Tuesday, October 26, 2010

ಹನುಮನ ನಂಬಿರಯ್ಯ ನಮ್ಮ ಹನುಮನ ನಂಬಿರಯ್ಯ..

ಹನುಮನ ನಂಬಿರಯ್ಯ ನಮ್ಮ ಹನುಮನ ನಂಬಿರಯ್ಯ..

ಅಂಜನಿ ಸುತನ, ವಾಯುಪುತ್ರನ, ಹನುಮನ ನಂಬಿರಯ್ಯ..



ಅಯೋಧ್ಯ ರಾಮನ ನೆಚ್ಚಿನ ಬಂಟನು, ಪಾವನ ಸುತನು ನಮ್ಮೀ ಹನುಮನು,

ಅಪ್ರತಿಮ ಬಲವಂತ ಹನುಮನು, ಗಂಧಮಾದನ ನಿವಾಸಿ ಹನುಮನು,

ಜಾಂಬವ ಪ್ರಿಯನಿವ ಹನುಮನು, ಕಪಿಗಳ ನಾಯಕನಿವನು ಹನುಮನು,

ಸಂಜೀವನಿಯ ತಂದವನಿವನು, ಚಿರಂಜೀವಿಯಾದವನಿವನು ಹನುಮನು..

ಹನುಮನ ನಂಬಿರಯ್ಯ ನಮ್ಮ ಹನುಮನ ನಂಬಿರಯ್ಯ..



ಮಾರುತಾತ್ಮಜ ಹನುಮನು ಇವನು, ಲೋಕಪೂಜ್ಯ ಹನುಮನು ಇವನು,

ವಾಗದೀಕ್ಷ ಹನುಮನು ಇವನು, ವಜ್ರನಾಕ್ಷ ಹನುಮನು ಇವನು,

ಸಂಕಟ ವಿಮೋಚನ ಹನುಮನು ಇವನು, ವೀರ ಶೂರ ದೀರ ಹನುಮನು,

ವಾರಿಧಿ ಲಂಘಿಸಿದ ಹನುಮನು ಇವನು, ಸೀತಾನ್ವೇಷಣೆಗೆ ಹೊರಟನು ಹನುಮನು,

ಹನುಮನ ನಂಬಿರಯ್ಯ ನಮ್ಮ ಹನುಮನ ನಂಬಿರಯ್ಯ..



ರುದ್ರವೀರ್ಯ ಹನುಮನು ಇವನು, ಪಿಂಗಲಾಕ್ಷ ಹನುಮನು ಇವನು,

ಮಹಾತಪಸ್ವಿ ಹನುಮನು ಇವನು, ಮಹಾತೇಜಸ್ವಿ ಹನುಮನು ಇವನು,

ಕೇಸರಿನಂದನ ಹನುಮನು ಇವನು, ಲಂಕೆಯ ಸುಟ್ಟವ ಹನುಮನು ಇವನು,



ಹನುಮನ ನಂಬಿರಯ್ಯ ನಮ್ಮ ಹನುಮನ ನಂಬಿರಯ್ಯ..

ಅಂಜನಿ ಸುತನ, ವಾಯುಪುತ್ರನ, ಹನುಮನ ನಂಬಿರಯ್ಯ

Monday, October 25, 2010

ಬನ್ನಿರಯ್ಯ ದರುಶನಕೆ ಹನುಮನ ನೋಡೋಕೆ

ಬನ್ನಿರಯ್ಯ ದರುಶನಕೆ ಹನುಮನ ನೋಡೋಕೆ..

ನಮ್ಮ ಮಾರಂಡಹಳ್ಳಿಯ ಹನುಮನ ದರುಶನಕೆ..



ನಾನೂರು ವರುಷದ ಇತಿಹಾಸದ ಹನುಮನು..

ವರದರಾಜ ಶ್ರೀದೇವಿ ಭೂದೇವಿ ಸನ್ನಿಧಿಯಲಿ ನಿಂತಿಹನು..



ಅಭಯ ಹಸ್ತವ ನೀಡುತ ನಿಂತಿಹನು..

ಭಕ್ತರ ಮೊರೆಗಳ ಆಲಿಸುತ ನಿಂತಿಹನು...



ಸೀತಾರಾಮ ಲಕ್ಷ್ಮಣ ಸಮೇತ ಉತ್ಸವಕೆ ಹೊರಟಿಹನು..

ಭಕ್ತರ ಪೂಜೆಯ ಸ್ವೀಕರಿಸುತ ಊರನು ಕಾಯುತಲಿಹನು..



ಬನ್ನಿರಯ್ಯ ದರುಶನಕೆ ಹನುಮನ ನೋಡೋಕೆ..

ನಮ್ಮ ಮಾರಂಡಹಳ್ಳಿಯ ಹನುಮನ ದರುಶನಕೆ..

Tuesday, October 19, 2010

ವಿಜಯದಶಮಿ ಪ್ರಯುಕ್ತ ಮುಖ್ಯಪ್ರಾಣ ದೇವರಿಗೆ ಬೆಣ್ಣೆ ಅಲಂಕಾರ

ಪ್ರತಿ ವರ್ಷದಂತೆ ಈ ವರ್ಷವೂ ಅಕ್ಟೋಬರ್ ೧೭ ರಂದು ಮಾರಂಡಹಳ್ಳಿಯಲ್ಲಿ ವಿಜಯದಶಮಿಯು ಸಂಭ್ರಮದಿಂದ
ಆಚರಿಸಲಾಯಿತು. ಬೆಳಿಗ್ಗೆ ಶ್ರೀ ಮುಖ್ಯಪ್ರಾಣ ದೇವರಿಗೆ ಅಭಿಷೇಕ ನಂತರ ಬೆಣ್ಣೆ ಅಲಂಕಾರ ಮಾಡಲಾಯಿತು.
ಮಧ್ಯಾನ್ಹ ೧.೦೦ ಗಂಟೆ ಸುಮಾರಿಗೆ ತೀರ್ಥ ಪ್ರಸಾದ ನೆರವೇರಿತು. ನಾಲ್ಕು ಗಂಟೆ ಸುಮಾರಿಗೆ ಶ್ರೀ ಸೀತ ರಾಮ
ಲಕ್ಷ್ಮಣ, ಅಂಜನೇಯ ಸಮೇತ ಉತ್ಸವ ಮೂರ್ತಿಗಳನ್ನು ರಥ ಬೀದಿಯಲ್ಲಿ ಮೆರವಣಿಗೆ ಮೂಲಕ ಬನ್ನಿ ಮಂಟಪಕ್ಕೆ
ತೆರಳಿ ಪೂಜೆ ಸಲ್ಲಿಸಿ ನಂತರ ಊರ ಮೆರವಣಿಗೆ ನಡೆಸಲಾಯಿತು..















Tuesday, October 5, 2010

ಶ್ರೀ ಶ್ರೀ ವಿಜ್ಞಾನನಿಧಿ ತೀರ್ಥರು ಬೃಂದಾವನ ಪ್ರವೇಶ

ಶ್ರೀ ಶ್ರೀಪಾದರಾಜ ಮಠ ಸ್ವಾಮೀಜಿಗಳಾದ ಶ್ರೀ ವಿಜ್ಞಾನನಿಧಿ ತೀರ್ಥರು ಅಕ್ಟೋಬರ್ 05 ೨೦೧೦ ಮಂಗಳವಾರ ದ್ವಾದಶಿಯಂದು
ಮುಳಬಾಗಿಲಿನಲ್ಲಿ ಶ್ರೀಪಾದರಾಜರ ಸನ್ನಿಧಿಯಲ್ಲಿ ಅಪರಾಹ್ನ ೦೨.೧೫ ರ ಸುಮಾರಿಗೆ ಇಹಲೋಕವನ್ನು ತ್ಯಜಿಸಿದರು..ಸಂಜೆ
೦೬.೦೦ ಗಂಟೆ ಸುಮಾರಿಗೆ ಬೃಂದಾವನ ಪ್ರವೇಶವಾಯಿತು..