Thursday, February 28, 2013

ಬಾಗಿಲನು ತೆರೆದು

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ

ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ


ಪರಮಪದದೊಳಗೆ ವಿಷಧರನ ತಲ್ಪದಲಿ ನೀ

ಸಿರಿಸಹಿತ ಕ್ಷೀರವಾರುಧಿಯೊಳಿರಲು

ಕರಿರಾಜ ಕಷ್ಟದಲಿ ಆದಿಮೂಲಾ ಎಂದು

ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೇ


ಕಡು ಕೋಪದಲಿ ಖಳನು ಖಡುಗವನು ಹಿಡಿದು

ನಿನ್ನೊಡೆಯನೆಲ್ಲಿಹನು ಎಂದು ನುಡಿಯೇ

ದೃಢ ಭಕಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆ

ಸಡಗರದಿ ಕಂಭದಿಂದೊಡೆದೆಯೋ ನರಹರಿಯೇ


ಯಮಸುತನ ರಾಣಿಗೆ ಅಕ್ಷಯವಸನವಿತ್ತೆ

ಸಮಯದಲಿ ಅಜಮಿಳನ ಪೊರೆದೆ

ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ

ಕಮಲಾಕ್ಷ ಕಾಗಿನೆಲೆಯಾದಿ ಕೇಶವನೆ

ನಮ್ಮಮ್ಮ ಶಾರದೆ

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ


ನಿಮ್ಮೊಳಗಿಹನಾರಮ್ಮಾ [ಪ]

ಕಮ್ಮಗೋಲನ ವೈರಿ ಸುತನಾದ ಸೊಂಡಿಲ

ಹೆಮ್ಮೆಯ ಗಣನಾಥನೇ [ಅಪ]


ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯನಾರಮ್ಮಾ

ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ ಧೀರ ತಾ ಗಣನಾಥನೇ


ಉಟ್ಟದಟ್ಟಿಯು ಬಿಗಿದುಟ್ಟ ಚೆಲ್ಲಣದ ದಿಟ್ಟ ತಾ ನಿವನಾರಮ್ಮ

ಪಟ್ಟದ ರಾಣಿ ಪಾರ್ವತಿಯ ಕುಮಾರನು ಹೊಟ್ಟೆಯ ಗಣನಾಥನೇ


ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನಾರಮ್ಮ

ಲೇಸಾಗಿ ಜನರ ಸಲಹುವ ಕಾಗಿನೆಲೆ ಆದಿಕೇಶವ ದಾಸ ಕಣೇ



Monday, February 25, 2013

ಪಿಳ್ಳಂಗೋವಿಯ ಚೆಲುವ ಕೃಷ್ಣನ

ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ರಂಗನ ಎಲ್ಲಿ ನೋಡಿದಿರಿ//ಪ//

ಎಲ್ಲಿ ನೋಡಿದರಲ್ಲಿ ತನಿಲ್ಲ ದಿಲ್ಲವೆಂದು ಬಲ್ಲ ಜಾಣರು//ಅಪ//


ನಂದಗೋಪನ ಮಂದಿರಗಳ ಸಂದುಗೊಂದಿನಲಿ

ಚಂದ ಚಂದದ ಗೋಪ ಬಾಲರ ವೃಂದ ವೃಂದದಲಿ

ಸುಂದರಾಂಗದ ಸುಂದರೀಯರ ಹಿಂದು ಮುಂದಿನಲಿ

ಅಂದದಾಕಳ ಕಂದ ಕರುಗಳ ಮಂದೆ ಮಂದೆಯಲಿ//


ಶ್ರೀ ಗುರುಕ್ತ ಸದಾ ಸುಮಂಗಳ ಯೋಗ ಯೋಗದಲಿ

ಅಗಮಾರ್ಥದೊಳಗೆ ಮಾಡುವ ಯಾಗ ಯಾಗದಲಿ

ಶ್ರೀಗೆ ಭಾಗ್ಯನಾಗಿ ವರ್ತಿಪ ಭೋಗ ಭೋಗದಲಿ

ಭಾಗವತರು ಸದಾ ಬಾಗಿ ಪಡುವ ರಾಗ ರಾಗದಲಿ//


ಈ ಚರಾಚರದೊಳಗೆ ಜನಂಗಳ ಆಚೆ ಈಚೆಯಲಿ

ಕೆಚರೇಂದ್ರನ ಸುತನ ರಥದ ಚೌಕ ಪೀಠದಲಿ

ನಾಚದೆ ಮಾಧವ ಎಂಬ ಭಕ್ತರ ವಾಚಕಂಗಳಲಿ

ವೀಚುಕೊಂಡದ ಪುರಂದರ ವಿಠಲನ ಲೋಚನಾಗ್ರದಲಿ//



ಗಜವದನ ಬೇಡುವೆ

ಗಜವದನ ಬೇಡುವೆ ಗೌರಿ ತನಯ


ತ್ರಿಜಗ ವಂದಿತನೇ ಸುಜನರ ಪೊರೆವನೇ [ಪ]


ಪಾಶಾಂಕುಶಧರ ಪರಮ ಪವಿತ್ರ

ಮೂಷಿಕವಾಹನ ಮುನಿಜನಪ್ರೇಮಾ [ಅಪ ]


ಮೋದದಿ ನಿನ್ನಯ ಪಾದವ ತೋರೋ

ಸಾಧು ವಂದಿತನೆ ಆದರದಿಂದಲಿ //


ಸರಸಿಜನಾಭ ಶ್ರಿ ಪುರಂದರ ವಿಠಲನ

ನಿರುತ ನೆನೆಯುವಂತೆ ದಯ ಮಾಡೋ//



Sunday, February 24, 2013

ಯಾದವ ನೀ ಬಾ ಯದುಕುಲನಂದನ

ಯಾದವ ನೀ ಬಾ ಯದುಕುಲನಂದನ

ಮಾಧವ ಮಧುಸೂಧನ ಬಾರೋ//ಪ//


ಸೋದರ ಮಾವನ ಮಧುರೆಲಿ ಮಡುಹಿದ
ಯಶೋದೆ ಕಂದ ನೀ ಬಾರೋ//ಅಪ//

ಚರಣ
ಶಂಖಚಕ್ರವು ಕೈಯಲಿ ಹೊಳೆಯುತ
ಬಿಂಕದ ಗೋವಳ ನೀ ಬಾರೋ
ಅಕಳಂಕ ಮಹಿಮನೆ ಆದಿನಾರಾಯಣ
ಬೇಕೆಂಬ ಭಕುತರಿಗೊಲಿಬಾರೋ //

ಕಣಕಾಲಂದುಗೆ ಘಲುಘಲುರೆನುತಲಿ
ಝಣಝಣ ವೇಣುನಾದದಲಿ
ಚಿಣಿಕೋಲು ಚೆಂಡು ಬುಗುರಿಯನಾಡುತ
ಸಣ್ಣ ಸಣ್ಣ ಗೋವಳರೊಡಗೂಡಿ ಬಾರೋ//

ಖಗವಾಹನನೇ ಬಗೆಬಗೆ ರೂಪನೇ
ನಗುಮೊಗದರಸನೇ ನೀ ಬಾರೋ
ಜಗದೊಳು ನಿನ್ನಯ ಮಹಿಮೆಯ ಪೊಗಳುವೆ
ಪುರಂದರವಿಠಲ ನೀ ಬಾರೋ //

ಮನ್ನಾರು ಕೃಷ್ಣಗೆ ಮಂಗಳ

ಮನ್ನಾರು ಕೃಷ್ಣಗೆ ಮಂಗಳ


ಜಗವ ಮನ್ನಿಸಿದೊಡೆಯಗೆ ಮಂಗಳ//ಪ//


ಬೊಮ್ಮನ ಪಡೆದಗೆ ಭಕ್ತರುದ್ಧಾರಿಗೆ

ಕಮ್ಮಗೋಲನಯ್ಯಗೆ ಮಂಗಳ

ಧರ್ಮರಕ್ಷಕನಿಗೆ ದಾನವಶಿಕ್ಷಗೆ

ನಮ್ಮ ರಕ್ಷಕನಿಗೆ ಮಂಗಳ //


ತುರುಗಳ ಕಾಯ್ದಗೆ ಕರುಣಾಕರನಿಗೆ

ಗಿರಿಯನೆತ್ತಿದವಗೆ ಮಂಗಳ

ವರದ ತಿಮ್ಮಪ್ಪಗೆ ವಾರಿಜನಾಭಗೆ

ಹರಿ ಸರ್ವೋತ್ತಮನಿಗೆ ಮಂಗಳ//


ದೇವಕಿದೇವಿಯ ತನಯಗೆ ಮಂಗಳ

ದೇವ ತಿಮ್ಮಪ್ಪಗೆ ಮಂಗಳ

ಮಾವನ ಕೊಂದು ಮಲ್ಲರ ಮಡುಹಿದ

ಪುರಂದರವಿಠಲಗೆ ಮಂಗಳ//

ಶ್ರೀ ಹಯಗ್ರೀವ ಸಂಪದ ಸ್ತೋತ್ರ

ಹಯಗ್ರೀವ ಹಯಗ್ರೀವ ಹಯಗ್ರೀವೇತಿ ವಾದಿನಂ


ನರಂ ಮುಂಚಂತಿ ಪಾಪಾನಿ ದರಿದ್ರಮಿವ ಯೋಷಿತಃ //

ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ವದೇತ್

ತಸ್ಯ ನಿಸ್ಸರತೆ ವಾಣೀ ಜಹ್ನು ಕನ್ಯಾಪ್ರವಾಹವತ್ //

ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ಧ್ವನಿ:

ವಿಶೋಭತೆ ಚ ವೈಕುಂಠಕವಾಟೋದ್ಘಾಟನಕ್ಷಮಃ//

ಶ್ಲೋಕತ್ರಯಮಿದಂ ಪುಣ್ಯಂ ಹಯಗ್ರೀವಪದಾಂಕಿತಂ

ವಾದಿರಾಜಯತಿಪ್ರೋಕ್ತಂ ಪಠತಾಂ ಸಂಪದಾಂ ಪದಮ್ //

\\ ಇತಿ ಶ್ರೀಮದ್ವಾದಿರಾಜಪೂಜ್ಯಚರಣ ವಿರಚಿತಂ ಹಯಗ್ರೀವಸಂಪದಾಸ್ತೋತ್ರಂ ಸಂಪೂರ್ಣಂ //

Friday, February 22, 2013

ಇಂದು ಎನಗೆ ಗೋವಿಂದ

ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ


ತೋರೋ ಮುಕುಂದನೇ ಮುಕುಂದನೇ/

ಸುಂದರ ವದನನೆ ನಂದಗೋಪನ ಕಂದ

ಮಂದರೋದ್ಧಾರ ಆನಂದ ಇಂದಿರಾ ರಮಣನೆ//



ನೊಂದೆನಯ್ಯಾ ಭವಬಂಧನದೊಳು ಸಿಲುಕಿ

ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು

ಕಂದನೆಂದೆನ ಕುಂದಗಳೆಣಿಸದೆ

ತಂದೆ ಕಾಯೋ ಕೃಷ್ಣ ಕಂದರ್ಪ ಜನಕೆ//



ಮೂಢತನದಿ ಬಲು ಹೇಡಿಜೀವನಾಗಿ

ದೃಢಭಕ್ತಿಯನ್ನು ಮಾಡಲಿಲ್ಲವೋ ಹರಿಯೇ

ನೋಡಲಿಲ್ಲವೋ ನಿನ್ನ ಪಾಡಲಿಲ್ಲವೋ ಮಹಿಮೆ

ಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ//



ಧಾರುಣಿಯೊಳು ಭೂಭಾರ ಜೀವನಾನಾಗಿ

ದಾರಿತಪ್ಪಿ ನಡೆದೆ ಸೇರಿದೆ ಕುಜನರ

ಆರೂ ಕಾಯುವವರಿಲ್ಲ ಸೇರಿದೆ ನಿನಗಯ್ಯಾ

ಧೀರವೇಣುಗೋಪಾಲ ಪಾರುಗಾಣಿಸೋ ಹರಿಯೇ//

ಜಗದೋದ್ಧಾರನ

ಜಗದೋದ್ಧಾರನ ಆಡಿಸಿದಳೆಶೋಧಾ ಜಗದೋದ್ಧಾರನ


ಜಗದೋದ್ಧಾರನ ಮಗನೆಂದು ತಿಳಿಯುತ

ಸುಗುಣಾ೦ತರ೦ಗನ ಆಡಿಸಿದಳೆಶೋಧಾ//


ನಿಗಮಕೆ ಸಿಲುಕದ ಅಗಣಿತ ಮಹಿಮನ

ಮಗುಗಳ ಮಾಣಿಕ್ಯನ ಆಡಿಸಿದಳೆಶೋಧಾ//


ಅಣೋರಣೀಯನ ಮಹತೋಮಹೀಯನ

ಅಪ್ರಮೇಯನ ಆಡಿಸಿದಳೆಶೋಧಾ//


ಪರಮಪುರುಷನ ಪರವಾಸುದೇವನ

ಪುರಂದರ ವಿಠಲನ ಆಡಿಸಿದಳೆಶೋಧಾ//

ಜೋ ಜೋ ಶ್ರೀ ಕೃಷ್ಣ ಪರಮಾನಂದ

ಜೋ ಜೋ ಶ್ರೀ ಕೃಷ್ಣ ಪರಮಾನಂದ

ಜೋ ಜೋ ಗೋಪಿಯ ಕಂಡ ಮುಕುಂದ ಜೋ ಜೋ //



ಪಾಲಗಡಲೊಡಳೊಳು ಪವಡಿಸಿದವನೆ

ಆಲದೆಲೆಯ ಮೇಲೆ ಮಲಗಿದ ಶಿಶುವೆ

ಶ್ರೀ ಲತಾಂಗಿಯಳ ಚಿತ್ತದೊಲ್ಲಭನೆ

ಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋ ಜೋ//



ಹೊಳೆವಂತ ರನ್ನದ ತೊಟ್ಟಿಲ ಮೇಲೆ

ಥಳಥಳಿಸುವ ಗುಲಗಂಜಿಯ ಮಾಲೆ

ಅಳದೆ ನೀ ಪಿಡಿದಾಡೆನಯ ಮುದ್ದುಬಾಲ

ನಳಿನನಾಭನೆ ನಿನ ಪಾಡಿ ತೂಗುವೆನು ಜೋ ಜೋ//



ಯಾರ ಕಂದ ನೀನಾರ ನಿಧಾನಿ

ಯಾರ ರತ್ನವೋ ನೀನಾರ ಮಾಣಿಕ್ಯವೋ

ಸೇರಿತು ಎನಗೊಂದು ಚಿಂತಾಮಣಿಯಂದು

ಪೋರ ನಿನ್ನನು ಪಾಡಿ ತೂಗುವೆನಯ್ಯ ಜೋ ಜೋ//



ಗುಣನಿಧಿಯೇ ನಿನ್ನನೆತ್ತಿಕೊಂಡಿದ್ದರೆ

ಮನೆಯ ಕೆಲಸವಾರು ಮಾಡುವರಯ್ಯ

ಮನಕೆ ಸುಖಾನಿದ್ರೆಯ ತಂದುಕೋ ಬೇಗ

ಫಣಿಶಯನನೆ ನಿನ್ನ ಪಾಡಿ ತೂಗುವೆನಯ್ಯ ಜೋ ಜೋ//



ಅಂಡಜವಾಹನ ಅನಂತಮಹಿಮ

ಪುಂಡರೀಕಾಕ್ಷ ಶ್ರೀ ಪರಮಪಾವನ

ಹಿಂಡು ದೈವದ ಗಂಡ ಉದ್ದಂಡನೆ

ಪಾಂಡುರಂಗ ಶ್ರೀ ಪುರಂದರ ವಿಠಲನೆ ಜೋ ಜೋ//

Thursday, February 21, 2013

ಸತ್ಯಾತ್ಮ ಸತ್ಯ ಕಾಮ ಸತ್ಯ ರೂಪ ಸತ್ಯ ಸಂಕಲ್ಪ

ಸತ್ಯಾತ್ಮ ಸತ್ಯ ಕಾಮ ಸತ್ಯ ರೂಪ ಸತ್ಯ ಸಂಕಲ್ಪ


ಸತ್ಯ ದೇವ ಸತ್ಯ ಪೂರ್ಣ ಸತ್ಯಾನಂದ


ಕಾಪಾಡು ಶ್ರೀ ಸತ್ಯನಾರಾಯಣ

ಪನ್ನಗ ಶಯನ ಪಾವನ ಚರಣ

ನಂಬಿಹೆ ನಿನ್ನ


ನಾರಾಯಣ ಲಕ್ಷ್ಮಿನಾರಾಯಣ

ನಾರಾಯಣ ಸತ್ಯನಾರಾಯಣ


ಮನವೆಂಬ ಮಂಟಪ ಬೆಳಕಾಗಿದೆ

ಹರಿನಾಮದಾ ಮಂತ್ರವೇ ತುಂಬಿದೆ

ಎಂದೆಂದು ಸ್ಥಿರವಾಗಿ ನೀನಿಲ್ಲಿರು

ನನ್ನಲ್ಲಿ ಒಂದಾಗಿ ಉಸಿರಾಗಿರು


ನನಗಾಗಿ ಏನನ್ನು ನಾ ಬೇಡೆನು

ಧನಕನಕ ಬೇಕೆಂದು ನಾ ಕೇಳೆನು

ಈ ಮನೆಯು ನೀನಿರುವ ಗುಡಿಯಾಗಲಿ

ಸುಖ ಶಾಂತಿ ನೆಮ್ಮದಿಯ ನೆಲೆಯಾಗಲಿ


ಕಣ್ಣೀರ ಅಭಿಷೇಕ ನಾ ಮಾಡಿದೆ

ಕರುಣಾಳು ನೀ ನನ್ನ ಕಾಪಾಡಿದೆ

ಬರಿದಾದ ಮಡಿಲನ್ನು ನೀ ತುಂಬಿದೆ

ನಾ ಕಾಣದಾನಂದ ನೀ ನೀಡಿದೆ.

ಕಂಡೆ ನಾ ಗೋವಿಂದನ

ಕಂಡೆ ನಾ ಗೋವಿಂದನ, ಗೋವಿಂದನ


ಪುಂಡರೀಕಾಕ್ಷ ಪಾಂಡವ ಪಕ್ಷ ಶ್ರೀಕ್ರಷ್ಣನ

ಕಂಡೆ ನಾ ಗೋವಿಂದನ


ಪುರುಷೋತ್ತಮ ನರಹರಿ ಶ್ರೀಕ್ರಷ್ಣನ

ಶರಣಾಗತ ಜನ ರಕ್ಷಕನ

ಸಾಸಿರ ನಾಮನ ಶ್ರೀಹ್ರಷಿಕೇಶನ (೨)

ಶೇಷಶಯನ ನಮ್ಮ ವಸುದೇವ ಸುತನ


ಕೇಶವ ನಾರಯಣ ಶ್ರೀಕ್ರಷ್ಣನ

ವಾಸುದೆವ ಅಚ್ಯುತ ಅನಂತನ

ಕರುಣಾಕರ ನಮ್ಮ ಪುರಂದರ ವಿಠಲನ (೨)

ನೆರೆ ನಂಬಿದೆ ಬೇಲೂರ ಚೆನ್ನಿಗನ



Wednesday, February 20, 2013

ಕೃಷ್ಣ ಬಾರೋ ಶ್ರೀ ಕೃಷ್ಣ ಬಾರೋ ಕೃಷ್ಣಯ್ಯ ನೀ ಬಾರಯ್ಯ

ಕೃಷ್ಣ ಬಾರೋ ಶ್ರೀ ಕೃಷ್ಣ ಬಾರೋ ಕೃಷ್ಣಯ್ಯ ನೀ ಬಾರಯ್ಯ


ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆ ನಾದಗಳಿಂದ ಕೃಷ್ಣ ನೀ ಬಾರಯ್ಯ//



ಮನ್ಮಥ ಜನಕನೆ ಬೇಗನೆ ಬಾರೋ ಕಮಲಾಪತಿ ನೀ ಬಾರೋ

ಅಮಿತ ಪರಾಕ್ರಮ ಶಂಕರ ಬಾರೋ ಗಮನೀಯ ಗಾತ್ರನೆ ಬಾರಯ್ಯ ದೊರೆಯೇ//



ಸುರುಳು ಕೇಶಗಳ ಒಲಿವ ಅಂದ ಭರದ ಕಸ್ತೂರಿ ತಿಲಕದ ಚಂದ

ಶಿರದಿ ಒಪ್ಪುವ ನವಿಲು ಕಂಗಳಿಂದ ಥರ ಥರದಾಭರಣ ಧರಿಸಿ ನೀ ಬಾರೋ//



ಹಾಲು ಬೆಣ್ಣೆಗಳ ಕೈಯಲ್ಲಿ ಕೊಡುವೆ ಮೇಲಾಗಿ ಭಕ್ಷ್ಯವ ಬಚ್ಚಿಟ್ಟು ತರುವೆ

ಜಾಲ ಮಾಡದೆ ಬಾರಯ್ಯ ಮರಿಯೇ ಬಾ ನನ್ನ ತಂದೆ ಪುರಂದರ ವಿಠಲ//

ಲಂಬೋದರ ಲಕುಮಿಕರ

ಲಂಬೋದರ ಲಕುಮಿಕರ ಅಂಬಾಸುತ ಅಮರವಿನುತ


ಲಂಬೋದರ ಲಕುಮಿಕರ //


ಶ್ರೀ ಗಣನಾಥ ಸಿಂಧೂರ ವರ್ಣ ಕರುಣಾ ಸಾಗರ ಕರಿವದನ

ಶ್ರೀ ಗಣನಾಥ ಸಿಂಧೂರ ವರ್ಣ ಕರುಣಾ ಸಾಗರ ಕರಿವದನ


ಲಂಬೋದರ ಲಕುಮಿಕರ ಅಂಬಾಸುತ ಅಮರವಿನುತ

ಲಂಬೋದರ ಲಕುಮಿಕರ //


ಸಿದ್ಧಚಾರಣ ಗಣ ಸೇವಿತ ಸಿದ್ಧಿವಿನಾಯಕ ತೇ ನಮೋ ನಮೋ

ಸಿದ್ಧಚಾರಣ ಗಣ ಸೇವಿತ ಸಿದ್ಧಿವಿನಾಯಕ ತೇ ನಮೋ ನಮೋ


ಲಂಬೋದರ ಲಕುಮಿಕರ ಅಂಬಾಸುತ ಅಮರವಿನುತ

ಲಂಬೋದರ ಲಕುಮಿಕರ //


ಸಕಲ ವಿದ್ಯಾದಿಪೂಜಿತ ಸರ್ವೋತ್ತಮ ತೇ ನಮೋ ನಮೋ

ಸಕಲ ವಿದ್ಯಾದಿಪೂಜಿತ ಸರ್ವೋತ್ತಮ ತೇ ನಮೋ ನಮೋ


ಲಂಬೋದರ ಲಕುಮಿಕರ ಅಂಬಾಸುತ ಅಮರವಿನುತ

ಲಂಬೋದರ ಲಕುಮಿಕರ //

ಲೋಕಭರಿತನೋ ರಂಗ ಅನೇಕಚರಿತನೋ

ಲೋಕಭರಿತನೋ ರಂಗ ಅನೇಕಚರಿತನೋ


ಕಾಕುಜನರ ಮುರಿದು ತನ್ನ ಏಕಾಂತಭಕ್ತರ ಪೊರೆವ ಕೃಷ್ಣ//


ರಾಜಸೂಯಯಾಗದಲ್ಲಿ ರಾಜರಾಜರಿರಲು ಧರ್ಮ

ರಾಜಸೂಯತನುಯೀತನೆ ಸಭಾಪೂಜ್ಯನೆಂದು ಮನ್ನಿಸಿದಾಗ//


ಮಿಕ್ಕ ನೃಪರ ಜರಿದು ಅಮಿತವಿಕ್ರಮ ಯದುವರನೆ ತನಗೆ

ತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ//


ಜ್ಞಾನಶೂನ್ಯನಾಗಿ ಸೊಕ್ಕಿ ತಾನೇ ವಾಸುದೇವನೆನಲು

ಹೀನ ಪೌ೦ಡ್ರಕನ ಶಿರವ ಜಾಣರಾಯ ತರಿದನಾಗ//


ಉತ್ತರೆಯ ಗರ್ಭದಲ್ಲಿ ಸುತ್ತಿಮುತ್ತಿದಸ್ತ್ರವನು

ಒತ್ತಿ ಚಕ್ರದಿಂದ ನಿಜಭಕ್ತ ಪರೀಕ್ಷಿತನ ಕಾಯ್ದ//


ತನ್ನ ಸೇವಕಜನರಿಗೊಲಿದು ಅನಂತ ಉಡುಪಿಯಲಿ ನಿಂತು

ಘನಮಂದಿರ ಮಾಡಿಕೊಂಡ ಪ್ರಸನ್ನ ಹಯವದನ ಕೃಷ್ಣ//

Tuesday, February 19, 2013

ಮಂಗಳಾರತಿ ತಂದು ಬೆಳಗಿರೆ

ಮಂಗಳಾರತಿ ತಂದು ಬೆಳಗಿರೆ

ಅಂಬುಜಾಸನ ರಾಣಿಗೆ

ಅಂಬೆಗೆ ಜಗದಂಬೆಗೆ ಮೂಕಾಂಬೆಗೆ

ಶಶಿ ಬಿಂಬೆಗೆ//



ಶುದ್ಧ ಸ್ನಾನವ ಮಾಡಿ ನದಿಯಲಿ

ವಜ್ರಪೀಠದಿ ನೆಲೆಸಿರೆ

ತಿದ್ದಿ ತಿಲಕವ ತೀಡಿದಂತ

ಮುದ್ದು ಮಂಗಳ ಗೌರಿಗೆ//



ಎರೆಡು ಪೀತಾಂಬರವನ್ನುಡಿಸಿ

ಸರ್ವಾಭರಣ ರಚಿಸಿದ

ಹರಳಿನೋಲೆ ವಜ್ರಮೂಗುತಿ

ವರಮಹಾಲಕ್ಷ್ಮಿ ದೇವಿಗೆ//



ನಿಗಮ ವೇದ್ಯಳೆ ನಿನ್ನ ಗುಣಗಳ

ಬಗೆಬಗೆಯಲಿ ವರ್ಣಿಪೆ

ತೆಗೆದು ಭಾಗ್ಯವ ನೀಡು ಎನುತ

ಜಗದೊಡೆಯನ ಮಡದಿಗೆ//



ಹುಟ್ಟುಬಡವೆಯ ಕಷ್ಟ ಕಳೆದು

ಕೊಟ್ಟಳರಸನ ಸಿರಿಯನು

ಹೆತ್ತ ಕುಮಾರನ ತೋರಿದಂತ

ಶುಕ್ರವಾರದ ಲಕ್ಷ್ಮಿಗೆ//

ಪಾಲಯಾಚ್ಯುತ ಪಾಲಯಾಚ್ಯುತ ಪಾಲಯಾ ಕಮಲಾಲಯ

ಪಾಲಯಾಚ್ಯುತ ಪಾಲಯಾಚ್ಯುತ ಪಾಲಯಾ ಕಮಲಾಲಯ

ಲೀಲಯಾಧ್ರುತ ಬೂಧರಾ೦ಬುರುಹೋದರ ಸ್ವಜನೋಧರ//



ಮಧ್ವಮಾನಸ ಪದ್ಮಭಾನು ಸಮಂಸ್ಮರ ಪ್ರತಿಮಂಸ್ಮರ

ಸ್ನಿಗ್ಧ ನಿರ್ಮಲ ಸೀತ ಕಾಂತಿಲ ಸನ್ಮುಖಂ ಕರುಣೋನ್ಮುಖಂ

ಹೃದ್ಯಕಂಭು ಸಮಾನ ಕಂಧರಮಕ್ಷಯಂ ದುರಿತಕ್ಷಯಂ

ಸ್ನಿಗ್ಧ ಸಂಸ್ತುತ ರೌಪ್ಯ ಪೀಠ ಕೃತಾಲಯಂ ಹರಿಮಾಲಯಂ//



ಅಂಗಧಾಧಿ ಸುಶೋಭಿ ಪಾನಿ ಯುಗೇನ ಸಂಕ್ಷುಭಿತೈನಸಂ

ತುಂಗ ಮಾಲ್ಯ ಮಣೀದ್ರಹಾರ ಸರೋರಸಂ ಖಲ ನೇರಸಂ

ಮಂಗಳಪ್ರದ ಮಂದಧಾಹಮ ವಿರಾಜಿತಂ ಭಜಿತಾಜಿತಂ

ತಂ ಗರೆಣ ವರ ರೌಪ್ಯ ಪೀಠ ಕೃತಾಲಯಂ ಹರಿಮಾಲಯಂ//



ಪೀನ ರಮ್ಯ ತನೂಧರಂ ಭಜ ಹೇ ಮನ ಶುಭ ಹೇ ಮನ

ಸ್ವಾನುಭಾವ ನಿದರ್ಶನಾಯ ದಿಶಂತ ಮರ್ದಿಶು ಸಂತಮಂ

ಆನತೋಸ್ಮಿ ನಿಜಾರ್ಜುನ ಪ್ರಿಯ ಸಾಧಕಂ ಖಲಭಾಧಕಂ

ಹೀನತೋಜಿತ ರೌಪ್ಯ ಪೀಠ ಕೃತಾಲಯಂ ಹರಿಮಾಲಯಂ//



ಹೇಮಮಾಲಿಕ ಕಿಂಕಿಣಿ ಮಾಲಿಕಾರಸಾಂಚಿತಂ ತಮವಾಂಚಿತಂ

ರತ್ನ ಕಾಂಚನ ಚಿತ್ರ ವಸ್ತ್ರಕಟೀಮ್ ಘನ ಪ್ರಭಯ ಘನಂ

ಕಮ್ರ ನಾಗ ಕರೋಪ ಮೋರು ಮನಾ ಮಯಂ ಶುಭದೀ ಮಯಂ

ನೌಮ್ಯಹಂ ವರ ರೌಪ್ಯ ಪೀಠ ಕೃತಾಲಯಂ ಹರಿಮಾಲಯಂ//



ವೃತ್ತ ಜಾನು ಮನೋಜ್ಞ ಜಂಘ ಮಮೋಹಧಂ ಪರಮೋಹಧಂ

ರತ್ನ ಕಲ್ಪ ನಖತ್ವಿಶ ಹೃತ ಹ್ರುತ್ತಮಸ್ತತಿಮುತ್ತಮಂ

ಪ್ರತ್ಯಹಂ ರಚಿತಾರ್ಚನಂ ರಮಯ ಸ್ವಯಾಗತಯ ಸ್ವಯಂ

ಚಿತ್ತ ಚಿಂತ್ಯ ರೌಪ್ಯ ಪೀಠ ಕೃತಾಲಯಂ ಹರಿಮಾಲಯಂ//



ಚಾರು ಪಾದ ಸರೋಜಾ ಯುಗ್ಮ ರುಚಯೋಮರೋ ಚಯಚಾಮರೋ

ಧಾರಾ ಮೋರ್ಧ ಜಾಬರ ಮಂಡಲ ರಂಜಕಂ ಕಲಿ ಭಂಜಕಂ

ವೀರತೌಚಿತ ಭೂಷಣಂ ವರ ನೂಪುರಮ ಸ್ವತನೂಪುರಂ

ಧಾರಯಾತ್ಮಣಿ ರೌಪ್ಯ ಪೀಠ ಕೃತಾಲಯಂ ಹರಿಮಾಲಯಂ//



ಶುಷ್ಕವಾದಿ ಮನೋತಿದೂರ ತರಾಗಮೋತ್ಸವ ದಾಗಮಂ

ಸತ್ಕವೀಂದ್ರ ವಚೋ ವಿಲಾಸ ಮಹೋದಹಂ ಮಹಿತೋದಯಂ

ಲಕ್ಷಯಾಮಿ ಯತೀಶ್ವರೈ ಕೃತ ಪೂಜನಂ ಗುಣ ಭಾಜನಂ

ಧಿಕೃತೋಪಮ ರೌಪ್ಯ ಪೀಠ ಕೃತಾಲಯಂ ಹರಿಮಾಲಯಂ//



ನಾರದಪ್ರಿಯ ಮಾವಿಶಾ೦ಭುರುಹೇಕ್ಷಣಂ ನಿಜ ಲಕ್ಷಣಂ

ತಾರಕೋಪಮ ಚಾರು ದೀಪ ಚಯ೦ತರೇ ಗತ ಚಿಂತರೆ

ಧೀರ ಮಾನಸ ಪೂರ್ಣಚಂದ್ರ ಸಮಾನಮಚ್ಯುತಮಾನಮ

ದ್ವಾರಕೋಪಮ ರೌಪ್ಯ ಪೀಠ ಕೃತಾಲಯಂ ಹರಿಮಾಲಯಂ//



ರೌಪ್ಯಪೀಠ ಕೃತಾಲಯಸ್ಯ ಹರೇ ಪ್ರಿಯಂ ದುರಿತಾಪ್ರಿಯಂ

ತದ್ ಪದಾರ್ಚಕ ವಾದಿರಾಜ ಯತೀರಿತಂ ಗುಣ ಪೂರಿತಂ

ಗೋಪ್ಯಮಷ್ಟಕ ಮೇದತೂಚಮುದೇ ಮಮಸ್ತಿವಹ ನಿರ್ಮಣ

ಪ್ರಾಪ್ಯ ಶುದ್ಧ ಫಲಾಯ ತತ್ರ ಸುಕೋಮಲಂ ಹೃತದೀಮಲಂ




Monday, February 18, 2013

ಭಗವದ್ಭಕ್ತರಲ್ಲಿ ಮನವಿ,

ಇದೇ ತಿಂಗಳ ಅಂದರೆ ೨೦-೦೨-೨೦೧೩ ಬುಧವಾರದಂದು, ಮುಳಬಾಗಿಲು ತಾಲೂಕಿನ ಮಾರಂಡಹಳ್ಳಿ ಗ್ರಾಮದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ, ಮಧ್ವನವಮಿ ಸಮಾರಂಭವನ್ನು ಆಯೋಜಿಸಲಾಗಿದೆ.

ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಕೋರಿಕೊಳ್ಳುತ್ತಿದ್ದೇವೆ.

ಶ್ರೀ ಆಂಜನೇಯ ಸೇವಾ ಸಮಿತಿ.

ಉಡುಪಿ ಶ್ರೀ ಕೃಷ್ಣ




Sunday, February 17, 2013

ಪವಮಾನ ಪವಮಾನ ಜಗದ ಪ್ರಾಣ

ಪವಮಾನ ಪವಮಾನ ಜಗದ ಪ್ರಾಣ


ಸಂಕರುಷಣ ಭವ ಭಯಾ ರಣ್ಯದಹನಾ

ಶ್ರವಣವೆ ಮೊದಲಾದ ನವವಿಧ ಭಕುತಿಯ

ತವಕದಿಂದಲಿ ಕೊಡು ಕವಿಜನಪ್ರಿಯ//



ಹೇಮಕಚ್ಚೂಟ ಉಪವೀತ ಧರಿತ ಮಾರುತ

ಕಾಮಾದಿವರ್ಗರಹಿತ ವ್ಯೋಮಾದಿ ಸಕಲವ್ಯಾವೃತ ನಿರ್ಭೀತ

ರಾಮಚಂದ್ರನ ನಿಜದೂತ ಯಾಮ ಯಮಕೆ ನಿನ್ನಾರಾಧಿಪುದಕೆ

ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ ಈ ಮನಸಿಗೆ ಸುಖಸ್ತೋಮವ

ತೋರುತ ಪಾಮರ ಮತಿಯನು ನೀ ಮಾಣಿಪುದೋ//



ವಜ್ರಶರೀರ ಗಂಭೀರ ಮುಕುಟಧರ ದುರ್ಜನವನಕುಟಾರ

ನಿರ್ಜರಮಣಿ ದಯಾಪರಾವರ ಉದಾರ ಸಜ್ಜನರಘ ಪರಿಹಾರ

ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು ಮೂರ್ಜಗವರಿವಂತೆ

ಘರ್ಜನೆ ಮಾಡಿದಿ ಹೆಜ್ಜೆ ಹೆಜ್ಜೆಗೆ ನಿನ್ನಬ್ಜ ಪಾದದೊಳಿ ಮೂರ್ಜಗದಲಿ ಭವವರ್ಜಿತ ನೆನಿಸೋ//



ಪ್ರಾಣಪಾನ ವ್ಯಾನ ಉದಾನ ಸಮಾನ ಆನಂದ ಭಾರತಿ ರಮಣ

ನೀನೆ ಶರ್ವಾದಿ ಗೀರ್ವಾಣಾದ್ಯರಿಗೆ ಜ್ಞಾನಧನ ಪಾಲಿಸಿ ವರೇಣ್ಯ

ನಾನು ನಿರುತದಲಿ ಏನೇನೆಸಗುವೆ ಮಾನಸಾದಿ ಕರ್ಮ

ನಿನಗೊಪ್ಪಿಸಿದೆನೋ ಪ್ರಾಣನಾಥ ಸಿರಿವಿಜಯವಿಠಲನ

ಕಾಣಿಸಿಕೊಡುವುದು ಭಾನು ಪ್ರಕಾಶ//

ರಥವನೇರಿದ ರಾಘವೇಂದ್ರ

ರಥವನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರಾ ರಥವನೇರಿದ

ಸತತ ಮಾರ್ಗದಿ ಸಂತತ ಸೇವಿಪರಿಗೆ

ಅತಿ ಹಿತದಲಿ ಮನೋರಥವ ನೀಡುವೆನೆಂದು//



ಚತುರ ದಿಕ್ಕು ದಿಕ್ಕುಗಳಲ್ಲಿ ಅರಿಪ ಜನರಲ್ಲಿ

ಮಿತಿಯಿಲ್ಲದೆ ಬಂದು ಓಲೈಸುತಲಿ ವರಗಳ ಬೇಡುತಲಿ

ನುತಿಸುತ ಪರಿಪರಿ ನತರಾಗಿಹರಿಗೆ

ಗತಿಪೇಳದೆ ಸರ್ವಥಾ ಬಿಡೆನೆಂದು//



ಅತುಲಮಹಿಮಾ ನೀಯಾ ದಿನದಲಿ ದಿತಿಜ ವಂಶದಲಿ

ಉತಪತ್ತಿಯಾಗಿ ಉಚಿತದಲಿ ಉತ್ತಮಮತಿಯಲ್ಲಿ

ಅತಿಶಯವಿರದೆ ಪಿತನಬಾಧೆಗೆ

ಮನ್ಮಥಪಿತನೊಲಿಸಿದೆ ಜಿತಕರಣದಲಿ//



ಪ್ರಥಮ ಪ್ರಹ್ಲಾದ ವ್ಯಾಸ ಮುನಿಯೇ ಯತಿ ರಾಘವೇಂದ್ರ

ಪ್ರತಿವಾದಿ ಕದಳಿವನ ಕರಿಯೇ ಕರಮುಗಿವೆನು ದೊರೆಯೇ

ಕ್ಷಿತಿಯೊಳು ಗೋಪಾಲ ವಿಠಲನ ಸ್ಮರಿಸುತ

ಪ್ರತಿ ಮಂತ್ರಾಲಯದೊಳು ಅತಿ ಮೆರೆವೆ//

Wednesday, February 13, 2013

ರಾಯ ಬಾರೋ ತಂದೆ ತಾಯಿ ಬಾರೋ

ರಾಯ ಬಾರೋ ತಂದೆ ತಾಯಿ ಬಾರೋ ನಮ್ಮನು ಕಾಯ ಬಾರೋ

ಮಾಯಿಗಳ ಮರ್ಧಿಸಿದ ರಾಘವೇಂದ್ರ ರಾಯ ಬಾರೋ//



ವಂದಿಪ ಜನರಿಗೆ ಮಂದಾರ ತರುವಂತೆ

ಕುಂದದಭೀಷ್ಟವ ಸಲಿಸುತಿರ್ಪೆರಾಯ ಬಾರೋ

ಕುಂದದಭೀಷ್ಟವ ಸಲಿಸುತಿರ್ಪೆ ಸರ್ವಜ್ಞ

ಮಂದನ ಮಾತಿಗೆ ರಾಘವೇಂದ್ರ, ರಾಯ ಬಾರೋ//



ಆರ್ಮೂರು ಏಳು ನಾಲ್ಕೆಂಟು ಗ್ರಂಥ ಸಾರಾರ್ಥ

ತೋರಿದ ಸರ್ವರಿಗೆ ನ್ಯಾಯದಿಂದ ರಾಯ ಬಾರೋ

ತೋರಿದ ಸರ್ವರಿಗೆ ನ್ಯಾಯದಿಂದ ಸರ್ವಜ್ಞ

ಸೂರಿಗಳರಸನೆ ರಾಘವೇಂದ್ರ, ರಾಯ ಬಾರೋ//



ರಾಮಪದಾಬ್ಜ ಸತತ ಭೃಂಗ ಕೃಪಾಂಗ

ಭ್ರಾಮಕ ಜನರ ಮಾನಭಂಗ ರಾಯ ಬಾರೋ

ಭ್ರಾಮಕ ಜನರ ಮಾನಭಂಗ ಮಾಡಿದ

ಧೀಮಂತರೊಡೆಯ ರಾಘವೇಂದ್ರ, ರಾಯ ಬಾರೋ//



ಭಾಸುರ ಚರಿತನೆ ಭೂಸುರ ವಂದ್ಯನೆ

ಶ್ರೀ ಸುಧೀಂದ್ರಾರ್ಯರ ವರಪುತ್ರಾ ರಾಯ ಬಾರೋ

ಶ್ರೀ ಸುಧೀಂದ್ರಾರ್ಯರ ವರಪುತ್ರಾನೆನಿಸಿದೆ

ದೈಷಿಕರೊಡೆಯ ರಾಘವೇಂದ್ರ, ರಾಯ ಬಾರೋ//



ಭೂತಳನಾಥನ ಭೀತಿಯ ಬಿಡಿಸಿದೆ

ಪ್ರೇತತ್ವ ಕಳೆದ ಮಹಿಷಿಯ ರಾಯ ಬಾರೋ

ಪ್ರೇತತ್ವ ಕಳೆದ ಮಹಿಷಿಯ ಮಹ ಮಹಿಮ

ಜಗನ್ನಾಥ ವಿಠಲನ ಪ್ರೀತಿ ಪಾತ್ರಾ, ರಾಯ ಬಾರೋ//

ಶರಣು ಸಿದ್ಧಿ ವಿನಾಯಕ

ಶರಣು ಸಿದ್ಧಿ ವಿನಾಯಕ ಶರಣು ವಿದ್ಯ ಪ್ರದಾಯಕ

ಶರಣು ಪಾರ್ವತಿತನಯ ಮೂರುತಿ ಶರಣು ಮೂಷಕವಾಹನ//


ನಿಟಿಲ ನೇತ್ರನೆ ವರದ ಪುತ್ರನೆ ನಾಗಭೂಷಣ ಪ್ರಿಯನೆ

ಕಟಕಟಾ೦ಗದ ಕೋಮಲಾಂಗನೆ ಕರ್ಣ ಕುಂಡಲಧಾರನೆ//


ಬಟ್ಟ ಮುತ್ತಿನ ಹಾರಪದಕನೆ ಬಾಹುಹಸ್ತ ಚತುಷ್ಟನೆ

ಇಟ್ಟ ತೊಡುಗೆಯ ಹೇಮಕಂಕಣ ಪಾಶಾಂಕುಶ ಧಾರನೆ//


ಕುಕ್ಷಿ ಮಹಾಲಂಬೋದರನೆ ನೀ ಇಕ್ಷುಚಾಪನ ಗೆಲಿದನೆ

ಪಕ್ಷಿವಾಹನ ಸಿರಿ ಪುರಂದರ ವಿಠಲನೆ ನಿಜದಾಸನೆ//

ಲಿಂಗಾಷ್ಟಕಂ - ಶಿವ ಸ್ತುತಿ

ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ

ನಿರ್ಮಲ ಭಾಷಿತ ಶೋಭಿತ ಲಿಂಗಂ

ಜನ್ಮಜ ದುಃಖ ವಿನಾಶಕ ಲಿಂಗಂ

ತತ್ಪ್ರಣಮಾಮಿ ಸದಾಶಿವ ಲಿಂಗಂ



ದೇವಮುನಿ ಪ್ರವರಾರ್ಚಿತ ಲಿಂಗಂ

ಕಾಮ ದಹನ ಕರುಣಾಕರ ಲಿಂಗಂ

ರಾವಣ ದರ್ಪ ವಿನಾಶಕ ಲಿಂಗಂ

ತತ್ಪ್ರಣಮಾಮಿ ಸದಾಶಿವ ಲಿಂಗಂ



ಸರ್ವ ಸುಗಂಧ ಸುಲೇಪಿತ ಲಿಂಗಂ

ಬುದ್ಧಿ ವಿವರ್ಧನ ಕಾರಣ ಲಿಂಗಂ

ಸಿದ್ಧ ಸುರಾಸುರ ವಂದಿತ ಲಿಂಗಂ

ತತ್ಪ್ರಣಮಾಮಿ ಸದಾಶಿವ ಲಿಂಗಂ



ಕನಕ ಮಹಾಮಣಿ ಭೂಷಿತ ಲಿಂಗಂ

ಪಣಿಪತಿ ವೇಷ್ಟಿತ ಶೋಭಿತ ಲಿಂಗಂ

ದಕ್ಷ ಸುಯಜ್ಞ ವಿನಾಶಕ ಲಿಂಗಂ

ತತ್ಪ್ರಣಮಾಮಿ ಸದಾಶಿವ ಲಿಂಗಂ



ಕುಂಕುಮ ಚಂದನ ಲೇಪಿತ ಲಿಂಗಂ

ಭಾವೈರ್ ಭಕ್ತಿ ಭಿರೆವಚ ಲಿಂಗಂ

ದಿನಕರ ಕೋಟಿ ಪ್ರಭಾಕರ ಲಿಂಗಂ

ತತ್ಪ್ರಣಮಾಮಿ ಸದಾಶಿವ ಲಿಂಗಂ



ಅಷ್ಟ ದಳೋಪರಿ ವೇಷ್ಟಿತ ಲಿಂಗಂ

ಸರ್ವ ಸಮುದ್ಭವ ಕಾರಣ ಲಿಂಗಂ

ಅಷ್ಟ ದರಿದ್ರ ವಿನಾಶಕ ಲಿಂಗಂ

ತತ್ಪ್ರಣಮಾಮಿ ಸದಾಶಿವ ಲಿಂಗಂ



ಸುರಗುರು ಸುರವರ ಪೂಜಿತ ಲಿಂಗಂ

ಸುವರ್ಣ ಪುಷ್ಪ ಸದಾರ್ಚಿತ ಲಿಂಗಂ

ಪರಾತ್ಪರಂ ಪರಮಾತ್ಮಕ ಲಿಂಗಂ

ತತ್ಪ್ರಣಮಾಮಿ ಸದಾಶಿವ ಲಿಂಗಂ



ಲಿಂಗಾಷ್ಟಕ ಮಿದಂ ಪುಣ್ಯಂ

ಯಃ ಪಟೇತ್ ಶಿವಸನ್ನಿಧೌ

ಶಿವಲೋಕ ಮಹಾಪ್ನೋತಿ

ಶಿವೇನ ಸಹ ಮೋದೇತ್

ಶ್ರೀ ಅಷ್ಟ ಲಕ್ಷ್ಮಿ ಸ್ತೋತ್ರ

ಸುಮನಸವಂದಿತ ಮಾಧವಿ ಚಂದ್ರ ಸಹೋದರಿ ಹೇಮಮಯೀ

ಮುನಿಗಣ ಮಂಡಿತ ಮೋಕ್ಷ ಪ್ರದಾಯಿನಿ ಮಂಜುಳಾ ಭಾಷಿಣಿ ವೇದನುತೆ

ಪಂಕಜವಾಸಿನಿ ದೇವಸುಪೂಜಿತ ಸದ್ಗುಣ ವರ್ಷಿಣಿ ಸನ್ನಿಯುತೆ

ಜಯ ಜಯ ಹೇ ಮಧುಸೂದನ ಕಾಮಿನಿ ಆದಿಲಕ್ಷ್ಮಿ ಸದಾ ಪಾಲಯಮಾಂ...



ಆಯೋ ಕಲಿ ಕಲ್ಮಶ ನಾಶಿನಿ ಕಾಮಿನಿ ವೈದಿಕ ರೂಪಿಣಿ ವೇದಮಯೀ

ಕ್ಷೀರ ಸಮುದ್ಭವ ಮಂಗಳ ರೂಪಿಣಿ ಮಂತ್ರ ನಿವಾಸಿನಿ ಮಂತ್ರನುತೆ

ಮಂಗಳ ಧ್ಯಾಯಿನಿ ಅಂಬುಜ ವಾಸಿನಿ ದೇವ ಗಣಾರ್ಚಿತ ಪಾದಯುತೆ

ಜಯ ಜಯ ಹೇ ಮಧುಸೂದನ ಕಾಮಿನಿ ಧನಲಕ್ಷ್ಮೀ ಸದಾ ಪಾಲಯಮಾಂ...



ಜಯವರ ವರ್ಣನಿ ವೈಷ್ಣವಿ ಭಾರ್ಗವಿ ಮಂತ್ರ ಸ್ವರೂಪಿಣಿ ಮಂತ್ರಮಯೀ

ಸುರಗಣ ಪೂಜಿತ ಶೀಘ್ರ ಫಲಪ್ರದ ಜ್ಞಾನ ವಿಕಾಸಿನಿ ಶಸ್ತ್ರನುತೆ

ಭವಭಯ ಹಾರಿಣಿ ಪಾಪ ವಿಮೋಚಿನಿ ಸಾಧು ಜನಾರ್ಚಿತ ಪಾದಯುತೆ

ಜಯ ಜಯ ಹೇ ಮಧುಸೂದನ ಕಾಮಿನಿ ಧೈರ್ಯಲಕ್ಷ್ಮಿ ಸದಾ ಪಾಲಯಮಾಂ



ಜಯ ಜಯ ದುರ್ಗತಿ ನಾಶಿನಿ ಕಾಮಿನಿ ಸರ್ವ ಫಲಪ್ರದ ಶಾಸ್ತ್ರ ಮಯೀ

ರಥಗಜ ತುರಗ ಪದತಿ ಸಮಾವೃತ ಪರಿಜನ ಮಂಡಿತ ಲೋಕನುತೆ

ಹರಿಹರ ಬ್ರಹ್ಮ ಸುಪೂಜಿತ ಸೇವಿತ ತಾಪ ನಿವಾರಿಣಿ ಪಾದಯುತೆ

ಜಯ ಜಯ ಹೇ ಮಧುಸೂದನ ಕಾಮಿನಿ ಗಜಲಕ್ಷ್ಮೀ ಸದಾ ಪಾಲ್ಯಮಾಂ...



ಅಯಿ ಖಗವಾಹಿನಿ ಮೋಹಿನಿ ಚಕ್ರಿಣಿ ರಾಗ ವಿವರ್ಧಿನಿ ಜ್ಞಾನಮಯೀ

ಗುಣಗಣ ವರ್ಧಿನಿ ಲೋಕ ಹಿತೈಷಿಣಿ ಸ್ವರ ಸಪ್ತ ಭೂಷಿತ ಗಣನುತೆ

ಸಕಲ ಸುರಾಸುರ ದೇವ ಮುನೀಶ್ವರ ಮಾನವ ವಂದಿತ ಪಾದಯುತೆ

ಜಯ ಜಯ ಹೇ ಮಧುಸೂದನ ಕಾಮಿನಿ ಸಂತಾನಲಕ್ಷ್ಮಿ ಸದಾ ಪಾಲಯಮಾಂ



ಜಯ ಕಮಲಾಸಿನಿ ಸದ್ಗತಿ ದಾಯಿನಿ ಜ್ಞಾನ ವಿಕಾಸಿನಿ ಗಾನಮಯೀ

ಅನುದಿನ ಮರ್ಚಿತ ಕುಂಕುಮ ಧೂಸರ ಭೂಷಿತ ವಾಸಿತ ವಧ್ಯನುತೆ

ಕನಕಧರಾಸ್ತುತಿ ವೈಭವ ವಂದಿತ ಶಂಕರ ದೇಶಿಕ ಮನ್ಯಪತೆ

ಜಯ ಜಯ ಹೇ ಮಧುಸೂದನ ಕಾಮಿನಿ ವಿಜಯಲಕ್ಷ್ಮಿ ಸದಾ ಪಾಲಯಮಾಂ



ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ ಶೋಕ ವಿನಾಶಿನಿ ರತ್ನಮಯೀ

ಮಣಿಮಯ ಭೂಷಿತ ಕರ್ಮ ವಿಭೂಷಣ ಶಾಂತಿ ಸಮಾವೃತ ಹಸ್ಯಮುಖೆ

ನವನಿಧಿ ದಾಯಿನಿ ಕಲಿಮಲ ಹಾರಿಣಿ ಕಾಮಿತ ಫಲಪ್ರದ ಹಸ್ತಯುತೆ

ಜಯ ಜಯ ಹೇ ಮಧುಸೂದನ ಕಾಮಿನಿ ವಿದ್ಯಾಲಕ್ಷ್ಮಿ ಸದಾ ಪಾಲಯಮಾಂ



ಧಿಮಿಧಿಮಿ ಡಿ೦ಡಿಮಿ ಡಿ೦ಡಿಮಿ ಡಿ೦ಡಿಮಿ ದುಂದುಭಿ ನಾದ ಸುಪೂರ್ಣಮಯೀ

ಘುಮಘುಮ ಘುಮಘುಮ ಘುಮಘುಮ ಶಂಖ ನಿನಾದ ಸುವಧ್ಯನುತೆ

ವೇದ ಪುರಾಣೇತಿಹಾಸ ಸುಪೂಜಿತ ವೈದಿಕ ಮಾರ್ಗ ಪ್ರದರ್ಶಯುತೆ

ಜಯ ಜಯ ಹೇ ಮಧುಸೂದನ ಕಾಮಿನಿ ಧನಲಕ್ಷ್ಮಿ ಸದಾ ಪಾಲಯಮಾಂ

Tuesday, February 12, 2013

ಗಣೇಶ ದ್ವಾದಶನಾಮ ಸ್ತೋತ್ರಂ

ನಮಾಮಿ ಶಿರಸಾ ದೇವಂ ಗೌರೀಪುತ್ರಂ ವಿನಾಯಕಂ

ಭಕ್ತ್ಯಾ ಯಃ ಸಂಸ್ಮರೆನ್ನಿತ್ಯಂ ಆಯುಷ್ಕಾಮಾರ್ಥಸಿದ್ಧಯೇ//

ಪ್ರಥಮಂ ವಕ್ರತುಂಡಂ ತು ಹ್ಯೇಕದಂತಂ ದ್ವಿತೀಯಕಂ

ತೃತೀಯಂ ಕೃಷ್ಣಪಿಂಗಂ ಚ ಚತುರ್ಥಂ ಗಜಕರ್ಣಕಂ//

ಲಂಬೋದರಂ ಪಂಚಮಂ ಚ ಷಷ್ಟ೦ ವಿಕಟಮೇವ ಚ

ಸಪ್ತಮಂ ವಿಘ್ನರಾಜೇಂದ್ರ೦ ಧೂಮ್ರವರ್ಣಂ ತಥಾಷ್ಟಮಂ//

ನವಮಂ ಪಾಲಚಂದ್ರಂ ತು ದಶಮಂ ಚ ವಿನಾಯಕಂ

ಏಕಾದಶಂ ಗಣಪತಿಂ ದ್ವಾದಶಂ ಹಸ್ತಿರಾಣ್ಮುಖಂ//

ಏತದ್ವಾದಶನಾಮಾನಿ ತ್ರಿಸಂಧ್ಯಂ ಯಃ ಪಟೇನ್ನರ:

ವಿದ್ಯಾರ್ಥೀ ಲಭತೇ ವಿದ್ಯಾಂ ಧನಾರ್ಥೀ ಲಭತೇ ಧನಂ//

ಶ್ರೀ ಕೃಷ್ಣ ಅಷ್ಟಕಂ

ವಾಸುದೇವ ಸುತಂ ದೇವಂ ಕಂಸ ಚಾಣೂರ ಮರ್ದನಂ


ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ//



ಅಥಸೀ ಪುಷ್ಪ ಸಂಕಾಶಂ ಹಾರ ನೂಪುರ ಶೋಭಿತಂ


ರತ್ನ ಕಂಕಣ ಕೇಯುರಂ ಕೃಷ್ಣಂ ವಂದೇ ಜಗದ್ಗುರುಂ//



ಕುಟಿಲಾಲಕ ಸಂಯುಕ್ತಂ ಪೂರ್ಣ ಚಂದ್ರ ನಿಭಾನನಂ


ವಿಲಸತ್ ಕುಂಡಲ ಧರಂ ಕೃಷ್ಣಂ ವಂದೇ ಜಗದ್ಗುರುಂ//



ಮಂದಾರ ಗಂಧ ಸಂಯುಕ್ತಂ ಚಾರುಹಾಸಂ ಚತುರ್ಭುಜಂ


ಬಾರ್ಹಿ ಪಿಂಚವ ಚುಡಗಂ ಕೃಷ್ಣಂ ವಂದೇ ಜಗದ್ಗುರುಂ//



ಉತ್ಪುಲ್ಲ ಪದಂ ಪತ್ರಕ್ಷಂ ನೀಲ ಜೀಮೂತ ಸನ್ನಿಭಂ


ಯಾದವಾನಾಂ ಶಿರೋ ರತ್ನಂ ಕೃಷ್ಣಂ ವಂದೇ ಜಗದ್ಗುರುಂ//



ರುಕ್ಮಿಣಿ ಕೇಳಿ ಸಂಯುಕ್ತಂ ಪೀತಾಂಬರ ಸುಶೋಭಿತಂ


ಆವಾಪ್ತ ತುಳಸಿ ಗಂಧಂ , ಕೃಷ್ಣಂ ವಂದೇ ಜಗದ್ಗುರುಂ//



ಗೋಪಿಕಾನಾಂ ಕುಚತ್ವಂತ್ವ ಕುಂಕುಮಾಂಗಿತ ವಕ್ಷಸಂ


ಶ್ರೀನಿಕೇತಂ ಮಹೇಶ್ವಾಸಂ ಕೃಷ್ಣಂ ವಂದೇ ಜಗದ್ಗುರುಂ//



ಶ್ರೀವತ್ಸಾಂಕಂ ಮಹೋರಸ್ಕಂ ವನ ಮಾಲ ವಿರಯಿತಂ


ಶಂಖ ಚಕ್ರ ಧರಂ ದೇವಂ ಕೃಷ್ಣಂ ವಂದೇ ಜಗದ್ಗುರುಂ//



ಕೃಷ್ಣಾಷ್ಟಕಂ ಇದಂ ಪುಣ್ಯಂ ಪ್ರಾಥರುಥ್ಥಾಯ ಯಃ ಪಟೇತ್


ಕೋಟೀ ಜನ್ಮ ಕೃತಂ ಪಾಪಂ ಸ್ಮರನಾಥ್ ತಸ್ಯ ನಶ್ಯತಿ//



Thursday, February 7, 2013

ಶ್ರೀ ರಾಘವೇಂದ್ರ ಕವಚ

ಕವಚಂ ಶ್ರೀ ರಾಘವೇಂದ್ರಸ್ಯ ಯತೀಂದ್ರಸ್ಯ ಮಹಾತ್ಮನ

ವಕ್ಷ್ಯಾಮಿ ಗುರುವರಸ್ಯ ವಾಂಚಿತಾರ್ಥ ಪ್ರದಾಯಕಂ//



ಋಷಿರಸ್ಯ ಅಪ್ಪಣ್ಣಾಚಾರ್ಯ ಚಾಂದೂನುಷ್ಟುಪ್ ಪ್ರಕೀರ್ತಿತಮ್

ದೇವತಾ ಶ್ರೀ ರಾಘವೇಂದ್ರ ಗುರುರಿಷ್ಟಾರ್ಥ ಸಿದ್ಧಯೇ//



ಅಷ್ಟೋತ್ತರಶತಮ್ ಜಪ್ಯಂ ಭಕ್ತಿ ಯುಕ್ತೇನ ಚೇತಸ

ಉದ್ಯತ್ ಪ್ರದ್ಯೋತನಧ್ಯೋತ ಧರ್ಮ ಕೂರ್ಮಸನೆ ಸ್ತಿತಂ//



ಖದ್ಯೋ ಖದ್ಯೋತಧ್ಯೋತ ಧರ್ಮ ಕೂರ್ಮಸನೆ ಸ್ತಿತಂ

ಧೃತ ಕಾಷಾಯವಸನಂ ತುಳಸೀಧರ ವಕ್ಷಸಂ//



ದೂರ್ದಂಡ ವಿಲಾಸದ್ದಂಡ ಕಮಂಡಲ ವಿರಾಜಿತಂ/

ಅಭಯ ಜ್ಞಾನಮುದ್ರಾಕ್ಷ ಮಾಲಾ ಲೋಲಕ ಕರಾ೦ಭುಜಂ//



ಯೋಗೀಂದ್ರ ವಂದ್ಯ ಪಾದಾಬ್ಜಂ ರಾಘವೇಂದ್ರ ಗುರುಂ ಭಜೆ

ಶಿರೋ ರಕ್ಷತುಮೆ ನಿತ್ಯಂ ರಾಘವೇ೦ದ್ರೋ ಭಿಲೇಸ್ತದ//



ಪಾಪಾದ್ರಿಪಾತನೆ ವಜ್ರ ಕೇಶಾನ್ ರಕ್ಷತುಮೆ ಗುರು

ಕ್ಷಮಾಸುರ ಗಣಾಧೀಶೋ ಮುಖಂ ರಕ್ಷತುಮೆ ಗುರು//



ಹರಿಸೇವಾಲಬ್ಧ ಸರ್ವಸಂಪತ್ ಫಲಂ ಮಮಾವತು

ದೇವಸ್ವಭಾವೋ ವತುಮೆ ದೃಷೌ ತತ್ವ ಪ್ರದರ್ಶಕ//



ಇಷ್ಟಪ್ರದಾನೆ ಕಲ್ಪದರು ಶ್ರೋತ್ರೆ ಶ್ರುತ್ಯರ್ಧ ಬೋಧಕ

ಭವ್ಯ ಸ್ವರೂಪಮೆ ನಾಸಾಂ ಜೀವಮೆ ವತು ಭವ್ಯಕೃತ್//



ಆಶ್ಯಂ ರಕ್ಷತುಮೆ ದುಃಖತೂಲ ಸಂಘಾಗ್ನಿ ಚರ್ಯಕ

ಸುಖ ಧೈರ್ಯಾದಿ ಸುಗುಣೋ ದ್ರುವೌ ಮಮ ಸದಾವತು//



ಔಷ್ಥ ರಕ್ಷತುಮೆ ಸರ್ವಗ್ರಹ ನಿಗ್ರಹ ಶಕ್ತಿಮಾನ್

ಉಪಪ್ಲವ ವೋದಧೇಸೇತುರ್ದಂತಾನ್ ರಕ್ಷತುಮೆ ಸದಾ//



ನಿರಸ್ತ ದೋಷೋಮೆ ಪಾತುಮೆ ಕಪೋಲೌ ಕರ್ವಪಾಲಕ

ನಿರವದ್ಯ ಮಹಾವೇಶ ಕಾಂತಮೇವತು ಸರ್ವದಾ//



ಕರ್ಣಮೂಲೇತು ಪರ್ತ್ಯರ್ಧಿ ಮೂಕತ್ವಕರವಾಗಿಮ

ಪರವಾದಿಜಯೇ ಪಾಟು ಹಸ್ತ ಸತಾತ್ವ ವಾದಕೃತ್//



ಕರೌ ರಕ್ಷತುಮೆ ವಿದ್ಯತ್ ಪರಿಜ್ಞೆಯ ವಿಶೇಷವಾನ್

ವಾಗ್ವೈಖರಿ ಭವ್ಯ ಶೇಷಜಯೀ ವಕ್ಷಸ್ತಳಂ ಮಮ//



ಸತೀ ಸಂತಾನ ಸಂಪತ್ತಿ ಭಕ್ತಿ ಜ್ಞಾನಾದಿ ವೃದ್ಧಿಕಂ

ಸ್ತಾನೌ ರಕ್ಷತುಮೆ ನಿತ್ಯಂ ಶರೀರವದ್ಯ ಹಾನಿಕೃತ್//



ಪುಣ್ಯವರ್ಧನ ಪಾದಾಬ್ಜಾಭಿಷೇಕ ಜಲ ಸಂಚಯ

ನಾಭಿಂ ರಕ್ಷತುಮೆ ಪಾರೌಶ್ವ ದ್ಯುಣದೀತುಲ್ಯ ಸದ್ಗುಣ//



ಪ್ರವ್ರುಷ್ಟಂ ರಕ್ಷತುಮೆ ನಿತ್ಯಂ ತಾಪತ್ರಯ ವಿನಾಶಕೃತ್

ಕತ್ತಿಮೆ ರಕ್ಷತು ಸದಾ ವಂಧ್ಯಾ ಸತ್ಪುತ್ರದಾಯಕ//



ಜಗನಂ ಮೇವತು ಸದಾ ವ್ಯಂಗಸ್ವಂಗ ಸಮೃದ್ಧಿಕೃತ್

ಗುಹ್ಯಂ ರಕ್ಷತುಮೆ ಪಾಪ ಗ್ರಹಾರಿಷ್ಟ ವಿನಾಶಕೃತ್//



ಭಕಾಘ ವಿಧ್ವಂಸಕರ ನಿಜಮೂರ್ತಿ ಪ್ರದಾಯಕ

ಮೂರ್ತಿಮಾನ್ ಪಾತುಮೆ ರೋಮ ರಾಘವೇಂದ್ರ ಜಗದ್ಗುರು//



ಸರ್ವತಂತ್ರ ಸ್ವತಂತ್ರೋಸೌ ಜಾನುನೀಮೆ ಸದಾವತು

ಜಂಘೆ ರಕ್ಷತುಮೆ ನಿತ್ಯಂ ಶ್ರೀ ಮಧ್ವ ಮತವರ್ಧನ//



ವಿಜಯೀಂದ್ರ ಕರಾಬ್ಜೋತ್ತ ಸುಧೀಂದ್ರ ವರಪುತ್ರಕಃ

ಗುಲ್ಫೌ ಶ್ರೀ ರಾಘವೇ೦ದ್ರೋಮೆ ಯತಿರಾಟ್ ಸರ್ವದಾವತು//



ಪಾದೌ ರಕ್ಷತುಮೆ ಸರ್ವ ಭಯಹಾರಿ ಕೃಪಾನಿಧಿ

ಜ್ಞಾನಭಕ್ತಿ ಸುಪುತ್ರಾಯು: ಯಶಃ ಶ್ರೀ ಪುಣ್ಯವರ್ಧನಃ//



ಕರಪಾದಾಂಗುಲೀ ಸರ್ವ ಮಮಾವತು ಜಗದ್ಗುರು

ಪ್ರತಿವಾದಿ ಜಯಸ್ವಾಂತ ಭೇದ ಚಿಹ್ನಾದರೋ ಗುರು//



ನಖಾನವತುಮೆ ಸರ್ವಾನ್ ಸರ್ವ ಶಾಸ್ತ್ರ ವಿಶಾರದ

ಅಪರೋಕ್ಷಿಕೃತಶ್ರೀಶ ಪ್ರಾಚ್ಯಂ ದಿಶಿ ಸದಾವತು//



ಸದಕ್ಷಿಣೆ ಚಾವತುಮಾಂ ಸಮುಪೇಕ್ಷಿತ ಭಾವಜ

ಅಪೇಕ್ಷಿತ ಪ್ರದಾತಾಚ ಪ್ರಚೀತ್ಯಮವತು ಪ್ರಭು//



ದಯಾ ದಾಕ್ಷಿಣ್ಯ ವೈರಾಗ್ಯ ವಾಕ್ಪಾಟವ ಮುಖಾಂಕಿತ

ಸದೊದೀಚ್ಯಮಪತುಮಾಂ ಶಾಪಾನುಗ್ರಹ ಶಕ್ತಿಮಾನ್//



ನಿಖೆಂದ್ರಿಯ ದೋಷಗಣ ಮಹಾನುಗ್ರಹಕೃದ್ ಗುರು

ಅದಾಚ್ಯೋರ್ವಂ ಚಾವತು ಮಾಮುಷ್ಟಾಕ್ಷರ ಮನೂದಿತ//



ಆತ್ಮಾತ್ಮೀಯ ಘರಾಶಿಘ್ನ ಮಾಮ್ ರಕ್ಷತು ವಿಧಿಕ್ಷುಚ

ಚತುರ್ನಾಂಚ ಪುಮಾರ್ಧಾನಂ ದಾತಾ ಪ್ರಾತ ಸದಾವತು//



ಸಂಗಮೇವತು ಮಾಮ್ ನಿತ್ಯಂ ತತ್ವನಿತ್ಸರ್ವ ಸುಖಾಕೃತ್

ಮಾಧ್ಯಾಹ್ನೆ ಗಮ್ಯ ಮಹಿಮಾ ಮಾಮ್ ರಕ್ಷತು ಮಹಿಷಯ//



ಮೃತಪೋತ ಪ್ರಾಣದಾತ ಸಾಯಾಹ್ನೆ ಮಾಮ್ ಸದಾವತು

ವೇದಿಸ್ತ ಪುರುಷೋಜೀವಿ ನಿಷಿಧೆ ಪಾತು ಮಾಮ್ ಗುರು//



ವಹ್ನಿಸ್ಥ ಮಾಲಿಕೂಧಾರ್ಥ ವಹ್ನಿ ತಾಪಾತ್ಸದಾವತು

ಸಮಗ್ರ ಟೀಕಾ ವ್ಯಾಖ್ಯಾತ ಗುರುಮೆ ವಿಷಯೇವತು//



ಕಾಂತಾರೆವತು ಮಾಮ್ ನಿತ್ಯಂ ಭಟ್ಟ ಸಂಗ್ರಹಕೃದ್ ಗುರು

ಸುಧಾಪರಿಮಳೋಧಾರ್ತ ಸುಚಂದಸ್ತು ಸದಾವತು//



ರಾಜಚೋರ ವಿಷವ್ಯಾಧಿಯ ದೋವಸ್ಯಾಮ್ರುಗಾಧಿಭಿ

ಅಪಸ್ಮಾರಾಪಹರ್ತಾನ ಶಾಸ್ತ್ರ ವಿತ್ಸರ್ವದಾವತು//



ಗತೌ ಸರ್ವತ್ರ ಮಾಮ್ ಪಾತು ಉಪನಿಷದರ್ಧಕೃದ್ ಗುರು

ಚಾಗ್ವ ಶ್ಯನಕೃದಾಚಾರ್ಯ ಸ್ತಿತೌ ರಕ್ಷತು ಮಾಮ್ ಸದಾ//



ಮಂತ್ರಾಲಯ ನಿವಾಸೀ ಮಾಮ್ ಜಗತ್ಕಾಲೇ ಸದಾವತು

ನ್ಯಾಯ ಮುಕ್ತಾವಲೀಕರ್ತ ಸ್ವಪ್ನಂ ರಕ್ಷತು ಮಾಮ್ ಸದಾ//



ಮಾಮ್ ಪಾತು ಚಂದ್ರಿಕಾ ವ್ಯಾಖ್ಯಾಕರ್ತಾ ಸುಪ್ತೌಹಿ ತತ್ವಕೃತ್

ಸುತಂತ್ರ ದೀಪಿಕಕರ್ತ ಮುಕುಟೌ ರಕ್ಷತು ಮಾಮ್ ಸದಾ//



ಗೀತಾರ್ಥ ಸಂಗ್ರಹಕರ್ತಾ ಸದಾ ರಕ್ಷತು ಮಾಮ್ ಗುರು

ಶ್ರೀ ಮಧ್ವಮತ ದುಗ್ಧಾಬ್ಧಿ ಚಂದ್ರೋವತು ಸದಾನಘ//



ಫಲಸ್ತುತಿ

ಇತಿ ಶ್ರೀ ರಾಘವೇಂದ್ರಸ್ಯ ಕವಚಂ ಪಾಪ ನಾಶನಂ

ಸರ್ವ ವ್ಯಾಧಿ ಹರಮ್ ಸದ್ಯ ಪಾಪನಂ ಪುಣ್ಯವರ್ಧನಂ//



ಯ ಇದಂ ಪಠತೇ ನಿತ್ಯಂ ನಿಯಮೇನ ಸಮಾಹಿತ

ಅದೃಷ್ಟಿ ಪೂರ್ಣದೃಷ್ಟಿ ಸ್ಯಾದೇಡ ಮೂಕೋಪಿ ವಾಕ್ಪತಿ//



ಪೂರ್ಣಾಯು ಪೂರ್ಣ ಸಂಪತ್ತಿ ಭಕ್ತಿ ಜ್ಞಾನ ವೃದ್ಧಿಕೃತ್

ಪೀತ್ವಾ ವಾರಿ ನರೂ ಯೇನ ಕವಚೇನಾಭಿ ಮಂತ್ರಿತಂ//



ಜಹಾತಿ ಕುಕ್ಷಿಗಾನ್ ರೋಗಾನ್ ಗುರುವರ್ಯ ಪ್ರಸಾದತ

ಪ್ರದಕ್ಷಿಣ ನಮಸ್ಕಾರಾನ್ ಗುರೋ ವೃಂದಾವನಸ್ಯ//



ಕರೋತಿ ಪರಾಯ ಭಕ್ತಾ ತದೇತ್ ಕವಚಂ ಪಠನ್

ಪಂಗು ಕೂನಿಶ್ಚ ಪೌಂಗದ ಪೂರಾಂಗೋ ಜಾಯತೆ ದರ್ಶನಂ//



ಶೇಷಾಶ್ಚ ಕುಷ್ಟಪೂರ್ವಶ್ಚ ನಷ್ಯಾ೦ತ್ಯಾ ಮಯಿರಾಶಯಾ

ಅಷ್ಟಾಕ್ಷರೇನ ಮಂತ್ರೇನ ಸ್ತೋತ್ರೆಣ ಕವಚೇನ ಚ//



ವೃಂದಾವನೇ ಸನ್ನಿಹಿತ ಮಾಭಿಶಿಚ್ಯ ಯಥಾವಿಧಿ

ಯಂತ್ರೆ ಮಂತ್ರಾಕ್ಷರಾನ್ಯಸ್ಥ ವಿಲಿಖ್ಯಾರ್ತ ಪ್ರತಿಷ್ಟಿತಂ//



ಷೋಡಶೈ ರೂಪಚಾರ್ಯೈಶ್ಚ ಸಂಪೂಜ್ಯ ತ್ರಿಜಗದ್ಗುರುಂ

ಅಷ್ಟೋತ್ತರ ಶತಾಕ್ಯಾಭಿರರ್ಚಯೇತ್ಕು ಸುಮಾನಿಧಿಭಿ//



ಫಲೈಶ್ಚ ವಿವಿದೈರೇವ ಗುರೋರರ್ಚಾಂ ಪ್ರಕುರ್ವತ

ನಾಮ ಶ್ರವಣ ಮಾತ್ರೇನ ಗುರುವರ್ಯ ಪ್ರಸಾದತ//



ಭೂತ ಪ್ರೇತ ಪಿಶಾಚಾದ್ಯ ವಿದ್ರವಂತಿ ದಿಶೂ ದಶ

ಪಟೇದೆದತ್ರಿಕಂ ನಿತ್ಯಂ ಗುರೋ ವೃಂದಾವನಾ೦ತಿಕೆ//



ದೀಪಂ ಸಂಯೋಜ್ಯವಿದ್ಯಾವಾನ್ ಸುಖಾಸು ವಿಜಯೀ ಭವೇತ್

ರಾಜ ಚೋರ ಮಹಾವ್ಯಾಘ್ರ ಸರ್ಪನಕ್ರಾದಿ ಪೀಡನಾತ್//



ಕವಚಸ್ಯ ಪ್ರಭವೇನ ಭಯಂ ತಸ್ಯ ನಜಾಯತೆ

ಸೋಮಸೂರ್ಯೋ ಪರಾಗಾದಿ ಕಾಲೇ ವೃಂದಾವನಾ೦ತಿಕೆ//



ಕವಚಾದ್ರಿಕಂ ಪುಣ್ಯಮಪ್ಪಣ್ಣಾಚಾರ್ಯ ದರ್ಶಿತಂ

ಜಪೇದ ಸಾಧನಂ ಪುತ್ರಾನ್ ಭಾರ್ಯಾಂ ಚ ಸುಮನೋರಮಂ//



ಜ್ಞಾನಂ ಭಕ್ತಿಂ ಚ ವೈರಾಗ್ಯಂ ಭುಕ್ತಿಂ ಮುಕ್ತಿಂ ಚ ಶಾಶ್ವತಂ

ಸಂಪ್ರಾಪ್ಯೇ ಮೋದತೆ ನಿತ್ಯಂ ಗುರುವರ್ಯ ಪ್ರಸಾದತ//



ಇತಿ ಶ್ರೀಮದಪ್ಪ್ಪ್ಪಣ್ಣಾಚಾರ್ಯ ವಿರಚಿತಂ

ಶ್ರೀ ರಾಘವೇಂದ್ರ ಕವಚಂ ಸಂಪೂರ್ಣಂ//

ಶ್ರೀನಿವಾಸ ಭಜನೆ

ಬಿಡೆನೋ ನಿನ್ನಂಘ್ರಿ ಶ್ರೀನಿವಾಸ

ಎನ್ನ ದುಡಿಸಿಕೊಳ್ಳೆಲೋ ಶ್ರೀನಿವಾಸ

ನಿನ್ನ ನುಡಿಯ ಜೊತೆಲ್ಲೋ ಶ್ರೀನಿವಾಸ

ನನ್ನ ನಡೆ ತಪ್ಪು ಕಾಯೋ ಶ್ರೀನಿವಾಸ//



ಬಡಿಯೋ ಬೆನ್ನಲ್ಲಿ ಶ್ರೀನಿವಾಸ

ಎನ್ನ ಒಡಲ ಹೊಯ್ಯದಿರೋ ಶ್ರೀನಿವಾಸ

ನಾ ಬಡವ ಕಾಣೆಲೋ ಶ್ರೀನಿವಾಸ

ನಿನ ಒಡಲ ಹೊಕ್ಕೆನೋ ಶ್ರೀನಿವಾಸ//



ಪಂಜು ಹಿಡಿವೆನೋ ಶ್ರೀನಿವಾಸ

ನಿನ ಎಂಜಲ ಬಳಿದುಂಬೆ ಶ್ರೀನಿವಾಸ

ನಾ ಸಂಜೆ ಉದಯಕೆ ಶ್ರೀನಿವಾಸ

ಕಾಳಜಿಯ ಪಿಡಿವೆ ಶ್ರೀನಿವಾಸ//

ಸತಿಗೆ ಚಾಮರ ಶ್ರೀನಿವಾಸ

ನಾನೆತ್ತಿ ಕುಣಿವೆನೋ ಶ್ರೀನಿವಾಸ

ನಿನ್ನ ರತ್ನದಾವಿಗೆ ಶ್ರೀನಿವಾಸ

ನಾ ಹೊತ್ತು ನಲಿವೆನೋ ಶ್ರೀನಿವಾಸ//



ಅವರೊಳಿಗವ ಮಾಳ್ಪೆ ಶ್ರೀನಿವಾಸ

ನನ್ನ ಪಾಲಿಸೋ ಬಿಡದೆ ಶ್ರೀನಿವಾಸ

ಹೇಳಿದಂತಾಗಲಿ ಶ್ರೀನಿವಾಸ

ನಿನ್ನಗಳಾಗಿವೆ ಶ್ರೀನಿವಾಸ//



ನಿನ್ನ ನಾಮ ಹೋಳಿಗೆ ಶ್ರೀನಿವಾಸ

ಕಳ್ಳ ಕುನ್ನಿ ನಾನಾಗಿಹೆ ಶ್ರೀನಿವಾಸ

ಕಟ್ಟಿ ನಿನ್ನವರೊದ್ದರೆ ಶ್ರೀನಿವಾಸ

ನನಗಿನ್ನು ಲಜ್ಜೆತಕೆ ಶ್ರೀನಿವಾಸ//



ಬೀಸಿ ಕೊಲ್ಲಲವರೆ ಶ್ರೀನಿವಾಸ

ಮುದ್ರೆ ಕಾಸಿ ಚುಚ್ಚಲವರೆ ಶ್ರೀನಿವಾಸ

ಮಿಕ್ಕ ಘಾಸಿಗಂಜೆನಯ್ಯ ಶ್ರೀನಿವಾಸ

ಎಂಜಲ ಬಂಟ ನಾ ಶ್ರೀನಿವಾಸ//



ಹೇಸಿ ನಾನಾದರೆ ಶ್ರೀನಿವಾಸ

ಹರಿ ದಾಸರೊಳು ಪೊಕ್ಕೆ ಶ್ರೀನಿವಾಸ

ಅವರ ಭಾಷೆಯ ಕೇಳಿಹೆ ಶ್ರೀನಿವಾಸ

ಆ ವಾಸಿಯ ಸೈರಿಸೋ ಶ್ರೀನಿವಾಸ//



ತಿಂಗಳವನಲ್ಲ ಶ್ರೀನಿವಾಸ

ವತ್ಸ ರಂಗಳವನಲ್ಲ ಶ್ರೀನಿವಾಸ

ರಾಜಂಗಳ ಸವದಿಪೆ ಶ್ರೀನಿವಾಸ

ಭವನಗಳ ದಾಟುವೆ ಶ್ರೀನಿವಾಸ//



ನಿನ್ನವ ನಿನ್ನವ ಶ್ರೀನಿವಾಸ

ನಾನನ್ಯ ಅರಿಯೆನೋ ಶ್ರೀನಿವಾಸ

ಅಯ್ಯ ಮನ್ನಿಸೋ ತಾಯಿತಂದೆ ಶ್ರೀನಿವಾಸ

ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸ/

Tuesday, February 5, 2013

ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ

ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ ತಾರೇ ಬಿಂದಿಗೆಯ

ಬಿಂದಿಗೆ ಒಡೆದರೆ ಒಂದೇ ಕಾಸು ತಾರೇ ಬಿಂದಿಗೆಯ//



ರಾಮನಾಮವೆಂಬ ರಸವುಳ್ಳ ನೀರಿಗೆ ತಾರೇ ಬಿಂದಿಗೆಯ

ಕಾಮಿನಿಯರ ಕೂಡೆ ಏಕಾಂತವಾಡೆನು ತಾರೇ ಬಿಂದಿಗೆಯ//



ಗೋವಿಂದ ನೀರಿಗೆ ಗುಣವುಳ್ಳ ನೀರಿಗೆ ತಾರೇ ಬಿಂದಿಗೆಯ

ಆವಾವ ಪರಿಯಲ್ಲಿ ಅಮೃತದ ನೀರಿಗೆ ತಾರೇ ಬಿಂದಿಗೆಯ//



ಬಿಂದುಮಾಧವನ ಘಟ್ಟಕ್ಕೆ ಹೋಗುವ ತಾರೇ ಬಿಂದಿಗೆಯ

ಪುರಂದರ ವಿಠಲಗೆ ಅಭಿಷೇಕ ಮಾಡುವ ತಾರೇ ಬಿಂದಿಗೆಯ//

ತೂಗಿರೆ ರಾಯರ....

ತೂಗಿರೆ ರಾಯರ ತೂಗಿರೆ ಗುರುಗಳ ತೂಗಿರೆ ಯತಿಕುಲ ತಿಲಕರ


ತೂಗಿರೆ ಯೋಗಿಂದ್ರ ಕರಕಮಲ ಪೂಜ್ಯರ ತೂಗಿರೆ ಗುರು ರಾಘವೇಂದ್ರರ//



ಕುಂದಾಣಮಯವಾದ ಚಂದದ ತೊಟ್ಟಿಲದೊಳ್ ಅಂದಾದಿ ಮಲಗ್ಯಾರ ತೂಗಿರೆ

ನಂದಾನಕಂದ ಗೋವಿಂದ ಮುಕುಂದಾನಂದದಿ ಭಜಿಪರ ತೂಗಿರೆ//



ಯೋಗಾನಿದ್ರೆಯನ್ನು ಬೇಗನೆ ಮಾಡುವ ಯೋಗೀಶವಂದ್ಯರ ತೂಗಿರೆ

ಭೋಗೀಶಯನನ ಪಾದ ಯೋಗದಿ ಭಜಿಪರ ಭಾಗವತರನನ್ನ ತೂಗಿರೆ//



ನೇಮದಿ ತನ್ನನ್ನು ಕಾಮಿಪ ಜನರಿಗೆ ಕಾಮಿತ ಕೊಡುವವರ ತೂಗಿರೆ

ಪ್ರೇಮದಿ ನಿಜಜನರ ಆಮಾಯವನುಕೂಲ ಧೂಮಕೇತುವೆನಿಪರ ತೂಗಿರೆ//



ಅದ್ವೈತ ಮತವನ್ನು ವಿಧ್ವಂಸ ಮಾಡಿದ ಮಧ್ವ ಮತೋದ್ಧಾರನ ತೂಗಿರೆ

ಸಿದ್ಧ ಸಂಕಲ್ಪದಿ ಬದ್ಧ ನಿಜಭಕ್ತರ ಉದ್ಧಾರ ಮಾಳ್ಪರ ತೂಗಿರೆ//



ಭಜಕಜನರ ಭವ ತೃಜನಮಾಡಿಸಿ ಅವರ ನಿಜಗತಿಯಿಪ್ಪರ ತೂಗಿರೆ

ನಿಜಗುರುಜಗನ್ನಾಥ ವಿಠಲನ ಪದಕಂಜ ಭಜನೆಯ ಮಾಳ್ಪರ ತೂಗಿರೆ//