕ್ಕೆ ಕೀರ್ತಿ ಬರುವ ಹಾಗೆ ಮಾಡುತ್ತೇವೆ ಎಂದು ಹೊರಟಿದ್ದಾರೆ. ಭೀಮಾರ್ಜುನರು ಒಮ್ಮೆ ಶ್ರೀ ಕೃಷ್ಣನ ಕಡೆ ಅನುಮತಿಗಾಗಿ ನೋಡಿದರು ಕೃಷ್ಣ ಯಾರ ಅರಿವಿಗೂ ಬಾರದೆ ಕಣ್ಸನ್ನೆಯಲ್ಲೇ ಅನುಮತಿ ನೀಡಿದ್ದಾನೆ. ಇಬ್ಬರೂ ಧನಸ್ಸಿನ ಸ್ಥಳಕ್ಕೆ ಬಂದು ಭೀಮ ಅರ್ಜುನನಿಗೆ ಧೈರ್ಯ ನೀಡಿ ತನ್ನ ಸ್ಥಳಕ್ಕೆ ಹಿಂದಿರುಗಿದ.

ಅರ್ಜುನ ಧನಸ್ಸನು ಮುಟ್ಟಿ ಮನಸಿನಲ್ಲೇ ಶ್ರೀ ಕೃಷ್ಣನಿಗೆ ನಮಸ್ಕಾರ ಮಾಡಿ ನಿರಾಯಾಸವಾಗಿ ಧನಸ್ಸನ್ನು ಎತ್ತಿ ತಂತಿಯನ್ನು ಎಳೆದು ಕಟ್ಟಿ ಐದು ಬಾಣಗಳನ್ನು ತೆಗೆದುಕೊಂಡು ಕೆಳಗಡೆ ನೀರಿನಲ್ಲಿ ಮೀನಿನ ಪ್ರತಿಬಿಂಬವನ್ನು ನೋಡಿ ಆ ಹಲಗೆಯ ರಂಧ್ರದ ಮೂಲಕ ಬಾಣವನ್ನು ಬಿಟ್ಟು ಮತ್ಸ್ಯ ಯಂತ್ರವನ್ನು ಭೇಧಿಸಿದನು. ತಕ್ಷಣ ಎಲ್ಲೆಡೆ ಹರ್ಷೋದ್ಘಾರ ತುಂಬಿ ತುಳುಕಿತು. ದ್ರೌಪದಿ ದೇವಿ ಆ ಮಾಲೆಯನ್ನು ತಂದು ಅರ್ಜುನನ ಕೊರಳಿಗೆ ಹಾಕಿದ್ದಾಳೆ

Tuesday, March 27, 2012

ಕೌಸಲ್ಯ ಸುಪ್ರಜಾ ರಾಮ...(ರಾಮಾಯಣದ ಒ೦ದು ಪ್ರಸ೦ಗ)



ಅಯೋಧ್ಯೆಗೆ ಬಂದು ವಿಶ್ವಾಮಿತ್ರರು ದಶರಥನಲ್ಲಿ ಮಕ್ಕಳಾದ ರಾಮ ಹಾಗೂ ಲಕ್ಷ್ಮಣರನ್ನು ತನ್ನೊಡನೆ ಯಾಗ ಸಂರಕ್ಷಣೆಗಾಗಿ ಕಳುಹಿಸಬೇಕೆಂದು ಕೋರುತ್ತಿದ್ದಾರೆ. ದಶರಥ ಮಹಾರಾಜ ರಾಮ ಲಕ್ಷ್ಮಣರನ್ನು ಇನ್ನೂ ಚಿಕ್ಕ ಮಕ್ಕಳೆಂದು ಭಾವಿಸಿದ್ದಾನೆ. ಎಂದೂ ಅಯೋಧ್ಯೆಯನ್ನು ದಾಟಿ ಹೊರ ಹೋಗದ ರಾಮ ಲಕ್ಷ್ಮಣರನ್ನು ಹೇಗೆ ತಾನೇ ಕಳುಹಿಸಲು ಒಪ್ಪುತ್ತಾನೆ. ಅದೂ ಅಲ್ಲದೆ ಅರಣ್ಯ ಪ್ರದೇಶ ವನ್ಯ ಮೃಗಗಳು ಇರುತ್ತವೆ, ಅಸುರರು ಇರುತ್ತಾರೆ, ಕಲ್ಲು ಮುಳ್ಳಿನ ಹಾದಿ ಹೇಗೆ ತಾನೇ ಕಳುಹಿಸುವುದು. ವಿಶ್ವಾಮಿತ್ರರಲ್ಲಿ ಹೇಳುತ್ತಿದ್ದಾನೆ ಮುನಿಗಳೇ ನಿಮಗೆ ಯಾಗ ಸಂರಕ್ಷಣೆ ಆಗಬೇಕು ತಾನೇ ನಾನು ಬರುತ್ತೇನೆ ನಿಮ್ಮೊಡನೆ. ನಾನು ಬಂದು ನಿಮ್ಮ ಯಾಗ ಸಂರಕ್ಷಿಸುತ್ತೇನೆ.

ವಿಶ್ವಾಮಿತ್ರರು ಒಪ್ಪಲಿಲ್ಲ. ಇಲ್ಲ ರಾಮ ಲಕ್ಷ್ಮಣರನ್ನೇ ಕಳುಹಿಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ವಶಿಷ್ಠ ಮುನಿಗಳು ಮಧ್ಯ ಪ್ರವೇಶಿಸಿ ದಶರಥನಿಗೆ ಉಪದೇಶ ಮಾಡಿದರು. ದಶರಥ, ರಾಮ ಲಕ್ಷ್ಮಣರ ಮಹಿಮೆ ನಿನಗೆ ತಿಳಿದಿಲ್ಲ. ವಿಶ್ವಾಮಿತ್ರರಿಗೆ ತಿಳಿದಿದೆ. ಅವರಿಗೆ ಯಾರಿಂದ ಏನೂ ಆಗುವುದಿಲ್ಲ ನಿರಾತಂಕವಾಗಿ ಕಳುಹಿಸಿಕೊಡು ಎಂದರು. ಇದರಿಂದ ನಿನ್ನ ಮಕ್ಕಳಿಗೆ ಅಪಾರ ಕೀರ್ತಿ ಬರುತ್ತದೆ ಕಳುಹಿಸು ಎಂದರು. ವಿಶ್ವಾಮಿತ್ರರ ಮೂಲ ಉದ್ದೇಶ ಯಾಗ ಸಂರಕ್ಷಣೆ ಅಷ್ಟೇ ಆಗಿರಲಿಲ್ಲ. ಯಾಗ ಸಂರಕ್ಷಣೆ ಮುಗಿಸಿ ರಾಮನನ್ನು ಮಿಥಿಲಾ ನಗರಕ್ಕೆ ಕರೆದುಕೊಂಡು ಹೋಗಿ ಸೀತಾ ಸ್ವಯಂವರದಲ್ಲಿ ಸೀತೆಯೊಂದಿಗೆ ರಾಮನ ವಿವಾಹ ಮಾಡಿಸುವ ಉದ್ದೇಶವಾಗಿತ್ತು.

ದಶರಥ ಮಹಾರಾಜ ವಶಿಷ್ಠರ ಉಪದೇಶಕ್ಕೆ ಬೆಲೆಕೊಟ್ಟು ರಾಮ ಲಕ್ಷ್ಮಣರನ್ನು ವಿಶ್ವಾಮಿತ್ರರೊಂದಿಗೆ ಕಳುಹಿಸಿಕೊಟ್ಟ. ಎಷ್ಟೇ ಆಗಲಿ ಪುತ್ರ ವ್ಯಾಮೋಹ ಎಲ್ಲಿ ಹೋಗುತ್ತದೆ. ವಿಶ್ವಾಮಿತ್ರರು ಎರಡು ಹೆಜ್ಜೆ ಇಟ್ಟಿಲ್ಲ ಹಿಂದಿನಿದಲೇ ಬಂದು ಮುನಿಗಳೇ ತಮ್ಮಲ್ಲಿ ನನ್ನದೊಂದು ಬಿನ್ನಹ. ರಾಮ ಲಕ್ಷ್ಮಣರು ಪ್ರತಿ ದಿನ ಬಿಸಿನೀರಿನಲ್ಲೇ ಜಳಕ ಮಾಡುವುದು ಅಭ್ಯಾಸ. ಆದ್ದರಿಂದ ದಯವಿಟ್ಟು ಅವರಿಗೆ ಅದೊಂದು ವ್ಯವಸ್ಥೆ ಮಾಡಿ ಬಿಡಿ ಎಂದ. ಅವರ ಯೋಗಕ್ಷೇಮ ನನ್ನ ಜವಾಬ್ದಾರಿ ಎಂದು ವಿಶ್ವಾಮಿತ್ರರು ಮತ್ತೆ ಮುಂದೆ ಹೊರಟರು. ದಶರಥ ಮತ್ತೆ ಹಿಂದೆ ಬಂದು ಮುನಿಗಳೇ ಅವರಿಗೆ ಇನ್ನೂ ನಾನು ಈಜುವುದನ್ನು ಕಲಿಸಿಲ್ಲ, ಆದ್ದರಿಂದ ಕಾಡಿನಲ್ಲಿ ಬಾವಿ, ನದಿ, ಕೆರೆಗಳ ಕಡೆ ಹೋಗದಿರುವ ಹಾಗೆ ನೋಡಿಕೊಳ್ಳಿ ಎಂದ. ವಿಶ್ವಾಮಿತ್ರರು ಅದಕ್ಕೂ ಸರಿ ಎಂದು ಮತ್ತೆ ಎರಡು ಹೆಜ್ಜೆ ಇಡುವಷ್ಟರಲ್ಲಿ ಮತ್ತೆ ಹಿಂದೆ ಬಂದ ದಶರಥ ಮುನಿಗಳೇ ರಾಮ ಲಕ್ಷ್ಮಣರಿಗೆ ಸ್ವಲ್ಪ ತಿನ್ನುವ ಅಭ್ಯಾಸ ಜಾಸ್ತಿ, ಅವಾಗ ಇವಾಗ ಏನಾದರೂ ತಿನ್ನುತ್ತಿರುತ್ತಾರೆ. ಅದಕ್ಕೂ ಏನಾದರೂ ವ್ಯವಸ್ಥೆ ಮಾಡಿಬಿಡಿ ಎಂದ. ಎಲ್ಲದಕ್ಕೂ ಸರಿ ಎಂದು ವಿಶ್ವಾಮಿತ್ರರು ರಾಮ ಲಕ್ಷ್ಮಣರನ್ನು ಕರೆದುಕೊಂಡು ಕಾಡಿಗೆ ಹೊರಟರು. ದಶರಥ ಮಹಾರಾಜ ಕೌಸಲ್ಯೆಗಿಂತ ಮಕ್ಕಳನ್ನು ಹೆಚ್ಚಾಗಿ ಹಚ್ಚಿಕೊಂಡಿದ್ದ ಎನ್ನುವುದಕ್ಕೆ ಇದೊಂದು ನಿದರ್ಶನ

ಅಯೋಧ್ಯೆಯಿಂದ ಹೊರಟು ಕಾಡಿಗೆ ಬಂದ ತಕ್ಷಣ ವಿಶ್ವಾಮಿತ್ರರು ರಾಮ ಲಕ್ಷ್ಮಣರಿಗೆ "ಬಲ" ಮತ್ತು "ಅತಿಬಲ" ಎಂಬ ಎರಡು ಮಂತ್ರವನ್ನು ಉಪದೇಶ ಮಾಡುತ್ತಾರೆ. ಈ ಮಂತ್ರಗಳ ಮಹಿಮೆ ಎಂಥದ್ದು ಎಂದರೆ ಆ ಮಂತ್ರಗಳನ್ನು ಕಲಿತುಬಿಟ್ಟರೆಹಸಿವೆ ಮತ್ತು ಬಾಯಾರಿಕೆಯೇ ಆಗುವುದಿಲ್ಲವಂತೆ. ಇನ್ನೊಂದು ಮಂತ್ರ ಕಲಿತರೆ ಯಾವುದೇ ದುಷ್ಟ ಪ್ರಾಣಿಗಳು ಹತ್ತಿರ ಬರುವುದಿಲ್ಲವಂತೆ. ರಾಮ ಹಾಗೂ ಲಕ್ಷ್ಮಣರು ಇಬ್ಬರೂ ಮಂತ್ರವನ್ನು ಕಲಿತು ಮುಂದೆ ಸಾಗುತ್ತಿದ್ದಾರೆ. ಸ್ವಲ್ಪ ದೂರ ಸಾಗಿದ ನಂತರ ಕತ್ತಲಾವರಿಸಿತು. ವಿಶ್ವಾಮಿತ್ರರು ಅಲ್ಲೇ ಇದ್ದ ಎಲೆಗಳನ್ನೆಲ್ಲಾ ಸೇರಿಸಿ ಹಾಸಿಗೆಯಂತೆ ಮಾಡಿ ರಾಮ ಲಕ್ಷ್ಮಣರನ್ನು ಮಲಗಿಸಿ, ತಾವು ಅಲ್ಲೇ ಪಕ್ಕದಲ್ಲಿ ಮಲಗಿದರು. ಬೆಳಗಾಯಿತು, ಬೆಳಿಗ್ಗೆ ಬೇಗನೆ ಎದ್ದು ಅಭ್ಯಾಸವಿಲ್ಲದ ರಾಮ ಲಕ್ಷ್ಮಣರು ಇನ್ನೂ ಮಲಗಿದ್ದಾರೆ. ಅವರನ್ನು ಎಬ್ಬಿಸಬೇಕು. ಆಗ ವಿಶ್ವಾಮಿತ್ರರು ಒಂದು ಶ್ಲೋಕ ಹೇಳುತ್ತಾರೆ. "

ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸ೦ಧ್ಯಾ ಪ್ರವರ್ತತೆ

ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ"

ಇದು ವಿಶ್ವಾಮಿತ್ರರು ಶಿಷ್ಯರನ್ನು ಎಬ್ಬಿಸಿದ ಕ್ರಮ. ಕೌಸಲ್ಯೆಯ ಮಗನಾದ ರಾಮ ಪೂರ್ವದಲ್ಲಿ ಸೂರ್ಯೋದಯವಾಗಿದೆ ಎದ್ದೇಳು. ಎದ್ದೇಳು ನರಸಿಂಹನೇ ಪ್ರಾತಃ ಕಾಲದ ಆಹ್ನಿಕವನ್ನು ಮಾಡಬೇಕು ಎದ್ದೇಳು ಎನ್ನುತ್ತಿದ್ದಾರೆ. ವಿಶ್ವಾಮಿತ್ರರು ದಶರಥನಂದನ ರಾಮಾ ಎನ್ನುವ ಬದಲು ಕೌಸಲ್ಯ ಸುಪ್ರಜಾ ರಾಮ ಎಂದರು ಏಕೆಂದರೆ, ನಿದ್ದೆ ಮಾಡುತ್ತಿದ್ದ ರಾಮನನ್ನು ಎಬ್ಬಿಸಲು ವಿಶ್ವಾಮಿತ್ರರು ಬಂದಾಗ ರಾಮನ ಮುಖ ನೋಡಿದ್ದಾರೆ. ಎಂಥ ಸೌಂದರ್ಯ, ಎಂಥ ತೇಜಸ್ಸು ಆ ಮುಖದಲ್ಲಿ ವಿಶ್ವಾಮಿತ್ರರಿಗೆ ಅರಿವಿಲ್ಲದಂತೆ ಅವರ ಕಣ್ಣಿನಿಂದ ಧಾರಾಕಾರವಾಗಿ ನೀರು ಸುರಿಯಲು ಆರಂಭಿಸಿತು. ಆ ಸೌಂದರ್ಯ ಕಂಡು ವಿಶ್ವಾಮಿತ್ರರಿಗೆ, ಪ್ರತಿದಿನ ಬೆಳಿಗ್ಗೆ ರಾಮನನ್ನು ಎಬ್ಬಿಸುತ್ತಿದ್ದ ಕೌಸಲ್ಯೆ ಈ ದಿನ ರಾಮನನ್ನು ಎಬ್ಬಿಸಲು ಆ ಕೋಣೆಗೆ ಹೋಗಿ ಅಲ್ಲಿ ಖಾಲಿ ಹಾಸಿಗೆಯನ್ನು ಕಂಡು ಎಷ್ಟು ದುಃಖ ಪಡುತ್ತಿದ್ದಾಳೋ ಎಂದು ನೆನೆಸಿಕೊಂಡು ಕಣ್ಣೀರು ಸುರಿಸುತ್ತಿದ್ದಾರೆ. ಕಾಡಿನಲ್ಲಿ ಕಂದಮೂಲ ಫಲಗಳನ್ನು ತಿಂದು ಬದುಕುವ ತಾಪಸ ಬ್ರಾಹ್ಮಣನಾದ ನನಗೆ ಯಾರದೋ ಮಗನಾದ ಶ್ರೀರಾಮನ ಸೌಂದರ್ಯ ಕಂಡು ಹೃದಯ ಅರಳಿ ಸಂತೋಷ ಉಂಟಾಯಿತು. ಇನ್ನು ಹೆತ್ತ ತಾಯಿ ಕೌಸಲ್ಯೆ ಪ್ರತಿ ದಿನ ರಾಮನ ಆ ಸೌಂದರ್ಯ ಕಂಡು ಸಂತೋಷ ಪಡುತ್ತಿದ್ದವಳು ಇಂದು ಆ ಸಂತೋಷದಿಂದ ವಂಚಿತಳಾಗಿದ್ದಾಳೆ. ಎಂದು ಮರುಕಪಟ್ಟು ರಾಮನನ್ನು ಎಬ್ಬಿಸಬೇಕಾದರೆ "ಕೌಸಲ್ಯಾ ಸುಪ್ರಜಾ ರಾಮಾ ಎಂದು ಶ್ಲೋಕ ಹಾಡಿ ಎಬ್ಬಿಸಿದರು....

ಸರ್ವರಿಗೂ ಶ್ರೀರಾಮನವಮಿಯ (೦೧-೦೪-೨೦೧೨) ಶುಭಾಶಯಗಳು

Wednesday, March 21, 2012

ಕಾಳಿಂಗ ಮರ್ಧನ


ಎತ್ತರೆತ್ತರದ ಮರ ಗಿಡಗಳು, ಸಮೃದ್ಧವಾದ ಕಾಡು, ಹುಲ್ಲುಗಾವಲಿನಿಂದ ಆವೃತವಾಗಿದ್ದ ನಂದಗೋಕುಲದಲ್ಲಿ ಬರ ಬರುತ್ತಾ ಹಸಿರು ನಾಶವಾಗಿ ನಂದಗೋಕುಲ ಪಟ್ಟಣವಾಗುತ್ತಿತ್ತು. ಹುಲ್ಲೆಲ್ಲಾ ಒಣಗಿ ದನಕರುಗಳಿಗೆ ಮೇವಿಲ್ಲದಂತೆ ಆಯಿತು. ವನಪ್ರಿಯನಾದ ಶ್ರೀಕೃಷ್ಣನು ಯಾವಾಗ ನಂದಗೋಕುಲ ಹಸಿರು ಕಳೆದುಕೊಂಡು ಒಣಗತೊಡಗಿತೋ ಆಗ ತನ್ನ ಕುಟುಂಬ, ದನಕರುಗಳೊಂದಿಗೆ ಬೃ೦ದಾವನಕ್ಕೆ ಪಯಣ ಬೆಳೆಸಿದರು.

ಮಥುರಾದಲ್ಲಿ ಹುಟ್ಟಿ, ನಂದಗೋಕುಲದಲ್ಲಿ ಆಡಿ ಲೀಲೆಗಳನ್ನು ತೋರಿದ ಬಾಲಗೋಪಾಲ ಈಗ ತನ್ನ ಲೀಲೆಗಳನ್ನು ತೋರಲು ಬೃಂದಾವನಕ್ಕೆ ಆಗಮಿಸಿದ್ದಾನೆ. ಬೃಂದಾವನ ಬೆಟ್ಟಗುಡ್ಡಗಳು, ಹಚ್ಚ ಹಸಿರು ತುಂಬಿಕೊಂಡು, ಯಮುನಾ ನದಿಯಿಂದ ನಳನಳಿಸುತ್ತಿತ್ತು. ಬೃಂದಾವನಕ್ಕೆ ಬಂದ ಬಾಲಗೋಪಾಲ ಶ್ರೀ ಕೃಷ್ಣ ಪ್ರತಿನಿತ್ಯ ತನ್ನ ಅಣ್ಣನಾದ ಬಲರಾಮನೊಡನೆ ಹಸುಕರುಗಳನ್ನು ಮೇಯಿಸಲು ಗುಡ್ಡಕ್ಕೆ ಹೋಗುತ್ತಿದ್ದನು. ಹೇಗೆ ಒಂದೆರಡು ಬಾರಿ ದನ ಮೇಯಿಸಲು ಹೋಗಿದ್ದ ಶ್ರೀಕೃಷ್ಣ ಅಲ್ಲಿಗೆ ಬಂದ ಕಂಸನ ಕಡೆಯವರಾದ ಬಕಾಸುರ, ವತ್ಸಾಸುರ ಮುಂತಾದ ಅಸುರರನ್ನೆಲ್ಲಾ ಸಂಹಾರ ಮಾಡಿದ.

ಹೀಗೆ ಸಾಗುತ್ತಿರಲು ಯಮುನಾ ನದಿಯನ್ನು ಆಶ್ರಯಿಸಿದ್ದ ಪಶುಗಳು, ಪ್ರಾಣಿಗಳು ಇದ್ದಕ್ಕಿದ್ದಂತೆ ಒಂದಾದ ಮೇಲೆ ಒಂದು ಸಾಯುತ್ತಿದ್ದವು. ಇದಕ್ಕೆ ಕಾರಣ ಯಮುನಾ ನದಿಯಲ್ಲಿ ಸೇರಿಕೊಂಡಿದ್ದ ಕಾಳಿಂಗ ಎಂಬ ಸರ್ಪ. ಕಾಳಿಂಗ ಸರ್ಪ ಗಾಢ ಕಪ್ಪು ವರ್ಣದಲ್ಲಿದ್ದು, ೧೦೧ ಹೆಡೆಗಳ, ವಿಷಪೂರಿತವಾದ ಬೃಹದಾಕಾರದ ಸರ್ಪ. ಆ ಸರ್ಪ ಯಮುನೆಯಲ್ಲಿ ಸೇರಿ ನದಿಯನ್ನು ವಿಷಪೂರಿತವಾಗಿ ಮಾಡಿಬಿಟ್ಟಿತ್ತು.

ಇದನ್ನು ಅರಿತ ಪರಮಾತ್ಮನು ಒಂದು ದಿನ ದನ ಮೇಯಿಸಲು ಹೋಗುವಾಗ ಬಲರಾಮನನ್ನು ಬಿಟ್ಟು ಒಬ್ಬನೇ ಹೊರಟಿದ್ದಾನೆ. ಕಾಳಿಂಗನನ್ನು ಮರ್ಧನ ಮಾಡಲು ನಿರ್ಧರಿಸಿದ್ದರಿಂದಲೇ ಬಲರಾಮನನ್ನು ಬಿಟ್ಟು ಹೊರಟಿದ್ದಾನೆ. ಏಕೆಂದರೆ ಬಲರಾಮ ಕೂಡ ಸರ್ಪದ ಅಂಶದವನು ಅಂದರೆ ಪೂರ್ವದಲ್ಲಿ ಶೇಷದೇವರ ಅವತಾರ. ಒಂದು ಸರ್ಪವನ್ನು ಮರ್ಧನ ಮಾಡಬೇಕಾದರೆ ಇನ್ನೊಂದು ಸರ್ಪ ಇರಬಾರದೆಂದು ಬಿಟ್ಟು ಬಂದಿದ್ದಾನೆ.

ಸೀದಾ ಯಮುನೆಯ ಮಡುವಿಗೆ ಬಂದ ಶ್ರೀಕೃಷ್ಣ ಒಮ್ಮೆ ಯಮುನೆಯನ್ನು ನೋಡಿದ. ಕಾಳಿಂಗನ ವಿಷದಿಂದ ಯಮುನೆ ಕಪ್ಪಾಗಿದ್ದಾಳೆ. ಅಲ್ಲೇ ಮಡುವಿನ ಪಕ್ಕದಲ್ಲಿದ್ದ ಎತ್ತರದ ಕದಂಬ ವೃಕ್ಷವನ್ನು ಏರಿದ ಕೃಷ್ಣ ತಾನು ಮೇಲೆ ಹೊದ್ದಿದ್ದ ವಸ್ತ್ರವನ್ನು ತೆಗೆದು ತನ್ನ ಸೊಂಟಕ್ಕೆ ಬಿಗಿದು ಅಲ್ಲಿಂದ ತುಂಬಿ ಹರಿಯುತ್ತಿದ್ದ ಯಮುನೆಗೆ ಹಾರಿದ. ಕೃಷ್ಣ ಯಮುನೆಗೆ ಹಾರಿದ ತಕ್ಷಣ ಕಾಳಿಂಗ ತನ್ನ ಬೃಹತ್ ಮೈಯಿಂದ ಕೃಷ್ಣನನ್ನು ಬಳಸಿ ಬಂಧಿಸಿತು. ಆರು ವರ್ಷ್ಟದ ಪುಟ್ಟ ಬಾಲಕ ಶ್ರೀಕೃಷ್ಣ ಆ ಬಂಧನವನ್ನು ಕ್ಷಣಕಾಲದಲ್ಲಿ ಬಿಡಿಸಿಕೊಂಡು ಕಾಳಿಂಗನ ಬಾಲವನ್ನು ತನ್ನ ಎಡಗೈಯಲ್ಲಿ ಹಿಡಿದು ನೆಗೆದು ಕಾಳಿಂಗನ ಹೆಡೆಯ ಮೇಲೆ ನಿಂತುಕೊಂಡ.

ಕಾಳಿಂಗ ಆಕ್ರೋಶದಿಂದ ತನ್ನ ಎಲ್ಲಾ ಹೆಡೆಗಳನ್ನು ಎತ್ತಲು ಶುರು ಮಾಡಿತು. ಯಾವ ಹೆಡೆ ಎತ್ತುತ್ತಿತ್ತೋ ಅದೆಲ್ಲವನ್ನು ತುಳಿಯುತ್ತ ಒಂದರಿಂದ ಮತ್ತೊಂದಕ್ಕೆ ಹಾರುತ್ತಿದ್ದ. ಇತ್ತ ಮನೆಯಲ್ಲಿ ಇಷ್ಟು ಹೊತ್ತಾದರೂ ಮನೆಗೆ ಬಾರದ ಶ್ರೀಕೃಷ್ಣನ ಬಗ್ಗೆ ನಂದಗೋಪ ಹಾಗೂ ಯಶೋಧಾ ದೇವಿ ಕಂಗಾಲಾಗಿದ್ದರು. ಅದೂ ಅಲ್ಲದೆ ಬಲರಾಮನನ್ನು ಬೇರೆ ಬಿಟ್ಟು ಹೋಗಿದ್ದಾನೆ. ತಾವೇ ಹೋಗಿ ನೋಡಿಕೊಂಡು ಬರೋಣ ಎಂದು ಬಲರಾಮನನ್ನು ಮುಂದಿಟ್ಟುಕೊಂಡು ಹೊರಟರು. ಬಲರಾಮ ಏಕೆಂದರೆ ಪ್ರತಿದಿನ ಕೃಷ್ಣನ ಜೊತೆ ತಾನೇ ಹೋಗುತ್ತಿದ್ದ. ಆದ್ದರಿಂದ ಅವನಿಗೆ ದಾರಿ ತಿಳಿದಿದೆ ಎಂದು ಕರೆದುಕೊಂಡು ಹೊರಟರು.

ಇತ್ತ ಶ್ರೀ ಕೃಷ್ಣ ಲೀಲಾಜಾಲವಾಗಿ ಒಂದೊಂದೇ ಹೆಡೆಗಳನ್ನು ತುಳಿಯುತ್ತ ಹಾರುತ್ತ ನೆಗೆಯುತ್ತ ನಗುನಗುತ್ತ ನಿಂತಿದ್ದಾನೆ. ದೂರದಲ್ಲಿ ತನ್ನನ್ನು ಹುಡುಕಿಕೊಂಡು ತನ್ನ ಬಳಿ ಬರುತ್ತಿದ್ದ ತನ್ನ ಕುಟುಂಬದವರನ್ನು ಕಂಡು ಶ್ರೀಕೃಷ್ಣನಿಗೆ ಮತ್ತಷ್ಟು ಖುಷಿಯಾಗಿ ನರ್ತಿಸಲು ಶುರುಮಾಡಿದ. ಸುತ್ತಲೂ ರಂಗಮಂದಿರದಂತೆ ಇರುವ ಯಮುನಾ ನದಿ, ನದಿಯ ಮಧ್ಯದಲ್ಲಿ ಕಾಳಿಂಗನ ಹೆಡೆಯನ್ನೇ ರಂಗಸ್ಥಳ ಮಾಡಿಕೊಂಡು ಪರಮಾತ್ಮ ಅದ್ಭುತವಾಗಿ ನರ್ತಿಸುತ್ತಿದ್ದಾನೆ. ಸುತ್ತಲೂ ಕೃಷ್ಣನ ಮನೆಯವರು, ದನ ಕಾಯುವ ಹುಡುಗರು, ದನಕರುಗಳು ಎಲ್ಲರೂ ನಿಂತು ಕೃಷ್ಣನ ನರ್ತನ ನೋಡುತ್ತಿದ್ದಾರೆ. ಇಂಥಹ ಅದ್ಭುತ ನರ್ತನಕ್ಕೆ ಪಕ್ಕವಾದ್ಯ ಇರದಿದ್ದರೆ ಹೇಗೆ...

ಕೃಷ್ಣನ ನರ್ತನಕ್ಕೆ ಪಕ್ಕವಾದ್ಯ ನೀಡಲು ಬ್ರಹ್ಮಾದಿ ದೇವತೆಗಳೇ ಬೃಂದಾವನಕ್ಕೆ ಆಗಮಿಸಿದ್ದಾರೆ. ಚತುರ್ಮುಖ ಬ್ರಹ್ಮದೇವರು ಮೃದಂಗ ನುಡಿಸುತ್ತಿದ್ದರೆ, ಕೈಲಾಸದಿಂದ ರುದ್ರದೇವರು ಬಂದು ನರ್ತನಕ್ಕೆ ತಾಳ ಹಾಕುತ್ತಿದ್ದಾರೆ. ಕಿಂಪುರುಷ ಖಂಡದಿಂದ ಹಾರಿಬಂದ ಮುಖ್ಯಪ್ರಾಣದೇವರು ಗಾಯನ ಮಾಡುತ್ತಿದ್ದಾರೆ. ಎಂಥಹ ಅದ್ಭುತ ದೃಶ್ಯ ಸೃಷ್ಟಿಯಾಗಿತ್ತು ಬೃಂದಾವನದಲ್ಲಿ.

ಅಷ್ಟರಲ್ಲಿ ಅಲ್ಲಿಗೆ ಬಂದ ನಾಗಪತ್ನಿಯರು ಕಾಳಿಂಗನ ತಪ್ಪನ್ನು ಮನ್ನಿಸಬೇಕೆಂದು ಕೃಷ್ಣನಲ್ಲಿ ಪ್ರಾರ್ಥಿಸಿದರು. ಬೇಡಿ ಬರುವ ಭಕ್ತರ ತಪ್ಪುಗಳನ್ನು ಮನ್ನಿಸುವ ಪರಮಾತ್ಮ ಕಾಳಿಂಗನ ತಪ್ಪನ್ನು ಮನ್ನಿಸಿ ಕಾಳಿಂಗನನ್ನು ರಮಣಕ್ಯ ದ್ವೀಪಕ್ಕೆ ಕಳುಹಿಸಿದ. ಬಾಲಗೋಪಾಲ ನರ್ತನ ಮಾಡಬೇಕಾದರೆ ಕಾಳಿಂಗನ ಹೆಡೆಯ ಮೇಲೆ ಪರಮಾತ್ಮನ ಪಾದದ ಗುರುತುಗಳು, ಶಂಖ ಚಕ್ರಗಳ ಚಿಹ್ನೆಗಳು ಮೂಡಿದ್ದವು. ಇದರಿಂದ ನಿನಗೆ ಗರುಡನಿಂದಲೂ ಯಾವುದೇ ರೀತಿಯ ಅಪಾಯ ಬರುವುದಿಲ್ಲ ಎಂದು ತಿಳಿಸಿದ.

(ಭಾಗವತದಲ್ಲಿ ಉಲ್ಲೇಖವಾಗಿರುವ ಶ್ರೀಕೃಷ್ಣನ ಲೀಲೆಗಳಿಂದ ಆಯ್ದ ಒಂದು ಭಾಗ ಕಾಳಿಂಗ ಮರ್ಧನ)

Wednesday, March 14, 2012

ಶ್ರೀ ವಿಷ್ಣು ಸಹಸ್ರನಾಮ



ವ್ಯಾಸಂ ವಸಿಷ್ಠನಪ್ತಾರಂ ಶಕ್ತೇ: ಪೌತ್ರಮಕಲ್ಮಷಂ/

ಪರಾಶರಾತ್ಮಜಂ ವಂದೇ ಶುಕಶಾತಂ ತಪೋನಿಧಿಂ//



ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ/

ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಯಾ ನಮೋ ನಮಃ//



ಅವಿಕಾರಾಯ ಶುದ್ಧಾಯ ನಿತ್ಯಾಯ ಪರಮಾತ್ಮನೇ/

ಸದೈಕರೂಪರೂಪಾಯ ವಿಷ್ಣವೇ ಸರ್ವಜಿಷ್ಣವೇ//



ಯಸ್ಯ ಸ್ಮರಣಮಾತ್ರೇಣ ಜನ್ಮಸಂಸಾರಬಂಧನಾತ್/

ವಿಮುಚ್ಯತೇ ನಮಸ್ತಸ್ಮೈ ವಿಷ್ಣವೇ ಪ್ರಭವಿಷ್ಣವೇ//



ಶ್ರೀ ವೈಶಂಪಾಯನ ಉವಾಚ

ಶ್ರುತ್ವಾ ಧರ್ಮಾನಶೇಷೇಣ ಪಾವನಾನಿ ಚ ಸರ್ವಶಃ/

ಯುಧಿಷ್ಟಿರಃ ಶಾಂತನವಂ ಪುನರೇವಾಭ್ಯಭ್ಯಾಷತ//೧//



ಶ್ರೀ ಯುಧಿಷ್ಠಿರ ಉವಾಚ

ಕಿಮೇಕಂ ದೈವತಂ ಲೋಕೇ ಕಿಂ ವಾಪ್ಯೇಕಂ ಪರಾಯಣಂ/

ಸ್ತುವಂತಃ ಕಂ ಕಮರ್ಚಂತಃ ಪ್ರಾಪ್ನುಯುರ್ಮಾನವಾಃ ಶುಭಂ//೨//



ಕೋ ಧರ್ಮಸ್ಸರ್ವಧರ್ಮಾಣಾಂ ಭವತಃ ಪರಮೋ ಮತಃ/

ಕಿಂ ಜಪನ್ಮುಚ್ಯತೇ ಜಂತುರ್ಜನ್ಮಸಂಸಾರಬಂಧನಾತ್//೩//



ಶ್ರೀ ಭೀಷ್ಮ ಉವಾಚ

ಜಗತ್ಪ್ರಭುಂ ದೇವದೇವಮನಂತಂ ಪುರುಷೋತ್ತಮಂ/

ಸ್ತುವನ್ನಾಮಸಹಸ್ರೇಣ ಪುರುಷಸ್ಸತತೋತ್ಥಿತಃ//೪//



ತಮೇವ ಚಾರ್ಚಯನ್ನಿತ್ಯಂ ಭಕ್ತ್ಯಾ ಪುರುಷಮವ್ಯಯಂ/

ಧ್ಯಾಯನ್ ಸ್ತುವನ್ನಮಸ್ಯ೦ಶ್ಚ ಯಜಮಾನಸ್ತಮೇವ ಚ//೫//



ಅನಾದಿ ನಿಧನಂ ವಿಷ್ಣುಂ ಸರ್ವಲೋಕಮಹೇಶ್ವರಂ/

ಲೋಕಾಧ್ಯಕ್ಷಂ ಸ್ತುವನ್ನಿತ್ಯಂ ಸರ್ವದುಃಖಾತಿಗೋ ಭವೇತ್//೬//



ಬ್ರಹ್ಮಣ್ಯಂ ಸರ್ವಧರ್ಮಜ್ನಂ ಲೋಕಾನಾಂ ಕೀರ್ತಿವರ್ಧನಂ/

ಲೋಕನಾಥಂ ಮಹದ್ಭೂತಂ ಸರ್ವಭೂತಭವೋದ್ಭವಂ//೭//



ಏಷ ಮೇ ಸರ್ವಧರ್ಮಾಣಾಂ ಧರ್ಮೋಧಿಕತಮೋ ಮತಃ/

ಯದ್ಭಕ್ತ್ಯಾ ಪುಂಡರೀಕಾಕ್ಷಂ ಸ್ತವೈರರ್ಚೇನ್ನರಃ ಸದಾ//೮//



ಪರಮಂ ಯೋ ಮಹತ್ತೇಜಃ ಪರಮಂ ಯೋ ಮಹತ್ತಪಃ/

ಪರಮಂ ಯೋ ಮಹದ್ಬ್ರಹ್ಮಪರಮಂ ಯಃ ಪರಾಯಣಂ//೯//



ಪವಿತ್ರಾಣಾಂ ಪವಿತ್ರಂ ಯೋ ಮಂಗಲಾನಾಂ ಚ ಮಂಗಲಂ/

ದೈವತಂ ದೇವತಾನಾಂ ಚ ಭೂತಾನಾಂ ಯೋವ್ಯಯಃ ಪಿತಾ//೧೦//



ಯತಸ್ಸರ್ವಾಣಿ ಭೂತಾನಿ ಭವ೦ತ್ಯಾದಿಯುಗಾಗಮೇ/

ಯಸ್ಮಿ೦ಶ್ಚ ಪ್ರಲಯಂ ಯಾಂತಿ ಪುನರೇವ ಯುಗಕ್ಷಯೇ//೧೧//



ತಸ್ಯ ಲೋಕಪ್ರಧಾನಸ್ಯ ಜಗನ್ನಾಥಸ್ಯ ಭೂಪತೇ/

ವಿಷ್ಣೋರ್ನಾಮಸಹಸ್ರಂ ಮೇ ಶೃಣು ಪಾಪಭಯಾಪಹಂ//೧೨//



ಯಾನಿ ನಾಮಾನಿ ಗೌಣಾನಿ ವಿಖ್ಯಾತಾನಿ ಮಹಾತ್ಮನಃ/

ಋಷಿಭಿ: ಪರಿಗೀತಾನಿ ತಾನಿ ವಕ್ಷ್ಯಾಮಿ ಭೂತಯೇ//೧೩//



ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ

ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದ//



ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ

ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ//



ಓಂ ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭು:

ಭೂತಕೃದ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ//೧೪//



ಪೂತಾತ್ಮಾ ಪರಮಾತ್ಮಾ ಚ ಮುಕ್ತಾನಂ ಪರಮಾ ಗತಿ:/

ಅವ್ಯಯಃ ಪುರುಷಃ ಸಾಕ್ಷೀ ಕ್ಷೇತ್ರಜ್ಞೋಕ್ಷರ ಏವ ಚ//೧೫//



ಯೋಗೋ ಯೋಗವಿದಾಂ ನೇತಾ ಪ್ರಧಾನ ಪುರುಷೇಶ್ವರಃ/

ನಾರಸಿಂಹವಪು: ಶ್ರೀಮಾನ್ ಕೇಶವಃ ಪುರುಷೋತ್ತಮ://೧೬//



ಸರ್ವಃ ಶರ್ವಃ ಶಿವಃ ಸ್ಥಾಣುರ್ಭೂತಾದಿರ್ನಿಧಿರವ್ಯಯಃ/

ಸಂಭವೋ ಭಾವನೋ ಭರ್ತಾ ಪ್ರಭಾವಃ ಪ್ರಭುರೀಶ್ವರಃ//೧೭//



ಸ್ವಯಂಭೂ ಶಂಭುರಾದಿತ್ಯಃ ಪುಷ್ಕರಾಕ್ಷೋ ಮಹಾಸ್ವನಃ/

ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮಃ//೧೮//



ಅಪ್ರಮೇಯೋ ಹೃಷೀಕೇಶಃ ಪದ್ಮನಾಭೋಮರಪ್ರಭು:/

ವಿಶ್ವಕರ್ಮಾ ಮನುಸ್ತ್ವ ಷ್ಟಾಸ್ಥವಿಪ್ಷ್ಠಸ್ಸ್ಥವಿರೋ ಧ್ರುವಃ//೧೯//



ಅಗ್ರಾಹ್ಯಃ ಶಾಶ್ವತಃ ಕೃಷ್ಣೋ ಲೋಹಿತಾಕ್ಷಃ ಪ್ರತರ್ದನಃ/

ಪ್ರಭೂತಸ್ತ್ರಿಕಕುಬ್ಧಾಮ ಪವಿತ್ರಂ ಮಂಗಲಂ ಪರಮ್//೨೦//



ಈಶಾನಃ ಪ್ರಾಣದಃ ಪ್ರಾಣೋ ಜ್ಯೇಷ್ಠ: ಶ್ರೇಷ್ಠ: ಪ್ರಜಾಪತಿ:/

ಹಿರಣ್ಯಗರ್ಭೋ ಭೂಗರ್ಭೋ ಮಾಧವೋ ಮಧುಸೂದನಃ//೨೧//



ಈಶ್ವರೋ ವಿಕ್ರಮೀ ಧನ್ವೀ ಮೇಧಾವೀ ವಿಕ್ರಮ ಕ್ರಮಃ/

ಅನುತ್ತಮೋ ದುರಾಧರ್ಷಃ ಕ್ರುತಜ್ಞಃ ಕೃತಿರಾತ್ಮವಾನ್//೨೨//



ಸುರೇಶಃ ಶರಣಂ ಶರ್ಮ ವಿಶ್ವರೇತಾಃ ಪ್ರಜಾಭವಃ/

ಅಹಃ ಸಂವತ್ಸರೋ ವ್ಯಾಲಃ ಪ್ರತ್ಯಯಸ್ಸರ್ವದರ್ಶನಃ//೨೩//



ಅಜಃ ಸರ್ವೇಶ್ವರಃ ಸಿದ್ಧಃ ಸಿದ್ಧಿ: ಸರ್ವಾದಿರಚ್ಯುತಃ/

ವೃಷಾಕಪಿರಮೇಯಾತ್ಮ ಸರ್ವಯೋಗವಿನಿಸ್ಸೃತಃ//೨೪//



ವಸುರ್ವಸುಮನಾಃ ಸತ್ಯಃ ಸಮಾತ್ಮಾ ಸ೦ಮಿತಃ ಸಮಃ/

ಅಮೋಘಃ ಪುಂಡರೀಕಾಕ್ಷೋ ವೃಷಕರ್ಮಾ ವೃಷಾಕೃತಿ://೨೫//



ರುದ್ರೋ ಬಹುಶಿರಾ ಬಭ್ರುರ್ವಿಶ್ವಯೋನಿ: ಶುಚಿಶ್ರವಾಃ/

ಅಮೃತಃ ಶಾಶ್ವತಃ ಸ್ಥಾಣುರ್ವರಾರೋಹೋ ಮಹಾತಪಾಃ//೨೬//



ಸರ್ವಗಃ ಸರ್ವವಿದ್ಭಾನುರ್ವಿಷ್ವಕ್ಸೇನೋ ಜನಾರ್ದನಃ/

ವೇದೋ ವೇದವಿದವ್ಯಂಗೋ ವೇದಾ೦ಗೋ ವೇದವಿತ್ ಕವಿ://೨೭//



ಲೋಕಾಧ್ಯಕ್ಷಃ ಸುರಾಧ್ಯಕ್ಷೋ ಧರ್ಮಾಧ್ಯಕ್ಷಃ ಕೃತಾಕೃತಃ/

ಚತುರಾತ್ಮಾ ಚತುರ್ವ್ಯೂಹಶ್ಚತುರ್ದಂಷ್ಟ್ರಶ್ಚತುರ್ಭುಜಃ//೨೮//



ಭ್ರಾಜಿಷ್ಣುರ್ಭೋಜನಂ ಭೋಕ್ತಾ ಸಹಿಷ್ಣುರ್ಜಗದಾದಿಜಃ/

ಅನಘೋ ವಿಜಯೋ ಜೇತಾ ವಿಶ್ವಯೋನಿ: ಪುನರ್ವಸು://೨೯//



ಉಪೇ೦ದ್ರೋ ವಾಮನಃ ಪ್ರಾಂಶುರಮೋಘಃ ಶುಚಿರೂರ್ಜಿತಃ/

ಅತೀ೦ದ್ರಃ ಸಂಗ್ರಹಃ ಸರ್ಗೋ ಧೃತಾತ್ಮಾ ನಿಯಮೋ ಯಮಃ//೩೦//



ವೇದ್ಯೋ ವೈದ್ಯಃ ಸದಾಯೋಗೀ ವೀರಹಾ ಮಾಧವೋ ಮಧು:/

ಅತೀ೦ದ್ರಿಯೋ ಮಹಾಮಾಯೋ ಮಹೋತ್ಸಾಹೋ ಮಹಾಬಲಃ//೩೧//



ಮಹಾಬುದ್ಧಿರ್ಮಹಾವೀರ್ಯೋ ಮಹಾಶಕ್ತಿರ್ಮಹಾದ್ಯುತಿ:/

ಅನಿರ್ದೇಶ್ಯವಪು: ಶ್ರೀಮಾನಮೇಯಾತ್ಮಾ ಮಹಾದ್ರಿಧೃಕ್//೩೨//



ಮಹೇಷ್ವಾಸೋ ಮಹೀಭರ್ತಾ ಶ್ರೀನಿವಾಸಃ ಸತಾಂ ಗತಿ:/

ಅನಿರುದ್ಧಃ ಸುರಾನಂದೋ ಗೋವಿಂದೋ ಗೋವಿದಾಂಪತಿ://೩೩//



ಮರೀಚಿರ್ದಮನೋ ಹಂಸಃ ಸುಪರ್ಣೋ ಭುಜಗೋತ್ತಮಃ/

ಹಿರಣ್ಯನಾಭಃ ಸುತಪಾಃ ಪದ್ಮನಾಭಃ ಪ್ರಜಾಪತಿ://೩೪//



ಅಮೃತ್ಯು: ಸರ್ವದೃಕ್ ಸಿಂಹಃ ಸಂಧಾತಾ ಸಂಧಿಮಾನ್ ಸ್ಥಿರಃ/

ಅಜೋ ದುರ್ಮರ್ಷಣಃ ಶಾಸ್ತಾ ವಿಶ್ರುತಾತ್ಮಾ ಸುರಾರಿಹಾ//೩೫//



ಗುರುರ್ಗುರುತಮೋ ಧಾಮಃ ಸತ್ಯಃ ಸತ್ಯಪರಾಕ್ರಮಃ/

ನಿಮಿಷೋನಿಮಿಷಃ ಸ್ರಗ್ವೀ ವಾಚಸ್ಪತಿರುದಾರಧೀ://೩೬//



ಅಗ್ರಣೀರ್ಗ್ರಾಮಣೀ: ಶ್ರೀಮಾನ್ ನ್ಯಾಯೋ ನೇತಾ ಸಮೀರಣಃ/

ಸಹಸ್ರಮೂರ್ಧಾ ವಿಶ್ವಾತ್ಮಾ ಸಹಸ್ರಾಕ್ಷಃ ಸಹಸ್ರಪಾತ್//೩೭//



ಆವರ್ತನೋ ನಿವೃತ್ತಾತ್ಮಾ ಸಂವೃತಃ ಸಂಪ್ರಮರ್ದನಃ/

ಅಹಃ ಸಂವರ್ತಕೋ ವಹ್ನಿರನಿಲೋ ಧರಣೀಧರಃ//೩೮//



ಸುಪ್ರಸಾದಃ ಪ್ರಸನ್ನಾತ್ಮಾ ವಿಶ್ವಧೃಗ್ವಿಶ್ವಭುಗ್ವಿಜು:/

ಸತ್ಕರ್ತಾ ಸತ್ಕ್ರುತಃ ಸಾಧುರ್ಜಹ್ನುರ್ನಾರಾಯಣೋ ನರಃ//೩೯//



ಅಸಂಖ್ಯೇಯೋಪ್ರಮೇಯಾತ್ಮಾ ವಿಶಿಷ್ಟಃ ಶಿಷ್ಟಕೃಚ್ಚುಚಿ:/

ಶಿದ್ಧಾರ್ಥಃ ಸಿದ್ಧಸಂಕಲ್ಪಃ ಸಿದ್ಧಿದಃ ಸಿದ್ಧಿಸಾಧನಃ//೪೦//



ವೃಷಾಹೀ ವೃಷಭೋ ವಿಷ್ಣುರ್ವ್ರುಷಪರ್ವಾ ವೃಷೋದರಃ/

ವರ್ಧನೋ ವರ್ಧಮಾನಶ್ಚ ವಿವಿಕ್ತಃ ಶೃತಿಸಾಗರಃ//೪೧//



ಸುಭುಜೋ ದುರ್ಧರೋ ವಾಗ್ಮೀ ಮಹೇ೦ದ್ರೋ ವಸುದೋ ವಸು:/

ನೈಕರೂಪೋ ಬೃಹದ್ರೂಪಃ ಶಿಪಿವಿಷ್ಟಃ ಪ್ರಕಾಶನಃ//೪೨//



ಓಜಸ್ತೇಜೋದ್ಯುತಿಧರಃ ಪ್ರಕಾಶಾತ್ಮಾ ಪ್ರತಾಪನಃ/

ಋದ್ಧಃ ಸ್ಪಷ್ಟಾಕ್ಷರೋ ಮಂತ್ರಶ್ಚಂದ್ರಾ೦ಶುರ್ಭಾಸ್ಕರದ್ಯುತಿ//೪೩//



ಅಮೃತಾ೦ಶೂದ್ಭವೋ ಭಾನು: ಶಶಬಿಂದು: ಸುರೇಶ್ವರಃ/

ಔಷಧಂ ಜಗತಃ ಸೇತು: ಸತ್ಯಧರ್ಮಪರಾಕ್ರಮಃ//೪೪//



ಭೂತಭವ್ಯಭವನ್ನಾಥಃ ಪವನಃ ಪಾವನೋನಲಃ/

ಕಾಮಹಾ ಕಾಮಕೃತ್ ಕಾಂತಃ ಕಾಮಃ ಕಾಮಪ್ರದಃ ಪ್ರಭು://೪೫//



ಯುಗಾದಿಕೃದ್ಯುಗಾವರ್ತೋ ನೈಕಮಾಯೋ ಮಹಾಶನಃ/

ಅದೃಶ್ಯೋ ವ್ಯಕ್ತರೂಪಶ್ಚ ಸಹಸ್ರಜಿದನಂತಜಿತ್//೪೬//



ಇಷ್ಟೋವಿಶಿಷ್ಟಃ ಶಿಷ್ಟೇಷ್ಟಃ ಶಿಖಂಡೀ ನಹುಷೋ ವೃಷಃ/

ಕ್ರೋಧಹಾ ಕ್ರೋಧಕ್ರುತ್ಕರ್ತಾ ವಿಶ್ವಬಾಹುರ್ಮಹೀಧರಃ//೪೭//



ಅಚ್ಯುತಃ ಪ್ರಥಿತಃ ಪ್ರಾಣಃ ಪ್ರಾಣದೋ ವಾಸವಾನುಜಃ/

ಅಪಾಂ ನಿಧಿರಧಿಷ್ಠಾನಮಪ್ರಮತ್ತಃ ಪ್ರತಿಷ್ಟಿತಃ//೪೮//



ಸ್ಕಂದಃ ಸ್ಕಂದಧರೋ ಧುರ್ಯೋ ವರದೋ ವಾಯುವಾಹನಃ/

ವಾಸುದೇವೋ ಬೃಹದ್ಭಾನುರಾದಿದೇವಃ ಪುರಂದರಃ//೪೯//



ಅಶೋಕಸ್ತಾರಣಸ್ತಾರಃ ಶೂರಃ ಶೌರಿರ್ಜನೇಶ್ವರಃ/

ಅನುಕೂಲಃ ಶತಾವರ್ತಃ ಪದ್ಮೀ ಪದ್ಮನಿಭೇಕ್ಷಣಃ//೫೦//



ಪದ್ಮನಾಭೋರವಿಂದಾಕ್ಷಃ ಪದ್ಮಗರ್ಭಃ ಶರೀರಭೃತ್/

ಮಹದ್ಧಿ೯ರ್ರುದ್ದ್ಹೋ ವೃದ್ಧಾತ್ಮಾ ಮಹಾಕ್ಷೋ ಗರುಡಧ್ವಜಃ//೫೧//



ಅತುಲಃ ಶರಭೋ ಭೀಮಃ ಸಮಯಜ್ಞೋ ಹವಿರ್ಹರಿ:/

ಸರ್ವಲಕ್ಷಣಲಕ್ಷಣ್ಯೋ ಲಕ್ಷ್ಮೀವಾನ್ ಸಮಿತಿಂಜಯಃ//೫೨//



ವಿಕ್ಷರೋ ರೋಹಿತೋ ಮಾರ್ಗೋ ಹೇತುರ್ದಾಮೋದರಸ್ಸಹಃ/

ಮಹೀಧರೋ ಮಹಾಭಾಗೋ ವೇಗವಾನಮಿತಾಶನಃ//೫೩//



ಉದ್ಭವಃ ಕ್ಷೋಭಣೋ ದೇವಃ ಶ್ರೀಗರ್ಭಃ ಪರಮೇಶ್ವರಃ/

ಕರಣಂ ಕಾರಣಂ ಕರ್ತಾ ವಿಕರ್ತಾ ಗಹನೋ ಗುಹಃ//೫೪//



ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ/

ಪರದ್ಧಿ:೯ ಪರಮಸ್ಪಷ್ಟಸ್ತುಷ್ಟಃ ಪುಷ್ಟಃ ಶುಭೇಕ್ಷಣಃ//೫೫//



ರಾಮೋ ವಿರಾಮೋ ವಿರಜೋ ಮಾರ್ಗೋ ನೇಯೋ ನಯೋನಯಃ/

ವೀರಃ ಶಕ್ತಿಮತಾಂ ಶ್ರೇಷ್ಟೋ ಧರ್ಮೋ ಧರ್ಮವಿದುತ್ತಮಃ//೫೬//



ವೈಕುಂಠ: ಪುರುಷಃ ಪ್ರಾಣಃ ಪ್ರಾಣದಃ ಪ್ರಣವಃ ಪ್ರುಥು:/

ಹಿರಣ್ಯಗರ್ಭಃ ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜಃ//೫೭//



ಋತು: ಸುದರ್ಶನಃ ಕಾಲಃ ಪರಮೇಷ್ಟೀ ಪರಿಗ್ರಹಃ/

ಉಗ್ರಃ ಸಂವತ್ಸರೋ ದಕ್ಷೋ ವಿಶ್ರಾಮೋ ವಿಶ್ವದಕ್ಷಿಣಃ//೫೮//



ವಿಸ್ತಾರಃ ಸ್ಥಾವರಸ್ಥಾಣು: ಪ್ರಮಾಣಂ ಬೀಜಮವ್ಯಯಂ/

ಅರ್ಥೋನರ್ಥೋ ಮಹಾಕೋಶೋ ಮಹಾಭೋಗೋ ಮಹಾಧನಃ//೫೯//



ಅನಿರ್ವಿಣ್ಣಃ ಸ್ಥವಿಷ್ಟೋಭೂರ್ಧರ್ಮಯೂಪೋ ಮಹಾಮುಖಃ/

ನಕ್ಷತ್ರನೇಮಿರ್ನಕ್ಷತ್ರೀ ಕ್ಷಮಃ ಕ್ಷಾಮಃ ಸಮೀಹನಃ//೬೦//



ಯಜ್ಞ ಇಜ್ಯೋ ಮಹೇಜ್ಯಶ್ಚ ಕ್ರತು: ಸತ್ರಂ ಸತಾಂ ಗತಿ:/

ಸರ್ವದರ್ಶೀ ವಿಮುಕ್ತಾತ್ಮಾ ಸರ್ವಜ್ಞೋ ಜ್ಞಾನಮುತ್ತಮಂ//೬೧//



ಸುವ್ರತಃ ಸುಮುಖಃ ಸೂಕ್ಷ್ಮಃ ಸುಘೋಷಃ ಸುಖದಃ ಸುಹೃತ್/

ಮನೋಹರೋ ಜಿತಕ್ರೋಧೋ ವೀರಬಾಹುರ್ವಿದಾರಣಃ//೬೨//



ಸ್ವಾಪನಸ್ಸ್ವವಶೋ ವ್ಯಾಪೀ ನೈಕಾತ್ಮಾ ನೈಕಕರ್ಮಕೃತ್/

ವತ್ಸರೋ ವತ್ಸಲೋ ವತ್ಸೀ ರತ್ನಗರ್ಭೋ ಧನೇಶ್ವರಃ//೬೩//



ಧರ್ಮಗುಬ್ಧರ್ಮಕೃದ್ಧರ್ಮೀ ಸದಸತ್ಕ್ಷರಮಕ್ಷರಂ/

ಅವಿಜ್ಞಾತಾ ಸಹಸ್ರಾ೦ಶುರ್ವಿಧಾತಾ ಕೃತಲಕ್ಷಣಃ//೬೪//



ಗಭಸ್ತಿನೇಮಿ: ಸತ್ತ್ವಸ್ಥಃ ಸಿಂಹೋ ಭೂತಮಹೇಶ್ವರಃ/

ಆದಿದೇವೋ ಮಹಾದೇವೋ ದೇವೇಶೋ ದೇವಭೃದ್ಗುರು://೬೫//



ಉತ್ತರೋ ಗೊಪತಿರ್ಗೋಪ್ತಾ ಜ್ಞಾನಗಮ್ಯಃ ಪುರಾತನಃ/

ಶರೀರಭೂತಭೃದ್ಭೋಕ್ತಾ ಕಪೀ೦ದ್ರೋ ಭೂರಿದಕ್ಷಿಣಃ//೬೬//



ಸೋಮಪೋಮೃತಪಃ ಸೋಮಃ ಪುರುಜಿತ್ ಪುರುಸತ್ತಮಃ/

ವಿನಯೋ ಜಯಃ ಸತ್ಯಸಂಧೋ ದಾಶಾರ್ಹಸ್ಸಾತ್ವತಾಂ ಪತಿ://೬೭//



ಜೀವೋ ವಿನಯಿತಾಸಾಕ್ಷೀ ಮುಕುಂದೋಮಿತವಿಕ್ರಮಃ/

ಅಂಭೋನಿಧಿರನಂತಾತ್ಮಾ ಮಹೋದಧಿಶಯೋ೦ತಕಃ//೬೮//



ಅಜೋ ಮಹಾರ್ಹ ಸ್ವಾಭಾವ್ಯೋ ಜಿತಾಮಿತ್ರಃ ಪ್ರಮೋದನಃ/

ಆನಂದೋ ನಂದನೋ ನಂದಃ ಸತ್ಯಧರ್ಮಾ ತ್ರಿವಿಕ್ರಮಃ//೬೯//



ಮಹರ್ಷಿ: ಕಪಿಲಾಚಾರ್ಯಃ ಕೃತಜ್ಞೋ ಮೇದಿನೀಪತಿ:/

ತ್ರಿಪದಸ್ತ್ರಿದಶಾಧ್ಯಕ್ಷೋ ಮಹಾಶೃ೦ಗಃ ಕೃತಾಂತಕೃತ್//೭೦//



ಮಹಾವರಾಹೋ ಗೋವಿಂದಃ ಸುಷೇಣಃ ಕನಕಾಂಗದೀ/

ಗುಹ್ಯೋ ಗಭೀರೋ ಗಹನೋ ಗುಪ್ತಶ್ಚಕ್ರಗದಾಧರಃ//೭೧//



ವೇಧಾಸ್ಸ್ವಾಂಗೋಜಿತಃ ಕೃಷ್ಣೋ ದೃಢಸ್ಸಂಕರ್ಷಣೋಚ್ಯುತಃ/

ವರುಣೋ ವಾರುಣೋ ವೃಕ್ಷ: ಪುಷ್ಕರಾಕ್ಷೋ ಮಹಾಮನಾಃ//೭೨//



ಭಗವಾನ್ ಭಗಹಾನಂದೀ ವನಮಾಲೀ ಹಲಾಯುಧಃ/

ಆದಿತ್ಯೋ ಜ್ಯೋತಿರಾದಿತ್ಯಃ ಸಹಿಷ್ಣುರ್ಗತಿಸತ್ತಮಃ//೭೩//



ಸುಧನ್ವಾ ಖಂಡಪರಶುರ್ದಾರುಣೋ ದ್ರವಿಣಪ್ರದಃ/

ದಿವಸ್ಪ್ರುಕ್ ಸರ್ವದೃಗ್ವ್ಯಾಸೋ ವಾಚಸ್ಪತಿರಯೋನಿಜಃ//೭೪//



ತ್ರಿಸಾಮಾ ಸಾಮಗಃ ಸಾಮ ನಿರ್ಬಾಣಂ ಭೇಷಜಂ ಭಿಷಕ್/

ಸನ್ಯಾಸಕೃಚ್ಚಮಶ್ಯಾ೦ತೋ ನಿಷ್ಠಾ ಶಾಂತಿ: ಪರಾಯಣಂ//೭೫//



ಶುಭಾಂಗಃ ಶಾಂತಿದಃ ಸ್ರಷ್ಟಾ ಕುಮುದಃ ಕುವಲೇಶಯಃ/

ಗೋಹಿತೋ ಗೋಪತಿರ್ಗೊಪ್ತಾ ವೃಷಭಾಕ್ಷೋ ವೃಷಪ್ರಿಯಃ//೭೬//



ಅನಿವರ್ತೀ ನಿವೃತ್ತಾತ್ಮಾ ಸಂಕ್ಷೇಪ್ತಾ ಕ್ಷೇಮಕೃಚ್ಚಿವಃ/

ಶ್ರೀವತ್ಸವಕ್ಷಾಃ ಶ್ರೀವಾಸಃ ಶ್ರೀಪತಿ: ಶ್ರೀಮತಾಂವರಃ//೭೭//



ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿ: ಶ್ರೀವಿಭಾವನಃ/

ಶ್ರೀಧರಃ ಶ್ರೀಕರಃ ಶ್ರೇಯಃ ಶ್ರೀಮಾನ್ ಲೋಕತ್ರಯಾಶ್ರಯಃ//೭೮//



ಸ್ವಕ್ಷಃ ಸಂಗಃ ಶತಾನಂದೋ ನಂದಿರ್ಜೋತಿರ್ಗಣೇಶ್ವರಃ/

ವಿಜಿತಾತ್ಮಾ ವಿಧೇಯಾತ್ಮಾ ಸತ್ಕೀರ್ತಿಶ್ಚಿನ್ನಸಂಶಯಃ//೭೯//



ಉದೀರ್ಣಃ ಸರ್ವತಶ್ಚಕ್ಷುರನೀಶಃ ಶಾಶ್ವತಸ್ಥಿರಃ/

ಭೂಶಯೋ ಭೂಷಣೋ ಭೂತಿರ್ವಿಶೋಕಃ ಶೋಕನಾಶನಃ//೮೦//



ಅರ್ಚಿಷ್ಮಾನರ್ಚಿತಃ ಕು೦ಭೋ ವಿಶುದ್ಧಾತ್ಮಾ ವಿಶೋಧನಃ/

ಅನಿರುದ್ಧೋಪ್ರತಿರಥಃ ಪ್ರದ್ಯುಮ್ನೋಮಿತವಿಕ್ರಮಃ//೮೧//



ಕಾಲನೇಮಿನಿಹಾ ವೀರಃ ಶೌರಿ: ಶೂರಜನೇಶ್ವರಃ/

ತ್ರಿಲೋಕಾತ್ಮಾ ತ್ರಿಲೋಕೇಶಃ ಕೇಶವಃ ಕೇಶಿಹಾ ಹರಿ://೮೨//



ಕಾಮದೇವಃ ಕಾಮಪಾಲಃ ಕಾಮೀ ಕಾಂತಃ ಕೃತಾಗಮಃ/

ಅನಿರ್ದೇಶ್ಯವಪುರ್ವಿಷ್ಣುರ್ವೀರೋನಂತೋ ಧನಂಜಯಃ//೮೩//



ಬ್ರಹ್ಮಣ್ಯೋ ಬ್ರಹ್ಮಕೃದ್ಬ್ರಹ್ಮಾ ಬ್ರಹ್ಮ ಬ್ರಹ್ಮವಿವರ್ಧನಃ/

ಬ್ರಹ್ಮವಿದ್ಬ್ರಾಹ್ಮಣೋ ಬ್ರಹ್ಮೀ ಬ್ರಹ್ಮಜ್ಞೋ ಬ್ರಾಹ್ಮಣಪ್ರಿಯಃ//೮೪//



ಮಹಾಕ್ರಮೋ ಮಹಾಕರ್ಮಾ ಮಹಾತೇಜಾ ಮಹೋರಗಃ/

ಮಹಾಕ್ರತುರ್ಮಹಾಯಜ್ವಾ ಮಹಾಯಜ್ಞೋ ಮಹಾಹವಿ://೮೫//



ಸ್ತವ್ಯಃ ಸ್ತವಪ್ರಿಯಃ ಸ್ತೋತ್ರಂ ಸ್ತುತಿ: ಸ್ತೋತಾ ರಣಪ್ರಿಯಃ/

ಪೂರ್ಣಃ ಪೂರಯಿತಾ ಪುಣ್ಯಃ ಪುಣ್ಯಕೀರ್ತಿರನಾಮಯಃ//೮೬//



ಮನೋಜವಸ್ತೀರ್ಥಕರೋ ವಸುರೇತಾ ವಸುಪ್ರದಃ/

ವಸುಪ್ರದೋ ವಾಸುದೇವೋ ವಸುರ್ವಸುಮನಾ ಹವಿ://೮೭//



ಸದ್ಗತಿ: ಸತ್ಕೃತಿ: ಸತ್ತಾ ಸದ್ಭೂತಿ: ಸತ್ಪರಾಯಣಃ/

ಶೂರಸೇನೋ ಯದುಶ್ರೇಷ್ಠ: ಸನ್ನಿವಾಸಃ ಸುಯಾಮುನಃ//೮೮//



ಭೂತಾವಾಸೋ ವಾಸುದೇವಃ ಸರ್ವಾಸುನಿಲಯೋನಲಃ/

ದರ್ಪಹಾ ದರ್ಪದೋ ದೃಪ್ತೋ ದುರ್ಧರೋಥಾಪರಾಜಿತಃ//೮೯//



ವಿಶ್ವಮೂರ್ತಿರ್ಮಹಾಮೂರ್ತಿರ್ದೀಪ್ತಮೂರ್ತಿರಮೂರ್ತಿಮಾನ್/

ಅನೇಕಮೂರ್ತಿರವ್ಯಕ್ತಃ ಶತಮೂರ್ತಿ: ಶತಾನನಃ//೯೦//



ಏಕೋ ನೈಕಃ ಸವಃ ಕಿಂ ಯತ್ತತ್ಪದಮನುತ್ತಮಂ/

ಲೋಕಬಂಧುರ್ಲೋಕನಾಥೋ ಮಾಧವೋ ಭಕ್ತವತ್ಸಲಃ//೯೧//



ಸುವರ್ಣವರ್ಣೋ ಹೇಮಾ೦ಗೋ ವರಾಂಗಶ್ಚಂದನಾಂಗದೀ/

ವೀರಹಾ ವಿಷಮಃ ಶೂನ್ಯೋ ಘ್ರುತಾಶೀರಚಲಶ್ಚಲಃ//೯೨//



ಅಮಾನೀ ಮಾನದೋ ಮಾನ್ಯೋ ಲೋಕಸ್ವಾಮೀ ತ್ರಿಲೋಕಧೃಕ್/

ಸುಮೇಧಾ ಮೇಧಜೋ ಧನ್ಯಃ ಸತ್ಯಮೇಧಾ ಧರಾಧರಃ//೯೩//



ತೇಜೋವೃಷೋ ದ್ಯುತಿಧರಃ ಸರ್ವಶಸ್ತ್ರಭೃತಾಂ ವರಃ/

ಪ್ರಗ್ರಹೋ ನಿಗ್ರಹೋ ವ್ಯಗ್ರೋ ನೈಕಶೃ೦ಗೋ ಗದಾಗ್ರಜಃ//೯೪//



ಚತುರ್ಮೂರ್ತಿಶ್ಚತುರ್ಬಾಹುಶ್ಚತುರ್ವ್ಯೂಹಶ್ಚತುರ್ಗತಿ:/

ಚತುರಾತ್ಮಾ ಚತುರ್ಭಾವಶ್ಚತುರ್ವೇದವಿದೇಕಪಾತ್//೯೫//



ಸಮಾವರ್ತೋ ನಿವೃತ್ತಾತ್ಮಾ ದುರ್ಜಯೋ ದುರತಿಕ್ರಮಃ/

ದುರ್ಲಭೋ ದುರ್ಗಮೋ ದುರ್ಗೋ ದುರಾವಾಸೋ ದುರಾರಿಹಾ//೯೬//



ಶುಭಾಂಗೋ ಲೋಕಸಾರಂಗಃ ಸುತಂತುಸ್ತಂತುವರ್ಧನಃ/

ಇಂದ್ರಕರ್ಮಾ ಮಹಾಕರ್ಮಾ ಕೃತಕರ್ಮಾ ಕೃತಾಗಮಃ//೯೭//



ಉದ್ಭವಃ ಸುಂದರಃ ಸುಂದೋ ರತ್ನನಾಭಃ ಸುಲೋಚನಃ/

ಅರ್ಕೋ ವಾಜಸನಃ ಶೃ೦ಗೀ ಜಯಂತಃ ಸರ್ವವಿಜ್ಜಯೀ//೯೮//



ಸುವರ್ಣಬಿಂದು ರಕ್ಷೋಭ್ಯಃ ಸರ್ವವಾಗೀಶ್ವರೇಶ್ವರಃ/

ಮಹಾಹ್ರದೋ ಮಹಾಗರ್ತೋ ಮಹಾಭೂತೋ ಮಹಾನಿಧಿ://೯೯//



ಕುಮುದಃ ಕುಂದರಃ ಕುಂದಃ ಪರ್ಜನ್ಯಃ ಪಾವನೋನಿಲಃ/

ಅಮೃತಾಶೋಮೃತವಪು: ಸರ್ವಜ್ಞಃ ಸರ್ವತೋಮುಖಃ//೧೦೦//



ಸುಲಭಃ ಸುವ್ರತಃ ಸಿದ್ಧಃ ಶತ್ರುಜಿಚ್ಚತ್ರುತಾಪನಃ/

ನ್ಯಗ್ರೋಧೋದುಂಬರೋಶ್ವತ್ಥಶ್ಚಾಣೂರಾಂಧ್ರನಿಸೂದನಃ//೧೦೧//



ಸಹಸ್ರಾರ್ಚಿ: ಸಪ್ತಜಿಹ್ವಃ ಸಪ್ತೈಧಾಃ ಸಪ್ತವಾಹನಃ/

ಅಮೂರ್ತಿರನಘೋಚಿಂತ್ಯೋ ಭಯಕೃದ್ಭಯನಾಶನಃ//೧೦೨//



ಅಣುರ್ಬೃಹತ್ಕೃಶಃ ಸ್ಥೂಲೋ ಗುಣಭೃನ್ನಿರ್ಗುಣೋ ಮಹಾನ್/

ಅಧೃತಸಸ್ವಧೃತಸ್ವಾಸ್ಯಃ ಪ್ರಾಗ್ವ೦ಶೋ ವಂಶವರ್ಧನಃ//೧೦೩//



ಭಾರಭೃತ್ ಕಥಿತೋ ಯೋಗೀ ಯೋಗೀಶಃ ಸರ್ವಕಾಮದಃ/

ಆಶ್ರಮಃ ಶ್ರಮಣಃ ಕ್ಷಾಮಃ ಸುಪರ್ಣೋ ವಾಯುವಾಹನಃ//೧೦೪//



ಧನುರ್ಧರೋ ಧನುರ್ವೇದೋ ದಂಡೋ ದಮಯಿತಾ ದಮಃ/

ಅಪರಾಜಿತಸ್ಸರ್ವಸಹೋ ನಿಯಂತಾ ನಿಯಮೋ ಯಮಃ//೧೦೫//



ಸತ್ತ್ವವಾನ್ ಸಾತ್ವಿಕಃ ಸತ್ಯಃ ಸತ್ಯಧರ್ಮಪರಾಯಣಃ/

ಅಭಿಪ್ರಾಯಃ ಪ್ರಿಯಾರ್ಹೋರ್ಹಃ ಪ್ರಿಯಕೃತ್ ಪ್ರೀತಿವರ್ಧನಃ//೧೦೬//



ವಿಹಾಯಸಗತಿರ್ಜ್ಯೋತಿ: ಸುರುಚಿರ್ಹುತಭುಗ್ವಿಜು:/

ರವಿರ್ವಿರೋಚನಃ ಸೂರ್ಯಃ ಸವಿತಾ ರವಿಲೋಚನಃ//೧೦೭//



ಅನಂತೋ ಹುತಭುಗ್ಭೋಕ್ತಾ ಸುಖದೋ ನೈಕಜೋಗ್ರಜಃ/

ಅನಿರ್ವಿಣ್ಣಃ ಸದಾಮರ್ಷೀ ಲೋಕಾಧಿಷ್ಠಾನಮದ್ಭುತಃ//೧೦೮//



ಸನಾತ್ಸನಾತನತಮಃ ಕಪಿಲಃ ಕಪಿರವ್ಯಯಃ/

ಸ್ವಸ್ತಿದಃ ಸ್ವಸ್ತಿಕೃತ್ ಸ್ವಸ್ತಿ ಸ್ವಸ್ತಿಭುಕ್ ಸ್ವಸ್ತಿದಕ್ಷಿಣಃ//೧೦೯//



ಅರೌದ್ರಃ ಕುಂಡಲೀ ಚಕ್ರೀ ವಿಕ್ರಮ್ಯೂರ್ಜಿತಶಾಸನ:/

ಶಬ್ಧಾತಿಗಃ ಶಬ್ಧಸಹಃ ಶಿಶಿರಃ ಶರ್ವರೀಕರಃ//೧೧೦//



ಅಕ್ರೂರಃ ಪೇಶಲೋ ದಕ್ಷೋ ದಕ್ಷಿಣಃ ಕ್ಷಮಿಣಾಂವರಃ/

ವಿದ್ವತ್ತಮೋ ವೀತಭಯಃ ಪುಣ್ಯಶ್ರವಣಕೀರ್ತನಃ//೧೧೧//



ಉತ್ತಾರಣೋ ದುಷ್ಕ್ರುತಿಹಾ ಪುಣ್ಯೋ ದುಃಸ್ವಪ್ನನಾಶನಃ/

ವೀರಹಾ ರಕ್ಷಣಸ್ಸಂತೋ ಜೀವನಃ ಪರ್ಯವಸ್ಥಿತಃ//೧೧೨//



ಅನಂತರೂಪೋನಂತಶ್ರೀರ್ಜಿತಮನ್ಯುರ್ಭಯಾಪಹಃ/

ಚತುರಶ್ರೋ ಗಭೀರಾತ್ಮಾ ವಿದಿಶೋ ವ್ಯಾದಿಶೋ ದಿಶಃ//೧೧೩//



ಅನಾದಿರ್ಭೂರ್ಭುವೋ ಲಕ್ಷ್ಮೀಸ್ಸುವೀರೋ ರುಚಿರಾಂಗದಃ/

ಜನನೋ ಜನಜನ್ಮಾದಿರ್ಭೀಮೋ ಭೀಮಪರಾಕ್ರಮಃ//೧೧೪//



ಆಧಾರನಿಲಯೋಧಾತಾ ಪುಷ್ಪಹಾಸಃ ಪ್ರಜಾಗರಃ/

ಊರ್ಧ್ವಗಸ್ಸತ್ಪಥಾಚಾರಃ ಪ್ರಾಣದಃ ಪ್ರಣವಃ ಪಣಃ//೧೧೫//



ಪ್ರಮಾಣಂ ಪ್ರಾಣನಿಲಯಃ ಪ್ರಾಣಭೃತ್ ಪ್ರಾಣಜೀವನಃ/

ತತ್ತ್ವಂ ತತ್ತ್ವವಿದೇಕಾತ್ಮಾ ಜನ್ಮಮೃತ್ಯುಜರಾತಿಗಃ//೧೧೬//



ಭೂರ್ಭುವಃಸ್ವಸ್ತರುಸ್ತಾರಃ ಸವಿತಾ ಪ್ರಪಿತಾಮಹಃ/

ಯಜ್ಞೋ ಯಜ್ಞಪತಿರ್ಯುಜ್ವಾ ಯಜ್ಞಾ೦ಗೋ ಯಜ್ಞವಾಹನಃ//೧೧೭//



ಯಜ್ಞಭೃದ್ಯಜ್ಞಕೃದ್ಯಜ್ಞೀ ಯಜ್ಞಭುಗ್ಯಜ್ಞಸಾಧನಃ/

ಯಜ್ಞಾಂತಕೃದ್ಯಜ್ಞಗುಹ್ಯಮನ್ನಮನಾದ ಏವ ಚ//೧೧೮//



ಆತ್ಮಯೋನಿ: ಸ್ವಯಂಜಾತೋ ವೈಖಾನಃ ಸಾಮಗಾಯನಃ/

ದೇವಕೀನಂದನಃ ಸ್ರಷ್ಟಾ ಕ್ಷಿತೀಜಃ ಪಾಪನಾಶನಃ//೧೧೯//



ಶಂಖಭೃನ್ನಂದಕೀ ಚಕ್ರೀ ಶಾಂಗಧನ್ವಾ ಗದಾಧರಃ/

ರಥಾಂಗಪಾಣಿರಕ್ಷೋಭ್ಯಃ ಸರ್ವಪ್ರಹರಣಾಯುಧಃ//೧೨೦//



ಫಲಶ್ರುತಿ:



ಇತೀದಂ ಕೀರ್ತನೀಯಸ್ಯ ಕೇಶವಸ್ಯ ಮಹಾತ್ಮನಃ/

ನಾಮ್ನಾಂ ಸಹಸ್ರಂ ದಿವ್ಯಾನಾಮಶೇಷೇಣ ಪ್ರಕೀರ್ತಿತಮ್//೧೨೧//



ಯ ಇದಂ ಶೃಣುಯಾನ್ನಿತ್ಯಂ ಯಶ್ಚಾಪಿ ಪರಿಕೀರ್ತಯೇತ್/

ನಾಶುಭಂ ಪ್ರಾಪ್ನುಯಾತ್ ಕಿಂಚಿತ್ ಸೋಮುತ್ರೇಹ ಚ ಮಾನವಃ//೧೨೨//



ವೇದಾಂತಗೋ ಬ್ರಾಹ್ಮಣಃ ಸ್ಯಾತ್ ಕ್ಷತ್ರಿಯೋ ವಿಜಯೀ ಭವೇತ್/

ವೈಶ್ಯೋ ಧನಸಮೃದ್ಧಃ ಸ್ಯಾತ್ ಶೂದ್ರಸ್ಸುಖಮವಾಪ್ನುಯಾತ್//೧೨೩//



ಧರ್ಮಾರ್ಥೀ ಪ್ರಾಪ್ನುಯಾದ್ಧರ್ಮಂ ಅರ್ಥಾರ್ಥೀ ಚಾರ್ಥಮಾಪ್ನುಯಾತ್/

ಕಾಮಾನವಾಪ್ನುಯಾತ್ ಕಾಮೀ ಪ್ರಜಾರ್ಥೀ ಚಾಪ್ನುಯಾತ್ ಪ್ರಜಾಂ//೧೨೪//



ಭಕ್ತಿಮಾನ್ ಯಃ ಸದೋತ್ಥಾಯ ಶುಚಿಸ್ತದ್ಗತಮಾನಸಃ/

ಸಹಸ್ರಂ ವಾಸುದೇವಸ್ಯ ನಾಮ್ನಾಮೇತತ್ ಪ್ರಕೀರ್ತಯೇತ್//೧೨೫//



ಯಶಃ ಪ್ರಾಪ್ನೋತಿ ವಿಫುಲಂ ಯಾತಿ ಪ್ರಾಧಾನ್ಯಮೇವ ಚ/

ಆಚಲಾಂ ಶ್ರಿಯಮಾಪ್ನೋತಿ ಶ್ರೇಯಃ ಪ್ರಾಪ್ನೋತ್ಯನುತ್ತಮಂ//೧೨೬//



ನ ಭಯಂ ಕ್ವಚಿದಾಪ್ನೋತಿ ವೀರ್ಯಂ ತೇಜಶ್ಚ ವಿಂದತಿ/

ಭವತ್ಯರೋಗೋ ದ್ಯುತಿಮಾನ್ ಬಲರೂಪಗುಣಾನ್ವಿತಃ//೧೨೭//



ರೋಗಾರ್ತೋ ಮುಚ್ಯತೇ ರೋಗಾದ್ಭದ್ದೋ ಮುಚ್ಯೇತ ಬಂಧನಾತ್/

ಭಯಾನ್ಮುಚ್ಯೇತ ಭೀತಸ್ತು ಮುಚ್ಯೇತಾಪನ್ನ ಆಪದಃ//೧೨೮//



ದುರ್ಗಾಣ್ಯತಿತರತ್ಯಾಶು ಪುರುಷಃ ಪುರುಷೋತ್ತಮಮ್/

ಸ್ತುವನ್ನಾಮಸಹಸ್ರೇಣ ನಿತ್ಯಂ ಭಕ್ತಿಸಮನ್ವಿತಃ//೧೨೯//



ವಾಸುದೇವಾಶ್ರಯೋ ಮರ್ತ್ಯೋ ವಾಸುದೇವಪರಾಯಣಃ/

ಸರ್ವಪಾಪವಿಶುದ್ಧಾತ್ಮಾ ಯಾತಿ ಬ್ರಹ್ಮ ಸನಾತನಮ್//೧೩೦//



ನ ವಾಸುದೇವಭಕ್ತಾನಾಮಶುಭಂ ವಿದ್ಯತೇ ಕ್ವಚಿತ್/

ಜನ್ಮಮೃತ್ಯುಜರಾವ್ಯಾಧಿಭಯಂ ನೈವೋಪಜಾಯತೇ//೧೩೧//



ಇಮಂ ಸ್ತವಮಧೀಯಾನಃ ಶ್ರದ್ಧಾಭಕ್ತಿಸಮನ್ವಿತಃ/

ಯುಜ್ಯೇತಾತ್ಮಾಸುಖಕ್ಷಾಂತಿಶ್ರೀಧೃತಿಸ್ಮೃತಿಕೀರ್ತಿಭಿ://೧೩೨//



ನ ಕ್ರೋಧೋ ನ ಚ ಮಾತ್ಸರ್ಯಂ ನ ಲೋಭೋ ನಾಶುಭಾ ಮತಿ:/

ಭವಂತಿ ಕೃತಪುಣ್ಯಾನಾಂ ಭಕ್ತಾನಾಂ ಪುರುಷೋತ್ತಮೇ//೧೩೩//



ದ್ಯೌಸ್ಸಚಂದ್ರಾರ್ಕನಕ್ಷತ್ರಾ ಖಂ ದಿಶೋ ಭೂರ್ಮಹೋದಧಿ:/

ವಾಸುದೇವಸ್ಯ ವೀರ್ಯೇಣ ವಿಧೃತಾನಿ ಮಹಾತ್ಮನಃ//೧೩೪//



ಸಸುರಾಸುರಗಂಧರ್ವಂ ಸಯಕ್ಷೋರಗರಾಕ್ಷಸಮ್/

ಜಗದ್ವಶೇ ವರ್ತತೇದಂ ಕೃಷ್ಣಸ್ಯ ಸಚರಾಚರಂ//೧೩೫//



ಇಂದ್ರಿಯಾಣಿ ಮನೋ ಬುದ್ಧಿ: ಸತ್ತ್ವಂ ತೇಜೋ ಬಲಂ ಧೃತಿ:/

ವಾಸುದೇವಾತ್ಮಕಾನ್ಯಾಹು: ಕ್ಷೇತ್ರಂ ಕ್ಷೇತ್ರಜ್ಞ ಏವ ಚ//೧೩೬//



ಸರ್ವಾಗಮಾನಾಮಾಚಾರಃ ಪ್ರಥಮಂ ಪರಿಕಲ್ಪ್ಯತೇ/

ಆಚಾರಪ್ರಭವೋ ಧರ್ಮೋ ಧರ್ಮಸ್ಯ ಪ್ರಭುರಚ್ಯತಃ//೧೩೭//



ಋಷಯಃ ಪಿತರೋ ದೇವಾ ಮಹಾಭೂತಾನಿ ಧಾತವಃ/

ಜಂಗಮಾಜಂಗಮಂ ಚೇದಂ ಜಗನ್ನಾರಾಯಣೋದ್ಭವಂ//೧೩೮//



ಯೋಗೋ ಜ್ಞಾನಂ ತಥಾ ಸಾಂಖ್ಯಂ ವಿದ್ಯಾಃ ಶಿಲ್ಪಾದಿಕರ್ಮ ಚ/

ವೇದಾಶ್ಶಾಸ್ತ್ರಾಣಿ ವಿಜ್ಞಾನಮೇತತ್ಸರ್ವಂ ಜನಾರ್ಧನಾತ್//೧೩೯//



ಏಕೋ ವಿಷ್ಣುರ್ಮಹದ್ಭೂತಂ ಪೃಥಗ್ಭೂತಾನ್ಯನೇಕಶಃ/

ತ್ರೀನ್ ಲೋಕಾನ್ವ್ಯಾಪ್ಯ ಭೂತಾತ್ಮಾ ಭು೦ಕ್ತೇ ವಿಶ್ವಭುಗವ್ಯಯಃ//೧೪೦//



ಇಮಂ ಸ್ತವಂ ಭಗವತೋ ವಿಷ್ಣೋರ್ವ್ಯಾಸೇನ ಕೀರ್ತಿತಂ/

ಪಟೇದ್ಯ ಇಚ್ಚೇತ್ಪುರುಷಃ ಶ್ರೇಯಃ ಪ್ರಾಪ್ತುಂ ಸುಖಾನಿ ಚ//೧೪೧//



ವಿಶ್ವೇಶ್ವರಮಜಂ ದೇವಂ ಜಗತಃ ಪ್ರಭವಾಪ್ಯಯಂ/

ಭಜಂತಿ ಯೇ ಪುಷ್ಕರಾಕ್ಷಂ ನ ತೇ ಯಾಂತಿ ಪರಾಭವಂ//೧೪೨//



ಇತಿ ಶ್ರೀಮನ್ಮಹಾಭಾರತೇ ಅನುಶಾಸನಪರ್ವಣಿ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರಂ ಸಂಪೂರ್ಣಂ.



ಶ್ರೀ ಕೃಷ್ಣಾರ್ಪಣಮಸ್ತು

Monday, March 12, 2012

\\ ಶ್ರೀಮದ್ ಭಗವದ್ಗೀತಾ\\



ಅಥ ಅಷ್ಟಾದಶೋಧ್ಯಾಯಃ



ಅರ್ಜುನ ಉವಾಚ

ಸನ್ಯಾಸಸ್ಯ ಮಹಾಬಾಹೋ ತತ್ವಮಿಚ್ಚಾಮಿ ವೇದಿತುಂ/

ತ್ಯಾಗಸ್ಯ ಚ ಹೃಷೀಕೇಶ ಪೃಥಕ್ಕೇಶಿ ನಿಷೂದನ//೧//



ಶ್ರೀ ಭಗವಾನುವಾಚ

ಕಾಮ್ಯಾನಾಂ ಕರ್ಮಣಾ೦ನ್ಯಾಸಂ ಸನ್ಯಾಸಂ ಕವಯೋ ವಿದು:/

ಸರ್ವಕರ್ಮಫಲತ್ಯಾಗಂ ಪ್ರಾಹುಸ್ತ್ಯಾಗಂ ವಿಚಕ್ಷಣಾಃ//೨//



ತ್ಯಾಜ್ಯಂ ದೋಷವದಿತ್ಯೇಕೇ ಕರ್ಮ ಪ್ರಾಹುರ್ಮನೀಷಿಣಃ/

ಯಜ್ಞದಾನತಪಃಕರ್ಮ ನ ತ್ಯಾಜ್ಯಮಿತಿ ಚಾಪರೇ//೩//



ನಿಶ್ಚಯಂ ಶೃಣು ಮೇ ತತ್ರ ತ್ಯಾಗೇ ಭರತಸತ್ತಮ/

ತ್ಯಾಗೋ ಹಿ ಪುರುಷ ವ್ಯಾಘ್ರ ತ್ರಿವಿಧಃ ಸಂಪ್ರಕೀರ್ತಿತಃ//೪//



ಯಜ್ಞ ದಾನ ತಪಃ ಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್/

ಯಜ್ಞೋ ದಾನಂ ತಪಶ್ಚೈವ ಪಾವನಾನಿ ಮನೀಷಿಣಾಂ//೫//



ಏತಾನ್ಯಪಿ ತು ಕರ್ಮಾಣಿ ಸಂಗಂ ತ್ಯಕ್ತ್ವಾ ಫಲಾನಿ ಚ/

ಕರ್ತವ್ಯಾನೀತಿ ಮೇ ಪಾರ್ಥ ನಿಶ್ಚಿತಂ ಮತಮುತ್ತಮಂ//೬//



ನಿಯತಸ್ಯ ತು ಸನ್ಯಾಸಃ ಕರ್ಮಣೋ ನೋಪಪದ್ಯತೇ/

ಮೋಹಾತ್ತಸ್ಯ ಪರಿತ್ಯಾಗಸ್ತಾಮಸಃ ಪರಿಕೀರ್ತಿತಃ//೭//



ದುಃಖಮಿತ್ಯೇವ ಯತ್ಕರ್ಮ ಕಾಯಕ್ಲೇಶ ಭಯಾತ್ಯಜೇತ್/

ಸ ಕೃತ್ವಾ ರಾಜಸ ತ್ಯಾಗಂ ನೈವ ತ್ಯಾಗಫಲಂ ಲಭೇತ್//೮//



ಕಾರ್ಯಮಿತ್ಯೇವ ಯತ್ಕರ್ಮ ನಿಯತಂ ಕ್ರಿಯತೇರ್ಜುನ/

ಸಂಗಂ ತ್ಯಕ್ತ್ವಾ ಫಲಂ ಚೈವ ಸ ತ್ಯಾಗಃ ಸಾತ್ವಿಕೋ ಮತಃ//೯//



ನ ದ್ವೇಷ್ಟ್ಯಕುಶಲಂ ಕರ್ಮ ಕುಶಲೇ ನಾನುಷಜ್ಜತೇ/

ತ್ಯಾಗಿ ಸತ್ವಸಾಮಾವಿಷ್ಟೋ ಮೇಧಾವೀ ಛಿನ್ನ ಸಂಶಯಃ//೧೦//



ನ ಹಿ ದೇಹಭೃತಾ ಶಕ್ಯಂ ತ್ಯಕ್ತುಂ ಕರ್ಮಾಣ್ಯಶೇಷತಃ/

ಯಸ್ತು ಕರ್ಮಫಲತ್ಯಾಗೀ ಸ ತ್ಯಾಗೀತ್ಯಭಿಧೀಯತೇ//೧೧//



ಅನಿಷ್ಟಮಿಷ್ಟಂ ಮಿಶ್ರಂ ಚ ತ್ರಿವಿಧಂ ಕರ್ಮಣಃ ಫಲಂ/

ಭವತ್ಯತ್ಯಾಗಿ ನಾಂ ಪ್ರೇತ್ಯ ನ ತು ಸನ್ಯಾಸಿನಾಂ ಕ್ವಚಿತ್//೧೨//



ಪಂಚೈತಾನಿ ಮಹಾಬಾಹೋ ಕಾರಣಾನಿ ನಿಬೋಧ ಮೇ/

ಸಾಂಖ್ಯೇ ಕೃತಾ೦ತೇ ಪ್ರೋಕ್ತಾನಿ ಸಿದ್ಧಯೇ ಸರ್ವಕರ್ಮಣಾಂ//೧೩//



ಅಧಿಷ್ಠಾನಂ ತಥಾ ಕರ್ತಾ ಕಾರಣಂ ಚ ಪೃಥಗ್ವಿಧಂ/

ವಿವಿಧಾಶ್ಚ ಪೃಥಕ್ವೇಷ್ಟಾ ದೈವಂ ಚೈವಾತ್ರ ಪಂಚಮಂ//೧೪//



ಶಾರೀರ ವಾನ್ಗ್ಮನೋಭಿರ್ಯತ್ಕರ್ಮ ಪ್ರಾರಭತೇ ನರಃ/

ನ್ಯಾಯಂ ವಾ ವಿಪರೀತಂ ವಾ ಪಂಚೈತೇ ತಸ್ಯ ಹೇತವಃ//೧೫//



ತತ್ರೈವಂ ಸತಿ ಕರ್ತಾರಮಾತ್ಮಾನಂ ಕೇವಲಂ ತು ಯಃ/

ಪಶ್ಯತ್ಯಕೃತ ಬುದ್ಧಿತ್ವಾನ್ನ ಸ ಪಶ್ಯತಿ ದುರ್ಮತಿ://೧೬//



ಯಸ್ಯ ನಾಹಂಕೃತೋ ಭಾವೋ ಬುದ್ಧಿರ್ಯಸ್ಯ ನ ಲಿಪ್ಯತೇ/

ಹೃತ್ವಾಪಿ ಸ ಇಮಾಲ್ಲೋಕಾನ್ನ ಹಸ್ತಿ ನ ನಿಬಧ್ಯತೇ//೧೭//



ಜ್ಞಾನಂ ಜ್ನೇಯಂ ಪರಿಜ್ಞಾತಾ ತ್ರಿವಿಧಾ ಕರ್ಮ ಚೋದನಾ/

ಕರಣಂ ಕರ್ಮ ಕರ್ತೇತಿ ತ್ರಿವಿಧಃ ಕರ್ಮ ಸಂಗ್ರಹಃ//೧೮//



ಜ್ಞಾನಂ ಕರ್ಮ ಚ ಕರ್ತಾ ಚ ತ್ರಿಧೈವ ಗುಣಭೇದತಃ/

ಪ್ರೋಚ್ಯತೇ ಗುಣಸಂಖ್ಯಾನೇ ಯಥಾವಚ್ಚ್ರುಣು ತಾನ್ಯಪಿ//೧೯//



ಸರ್ವಭೂತೇಷು ಯೇನೈಕಂ ಭಾವಮವ್ಯಯಮೀಕ್ಷ್ಯತೇ/

ಅವಿಭಾಕ್ತಂ ವಿಭಕ್ತೇಷು ತಜ್ಞಾನಂ ವಿದ್ಧಿ ಸಾತ್ವಿಕಂ//೨೦//



ಪಥಕ್ತ್ವೇನ ತು ಯ ಜ್ಞಾನಂ ನಾನಾ ಭಾವಾನ್ ಪ್ರುಥಗ್ವಿಧಾನ್/

ವೇತ್ತಿ ಸರ್ವೇಷು ಭೂತೇಷು ತಜ್ಞಾನಂ ವಿದ್ಧಿ ರಾಜಸಂ//೨೧//



ಯತ್ತು ಕೃತ್ಸವದೇಕಸ್ಮಿನ್ಕಾರ್ಯೇ ಸಕ್ತಮಹೈತುಕಂ/

ಅತತ್ವಾರ್ಥವದಲ್ಪಂ ಚ ತತ್ತಾಮಸ ಮುದಾ ಹೃತಂ//೨೨//



ನಿಯತಂ ಸಂಗರಹಿತಮರಾಗದ್ವೇಷತಃ ಕೃತಂ/

ಅಫಲಪ್ರೇಪ್ಸುನಾ ಕರ್ಮ ಯತ್ತತ್ಸಾತ್ವಿಕಮುಚ್ಯತೇ//೨೩//



ಯತ್ತು ಕಾಮೇಪ್ಸುನಾ ಕರ್ಮ ಸಾಹಂಕಾರೇಣ ವಾ ಪುನಃ/

ಕ್ರಿಯತೇ ಬಹುಲಾಯಾಸಂ ತದ್ರಾಜಸಮುದಾಹೃತಂ//೨೪//



ಅನುಬಂಧಂ ಕ್ಷಯಂ ಹಿಂಸಾಮನವೇಕ್ಷ್ಯ ಚ ಪೌರುಷಂ/

ಮೋಹಾದಾರಭ್ಯತೇ ಕರ್ಮ ಯತ್ತತ್ತಾಮಸಮುಚ್ಯತೇ//೨೫//



ಮುಕ್ತಸಂಗೋನಹಂ ವಾದೀ ಧೃತ್ಯುತ್ಸಾಹ ಸಮನ್ವಿತಃ/

ಸಿದ್ಧ್ಯಸಿದ್ಧ್ಯೋರ್ನಿವಿಕಾರಃ ಕರ್ತಾ ಸಾತ್ವಿಕ ಉಚ್ಯತೇ//೨೬//



ರಾಗೀ ಕರ್ಮಫಲಪ್ರೇಪ್ಸುರ್ಲುಭ್ದ್ಹೋ ಹಿಂಸಾತ್ಮಕೋಶುಚಿ:/

ಹರ್ಷಶೋಕಾನ್ವಿತಃ ಕರ್ತಾ ರಾಜಸಃ ಪರಿಕೀರ್ತಿತಃ//೨೭//



ಅಯುಕ್ತಃ ಪ್ರಾಕೃತಃ ಸ್ತಭ್ಧಃ ಶಟೋ ನೈಷ್ಕ್ರುತಿಕೋಲಸಃ/

ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸ ಉಚ್ಯತೇ//೨೮//



ಬುದ್ಧೇರ್ಭೇದಂ ಧೃತೇಶ್ಚೈವ ಗುಣತಸ್ತ್ರಿವಿಧಂ ಶೃಣು/

ಪ್ರೋಚ್ಯಮಾನಮಶೇಷೇಣ ಪೃಥಕ್ತ್ವೇನ ಧನಂಜಯ//೨೯//



ಪ್ರವೃತ್ತಿಂ ಚ ನಿವೃತ್ತಿಂ ಚ ಕಾರ್ಯಾಕಾರ್ಯೇ ಭಯಾಭಯೇ/

ಬಂಧಂ ಮೋಕ್ಷಂ ಚ ಯಾ ವೇತ್ತಿ ಬುದ್ಧಿಸ್ಸಾ ಪಾರ್ಥ ಸಾತ್ವಿಕೀ//೩೦//



ಯಯಾ ಧರ್ಮಮಧರ್ಮಂ ಚ ಕಾರ್ಯಂ ಚಾಕಾರ್ಯಮೇವ ಚ/

ಆಯಾಥಾವತ್ಪ್ರಜಾನಾತಿ ಬುದ್ಧಿಸ್ಸಾ ಪಾರ್ಥ ರಾಜಸೀ//೩೧//



ಅಧರ್ಮಂ ಧರ್ಮಮಿತಿ ಯಾ ಮನ್ಯತೇ ತಮಸಾವೃತಾ/

ಸರ್ವಾರ್ಥಾನ್ವಿಪರೀತಾ೦ಶ್ಚ ಬುದ್ಧಿಸ್ಸಾ ಪಾರ್ಥ ತಾಮಸೀ//೩೨//



ಧೃತ್ಯಾ ಯಯಾ ಧಾರಯತೇ ಮನಃ ಪ್ರಾಣೇ೦ದ್ರಿಯ ಕ್ರಿಯಾಃ/

ಯೋಗೇನಾವ್ಯಭಿಚಿರಿಣ್ಯಾ ಧೃತಿ: ಸಾ ಪಾರ್ಥ ಸಾತ್ವಿಕೀ//೩೩//



ಯಯಾ ತು ಧರ್ಮಕಾಮಾರ್ಥಾನ್ ಧೃತ್ಯಾಧಾರಯತೇರ್ಜುನ/

ಪ್ರಸ೦ಗೇನ ಫಲಾಕಾ೦ಕ್ಷೀ ಧೃತಿಸ್ಸಾ ಪಾರ್ಥ ರಾಜಸೀ//೩೪//



ಯಯಾ ಸ್ವಪ್ನಂ ಭಯಂ ಶೋಕಂ ವಿಷಾದಂ ಮದಮೇವ ಚ/

ನ ವಿಮುಂಚತಿ ದುರ್ಮೇಧಾ ಧೃತಿ: ಸಾ ಪಾರ್ಥ ತಾಮಸೀ//೩೫//



ಸುಖಂ ತ್ವಿದಾನೀಂ ತ್ರಿವಿಧಂ ಶೃಣು ಮೇ ಭರತವರ್ಷಭ/

ಅಭ್ಯಾಸಾದ್ರಮತೇ ಯತ್ರ ದುಃಖಾ೦ತಂ ಚ ನಿಗಚ್ಚತಿ//೩೬//



ಯತ್ತದಗ್ರೇ ವಿಷಮಿವ ಪರಿಣಾಮೇಮೃತೋಪಮಂ/

ತತ್ಸುಖಂ ಸಾತ್ವಿಕಂ ಪ್ರೋಕ್ತಮಾತ್ಮಬುದ್ಧಿಪ್ರಸಾದಜಂ//೩೭//



ವಿಷಯೇ೦ದ್ರಿಯಸಂಯೋಗಾದ್ಯತ್ತದಗ್ರೇಮೃತೋಪಮಂ/

ಪರಿಣಾಮೇ ವಿಷಮಿದ ತತ್ಸುಖಂ ರಾಜಸಂ ಸ್ಮೃತಂ//೩೮//



ಯದಗ್ರೇ ಚಾನುಬ೦ಧೇ ಚ ಸುಖಂ ಮೋಹನಮಾತ್ಮನಃ/

ನಿದ್ರಾಲಸ್ಯ ಪ್ರಮಾದೋತ್ತಂ ತತ್ತಾಮಸಮುದಾಹೃತಂ//೩೯//



ನ ತದಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು ವಾ ಪುನಃ/

ಸತ್ವಂ ಪ್ರಕೃತಿಚೈರ್ಮುಕ್ತಂ ಯದೇಭಿ ಸ್ಯಾತ್ತ್ರಿಭಿರ್ಗುಣೈ://೪೦//



ಬ್ರಾಹ್ಮಣ ಕ್ಷತ್ರಿಯ ವಿಶಾಂ ಶೂದ್ರಾಣಾಂ ಚ ಪರಂತಪ/

ಕರ್ಮಾಣಿಪ್ರವಿಭಕ್ತಾನಿ ಸ್ವಭಾವ ಪರ್ಭವೈರ್ಗುಣೈ://೪೧//



ಶಮೋ ದಮಸ್ತಪಃ ಶೌಚಂ ಕ್ಷಾಂತಿರಾಜ೯ವಮೇವ ಚ/

ಜ್ಞಾನಂ ವಿಜ್ಞಾನಮಾಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಂ//೪೨//



ಶೌರ್ಯಂ ತೇಜೋ ಧೃತಿರ್ದಾಕ್ಷ್ಯಂ ಯುದ್ಧೇ ಚಾಪ್ಯಪಲಾಯನಂ/

ದಾನಮೀಶ್ವರಭಾವಶ್ಚ ಕ್ಷಾತ್ರಂ ಕರ್ಮ ಸ್ವಭಾವಜಂ//೪೩//



ಕೃಷಿಗೌರಕ್ಷ್ಯವಾಣಿಜ್ಯಂ ವೈಶ್ಯಕರ್ಮ ಸ್ವಭಾವಜಂ/

ಪರಿಚಯಾರ್ತ್ಮಕಂ ಕರ್ಮ ಶೂದ್ರಸ್ಯಾಪಿ ಸ್ವಭಾವಜಂ//೪೪//



ಸ್ವೇ ಸ್ವೇ ಕರ್ಮಣ್ಯಭಿರತಃ ಸಂಸಿದ್ಧಿಂ ಲಭತೇ ನರಃ/

ಸ್ವಕರ್ಮ ನಿರತಃ ಸಿದ್ಧಿಂ ಯಥಾ ವಿಂದತಿ ತಚ್ಚ್ರುಣು//೪೫//



ಯತಃ ಪ್ರವೃತ್ತಿರ್ಭೂತಾನಾಂ ಯೇನ ಸರ್ವಮಿದಂ ತತಂ/

ಸ್ವಕರ್ಮಣಾ ತಮರ್ಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವಃ//೪೬//



ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ಸ್ವನುಷ್ಟಿತಾತ್/

ಸ್ವಭಾವ ನಿಯತಂ ಕರ್ಮಕುರ್ವನ್ನಾಪ್ನೋತಿ ಕಿಲ್ಬಿಷಂ//೪೭//



ಸಹಜಂ ಕರ್ಮಕೌಂತೇಯ ಸದೋಷಮಪಿ ನ ತ್ಯಜೇತ್/

ಸರ್ವಾರಂಭಾ ಹಿ ದೋಷೇಣ ಧೂಮೇನಾಗ್ನಿರಿವಾವೃತಾಃ//೪೮//



ಅಸಕ್ತಬುದ್ಧಿ ಸ್ವರ್ವತ್ರ ಜಿತಾತ್ಮಾ ವಿಗತಸ್ಪ್ರುಹಃ/

ನೈಷ್ಕರ್ಮ್ಯಸಿದ್ಧಿಂ ಪರಮಾಂ ಸನ್ಯಾಸೇನಾಧಿಗಚ್ಚತಿ//೪೯//



ಸಿದ್ಧಿಂ ಪ್ರಾಪ್ತೋ ಯಥಾ ಬ್ರಹ್ಮ ತಥಾಪ್ನೋತಿ ನಿಬೋಧ ಮೇ/

ಸಮಾಸೇನೈವ ಕೌಂತೇಯ ನಿಷ್ಠಾ ಜ್ಞಾನಸ್ಯ ಯಾ ಪರಾ//೫೦//



ಬುದ್ಧ್ಯಾ ವಿಶುದ್ಧಯಾ ಯುಕ್ತೋ ಧೃತ್ಯಾತ್ಮಾನಂ ನಿಯಮ್ಯ ಚ/

ಶಬ್ಧಾದೀನ್ವಿಷಯಾನ್ ತ್ಯಕ್ತ್ವಾ ರಾಗ ದ್ವೇಷೌ ವ್ಯುದಸ್ಯ ಚ//೫೧//



ವಿವಿಕ್ತ ಸೇವೀ ಲಘ್ವಾಶೀ ಯತ ವಾಕ್ಕಾಯ ಮಾನಸಃ/

ಧ್ಯಾನ ಯೋಗ ಪರೋ ನಿತ್ಯಂ ವೈರಾಗ್ಯಂ ಸಮುಪಾಶ್ರಿತಃ//೫೨//



ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಪರಿಗ್ರಹಂ/

ವಿಮುಚ್ಯ ನಿರ್ಮಮಃ ಶಾಂತೋ ಬ್ರಹ್ಮಭೂಯಾಯ ಕಲ್ಪತೇ//೫೩//



ಬ್ರಹ್ಮ ಭೂತಃ ಪ್ರಸನ್ನಾತ್ಮಾನ ಶೋಚತಿ ನ ಕಾಂಕ್ಷತಿ/

ಸಮು: ಸರ್ವೇಷು ಭೂತೇಷು ಮದ್ಭಕ್ತಿಂ ಲಭತೇ ಪರಾಂ//೫೪//



ಭಕ್ತ್ಯಾಮಾಮಭಿಜಾನಾತಿ ಯಾವಾನ್ಯಶ್ಚಾಸ್ಮಿ ತತ್ವತಃ/

ತತೋ ಮಂ ತತ್ವತೋ ಜ್ಞಾತ್ವಾ ವಿಶತೇ ತದನಂತರಂ//೫೫//



ಸರ್ವಕರ್ಮಾಣ್ಯಪಿ ಸದಾ ಕುರ್ವಾಣೋ ಮದ್ವ್ಯಪಾಶ್ರಯಃ/

ಮತ್ಪ್ರಸಾದಾದವಾಪ್ನೋತಿ ಶಾಶ್ವತಂ ಪದಮವ್ಯಯಂ//೫೬//



ಚೇತಸಾ ಸರ್ವಕರ್ಮಾಣಿ ಮಯಿ ಸನ್ಯಸ್ಯ ಮತ್ಪರಃ/

ಬುದ್ಧಿಯೋಗ ಮುಪಾಶ್ರಿತ್ಯ ಮಚ್ಚಿತ್ತಃ ಸತತಂ ಭವ//೫೭//



ಮಚ್ಚಿತ್ತಃ ಸರ್ವದುರ್ಗಾಣಿ ಮತ್ಪ್ರಸಾಪಾತ್ತರಿಷ್ಯಸಿ/

ಅಥ ಚೇತ್ತ್ಚಮಹಂಕಾರಾನ್ನ ಶ್ರೋಷ್ಯಸಿ ವಿನಂಕ್ಷ್ಯಸಿ//೫೮//



ಯದಹಂಕಾರಮಾಶ್ರಿತ್ಯ ನ ಯೋತ್ಸ್ಯ ಇತಿ ಮನ್ಯಸೇ/

ಮಿಥೈವ ವ್ಯವಸಾಯಸ್ತೇ ಪ್ರಕೃತಿಸ್ತ್ವಾಂ ನಿಯೋಕ್ಷ್ಯತಿ//೫೯//



ಸ್ವಭಾವ ಜೇನ ಕೌಂತೇಯ ನಿಬದ್ಧಃ ಸ್ವೇನ ಕರ್ಮಣಾ/

ಕರ್ತುಂ ನೇಚ್ಚಸಿ ಯನ್ಮೋಹಾತ್ಕರಿಷ್ಯಸ್ಯವಶೋಪಿ ತತ್//೬೦//



ಈಶ್ವರಃ ಸರ್ವಭೂತಾನಾಂ ಹೃದ್ದೇಶೇರ್ಜುನ ತಿಷ್ಠತಿ/

ಭ್ರಾಮಯನ್ಸರ್ವ ಭೂತಾನಿ ಯಂತ್ರಾರೂಡಾನಿ ಮಾಯಾಯಾ//೬೧//



ತಮೇವ ಶರಣಂ ಗಚ್ಚ ಸರ್ವಭಾವೇನ ಭಾರತ/

ತತ್ಪ್ರಸಾದಾತ್ಪರಾಂ ಶಾಂತಿಂ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಂ//೬೨//



ಇತಿ ತೇ ಜ್ಞಾನ ಮುಖ್ಯಾತಂ ಗುಹ್ಯಾತ್ ಗುಹ್ಯತರಂ ಮಯಾ/

ವಿಮೃಶ್ಯೈತದಶೇಷೇಣ ಯಥೇಚ್ಚಸಿ ತಥಾ ಕುರು//೬೩//



ಸರ್ವಗುಹ್ಯತಮಂ ಭೂಯೇ ಶೃಣು ಮೇ ಪರಮಂ ವಚಃ/

ಇಷ್ಟೋಸಿ ಮೇ ದೃಢಮಿತಿ ತತೋ ವಕ್ಷಾಮಿ ತೇ ಹಿತಂ//೬೪//



ಮನ್ಮನಾಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು/

ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋಸಿ ಮೇ//೬೫//



ಸರ್ವಧರ್ಮಾನ್ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ/

ಅಹಂ ತ್ವಾ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ//೬೬//



ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾಚನ/

ನೆ ಚಾಶುಶ್ರೂಷವೇ ವಾಚ್ಯಂ ನೆ ಚ ಮಾಂ ಯೋಭ್ಯಸೂಯತಿ//೬೭//



ಯ ಇಮಾಂ ಪರಮಂ ಗುಹ್ಯಂ ಮದ್ಭಕ್ತೇಷ್ವಭಿಧಾಸ್ಯತಿ/

ಭಕ್ತಿಂ ಮಯಿ ಪರಾಂ ಕೃತ್ವಾಮಾಮೇವೈಷ್ಯತ್ಯ ಸಂಶಯಃ//೬೮//



ನೆ ಚ ತಸ್ಮಾನ್ಮನುಷ್ಯೇಷು ಕಶ್ಚಿನ್ಮೆ ಪ್ರಿಯಕೃತ್ತಮಃ/

ಭವಿತಾ ನೆ ಚ ಮೇ ತಸ್ಮಾದನ್ಯಃ ಪ್ರಿಯಕರೋ ಭುವಿ//೬೯//



ಅಧ್ಯೇಷ್ಯತೇ ಚ ಯ ಇಮಂ ಧರ್ಮ್ಯಂ ಸಂವಾದಮಾವಯೋ:/

ಜ್ಞಾನಯಜ್ಞೇನ ತೇನಾಹಮಿಷ್ಟ: ಸ್ಯಾಮಿತಿ ಮೇ ಮತಿ://೭೦//



ಶ್ರದ್ಧಾವಾನನುಸೂಯಶ್ಚ ಶೃಣುಯಾದಪಿ ಯೋ ನರಃ/

ಸೋಪಿ ಮುಕ್ತಃ ಶುಭಾನ್ ಲೋಕಾನ್ಪ್ರಾಪ್ನುಯಾ ತ್ಪುಣ್ಯಕರ್ಮಣಾಂ//೭೧//



ಕಚ್ಚಿದೇತಚ್ಚ್ರುತಂ ಪಾರ್ಥ ತ್ವಯ್ಕೆಕಾಗ್ರೇಣ ಚೇತಸಾ/

ಕಚ್ಚಿದಜ್ಞಾನ ಸಮ್ಮೋಹಃ ಪ್ರಣಷ್ಟಸ್ತೇ ಧನಂಜಯ//೭೨//



ಅರ್ಜುನ ಉವಾಚ

ನಷ್ಟೋ ಮೋಹಃ ಸ್ಮ್ರುತಿರ್ಲಬ್ಧಾ ತ್ವತ್ಪ್ರಸಾದಾನ್ಮಯಾಚ್ಯುತ/

ಸ್ಥಿತೋಸ್ಮಿಗತ ಸಂದೇಹಃ ಕರಿಷ್ಯೇ ವಚನಂ ತವ//೭೩//



ಸಂಜಯ ಉವಾಚ

ಇತ್ಯಹಂ ವಾಸುದೇವಸ್ಯ ಪಾರ್ಥಸ್ಯ ಮಾಹಾತ್ಮನಃ/

ಸಂವಾದಮಿಮ ಮಶ್ರೌಷ ಮದ್ಭುತಂ ರೋಮ ಹರ್ಷಣಂ//೭೪//



ವ್ಯಾಸ ಪ್ರಸಾದಾಚ್ಚ್ರುತವಾನೇತದ್ಗುಹ್ಯತಮಂ ಪರಂ/

ಯೋಗಂ ಯೋಗೇಶ್ವರಾತ್ಕ್ರಷ್ಣಾತ್ಸಾಕ್ಷಾತ್ಕಥಯತಃ ಸ್ವಯಂ//೭೫//



ರಾಜನ್ಸ೦ಸ್ಮೃತ್ಯ ಸಂಸ್ಮೃತ್ಯ ಸಂವಾದಮಿಮ ಮದ್ಭುತಂ/

ಕೇಶವಾರ್ಜುನಯೋ: ಪುಣ್ಯಂ ಹೃಷ್ಯಾಮಿ ಚ ಮುಹುರ್ಮುಹು://೭೬//



ತಚ್ಚ ಸಂಸ್ಮೃತ್ಯ ಸಂಸ್ಕೃತ್ಯ ರೂಪಮತ್ಯದ್ಭುತಂ ಹರೇ:/

ವಿಸ್ಮಯೋ ಮೇ ಮಹಾನ್ ರಾಜನ್ ಹೃಷ್ಯಾಮಿ ಚ ಪುನಃ ಪುನಃ//೭೭//



ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ/

ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿ ರ್ಮತಿರ್ಮಮ//೭೮//



ಓಂ ತತ್ಸದಿತಿ ಶ್ರೀಮದ್ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೆ ಶ್ರೀ ಕೃಷ್ಣಾರ್ಜುನ ಸಂವಾದೇ ಸನ್ಯಾಸ ಯೋಗೋ ನಾಮ ಅಷ್ಟಾದಶೋದ್ಯಾಯಃ

Sunday, March 11, 2012

\\ ಶ್ರೀಮದ್ ಭಗವದ್ಗೀತಾ\\



ಅಥ ಸಪ್ತದಶೋಧ್ಯಾಯಃ



ಅರ್ಜುನ ಉವಾಚ

ಯೇ ಶಾಸ್ತ್ರವಿಧಿಮುತ್ಸೃಜ್ಯ ಯಜ೦ತೇ ಶ್ರದ್ಧಯಾನ್ವಿತಾಃ/

ತ್ವೇಷಾಂ ನಿಷ್ಠಾತು ಕಾ ಕೃಷ್ಣ ಸತ್ವಮಾಹೋ ರಜಸ್ತಮಃ//೧//



ಶ್ರೀ ಭಗವಾನುವಾಚ

ತ್ರಿವಿಧಾ ಭವತಿ ಶ್ರದ್ಧಾ ದೇಹಿನಾಂ ಸಾ ಸ್ವಭಾವಜಾ/

ಸಾತ್ವಿಕೀ ರಾಜಸೀ ಚೈವ ತಾಮಸೀ ಚೇತಿ ತಾಂ ಶೃಣು//೨//



ಸತ್ವಾನುರೂಪಾ ಸರ್ವಸ್ಯ ಶ್ರದ್ಧಾ ಭವತಿ ಭಾರತ/

ಶ್ರದ್ಧಾಮಯೋಯಂ ಪುರುಷೋ ಯೋ ಯಚ್ಚ್ರದ್ಧಃ ಸ ಏವ ಸಃ//೩//



ಯಜ೦ತೇ ಸಾತ್ವಿಕಾ ದೇವಾನ್ಯಕ್ಷರಕ್ಷಾ೦ಸಿ ರಾಜಸಾಃ/

ಪ್ರೇತಾನ್ ಭೂತಗಣಾ೦ಶ್ಚಾನ್ಯೇ ಯಜ೦ತೇ ತಾಮಸಾ ಜನಾಃ//೪//



ಅಶಾಸ್ತ್ರವಿಹಿತಂ ಘೋರಂ ತಪ್ಯ೦ತೇ ಯೇ ತಪೋ ಜನಾಃ/

ದಂಭಾಹಂಕಾರಸಂಯುಕ್ತಾಃ ಕಾಮರಾಗಬಲಾನ್ವಿತಾಃ//೫//



ಕರ್ಶಯಂತಃ ಶರೀರಸ್ಥಂ ಭೂತಗ್ರಾಮಮಚೇತಸಃ/

ಮಾಂ ಚೈವಾಂತಃ ಶರೀರಸ್ಥಂ ತಾನ್ವಿದ್ಧ್ಯಾಸುರನಿಶ್ಚಯಾನ್//೬//



ಆಹಾರಸ್ತ್ವಪಿ ಸರ್ವಸ್ಯ ತ್ರಿವಿಧೋ ಭವತಿ ಪ್ರಿಯಃ/

ಯಜ್ಞಸ್ತಪಸ್ತಥಾ ದಾನಂ ತೇಷಾಂ ಭೇದಮಿಮಂ ಶೃಣು//೭//



ಆಯು: ಸತ್ವಬಲಾರೋಗ್ಯ ಸುಖ ಪ್ರೀತಿ ವಿವರ್ಧನಾಃ/

ರಸ್ಯಾಃ ಸ್ನಿಗ್ಧಾ ಸ್ಥಿರಾ ಹೃದ್ಯಾ ಆಹಾರಾಃ ಸಾತ್ವಿಕ ಪ್ರಿಯಾಃ//೮//



ಕಟ್ವಮ್ಮಲವಣಾತ್ಯುಷ್ಣ ತೀಕ್ಷ್ಣರೂಕ್ಷವಿದಾಹಿನಃ/

ಆಹಾರ ರಾಜಸಸ್ಯೇಷ್ಟಾ ದುಃಖ ಶೋಕಾಮಯ ಪ್ರದಾಃ//೯//



ಯಾತಯಾಮಂ ಗತರಸಂ ಪೂತಿ ಪರ್ಯುಷಿತಂ ಚ ಯತ್/

ಉಚ್ಚಿಷ್ಟಮಪಿ ಚಾಮೇಧ್ಯಂ ಭೋಜನಂ ತಾಮಸೀ ಪ್ರಿಯಂ//೧೦//



ಅಫಲಾಕಾಂಕ್ಷಿಭಿರ್ಯಜ್ಞೋ ವಿಧಿ ದೃಷ್ಟೋ ಯ ಇಜ್ಯತೇ/

ಯಷ್ಟವ್ಯಮೇವೇತಿ ಮನಃ ಸಮಾಧಾಯ ಸ ಸಾತ್ವಿಕಃ//೧೧//



ಅಭಿಸಂದಾಯ ತು ಫಲಂ ದಂಬಾರ್ಥಮಪಿ ಚೈವ ಯತ್/

ಇಬ್ಯೆತೇ ಭರತ ಶ್ರೇಷ್ಠ ತಂ ಯಜ್ಞಂ ವಿದ್ಧಿ ರಾಜಸಂ//೧೨//



ವಿಧಿಹೀನ ಮಸೃಷ್ಟಾನ್ನ೦ ಮಂತ್ರಹೀನ ಮದಕ್ಷಿಣಂ/

ಶ್ರದ್ಧಾವಿರಹಿತಂ ಯಜ್ಞಂ ತಾಮಸಂ ಪರಿಚಕ್ಷತೇ//೧೩//



ದೇವದ್ವಿಜಗುರುಪ್ರಾಜ್ಞ ಪೂಜನಂ ಶೌಚಮಾರ್ಜನಂ/

ಬ್ರಹ್ಮಚರ್ಯಮಹಿಂಸಾ ಚ ಶಾರೀರಂ ತಪ ಉಚ್ಯತೇ//೧೪//



ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್/

ಸ್ವಾಧ್ಯಾಯಾಭ್ಯಾಸನಂ ಚೈವ ವಾಜ್ಮಯಂ ತಪ ಉಚ್ಯತೇ//೧೫//



ಮನಃ ಪ್ರಸಾದಃ ಸೌಮ್ಯತ್ವಂ ಮೌನ ಮಾತ್ಮವಿನಿಗ್ರಹಃ/

ಭಾವಸಂಶುದ್ಧಿರಿತ್ಯೇತತ್ತಪೋ ಮಾನಸ ಮುಚ್ಯತೇ//೧೬//



ಶ್ರದ್ಧಯಾ ಪರಯಾತಪ್ತಂ ತಪಸ್ತತ್ರಿವಿಧಂ ನರೈ:/

ಅಫಲಾಕಾಂಕ್ಷಿಭಿರ್ಯುಕ್ತೈ: ಸಾತ್ವಿಕಂ ಪರಿಚಕ್ಷತೇ//೧೭//



ಸತ್ಕಾರಮಾನಪೂಜಾರ್ಥಂ ತಪೋ ದಂಭೇನ ಚೈವ ಯತ್/

ಕ್ರಿಯತೇ ತದಿಹ ಪ್ರೋಕ್ತಂ ರಾಜಸಂ ಬಲ ಮಧ್ರುವಂ//೧೮//



ಮೂಢಗ್ರಾಹೇಣಾತ್ಮನೋ ಯತ್ಪೀಡಯಾ ಕ್ರಿಯತೇ ತಪಃ/

ಪರಸ್ಯೋತ್ಸಾದನಾರ್ಥ೦ವಾ ತತ್ತಾಮಸಮುದಾಹೃತಂ//೧೯//



ದಾತವ್ಯಮಿತಿ ಯದ್ದಾನಂ ದೀಯತೇನುಪಕಾರಿಣೇ/

ದೇಶೆ ಕಾಲೇ ಚ ಪಾತ್ರೇ ಚ ತದ್ದಾನಂ ಸಾತ್ವಿಕಂ ಸ್ಮೃತಂ//೨೦//



ಯತ್ತು ಪ್ರತ್ಯುಪಕಾರಾರ್ಥ ಫಲ ಮುದ್ಧಿಶ್ಯ ವಾ ಪುನಃ/

ದೀಯತೇ ಚ ಪರಿಕ್ಲಿಷ್ಟಂ ತದ್ದಾನಂ ರಾಜಸಂ ಸ್ಮೃತಂ//೨೧//



ಆ ದೇಶ ಕಾಲೇ ಯದ್ದಾನಂ ಅಪಾತ್ರೇಭ್ಯಶ್ಚ ದೀಯತೇ/

ಅಸತ್ಕ್ರುತದುವಜ್ಞಾತಂ ತತ್ತಾಮಸಮುದಾಹೃತಂ//೨೨//



ಓಂ ತತ್ಸದಿತಿ ನಿರ್ದೇಶೋ ಬ್ರಹ್ಮಣಸ್: ತ್ರಿವಿಧಃ ಸ್ಮೃತಃ/

ಬ್ರಾಹ್ಮಣಾಸ್ತೇನ ವೇದಾಶ್ಚ ಯಜ್ಞಾಶ್ಚ ವಿಹಿತಾಃ ಪುರಾ//೨೩//



ತಸ್ಮಾದೋಮಿತ್ಯುದಾಹೃತ್ಯ ಯಜ್ಞದಾನ ತಪಃ ಕ್ರಿಯಾಃ/

ಪ್ರವರ್ತ೦ತೇ ವಿಧಾನೋಕ್ತಾಃ ಸತತಂ ಬ್ರಹ್ಮವಾದಿನಾಂ//೨೪//



ತದಿತ್ಯನಭಿಸಂಧಾಯ ಫಲಂ ಯಜ್ಞ ತಪಃ ಕ್ರಿಯಾಃ/

ದಾನ ಕ್ರಿಯಾಶ್ಚ ವಿವಿಧಾಃ ಕ್ರಿಯ೦ತೇ ಮೋಕ್ಷಕಾಂಕ್ಷಿ೦ಭಿ://೨೫//



ಸದ್ಭಾವೇ ಸಾಧುಭಾವೇ ಚ ಸದ್ ಇತ್ಯೇ ತತ್ಪ್ರಯುಜ್ಯತೇ/

ಪ್ರಶಸ್ತೇ ಕರ್ಮಣಿ ತಥಾ ಸಚ್ಚಬ್ಧಃ ಪಾರ್ಥ ಯುಜ್ಯತೇ//೨೬//



ಯಜ್ಞೇ ತಪಸಿ ದಾನೇ ಚ ಸ್ಥಿತಿ: ಸದಿತಿ ಚೋಚ್ಯತೇ/

ಕರ್ಮ ಚೈವ ತದರ್ಥೀಯಂ ಸದಿತ್ಯೇವಾಭಿಧೀಯತೇ//೨೭//



ಅಶ್ರದ್ಧಯಾ ಹುತಂ ದತ್ತಂ ತಪಸ್ತಪ್ತಂ ಕೃತಂ ಚ ಯತ್/

ಅಸದಿತ್ಯುಚ್ಯತೇ ಪಾರ್ಥ ನ ಚ ತತ್ಪ್ರೇತ್ಯ ನೋ ಇಹ//೨೮//



ಓಂ ಶ್ರೀಮದ್ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೆ ಶ್ರೀ ಕೃಷ್ಣಾರ್ಜುನ ಸಂವಾದೇ ಓಂ ತತ್ಸತ್ ಶ್ರದ್ಧಾತ್ರಯವಿಭಾಗ ಯೋಗೋ ನಾಮ ಸಪ್ತದಶೋಧ್ಯಾಯಃ